Saturday, 23rd November 2024

ಕೇನ್ ವಿಲಿಯಮ್ಸನ್ ಶಸ್ತ್ರಚಿಕಿತ್ಸೆ: ಏಕದಿನ ವಿಶ್ವಕಪ್’ಗೆ ಡೌಟು

ವೆಲ್ಲಿಂಗ್ಟನ್: ಆರಂಭಿಕ ಪಂದ್ಯದಲ್ಲೇ ಗಾಯಗೊಂಡು ಐಪಿಎಲ್ ನಿಂದ ಹೊರಬಿದ್ದ ಕೇನ್ ವಿಲಿಯಮ್ಸನ್ ಅವರು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ಹೀಗಾಗಿ ಮುಂದಿನ ಏಕದಿನ ವಿಶ್ವಕಪ್ ನಿಂದಲೂ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಗುಜರಾತ್ ಟೈಟಾನ್ಸ್ ತಂಡದ ಸದಸ್ಯ ಕೇನ್ ವಿಲಿಯಮ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದರು.

ವಿಲಿಯಮ್ಸನ್ ಅವರ ಬಲಕಾಲು ಸ್ಕ್ಯಾನ್ ವೇಳೆ ಗಾಯದ ಗಂಭೀರತೆ ಅರಿವಾಗಿದೆ. ಒಂದು ವೇಳೆ ಕೇನ್ ಶಸ್ತ್ರಚಿಕಿತ್ಸೆಗೆ ಒಳಗಾದರೆ ಮುಂದಿನ ಅಕ್ಟೋಬರ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಅವರು ಭಾಗವಹಿಸು ವುದು ಅಸಾಧ್ಯವಾಗಿದೆ.

2019 ರ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗಿ ಮುಗಿಸಿದ ನ್ಯೂಜಿಲೆಂಡ್ ಈಗ 2023 ರ ಆವೃತ್ತಿಗೆ ಹೋಗುವ ತಮ್ಮ ಯೋಜನೆಗಳನ್ನು ಮರು ಆಲೋಚಿಸಬೇಕಿದೆ. ಇಂಗ್ಲೆಂಡ್‌ ನಲ್ಲಿ ನಡೆದ 2019ರ ಪಂದ್ಯಾವಳಿಯಲ್ಲಿ, ವಿಲಿಯ ಮ್ಸನ್ ಒಂಬತ್ತು ಇನ್ನಿಂಗ್ಸ್‌ ಗಳಿಂದ 82.57 ರ ಅತ್ಯುತ್ತಮ ಸರಾಸರಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 578 ರನ್‌ಗಳನ್ನು ಒಟ್ಟುಗೂಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.