Saturday, 14th December 2024

ಸಂಗೀತವೆಂಬ ಸುರಗಂಗೆಗೆ ಮಿತಿಗಳಿಲ್ಲ

ವಿಜಯ್ ದರಡಾ

ನಮ್ಮ ಬದುಕಿನಲ್ಲಿ ಸಂಗೀತವೆಂಬ ಸುರಗಂಗೆ ಇಲ್ಲದೇ ಇದ್ದರೆ ಜೀವನ ಅದೆಷ್ಟು ನೀರಸವೆನಿಸುತ್ತದೆ, ಅಲ್ಲವೇ? ಸಂಗೀತದ ಗಂಧವೇ ಇಲ್ಲದ ಜನರು ಹೇಗಿರಬಹುದು, ಅವರ ಬದುಕು ಅದೆಷ್ಟು ದುರ್ಭರವಾಗಿರಬಹುದು, ಊಹಿಸಿ.

ನಾನು ಅಫ್ಘಾನಿಸ್ತಾನದ ಬಗ್ಗೆ ಹೇಳುತ್ತಿದ್ದೇನೆ. ಏಕೆಂದರೆ ಅಲ್ಲಿ ತಾಲಿಬಾನಿ ಆಡಳಿತ ಸಂಗೀತವನ್ನು ಹೊರಗಟ್ಟಿದೆ. ಅಲ್ಲಿ ಯಾರೂ ಸಂಗೀತ ಆಲಿಸುವಂತಿಲ್ಲ, ಹಾಡುವಂತಿಲ್ಲ. ಅದು ಅಲ್ಲಿ ನಿಷಿದ್ಧ. ಅಫ್ಘಾನಿಸ್ತಾನದಲ್ಲಿ ರಾಷ್ಟ್ರೀಯ ಸಂಗೀತ ಸಂಸ್ಥೆಯನ್ನು ಧ್ವಂಸಗೊಳಿಸಲಾಗಿದೆ. ಆದರೂ
ತಾಲೀಬಾನ್ ಹಿಡಿತದಿಂದ ಇವೆಲ್ಲವನ್ನೂ ತಪ್ಪಿಸುವುದಕ್ಕೆ ಅಲ್ಲಿ ಸಾಕಷ್ಟು ಯತ್ನಗಳು ನಡೆಯುತ್ತಲೇ ಇವೆ. ಸಂಗೀತ ಕಲಾವಿದರು ತಮ್ಮ ಕಲೆಯನ್ನು ಅಸವನ್ನಾಗಿ ಪರಿವರ್ತಿಸಿಕೊಂಡು ಸಮಯಕ್ಕಾಗಿ ಕಾಯುತ್ತಿದ್ದಾರೆ.

ತಾಲೀಬಾನಿಗಳಿಂದ ಕಲಾವಿದರನ್ನು ಬಚಾವು ಮಾಡುವಲ್ಲಿ ಶ್ರಮಿಸಿದ ವ್ಯಕ್ತಿ ಅಹಮದ್ ಸಮರಸ್ಟ್ ಎಂಬ ಧೈರ್ಯಸ್ಥ. ಆತ ದೇಶದಲ್ಲಿ ಸಂಗೀತವನ್ನು
ಮತ್ತೆ ಅಸ್ತಿತ್ವಕ್ಕೆ ತರುವುದಕ್ಕೆ ಸಜ್ಜಾಗಿzನೆ. ೨೦೧೦ರಲ್ಲಿ ಆತ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅನ್ನು ಸ್ಥಾಪನೆ ಮಾಡಿದ್ದ. ಅಫ್ಘಾನ್ ಮ್ಯೂಸಿಕ್ನನ್ನು ವಿಶ್ವವ್ಯಾಪಿ ಮಾಡುವುದಕ್ಕೆ ಆತ ಪಣ ತೊಟ್ಟಿದ್ದ. ತಾಲಿಬಾನಿಗಳು ಮತ್ತೆ ಅಲ್ಲಿ ಅಧಿಕಾರಕ್ಕೆ ಬರುತ್ತಾರೆಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಆದರೂ ಆತ ೫೮ ವಿದ್ಯಾರ್ಥಿಗಳೊಂದಿಗೆ ಹೊರನಡೆದು ಪೋರ್ಚುಗಲ್‌ನಲ್ಲಿ ಹೊಸತೊಂದು ಅಧ್ಯಾಯವನ್ನು ಸೃಷ್ಟಿ ಮಾಡಿದ್ದಾನೆ. ಆತ ಯಾವುದೇ ಸಂಗೀತ ಶಾಲೆಯಲ್ಲಿ ಕಲಿತವನಲ್ಲ, ಆದರೂ ಸಂಗೀತದ ಬಗ್ಗೆ ಅದೇನೋ ಅಭಿಮಾನ ಅವನಲ್ಲಿದೆ.

