Saturday, 23rd November 2024

ಕಿಚ್ಚ ಸುದೀಪನ ಜಾತಿ ಕೆದಕಿದ ಕಾಂಗ್ರೆಸ್

ವೀಕೆಂಡ್ ವಿತ್ ಮೋಹನ್

camohanbn@gmail.com

ಸಿನಿ ತಾರೆಯರು ಚುನಾವಣಾ ಸಂದರ್ಭದಲ್ಲಿ ರಾಜಕೀಯ ನಾಯಕರ ಪರವಾಗಿ ಪ್ರಚಾರ ಮಾಡುವುದು ಹೊಸತೇನಲ್ಲ. ತಮ್ಮ ಸೇಹಿತರ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕೆ ದುಮುಖಿ ಮತಯಾಚನೆ ಮಾಡಿರುವ ನೂರಾರು ಉದಾಹರಣೆ ಗಳಿವೆ.

ಕೆಲ ದಿನಗಳ ಹಿಂದೆ ಕನ್ನಡದ ಸುಪ್ರಸಿದ್ದ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪರವಾಗಿ ಚುನಾವಣಾ ಪ್ರಚಾರ ಮಾಡುವು ದಾಗಿ ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು. ಅಧಿಕೃತವಾಗಿ ರಾಜಕೀಯ ಪಕ್ಷ ಸೇರುವು ದಕ್ಕೂ ಒಂದು ರಾಜಕೀಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಸುದೀಪ್ ಬೊಮ್ಮಾಯಿ ಯವರಿಗೆ ತಮ್ಮ ಬೆಂಬಲ ಸೂಚಿಸಿದ ಮರುಕ್ಷಣವೇ ಎಡಚರ ನಟ ಪ್ರಕಾಶ್ ರಾಜ್ ಮೈ ಪರಚಿಕೊಂಡಿದ್ದ. ಸುದೀಪ್ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಬಹಳದ ಖೇದದ ಸಂಗತಿಯೆಂದು ತನ್ನ ಟ್ವಿಟ್ಟರ್ ಖಾತೆ ಯಲ್ಲಿ ಬೊಬ್ಬೆ ಹೊಡೆದುಕೊಂಡಿದ್ದ.

ಐದು ವರ್ಷ ಸುಮ್ಮನಿದ್ದು ಚುನಾವಣಾ ಸಂದರ್ಭದಲ್ಲಿ ಕೆರೆ ಹಾವಿನಂತೆ ಬಿಲದಿಂದ ಹೊರಬರುವ ಪ್ರಕಾಶ್ ರಾಜ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕಟ್ಟರ್ ವಿರೋಧಿ. ವೇದಿಕೆಯ ಮೇಲೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುವ ಈತ, ಗೋಡೆಯ ಮೇಲೆ ಮೂತ್ರ ಮಾಡುವಂತೆ ತನ್ನ ಸಾಮಾಜಿಕ ಜಾಲತಾಣದ ಗೋಡೆಯ ಮೇಲೆ ತಲೆತಿರುಕನಂತೆ ಬರೆದುಕೊಳ್ಳುತ್ತಿರು ತ್ತಾನೆ. ಈ ವ್ಯಕ್ತಿಯ ನಡವಳಿಕೆ ಸರಿಯಿಲ್ಲವೆಂದು ತೆಲುಗು ಚಿತ್ರರಂಗ ಈತನನ್ನು ಅನೇಕ ವರ್ಷಗಳ ಕಾಲ ನಿಷೇಧ ಮಾಡಿತ್ತು. ತನ್ನನ್ನು ತಾನು ಮಹಾನ್ ಹೋರಾಟಗಾರನೆಂದು ಕೊಂಡಿರುವ ಈತ ತೆಲುಗು ಚಿತ್ರರಂಗದಲ್ಲಿ ಇಲ್ಲಸಲ್ಲದ ಅವಾಂತರ ಗಳನ್ನು ಸೃಷ್ಟಿಸಿ ಅಲ್ಲಿನ ನಿರ್ಮಾಪಕರು ಮತ್ತು ನಿರ್ದೇಶಕರ ಕೆಂಗಣ್ಣಿಗೆ ಗುರಿಯಾಗಿದ್ದ. ಈ ವ್ಯಕ್ತಿಯ ಹಿನ್ನಲೆ ಇಲ್ಲಿಗೆ ಮುಗಿಯು ವುದಿಲ್ಲ.

