ಹಾಗೆ ನೋಡಿದರೆ ಒಂದು ಕಾಲದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ಎರಡನ್ನೂ ದೇಶದಲ್ಲಿ ‘ಗೂಂಡಾ ರಾಜ್’ ಎಂದೇ ಗುರುತಿಸಲಾಗುತ್ತಿತ್ತು. ಈಗ ಸನ್ನಿವೇಶ ಬದಲಾಗಿದೆ. ಸಾಮಾನ್ಯ ನಾಗರಿಕರು, ರಾಜಕೀಯ ಮುಖಂಡರು ಹತ್ಯೆಯಾಗುತ್ತಿದ್ದ ಜಾಗದಲ್ಲಿ ಪೊಲೀಸ್ ಎನ್ ಕೌಂಟರ್‌ಗೆ ಭೂಗತ ದೊರೆಗಳು, ಮಾಫಿಯಾ ಡಾನ್‌ಗಳು, ಕೊಲೆ ಪಾತಕಿಗಳು ಬಲಿಯಾಗು ತ್ತಿದ್ದಾರೆ. ಒಂದು ವರದಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ೭೦೦ಕ್ಕೂ ಹೆಚ್ಚು ಪೊಲೀಸ್ ಎನ್‌ಕೌಂಟರ್‌ಗಳಾಗಿವೆ.
ಇತ್ತೀಚೆಗಷ್ಟೇ ಯೋಗಿ ಈ ಬಗ್ಗೆ ಮಾತನಾಡಿ, ‘ಒಂದು ಕಾಲದಲ್ಲಿ ಕೊಲೆ, ಸುಲಿಗೆ ಬೆದರಿಕೆ ಮತ್ತು ಅಪಹರಣ ಗಳಿಂದ ಜನರನ್ನು ಭಯಭೀತಗೊಳಿಸು ತ್ತಿದ್ದವರೇ ಈಗ ಭಯಭೀತರಾಗಿದ್ದಾರೆ. ಕಾನೂನಿನ ಕಬಂಧ ಬಾಹುಗಳಿಗೆ ಸಿಲುಕಿ ಅಂಥವರೆಲ್ಲ ಪ್ಯಾಂಟ್ ಒದ್ದೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ನಾಗರಿಕ ನ್ಯಾಯ ಬಲಗೊಂಡಿದೆ’ ಎಂದಿದ್ದರು. ಈ ಮಾತಲ್ಲಿ ಹುರುಳಿಲ್ಲದಿಲ್ಲ. ಮಾಫಿಯಾ ಮತ್ತು ಕಳಪೆ ಕಾನೂನು ಮತ್ತು ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ರಾಜ್ಯದಲ್ಲಿಂದು ಕಾನೂನು ಉಸಿರಾಡುತ್ತಿದೆ. ಮಾತ್ರವಲ್ಲ, ಪ್ರಗತಿಯತ್ತ ರಾಜ್ಯ ಮುನ್ನುಗ್ಗು ತ್ತಿದೆ.
ಅಧಿಕಾರಕ್ಕೇರುತ್ತಿದ್ದಂತೆಯೇ ಮಾಫಿಯಾಗಳನ್ನು ಮಣ್ಣಿನಲ್ಲಿ ಹೂತುಹಾಕುತ್ತೇವೆ’ ಎಂದು ಗುಡುಗಿದ್ದ ಯೋಗಿ, ಸದ್ದಿಲ್ಲದೇ ಇದನ್ನು ಸಾಧಿಸುತ್ತಿರುವು ದಕ್ಕೆ ದರೋಡೆ ಕೋರ-ರಾಜಕಾರಣಿ ಅತೀಕ್ ಅಹ್ಮದ್‌ಗೆ ಶಿಕ್ಷೆ ಹಾಗೂ ಶನಿವಾರವಷ್ಟೇ ನಡೆದ ಆತನ ಹತ್ಯೆ ಪ್ರಕರಣ ಸಾಕ್ಷಿ. ಗಲಭೆ-ದೊಂಬಿಕೋರರ ವಿರುದ್ಧ ಯೋಗಿ ಸರಕಾರ ಬಳಸಿದ ‘ಬುಲ್ಡೋಜರ್ ಅಸ್ತ್ರ’ ಸಹ ಕಾನೂನು ಪರಿಧಿಯಾಚೆಗೆ, ನಾಗರಿಕರ ನೆಮ್ಮದಿಯ ದೃಷ್ಟಿಯಿಂದ ಸಮ್ಮತವೆನಿಸಿದ್ದು ಸುಳ್ಳಲ್ಲ. ಒಂದು ಕಾಲ ದಲ್ಲಿ ಮಾಫಿಯಾ ಮಂದಿ, ಕೈಗಾರಿಕೋದ್ಯಮಿಗಳನ್ನು ಬೆದರಿಸಿ ಸುಲಿಯುತ್ತಿದ್ದರು, ಉದ್ಯಮಿಗಳನ್ನು ಅಪಹರಿಸುತ್ತಿದ್ದರು.
