Saturday, 23rd November 2024

ರೆಪೋ ದರ ಏರಿಕೆಗೆ ತಡೆ; ಆರ್‌ಬಿಐನ ಎಚ್ಚರಿಕೆಯ ಹೆಜ್ಜೆಗಳು

ವಿತ್ತೀಯ ನೋಟ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

೨೦೨೪ ರ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಅಲ್ಪ ಮಟ್ಟಿಗೆ ಏರಿಕೆಯಾಗುವ ಮುನ್ಸೂಚನೆ ಯನ್ನು ಆರ್‌ಬಿಐ ಗವರ್ನರ್ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಿಡಿಪಿ ದರವನ್ನು ಶೇ. ೬.೪ ರಿಂದ ಶೇ. ೬.೫ ಕ್ಕೆ ಪರಿಷ್ಕರಿಸಿದೆ. ಮತ್ತು ಹಣದುಬ್ಬರ ಇಳಿಕೆಯಾಗಿ ಶೇ. ೫.೨ ತಲುಪಬಹುದು ಎಂದು ಅಂದಾಜಿಸಿದೆ. ೨ಂ೨೪ ರ ಸರಾಸರಿ ಹಣದುಬ್ಬರ ಶೇ. ೫.೨ ಮತ್ತು ನಮ್ಮ ಗುರಿ ಶೇ. ೪ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಕೇಂದ್ರಿಯ ಬ್ಯಾಂಕ್ (ಆರ್‌ಬಿಐ)ಹಣಕಾಸು ಪರಾಮರ್ಶೆ ನೀತಿಯ(ಎಂಪಿಸಿ) ಎಪ್ರಿಲ್‌ನ ದ್ವೆಮಾಸಿಕ ಸಭೆಯು ತನ್ನ ತೀರ್ಮಾನ ಗಳನ್ನು ಪ್ರಕಟಿಸಿದೆ. ಆರ್‌ಬಿಐ ನೀತಿ ಫಲಿತಾಂಶವು ಬಡ್ಡಿದರವನ್ನು ರಾಮಗೊಳಿಸುವುದರ ಮೂಲಕ ಮಾರುಕಟ್ಟೆಯನ್ನು ಆಶ್ಚರ್ಯ ಗೊಳಿಸಿತು.

ಅಲ್ಲದೇ ೨ಂ೨೪ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನವನ್ನು ಮೇಲ್ಮುಖ ವಾಗಿ ಪರಿಷ್ಕರಿಸಿದೆ. ಹಣದುಬ್ಬರ ನಿಗ್ರಸಿಸಲು ಕಳೆದ ವರ್ಷದ ಮೇ ತಿಂಗಳಿನಿಂದ ಇಲ್ಲಿಯ ವರೆಗೆ ಆರ್‌ಬಿಐ ಬಡ್ಡಿದರವನ್ನು ಸತತ ಆರು ಬಾರಿ ಒಟ್ಟು ಶೇ. ೨.೫ ರಷ್ಟು ಏರಿಕೆ ಮಾಡಿದೆ. ಏಪಿಲ್‌ನಲ್ಲಿಯೂ ಶೇ. ಂ.೨೫ ರಷ್ಟು ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದರು. ಆದರೆ ಆರ್ ಬಿಐ ಯಥಾಸ್ಥಿತಿಯನ್ನು ಕಾಯ್ದುಕೊಂಡು ಎಲ್ಲರಿಗೂ ಅಚ್ಚರಿಯನ್ನು ನೀಡಿದೆ.