ಭಾರತ ವಿರೋಧಿ ಗುಂಪಿನೊಂದಿಗೆ ಕಾಣಿಸಿಕೊಳ್ಳುವ ಈತ, ಟುಕ್ದೆ ಟುಕ್ದೆ ಗ್ಯಾಂಗಿನ ಸದಸ್ಯರೊಂದಿಗೆ ತಿರುಗಾಡುತ್ತಿರುತ್ತಾನೆ. ಅತ್ತ ಖಲಿಸ್ತಾನಿ ಬೆಂಬಲಿಗರ ಪರವಾಗಿ ಮಾತನಾಡುತ್ತಾನೆ. ಪ್ರಚಾರದ ತೆವಲಿಗಾಗಿ ಮೂರು ಬಿಟ್ಟವರು ಊರಿಗೆ ದೊಡ್ಡವ ರೆಂಬಂತಿದೆ ಈತನ ಜೀವನ. ಕಾಂಗ್ರೆಸ್ ಪಕ್ಷ ಮಾಡಿದ್ದೆಲ್ಲವನ್ನೂ ಸರಿಯೆಂದು ಪ್ರತಿಪಾದಿಸುವ ಸಲುವಾಗಿ ಬಾಯಿಗೆ ಬಂದಂತೆ ಮಾತನಾಡುವ ಚಾಳಿಯನ್ನು ರೂಢಿಸಿಕೊಂಡಿದ್ದಾನೆ. ಸುಬ್ರಮಣಿಯನ್ ಸ್ವಾಮಿಯವರೊಂದಿಗೆ ಸಂವಾದ ವೊಂದರಲ್ಲಿ ಪಾಲ್ಗೊಂಡಿದ್ದ ಈತ, ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಬಡಾಯಿಸಿದ್ದನ್ನು ಇಡೀ ದೇಶವೇ ನೋಡಿತ್ತು. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿದ್ದ ಪ್ರಕಾಶ್ ರಾಜ್, ಕೇವಲ 28,906 ಮತಗಳನ್ನು ಪಡೆದಿದ್ದ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಸಿ. ಮೋಹನ್ 6,02,853 ಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಚುನಾವಣೆ ಯಲ್ಲಿ ನಿಂತು ಠೇವಣಿ ಪಡೆಯಲು ಯೋಗ್ಯತೆಯಿಲ್ಲ ದವರು ಕಿಚ್ಚ ಸುದೀಪ್ ಬಗ್ಗೆ ಮಾತನಾಡಿ ನಗೆಪಾಟಲಿಗೆ ಗುರಿಯಾಗಿ ದ್ದಾರೆ. ಬಸವರಾಜ್ ಬೊಮ್ಮಾಯಿಯವರಿಗೆ ಕಿಚ್ಚ ನೀಡಿರುವ ಬೆಂಬಲಕ್ಕೆ ವಿಚಲಿತವಾಗಿರುವ ಕಾಂಗ್ರೆಸ್ ಪಕ್ಷ, ಅವರ
ತೇಜೋವಧೆ ಮಾಡಲು ಮುಂದಾಗಿದೆ. ಕಾಂಗ್ರೆಸ್ ಪಕ್ಷದ ನಾಯಕ ಸುರ್ಜೆವಾಲಾ ಕೇಂದ್ರದ ತನಿಖಾ ಸಂಸ್ಥೆಗಳ ಭಯದಿಂದ ಸುದೀಪ್ ಈ ರೀತಿ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳ ವಿಚಾರವಾಗಿ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಽಶರು ಕಾಂಗ್ರೆಸ್ಸಿಗೆ ಛೀಮಾರಿ ಹಾಕಿದ್ದಾರೆ. ಊಸರವಳ್ಳಿಯಂತೆ ಬಣ್ಣ ಬದಲಿಸುವ ಕಾಂಗ್ರೆಸ್ ಪಕ್ಷ ತನ್ನ ಪಕ್ಷದ ಅಭ್ಯರ್ಥಿಗಳ ಪರವಾಗಿ ಚಿತ್ರ ನಟರು ಪ್ರಚಾರಕ್ಕೆ ಬಂದಿದ್ದ ವಿಷಯವನ್ನು ಪ್ರಸ್ತಾಪಿಸುತ್ತಿಲ್ಲ. 1984 ರ ಚುನಾವಣಾ ಸಂದರ್ಭ ದಲ್ಲಿ ರಾಜೀವ್ ಗಾಂಧಿಯವರ ಪರವಾಗಿ ಮತಯಾಚನೆ ಮಾಡಲು ಅಮಿತಾಭ್ ಬಚ್ಚನ್ ಬಂದಿದ್ದರು.