ಅದೇ ರಾಜ್ಯ ಇದೀಗ ಗರಿಷ್ಠ ಸಂಖ್ಯೆಯ ಎಕ್ಸ್‌ಪ್ರೆಸ್ ವೇಗಳು ಮತ್ತು ಹಲವಾರು ವಿಮಾನ ನಿಲ್ದಾಣಗಳನ್ನು ಹೊಂದಿದೆ. ಸಣ್ಣ ಕೈಗಾರಿಕೆಗಳಿಗೆ ಬಲವಾದ ನೆಲೆ ಸಿಕ್ಕಿದೆ. ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿಯೂ ಯುಪಿ, ದೇಶದಲ್ಲಿ ಮುಂಚೂಣಿಯಲ್ಲಿದೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯಲ್ಲಿ ಸುಧಾರಣೆಯೊಂದಿಗೆ, ಹೂಡಿಕೆಯೊಂದಿಗೆ ಉದ್ಯೋಗದ ಸಾಧ್ಯತೆಗಳು ಬಹುಪಟ್ಟು ಹೆಚ್ಚಿವೆ.
ಭದ್ರತೆ ಮತ್ತು ಉದ್ಯೋಗದ ಸಂಯೋಜಿತ ಶಕ್ತಿಯಿಂದಾಗಿ ಯುಪಿ ಆರ್ಥಿಕತೆಯು ಹೊಸ ವೇಗವನ್ನು ಪಡೆದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾನೂ
ನಿನ ಬಗ್ಗೆ ಯಾವುದೇ ಗೌರವವನ್ನು ತೋರಿಸದ ಜನರು ಈಗ ನ್ಯಾಯದ ಮುಂದೆ ಬರಲು ಹೆದರುತ್ತಿzರೆ. ಉತ್ತರ ಪ್ರದೇಶ ಇಂದು ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿದೆ ಮತ್ತು ಸಂಪೂರ್ಣ ‘ಹೊಸ ಗುರುತನ್ನು’ ಪಡೆದುಕೊಂಡಿದೆ. ದೇಶದ ಇತರ ರಾಜ್ಯದ ಜನರೂ ‘ನಮಗೊಬ್ಬ ಯೋಗಿಯಂಥ ದಿಟ್ಟ, ಗಂಡೆದೆಯ ನಾಯಕ ಬೇಕು’ ಎಂದು ಹಂಬಲಿಸುವಂತಾಗಿದ್ದರೆ ಅದಕ್ಕೆ ಕಾರಣ ಕಾನುನು ಸುವ್ಯವಸ್ಥೆಯ ಮರುಸ್ಥಾಪನೆ. ಇದಕ್ಕೆ ಅನುಸರಿಸುತ್ತಿರುವ ಮಾರ್ಗಗಳು, ತಂತ್ರಗಳ ಹರತಾಗಿಯೂ ಯೋಗಿ ಇದನ್ನು ಸಾಧಿಸುತ್ತಿದ್ದಾರೆ. ಭೇಷ್ ಎನ್ನಲೇಬೇಕು.