ಮುಂಬೈ: ಬಾಂಬೆ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 200 ಅಂಶ ಕುಸಿತ ದಾಖಲಿಸಿದರೆ,
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ನಿಫ್ಟಿ 11,600ರಿಂದ ಕೆಳಕ್ಕೆ ಕುಸಿದಿದೆ.
ಯುಎಸ್ ಫೆಡರಲ್ ರಿಸರ್ವ್ ಆರ್ಥಿಕ ಪುನಶ್ಚೇತನ ಅನಿಶ್ಚಿತವಾದ್ದರಿಂದ ಆರ್ಥಿಕ ಷೇರುಗಳು ನಷ್ಟ ಅನುಭವಿಸಿದವು. ಇದರ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಅಗಿದೆ. ಆರಂಭಿಕ ವಹಿವಾಟಿನ ವೇಳೆ ಸೆನ್ಸೆಕ್ಸ್ 216.76 ಅಂಶ (0.55%) ಕುಸಿತ ಕಂಡು 39,086.09ರಲ್ಲಿ ಹಾಗೂ ನಿಫ್ಟಿ 44 ಅಂಶ (0.38%) ಕುಸಿದು 11,560.55 ರಲ್ಲಿ ವಹಿವಾಟು ಆರಂಭಿಸಿತ್ತು.
ಸೆನ್ಸೆಕ್ಸ್ ಪಟ್ಟಿಯಲ್ಲಿ ಐಸಿಐಸಿಐ ಬ್ಯಾಂಕ್ ಷೇರು ಶೇಕಡ 1 ನಷ್ಟ ಅನುಭವಿಸಿದರೆ, ಎಚ್ಡಿಎಫ್ಸಿ ಬ್ಯಾಂಕ್, ಪವರ್ ಗ್ರಿಡ್, ಬಜಾಜ್ ಆಟೋ, ಕೊಟಾಕ್ ಬ್ಯಾಂಕ್, ಏಕ್ಸಿಸ್ ಬ್ಯಾಂಕ್ ಮತ್ತು ಎಲ್ಆಯಂಡ್ ಟಿ ಷೇರುಗಳು ನಷ್ಟ ಅನುಭವಿಸಿವೆ.
ಇನ್ನೊಂದೆಡೆ, ಎಚ್ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಒಎನ್ಜಿಸಿ, ಇನ್ಫೋಸಿಸ್ ಷೇರುಗಳು ಲಾಭ ದಾಖಲಿಸಿವೆ.
ಈ ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 258.50 ಅಂಶ (0.66%) ಏರಿಕೆ ದಾಖಲಿಸಿ 39,302.85ರಲ್ಲೂ, ನಿಫ್ಟಿ 82.75 ಅಂಶ (0.72%) 11,604.55 ಏರಿಕೆ ದಾಖಲಿಸಿ ವಹಿವಾಟು ಕೊನೆಗೊಂಡಿತ್ತು.