ಇದರಿಂದಾಗಿ ರೆಪೋ ದರ ಶೇ. ೬.೫ ರಲ್ಲಿಯೇ ಉಳಿದಿದೆ. ೧೭ ತಿಂಗಳಾದರೂ ಹಣದುಬ್ಬರ ಶೇ. ೬ ಕ್ಕಿಂತ ಮೇಲಿದ್ದರೂ ಬಡ್ಡಿದರ ಹೆಚ್ಚಿಸದಿರುವುದೇ ಅಚ್ಚರಿಗೆ ಕಾರಣ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿ ನಿಧಾನವಾಗಿ ಸಾಗುತ್ತಿರುವುದಲ್ಲದೇ ಹಲವಾರು ದೇಶಗಳಲ್ಲಿ ಆರ್ಥಿಕ ಕುಸಿತ ಕಂಡು ಬರುತ್ತಿದೆಯಾದರೂ ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಪ್ರಭಾವವು ನಮ್ಮ ಮೇಲೂ ಆಗಿದೆ. ಹಣದುಬ್ಬರ ನಿಯಂತ್ರಣದ ನಿಟ್ಟಿನಲ್ಲಿ ದೇಶಕ್ಕೆ ಹಲವಾರು
U ಳಿ z g ಇದೊಂದು ರಾಮವೇ ಹೊರತು ತಿರುವಲ್ಲ ಮತ್ತು ಹೊಂದಾಣಿಕೆ ಹಣಕಾಸು ನೀತಿಯನ್ನು ಹಿಂಪಡೆಯುವ ನೀತಿಯನ್ನು ಬದಲಾಯಿಸಿಲ್ಲವೆಂಬ ಸಂದೇಶವನ್ನು ಆರ್‌ಬಿಐ ನೀಡಿದೆಯಲ್ಲದೆ ಮುಂದಿನ ದಿನಗಳಲ್ಲಿ ಬಡ್ಡಿದರ ಏರಿಕೆಗೆ
ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲವೆಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.

ಬಡ್ಡಿದರ ಹೆಚ್ಚಿಸಿದ ತೀರ್ಮಾನವನ್ನು ವಿತ್ತ ಸಚಿವೆಯರು ಸ್ವಾಗತಿಸಿದ್ದಾರೆ. ಎಂಪಿಸಿಯ ಕೆಲಸ ಇನ್ನೂ ಮುಗಿದಿಲ್ಲ ಮತ್ತು ಹಣದುಬ್ಬರವು ಗುರಿಗೆ ಹತ್ತಿರವಾಗುವವರೆಗೆ ಹಣದುಬ್ಬರದ ಯುದ್ಧವನ್ನು ಮುಂದುವರಿಸಬೇಕು ಎನ್ನುವ ಸೂಚನೆಯನ್ನು ಆರ್‌ಬಿಐ ನೀಡಿದೆ. ಏಪ್ರಿಲ್ ದ್ವೆಮಾಸಿಕ ಹಣಕಾಸು ನೀತಿಯ ಪರಾಮರ್ಶೆಯ ಸಭೆಯಲ್ಲಿ ಬಡ್ಡಿದರವನ್ನು ಯಥಾ ಸ್ಥಿತಿ
ಯಲ್ಲಿಟ್ಟರೂ ಇದೇ ತೀರ್ಮಾನ ಜೂನ್‌ನಲ್ಲಿ ಮುಂದುವರಿಯುವುದೆಂದು ಹೇಳಲಾಗದು. ಹಣದುಬ್ಬರ ಮತ್ತು ಜಾಗತಿಕ ಪ್ರಭಾವಗಳು ಆರ್‌ಬಿಐ ನೀತಿಯ ಮೇಲೆ ಪ್ರಭಾವ ಬೀಳಲಿದೆ. ಇದೀಗ ದೇಶದ ಮುಂದೆ ಹಲವಾರು ಸಮಸ್ಯೆಗಳಿವೆ.

ಅಕಾಲಿಕ ಮಳೆಯಿಂದ ಆಹಾರದ ಬೆಲೆಗಳು ಹೆಚ್ಚುವ ಸಾಧ್ಯತೆಯಿದೆ. ಒಪೆಕ್ ತೈಲ ಉತ್ಪಾದನೆಯಲ್ಲಿ ಕಡಿತಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದು, ಇದು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಬ್ಯಾಂಕ್ ಸಾಲಗಳ ಬೇಡಿಕೆಯಯೂ ಕಡಿಮೆಯಾಗಿದೆ. ಅಮೆರಿಕ ಇಂಗ್ಲೆಂಡ್ ಮತ್ತು ಯುರೋಪ್ ಸೇರಿದಂತೆ ಹಲವು ಬ್ಯಾಂಕ್‌ಗಳು ದಿವಾಳಿ ಸ್ಥಿತಿಯನ್ನು ತಲುಪಿವೆ, ಆದರೂ ಅಲ್ಲಿ ಬಡ್ಡಿದರ ಹೆಚ್ಚುತ್ತಲೇ ಇರುವುದರಿಂದ ಬ್ಯಾಂಕಿಂಗ್ ವಲಯಗಳ ಬಿಕ್ಕಟ್ಟು ಹಾಗೂ ಬಿಗಿಯಾದ ಆರ್ಥಿಕ ಪರಿಸ್ಥಿತಿಗಳು ಆರ್ಥಿಕತೆಯಲ್ಲಿ ತೀವ್ರ ಜಾಗತಿಕ ಮಂದಗತಿಗೆ ಕಾರಣ ವಾಗಬಹುದು.