ಚಿಕ್ಕ ವಯಸ್ಸಿನಿಂದಲೂ ಅಮಿತಾಭ್ ಮತ್ತು ರಾಜೀವ್ ಗಾಂಧಿ ಸ್ನೇಹಿತರಾಗಿದ್ದರೆಂಬ ವಿಷಯವನ್ನು ಖಾಸಗೀ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಮಿತಾಭ್ ಹೇಳಿದ್ದಾರೆ. ಅಮಿತಾಭ್ ತನ್ನ ಸ್ನೇಹಿತ ರಾಜೀವ್ ಗಾಂಧಿ ಪರವಾಗಿ ಪ್ರಚಾರ ಮಾಡಿ ದರೆ ಕಾಂಗ್ರೆಸ್ಸಿಗೆ ತಕರಾರಿಲ್ಲ. ಆದರೆ ಕಿಚ್ಚ ಸುದೀಪ್ ಬಸವರಾಜ ಬೊಮ್ಮಾಯಿಯವರ ಪರವಾಗಿ ಪ್ರಚಾರ ಮಾಡಿದರೆ ತಪ್ಪು. 2022 ರ ಪಂಜಾಬ್ ಚುನಾವಣಾ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಕಾಂಗ್ರೆಸ್ಸಿನಿಂದ ಚುನಾವಣೆಗೆ ನಿಂತಿದ್ದ ತನ್ನ ತಂಗಿಯ ಪರವಾಗಿ ಪ್ರಚಾರ ಮಾಡಿದ್ದರು.

2009 ರ ಮಹಾರಾಷ್ಟ್ರದ ಚುನಾವಣೆಯ ಸಂದರ್ಭದಲ್ಲಿ ಮತ್ತೊಬ್ಬ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾಂಗ್ರೆಸ್ ಅಭ್ಯರ್ಥಿ
ಬಾಬಾ ಸಿದ್ದಿಕ್ಕಿ ಪರವಾಗಿ ಪ್ರಚಾರ ಮಾಡಿದ್ದರು. 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಿತೇಶ್ ದೇಶಮುಖ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರದಿಂದ ಬಾಲಿವುಡ್ ನಟಿ ಊರ್ಮಿಳ ಮತೋಂಡ್ಕರ್ ನಿಂತಿದ್ದರು.

2019 ರ ಮಂಡ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರರಾಗಿ ಸ್ಪಽಸಿದ್ದ ಸುಮಲತಾ ಅಂಬರೀಷ್ ಪರವಾಗಿ ಜೋಡೆತ್ತುಗಳಂತೆ ಪ್ರಚಾರ ಮಾಡಿದ್ದು ಸ್ಯಾಂಡಲ್ ವುಡ್ ನಟರಾದ ಯಶ್ ಮತ್ತು ದರ್ಶನ್. ಅಷ್ಟೇ ಯಾಕೆ ಪಾಕಿಸ್ತಾನವನ್ನು ಸ್ವರ್ಗವೆಂದು ಕರೆದಿದ್ದ ಕನ್ನಡದ ನಟಿ ರಮ್ಯ ದಿವ್ಯ ಸ್ಪಂದನ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

ಅಮಿತಾಭ್ ಬಚ್ಚನ್ ಮಡದಿ ಜಯಾ ಬಚ್ಚನ್ ಸಮಾಜವಾದಿ ಪಕ್ಷದ ಸಂಸದೆಯಾಗಿದ್ದರು. ತನ್ನ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ನಿಂತ ನಟರ ಜಾತಿಯ ಬಗ್ಗೆ ಎಂದೂ ಮಾತನಾದ ಕಾಂಗ್ರೆಸ್, ಕಿಚ್ಚ ಸುದೀಪ್ ಜಾತಿಯ ಬಗ್ಗೆ ಮಾತನಾಡಲು ಶುರುಮಾಡಿದೆ. ಸುದೀಪ್ ಕರ್ನಾಟಕದ ಸಮಸ್ತ ಸಮುದಾಯಕ್ಕೆ ಸೇರಿದ ನಟ, ನಟರಿಗೆ ಜಾತಿಯೆಂಬುದಿಲ್ಲ. ತಮ್ಮ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುತ್ತಾರೆ. ಸುದೀಪ್ ಅವರ ಜಾತಿಯ ವಿಷಯವನ್ನು ಕೆದಕಿ ರಾಜಕೀಯ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ವಿಕೃತಿಯನ್ನು ಮೆರೆದಿದೆ. ತನ್ನ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಯಾವ ಮಟ್ಟದ ಹೀನ ಕೆಲಸವನ್ನು ಮಾಡಲು ತಯಾರಿರುವ ಕಾಂಗ್ರೆಸ್ ಪಕ್ಷ ಕಿಚ್ಚ ಸುದೀಪರಿಗೆ ಅವಮಾನ ಮಾಡಿದೆ.