ಎಲ್ಲರಲ್ಲೂ ತಾಲೀಬಾನಿಗಳ ವಿರುದ್ಧ ಒಂದು ಕ್ರೋಧ ಇದ್ದೇ ಇದೆ. ಅವರೆಲ್ಲರೂ ಐರೋಪ್ಯ ದೇಶ ಗಳಲ್ಲಿ ಕಲಿತು ಬಂದವರು. ರಮೀಝ್ ಅಫ್ಘಾನಿನಲ್ಲಿ ಶೌಫಿಯಾ ಟ್ಯೂನ್ ನುಡಿಸಿದರೆ ಅದು ಎಲ್ಲರ ಗಮನ ಸೆಳೆಯುವಂತಿರುತ್ತದೆ. ಮತ್ತು ಅದುವೇ ಒಂದು ವಿಶೇಷ ಕಲೆ. ತಾಲಿಬಾನಿಗಳು ಹೀಗೇಕೆ ಸಂಗೀತದ ವಿರುದ್ಧ ಮುರಕೊಂಡು ಬಿದ್ದಿದ್ದಾರೆಂದು ನೀವು ಅಚ್ಚರಿ ಪಡಬಹುದು. ತಾಲಿಬಾನಿಗಳಿಗೆ ಸಂಗೀತ ವೆಂದರೆ ಅದೇಕೆ ವಿರೋಧ? ಅದಕ್ಕೆ ಉತ್ತರ ಸಿಗುತ್ತಿಲ್ಲ. ಸಂಗೀತಕ್ಕೆ ಎಲ್ಲ ಶಕ್ತಿಯೂ ಇದೆ. ದೆಹಲಿಯ ಗದ್ದುಗೆಯಲ್ಲಿದ್ದ ಒಬ್ಬ ಸುಲ್ತಾನನಿಗೂ ಸಂಗೀತವೆಅದರೆ ರೇಜಿಗೆ ಇತ್ತಂತೆ. ಆತ ಅದೊಂದು ದಿನ ಯಾರೋ ಸತ್ತಿರುವ ಬಗ್ಗೆ ಮತ್ತು ಅವರ ಶವದ ಮೆರವಣಿಗೆಯನ್ನು ಕಂಡ.

ಸತ್ತವನು ಯಾರೆಂದು ಆತ ಕೇಳುತ್ತಾನೆ. ಸೇವಕ ಹೇಳುತ್ತಾನೆ, ಹುಜೂರ್, ಸಂಗೀತಗಾರನೊಬ್ಬ ಸತ್ತು ಹೋಗಿದ್ದಾನೆ. ಆಗ ಸುಲ್ತಾನ ಹೇಳುತ್ತಾನೆ. ಆ ಶವವನ್ನು ಎಷ್ಟು ಸಾಧ್ಯವೋ ಅಷ್ಟು ಆಳದಲ್ಲಿ ಹೂಳಿಟ್ಟು ಬರುವಂತೆ ಹೇಳು, ಸಂಗೀತ ಮತ್ತೆ ಏದ್ದು ಬರುವುದು ಬೇಡ. ಆ ರಾಜನಿಗೆ ಸಂಗೀತವೆ ಅದರೆ ಅಷ್ಟರ ಮಟ್ಟಿಗಿನ ರೇಜಿಗೆ ಇತ್ತು. ಅದಕ್ಕೂ ಮುಂಚಿನ ರಾಜರು ಸಂಗೀತಕ್ಕೆ ಮನ್ನಣೆ ಕೊಡುತ್ತಿದ್ದರು. ತಮ್ಮ ರಾಜಾಂಗಣದಲ್ಲಿ ಸಂಗೀತಗಾರರಿಗೆ ಸಾಕಷ್ಟು ಧನಕನಕಗಳನ್ನೂ ಅವರು ಸುರಿಯುತ್ತಿದ್ದರು. ಈ ಸಂಗೀತಗಾರರು ಕ್ರಾಂತಿಕಾರಿಗಳಾಗಬಹುದೆ ಊಹೆ ಇದ್ದ ಕಾರಣ ಅವರೆಡೆಗೆ ಒಂದು ಬಗೆಯ ಅಸಹನೆ , ರೇಜಿಗೆ ಹುಟ್ಟಿಕೊಂಡಿತ್ತು. ಹಾಗಾಗಿ ಅಂತರ ಕಾಯ್ದುಕೊಳ್ಳುವ ನಿರ್ಧಾರವನ್ನು ಆಡಳಿತಗಾರರು
ತೆಗೆದು ಕೊಂಡಿದ್ದರು.