೨೦೨೪ ರ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಅಲ್ಪ ಮಟ್ಟಿಗೆ ಏರಿಕೆಯಾಗುವ ಮುನ್ಸೂಚನೆಯನ್ನು ಆರ್‌ಬಿಐ ಗವರ್ನರ್ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಿಡಿಪಿ ದರವನ್ನು ಶೇ. ೬.೪ ರಿಂದ ಶೇ. ೬.೫ ಕ್ಕೆ ಪರಿಷ್ಕರಿಸಿದೆ. ಮತ್ತು ಹಣದುಬ್ಬರ ಇಳಿಕೆಯಾಗಿ ಶೇ. ೫.೨ ತಲುಪಬಹುದು ಎಂದು ಅಂದಾಜಿಸಿದೆ. ೨ಂ೨೪ ರ ಸರಾಸರಿ ಹಣದುಬ್ಬರ ಶೇ. ೫.೨ ಮತ್ತು ನಮ್ಮ ಗುರಿ ಶೇ. ೪ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಆದಾಗ್ಯೂ ಈ ನಿಯಂತ್ರಣಕ್ಕೆ ಆರ್‌ಬಿಐ ಮುಂದೆ ಸವಾಲುಗಳಿವೆ ಎಂದು ತಿಳಿಸಿದ್ದಾರೆ.

ಅನೇಕ ಅನಿಶ್ಚಿತತೆಗಳು ಉಳಿದಿರುವಾಗ ಅದನ್ನು ಮೀರಿದ ಊಹೆಗಳು ಸಾಧ್ಯವಾಗುವುದಿಲ್ಲ ಎಂದರು. ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಭಾರತದ ಜಿಡಿಪಿಯನ್ನು ಶೇ.೬ ಕ್ಕೆ ಇಳಿಸಿದೆ. ಇದಕ್ಕನುಗುಣವಾಗಿ, ಈ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಕಾರಣವೆಂದರೂ ತಪ್ಪಾಗಲಾರದು. ಬಡ್ಡಿದರ ಸತತವಾಗಿ ಏರುತ್ತಿರುವ ಕಾರಣ ಸಾಲದ
ಮೇಲಿನ ಇಎಂಐಗಳು ಶೇ.೨ ಕ್ಕಿಂತ ಹೆಚ್ಚು ಏರಿಕೆ ಯಾಗಿದೆ. ಸದ್ಯ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿರಿಸಿ ಸಾಲ ಪಾವತಿಸುವ ಗ್ರಾಹಕರಿಗೆ ನೆಮ್ಮದಿಯನ್ನು ನೀಡಿದುದರಿಂದ ಈ ಹಂತದಲ್ಲಿ ಬಡ್ಡಿದರ ಇನ್ನಷ್ಟು ಏರಿಕೆಯಾಗಲಾರದು.

ಸಾಲದ ಮೇಲಿನ ದರ ಹೆಚ್ಚಿರುವುದರ ಪ್ರಭಾವವು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಮತ್ತೆ ರೆಪೋ ದರವನ್ನು ಹೆಚ್ಚಿಸಿದರೆ
ಪ್ರತೀಕೂಲವಾಗಬಹುದೆಂಬುದು ಕೂಡಾ ಆರ್‌ಬಿಐ ಧೋರಣೆ ಮತ್ತು ನಿಧಾನದ ಹೆಜ್ಜೆಗಳೆಂದು ಗೋಚರವಾಗುತ್ತಿದೆ. ರೆಪೋ ದರ ಏರಿಕೆ ಶುರುವಾದ ನಂತರ ಹಲವಾರು ಬ್ಯಾಂಕ್‌ಗಳು ವಿವಿಧ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿವೆ.