ಕಾಂಗ್ರೆಸ್ ಪಕ್ಷದ ನೀಚ ಮನಸ್ಥಿತಿ ಹೇಗಿರುತ್ತದೆಯೆಂದರೆ, ಒಂದು ಪತ್ರಿಕೆಯಲ್ಲಿ ನಾನು ಓದಿದ ಹಾಗೆ ಇಂದಿರಾ ಗಾಂಧಿಯವರ ಕಾಲದಲ್ಲಿ ಕನ್ನಡದ ಮೇರು ನಟ ಡಾಕ್ಟರ್ ರಾಜ್‌ಕುಮಾರ್‌ರನ್ನು ಕಾಂಗ್ರೆಸ್ ಪಕ್ಷ ತನ್ನೆಡೆಗೆ ಸೆಳೆಯಲು ಆಹ್ವಾನಿಸಿತ್ತು. ಅಣ್ಣಾವ್ರು ಕಾಂಗ್ರೆಸ್ ಪಕ್ಷದ ಆಹ್ವಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಆ ಸಂದರ್ಭದಲ್ಲಿ ಕನ್ನಡದ ಖ್ಯಾತ ಮಿಮಿಕ್ರಿ
ಕಲಾವಿದರೊಬ್ಬರಿಂದ ಅಣ್ಣಾವ್ರ ಧ್ವನಿಯಲ್ಲಿ ಇಂದಿರಾ ಗಾಂಧಿಯವರ ಗುಣಗಾನದ ಬಗ್ಗೆ ಆಡಿಯೋ ತಯಾರು ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿತ್ತು.

ಅತ್ತ ಮೂರು ಜಿಲ್ಲೆಗೆ ಸೀಮಿತವಾಗಿರುವ ಉಪ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳದ ಕುಮಾರಸ್ವಾಮಿಯವರು ಸುದೀಪ್ ಬೊಮ್ಮಾಯಿಯವರಿಗೆ ನೀಡಿರುವ ಬೆಂಬಲದ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಚುನಾವಣಾ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಯಶ್ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿ ಹೀನಾಯವಾಗಿ ಸೋಲುಂಡಿದ್ದರು. ವಿಪರ್ಯಾಸವೆಂದರೆ ಸ್ವತಃ ಕುಮಾರಸ್ವಾಮಿ ಕನ್ನಡ ಚಲನಚಿತ್ರ ನಿರ್ಮಾಪಕರು, ಹಲವು ಚಿತ್ರಗಳಿಗೆ ಹೂಡಿಕೆ ಮಾಡಿ ಚಿತ್ರರಂಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರು.

ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಒಬ್ಬ ನಾಯಕ ನಟನೆಂಬುದನ್ನು ಅವರು ಮರೆತಂತಿದೆ. ರಾಮನಗರದ ಜನರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ನಟನಾಗಿ ನೋಡಿ ಮತ ಹಾಕುತ್ತಾರೋ ಅಥವಾ ರಾಜಕೀಯ ನಾಯಕನ್ನಾಗಿ ನೋಡಿ ಮತ ಹಾಕುತ್ತಾರೋ?ಸುದೀಪ್ ಅಭಿನಯದ ಚಿತ್ರಗಳನ್ನು ಚುನಾವಣೆ ಮುಗಿಯುವವರೆಗೂ ನಿಷೇಧಿಸಬೇಕೆಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿರುವವರು ನಿಖಿಲ್ ಕುಮಾರಸ್ವಾಮಿ ಅಭಿನಯದ ಚಲನಚಿತ್ರಗಳು, ಜಾಹೀರಾತುಗಳನ್ನೂ  ನಿಷೇಧಿಸುವಂತೆ ಯಾಕೆ ಆಗ್ರಹಿಸುತ್ತಿಲ್ಲ? ರಮ್ಯ ದಿವ್ಯ ಸ್ಪಂದನ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು.

