Saturday, 23rd November 2024

ಬಂಡೀಪುರದಲ್ಲಿ ಸಫಾರಿ ನಡೆಸಿದ ಪ್ರಧಾನಿ ಮೋದಿ

ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬಂಡೀಪುರ ದಲ್ಲಿ ಸಫಾರಿ ನಡೆಸಿದರು.

ಬಳಿಕ ಮದುಮಲೈನಲ್ಲಿ ಭಾರತಕ್ಕೆ ಪ್ರತಿಷ್ಠಿತ ಆಸ್ಕರ್ ಗರಿ ತಂದುಕೊಟ್ಟ “ಎಲಿಫೆಂಟ್ ವಿಸ್ಪರರ್ಸ್” ಡಾಕ್ಯುಮೆಂಟರಿಯಲ್ಲಿ ಅಭಿನಯಿಸಿರುವ ಬೊಮ್ಮನ್ ಹಾಗೂ ಬೆಳ್ಳಿ ದಂಪತಿ ಯನ್ನು ಭೇಟಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿ ಯ ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮ ದಂಪತಿಯನ್ನು ಭೇಟಿ ಮಾಡಿ, ಆನೆ ಶಿಬಿರದಲ್ಲಿ ವಿಹರಿಸಿ ಗಜಪಡೆಗೆ ಕಬ್ಬು ತಿನ್ನಿಸಿ ಗಮನ ಸೆಳೆದಿದ್ದಾರೆ.

ಬಂಡೀಪುರ ಗಡಿ ಭಾಗದಿಂದ ಮುದುಮಲೈ ಆನೆ ಶಿಬಿರಕ್ಕೆ 6 ಕಿಲೋ ಮೀಟರ್‌ ಇದ್ದು, ನರೇಂದ್ರ ಮೋದಿಯವರು ಬಂಡೀಪುರ ದಲ್ಲಿ ಸಾರಿ ಮುಗಿಸಿ ಇಲ್ಲಿ ಮಾವುತ ದಂಪತಿ ಯನ್ನು ಭೇಟಿ ಆಗಿದ್ದಾರೆ. ಅಲ್ಲದೆ ಅವರೊಂದಿಗೆ ಸಂವಾದ ನಡೆಸಿ ಆಸ್ಕರ್ ಪ್ರಶಸ್ತಿ ಬಂದಿ ರುವುದಕ್ಕೆ ಅಭಿನಂದನೆಯನ್ನೂ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ದಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ.