Friday, 13th December 2024

ಏ.೧೯ರಂದು ನಾಮಪತ್ರ ಸಲ್ಲಿಕೆ: ಕಾಸುಗೌಡ ಬಿರಾದಾರ

ಇಂಡಿ: ನಾಳೆ ಪಟ್ಟಣದ ಆರಾಧ್ಯದೇವರಾದ ಶ್ರೀಶಾಂತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜ್ಯ ಸಲ್ಲಿಸಿದ ನಂತರ ಅಪಾರ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗೊಂದಿಗೆ ಮಿನಿವಿಧಾನಸೌಧಾಕ್ಕೆ ತೆರಳಿ ಬಹಿರಂಗ ನಾಮಪತ್ರಸಲ್ಲಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಸಿಂದಗಿ ರಸ್ತೆಯ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು ವ್ಯಕ್ತಿಗಿಂತ ಪಕ್ಷ ದೊಡ್ಡದ್ದು ಬಿಜೆಪಿ ಪಕ್ಷದಲ್ಲಿ ಬದ್ದತೆ ಇದೆ, ನಾನೋಬ್ಬ ಸಾಮಾನ್ಯ ರೈತಾಪಿ ಕುಟುಂಬದ ಹಾಗೂ ಅಧ್ಯಾತ್ಮಿಕ,ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ತನುಮನಧನದಿಂದ ದುಡಿದಿರುವೆ. ಇದನ್ನು ಗುರುತಿಸಿ ನನಗೆ ವರಿಷ್ಠರು ಟಿಕೇಟ ನೀಡಿರುವುದರಿಂದ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನಾಳೆ ಸುಮಾರು ೩೦ ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಸೇರುವ ನಿರೀಕ್ಷೆ ಇದ್ದು ಪ್ರಮುಖ ರಸ್ತೆಗಳಲ್ಲಿ ಅನೇಕ ವಾದ್ಯ ವ್ಯಭೋ ಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಾಗುವುದು ಆದ್ದರಿಂದ ಬಿಜೆಪಿ ಕಾರ್ಯಕರ್ಯರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಸಿದ್ದಲಿಂಗ ಹಂಜಗಿ ಮಾತನಾಡಿದರು.ಬೋರಮ್ಮಾಗೌಡತಿ ಮುಳಜಿ, ದೆವೇಂದ್ರ ಕುಂಬಾರ, ಸೋಮಶೇಖರ ದೇವರ, ಬುದ್ದುಗೌಡ ಪಾಟೀಲÀ್ಯಲ್ಲಪ್ಪ ಹದರಿ, ಸಂಜು ದಶವಂತ, ವಿಜಯಕುಮಾರ ನಾಯಕ, ರಾಜಶೇಖರ ಯಸಚೀನ ಬೋಳೆಗಾಂವ್‌ರಗಲ್ ಪತ್ರಿಕಾಗೋಷ್ಠಿಯಲ್ಲಿದ್ದರು.