ಆಕೆಯ ಚಲನಚಿತ್ರಗಳು ಮತ್ತು ಜಾಹೀರಾತುಗಳನ್ನು ನಿಷೇಽಸಲು ಯಾಕೆ ಆಗ್ರಹಿಸುತ್ತಿಲ್ಲ? ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುವ ಲೊಡ್ಡೆಗಳಿಗೆ ಕಿಚ್ಚ ಸುದೀಪ್‌ರಿಗೂ ಮೂಲಭೂತ ಹಕ್ಕುಗಳು ಅನ್ವಯವಾಗುತ್ತದೆಯೆಂದು ಯಾಕೆ ಹೇಳುತ್ತಿಲ್ಲ?ತಮಗಿಷ್ಟ ಬಂದಂತೆ ಸಂವಿಧಾನದ ಪರಿಚ್ಛೇದಗಳನ್ನು ಬಳಸಿಕೊಳ್ಳುವ ಎಡಚರ ಬ್ರಿಗೇಡ್ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದೆ.

ಬಸವರಾಜ್ ಬೊಮ್ಮಾಯಿ ಮತ್ತು ಸುದೀಪ್ ಸಂಬಂಧ ಇಂದು ನಿನ್ನೆಯದಲ್ಲ, ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ದಿನದಿಂದಲೂ ಸುದೀಪ್ ಅವರ ಪರವಾಗಿ ನಿಂತಿದ್ದಾರೆ. ತಾನು ಕಷ್ಟದಲ್ಲಿದ್ದ ಸಂದರ್ಭದಲ್ಲಿ ಸಹಾಯ ಮಾಡಿದ ಬೊಮ್ಮಾಯಿ ಯವರ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ ಹೇಳಿದ್ದಾರೆ. ಕಿಚ್ಚ ಸುದೀಪ್ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ನಟ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ತನ್ನ ನಟನೆಯ ಮೂಲಕ ಛಾಪು ಮೂಡಿಸಿರುವ ನಟ. ಕಿಚ್ಚನಿಗೆ ಜಾತಿಯೆಂಬುದಿಲ್ಲ, ಚಿತ್ರರಂಗವೇ ಕಿಚ್ಚನ ಆಸ್ತಿ. 2019 ರ ಉಪಚುನಾವಣೆಯ ಸಂದರ್ಭದಲ್ಲಿ ನಟ ದರ್ಶನ್ ಮುನಿರತ್ನ ಪರವಾಗಿ ಪ್ರಚಾರಕ್ಕಾಗಿ ಬಂದಿದ್ದರು.

ದರ್ಶನ್ ಜೊತೆಗೆ ಖ್ಯಾತ ನಟಿ ಅಮೂಲ್ಯ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಕೃಷಿ ಸಚಿವ ಬಿ.ಸಿ. ಪಾಟೀಲ್‌ರ ಸಂದರ್ಭ ದಲ್ಲಿ ನಟ ದರ್ಶನ್ ಕರ್ನಾಟಕದ ಕೃಷಿ ಇಲಾಖೆಯ ರಾಯಭಾರಿಯಾಗಿದ್ದರು, ಕಿಚ್ಚ ಸುದೀಪ್, ಶ್ರೀರಾಮುಲು ಪರವಾಗಿ ೨೦೧೮ ರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ತೆಲುಗು ನಟರು ಕರ್ನಾಟಕಕ್ಕೆ ಬಂದು ಪ್ರಚಾರ ಮಾಡುವುದು ಹೊಸತೇ ನಲ್ಲ. ಕಾಂಗ್ರೆಸ್ಸಿನ ಅನೇಕ ನಾಯಕರು ತೆಲುಗು ನಟರನ್ನು ಕರೆಸಿ ಪ್ರಚಾರ ಮಾಡಿಸಿದ್ದಾರೆ.