ಸಾಮಾಜಿಕವಾದ ಪ್ರಜ್ಞೆಯನ್ನು ಕಾಯ್ದುಕೊಳ್ಳುವಲ್ಲಿ ಯಾವತ್ತಿಗೂ ಸಂಗೀತ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ವಂದೇ ಮಾತರಂ ಹಾಡನ್ನು ಉಚ್ಛರಿಸುವಲ್ಲೂ ಇದು ಜಾಗೃತವಾಗಿತ್ತು. ೧೮೮೨ರಲ್ಲಿ ಬಂಕಿಮಚಂದ್ರರು ಅದನ್ನು ಬರೆದಿದ್ದರು. ಕಾಂಗ್ರೆಸ್ ಹುಟ್ಟಿದ್ದು ೧೮೮೫ ರಲ್ಲಿ. ಕೋಲ್ಕತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಮೇಂದ್ರ ಬಾಬು ವಂದೇ ಮಾತರಂ ಹಾಡನ್ನು ಹಾಡಿದ್ದರು. ಗುರುದೇವ ರಬೀಂದ್ರನಾಥ ಟಾಗೋರರು ಸಹ ಈ ಹಾಡನ್ನು ಮೆಚ್ಚಿದ್ದರು. ೧೯೦೫ರಲ್ಲಿ ಕಾಂಗ್ರೆಸ್ ಈ ಹಾಡನ್ನು ರಾಷ್ಟಗೀತೆ ಎಂದು ಗೌರವಿಸಿತ್ತು. ತಮಿಳು ಗೀತರಚನೆಕಾರ ಸುಬ್ರಹ್ಮಣ್ಯಂ ಭಾರತಿ ಅದನ್ನು ತೆಲುಗಿನಲ್ಲಿ ಭಾಷಾಂತರಿಸಿ ಹಾಡಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದು ಪ್ರಮುಖ ಪಾತ್ರ ವಹಿಸಿತ್ತು. ಬ್ರಿಟಿಷರಿಗೆ ಅದು ತಲೆನೋವಿನ ಸಂಗತಿಯೂ ಆಗಿತ್ತು.