ಇದರಿಂದ ನಿಶ್ಚಿತ ಠೇವಣಿಗಳು ವೃದ್ಧಿಸಬಹುದು. ಸಾಲದ ಮೇಲಿನ ಬಡ್ಡಿದರ ಏರಿಕೆಯಾಗದು ಎನ್ನುವ ದೃಷ್ಟಿಯಿಂದ ಸಾಲರುವ ಕಂಪನಿಗಳ ಲಾಭಾಂಶಕ್ಕೆ ಹೆಚ್ಚು ಹೊಡೆತಬೀಳಲಾರದು. ಆದುದರಿಂದ ಷೇರುಗಳಲ್ಲಿ ಹೆಚ್ಚಿನ ಹೂಡಿಕೆಯಾಗಬಹುದು. ಮತ್ತು ಷೇರು ಮಾರುಕಟ್ಟೆಯಲ್ಲಿ ತೇಜಿ ವಹಿವಾಟು ನಡೆಯಬಹುದು. ಈಕ್ವಿಟಿ ಆಧಾರದ ಮ್ಯೂಚುವಲ್ ಫಂಡ್‌ಗಳಿಂದ ಹೆಚ್ಚು
ಲಾಭಾಂಶ ಸಿಗುವ ಸಾಧ್ಯತೆಯಿದೆ. ಸಾಲವನ್ನೆ ಅವಲಂಬಿಸಿರುವ ಉದ್ದಿಮೆಗಳಿಗೆ ಬಡ್ಡಿದರ ಹೆಚ್ಚಾಗಿಲ್ಲವೆಂಬ ಸಮಾಧಾನ ದೊರೆಯಬಹುದು.

ಜಗತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಅನಿವಾಸಿ ಭಾರತೀಯರ ಕೊಡುಗೆ ದೇಶದ ಜಿಡಿಪಿಯ ಶೇ.೧ ರಷ್ಟು ತಲುಪಿದೆ. ಈಗ ಎನ್‌ಆರ್‌ಐ ಹಣ ಭಾರತದ ದೇಶೀ ನಿಮಯ ಗಳಿಕೆಯಲ್ಲಿ ಶೇ. ೨೨ ರಷ್ಟಾಗಿದೆ. ಇದು ಬ್ಯಾಂಕ್ ಠೇವಣಿಯ ಪ್ರಗತಿಯಲ್ಲಿ,
ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಸುತ್ತಿದೆ. ಆರ್ಥಿಕ ಪ್ರಗತಿ ಮತ್ತು ಹಣದುಬ್ಬರ ನಿಯಂತ್ರಣವೆರಡನ್ನೂ ಆರ್‌ಬಿಐ ಗಮನದಲ್ಲಿರಿಸಿಕೊಂಡು ಹೆಜ್ಜೆ ಇಡುತ್ತಿರುವುದು ಕಂಡು ಬರುತ್ತಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ಶೇ. ೩ ಕ್ಕಿಂತ ಕಡಿಮೆಯಾಗಲಿದೆ ಮತ್ತು ಜಾಗ ತಿಕ ಆರ್ಥಿಕತೆಗೆ ಆಸುಪಾಸು ಶೇ. ೨೫ ರಷ್ಟು ಕೊಡುಗೆ ಯನ್ನು ಭಾರತ ನೀಡಲಿದೆ ಎಂದು ಇಎಂಎಫ್ ಹೇಳಿದೆ.

ಒಟ್ಟಾರೆ ಜಾಗತಿಕ ಆರ್ಥಿಕತೆ ಡೋಲಾಯಮಾನವಾಗಿದೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ, ಉದ್ವಿಗ್ನತೆ ಮತ್ತು ಇನ್ನೂ ಹೆಚ್ಚಿನ ಹಣದುಬ್ಬರದೊಂದಿಗೆ ದೃಢವಾದ ಚೇತರಿಕೆಯು ಅಸ್ವಷ್ಟವಾಗಿ ಉಳಿದಿದೆ. ಇದು ಪ್ರತಿಯೊಬ್ಬರ ಭಷ್ಯವನ್ನು ಶೇಷವಾದ ಅತ್ಯಂತ ದುರ್ಬಲ ಜನರು ಮತ್ತು ದೇಶಗಳಿಗೆ ಹಾನಿಯುಂಟುಮಾಡುತ್ತದೆ.

(ಲೇಖಕರು : ನಿವೃತ್ತ ಮುಖ್ಯ ಪ್ರಬಂಧಕರು ಜಯ
ಬ್ಯಾಂಕ್ ಮತ್ತು ಸಂದರ್ಶಕ ಪ್ರಾಧ್ಯಾಪಕರು)