ಕನ್ನಡದ ಖ್ಯಾತ ಹಾಸ್ಯ ನಟ ಸಾಧುಕೋಕಿಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಬಹಿರಂಗವಾಗಿ ಸಾಧುಕೋಕಿಲ, ಡಿ.ಕೆ.ಶಿವ ಕುಮಾರ್‌ರನ್ನು ಹಾಡಿ ಹೊಗಳಿದ್ದಾರೆ. ಹಾಗಾದರೆ ಸಾಧುಕೋಕಿಲ ಅಭಿನಯದ ಹಾಸ್ಯ ತುಣುಕುಗಳನ್ನು ಚುನಾವಣೆ
ಮುಗಿಯುವವರೆಗೂ ನಿಷೇಧಿಸಲು ಕಾಂಗ್ರೆಸ್ ಪಕ್ಷ ಯಾಕೆ ಆಗ್ರಹಿಸುತ್ತಿಲ್ಲ? ಮತ್ತೊಬ್ಬ ಕನ್ನಡದ ನಿರ್ದೇಶಕ ಎಸ್.ನಾರಾಯಣ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅವರ ಅಭಿನಯದ ಚಲನಚಿತ್ರಗಳ ನಿಷೇಧದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲ. ಜಾತ್ಯತೀತ ಜನತಾದಳ ಒಂದು ಡ್ರಾಮಾ ಕಂಪೆನಿ. ಕನ್ನಡದ ಮೇರು ನಟರನ್ನು ಮೀರಿಸುವಂತಹ ಅಭಿನಯವನ್ನು ಜನತಾದಳದ ನಾಯಕರಲ್ಲಿ ಕಾಣಬಹುದು.

ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲಿ ಇದು ನನ್ನ ಕೊನೆಯ ಚುನಾವಣೆಯೆಂದು ನಾಟಕ ಮಾಡಿ ಜನರಿಗೆ ಮರುಳು ಮಾಡುತ್ತಾರೆ. ಜನರ ಮುಂದೆ ಕಣ್ಣೇರು ಹಾಕಿ ಮತಯಾಚನೆ ಮಾಡುವ ಕುಮಾರಸ್ವಾಮಿಯವರ ನಟನೆಯನ್ನು ಐದು ವರ್ಷಕ್ಕೊಮ್ಮೆ ಕರ್ನಾಟಕದ ಜನ ನೋಡುತ್ತಿರುತ್ತಾರೆ. ಕುಮಾರಸ್ವಾಮಿಯವರ ಕಣ್ಣೀರಿನ ಹಿಂದಿನ ಕತೆಯನ್ನು ಜಮೀರ್ ಅಹ್ಮದ್ ಖಾನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸುವವರೆಲ್ಲರನ್ನೂ ಟಾರ್ಗೆಟ್ ಮಾಡುವ ಕಾಂಗ್ರೆಸ್ ಪಕ್ಷ ಕಿಚ್ಚ ಸುದೀಪ್ ವಿಚಾರದಲ್ಲಿಯೂ ಅದೇ ಧೋರಣೆಯನ್ನು ಮುಂದುವರಿಸಿದೆ. ಡಿ.ಕೆ. ಶಿವಕುಮಾರ್, ಸುದೀಪ್ ಮನೆಗೆ ಭೇಟಿ ನೀಡಿ ತಮಗೆ ಬೆಂಬಲ ನೀಡಬೇಕೆಂದು ವಿನಂತಿಸಿಕೊಂಡಾಗ ಕಾಂಗ್ರೆಸ್ ಪಕ್ಷಕ್ಕೆ ಅವರ ಜಾತಿ
ಕಾಣಲಿಲ್ಲ.

ಕಳೆದ ಬಾರಿ ಕಿಚ್ಚ ಸುದೀಪ್‌ರನ್ನು ಜಾತ್ಯತೀತ ಜನತಾದಳಕ್ಕೆ ಬೆಂಬಲಿಸಲು ಪ್ರಯತ್ನ ಪಟ್ಟ ಕುಮಾರಸ್ವಾಮಿಗೆ ಅಂದು ನಟರ ಮೇಲಿನ ವಿಶ್ವಾಸ ಕಾಣಿಸಲಿಲ್ಲ. ಊಸರವಳ್ಳಿಯಂತೆ ಬಣ್ಣ ಬದಲಿಸುವ ಎರಡೂ ಪಕ್ಷಗಳು, ನರಿಯೊಂದು ತನಗೆ ತಿನ್ನಲು ಸಿಗದ ಸಿಹಿ ದ್ರಾಕ್ಷಿಯನ್ನು ಹುಳಿಯೆಂದು ಹೇಳಿದಂತಾಡುತ್ತಿದ್ದಾರೆ.