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮೇರಾ ರಂಗ್ ದೇ ಬಸಂತಿ ಚೋಲಾ ಹಾಡು ಕೂಡ ಜನಪ್ರಿಯವಾಗಿತ್ತು. ಆ ದಿನಗಳಲ್ಲಿ ಹೋರಾಟಗಾರರಾದ ರಾಮಪ್ರಸಾದ್ ಬಿಸ್ಮಿಲ್ ಈ ಹಾಡನ್ನು ರಚಿಸಿದ್ದರು. ಅದನ್ನವರು ಜೈಲಿನಲ್ಲಿ ಕುಳಿತೇ ಬರೆದಿದ್ದರು. ನಮ್ಮ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಹುಟ್ಟಿದ ಅದೆಷ್ಟೋ ಹಾಡುಗಳು ಇಂದಿಗೂ ಜೀವಂತವಾಗಿವೆ. ಜನಮನದ ಧಮನಿಗಳಲ್ಲಿ ಕಿಚ್ಚನ್ನು ಹಬ್ಬಿಸುವ ಶಕ್ತಿ ಸಂಗೀತಕ್ಕಿದೆ. ತ್ರಿವರ್ಣ ಧ್ವಜದ ಹಿನ್ನೆಲೆಯಲ್ಲಿ ಇಂತಹ ಹಾಡುಗಳನ್ನು ಆಲಿಸುವಾಗ ಅಂದು ಧೈರ್ಯದ ಸೆಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ನಮ್ಮ ಮೈಮನಗಳಲ್ಲಿ ಹೆಮ್ಮೆಯ ಭಾವ
ಆವರಿಸಿಕೊಳ್ಳುತ್ತದೆ. ಭಾಷೆ ಯಾವುದೇ ಇರಲಿ, ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಎಲ್ಲಾ ಗಡಿ-ಗುರುತುಗಳ ಹಂಗೂ ಇಲ್ಲ.

ಆ ನೆಲೆಯಲ್ಲಿಯೇ ನಮ್ಮ ದೇಶದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವುದು ಎಂಬುದರಲ್ಲಿ ಎರಡು ಮಾತಿಲ್ಲ. ಸಂತೋಷ ಮತ್ತು ದುಃಖವನ್ನು ಸಶಕ್ತವಾಗಿ ವ್ಯಕ್ತಪಡಿಸುವುದಕ್ಕೆ ಸಂಗೀತಕ್ಕಿಂತ ಅತ್ಯುತ್ತಮವಾದ ಮಾಧ್ಯಮ ಇನ್ನೊಂದಿಲ್ಲ. ಅದಕ್ಕಿರುವ ಶಕ್ತಿ ಅನಿಯಮಿತ. ತಾಲಿಬಾನಿಗಳಿಗೆ ಇದಿನ್ನೂ ಅರ್ಥವಾಗಲ್ಲ. ಅವರು ಸಂಗೀತದ ನಾದಮಾಧರ್ಯವನ್ನು ಹುಟ್ಟಡಗಿಸುವುದಕ್ಕೆ ಸಾಧ್ಯವೇ ಇಲ್ಲ. ರಾಮಧ್ಯಾನ, ಕೃಷ್ಣನ ಮುರಳಿಯ ದನಿಯನ್ನು ಯಾರಾದರೂ ಮರೆಯಲು ಸಾಧ್ಯವೇ? ಸಂಗೀತವೆಂದರು ಅದು.

ಸಂಗೀತಕ್ಕಿರುವ ಶಕ್ತಿಯ ಬಗ್ಗೆ ನನಗೆ ಅಪಾರ ನಂಬುಗೆ ಇದೆ. ಹಾಗಾಗಿಯೇ ಲೋಕಮತ ಮಾಧ್ಯಮ ಸಮೂಹ ಸಂಗೀತವನ್ನು ಬೆಂಬಲಿಸುತ್ತದೆ, ಅದೊಂದು ಶಕ್ತಿ ಎಂದು ಪರಿಭಾವಿಸುತ್ತದೆ ಮತ್ತು ಜ್ಯೋತ್ಸ್ನಾ ಮ್ಯೂಸಿಕ್ ಅವಾರ್ಡ್ ಮೂಲಕ ಪ್ರತಿವರ್ಷ ಅರ್ಹ ಸಂಗೀತಗಾರರನ್ನು ಆಯ್ದು ಸಮ್ಮಾನಿಸುತ್ತದೆ. ಸಂಗೀತವೆಅದರೆ ಅದು ಬದುಕಿನ ಅವಿಭಾಜ್ಯ ಅಂಗ. ಸಂಗೀತವಿದ್ದಲ್ಲಿ ಜೀವಂತಿಕೆ ಇರುತ್ತದೆ. ಓ ಭಗವಂತಾ, ಅಫ್ಘಾನಿಸ್ತಾನದ ಆಡಳಿತಗಾರರಿಗೆ ಸಂಗೀತವೆಂದರೇನೆಂಬುದನ್ನು ದಯವಿಟ್ಟು ಅರ್ಥ ಮಾಡಿಸು.