ಬೆಂಗಳೂರು: ಈ ಬಾರಿಯ ಬೇಸಿಗೆ ರಜೆಯನ್ನು ವಿಶೇಷವಾಗಿ ಆಚರಿಸುತ್ತಿರುವ ವಂಡರ್ಲಾ ಮೇ 31ರವರೆಗೆ “ಸಮ್ಮರ್ಲಾ ಫಿಯೆಸ್ಟಾವನ್ನು” ಆಯೋಜಿಸ ಲಾಗಿದೆ.
ಈ ಸಂಪೂರ್ಣ ಬೇಸಿಗೆ ಕಾಲದಲ್ಲಿ ವಂಡರ್ಲಾಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶೇಷ ಮನೋರಂಜನೆ ನೀಡುವ ಉದ್ದೇಶದಿಂದ ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಬಿಎಂಟಿಸಿ ವೋಲ್ವೋ ಬಸ್ನಲ್ಲಿ ವಂಡರ್ಲಾಗೆ ಆಗಮಿಸುವವರು, ತಮ್ಮ ಟಿಕೆಟ್ನನ್ನು ತೋರಿಸಿದ್ದಲ್ಲಿ ಪಾರ್ಕ್ ಪ್ರವೇಶ ದರದಲ್ಲಿ ಶೇ.೧೫ರಷ್ಟು ರಿಯಾಯಿತಿ ದೊರೆಯಲಿದೆ.
ಜೊತೆಗೆ, 10ನೇ, 11ನೇ, ಅಥವಾ 12ನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ತಮ್ಮ ಹಾಲ್ಟಿಕೆಟ್ ತೋರಿಸುವುದರಿಂದ ಪ್ರತಿ ಟಿಕೆಟ್ ಮೇಲೂ ಶೇ. 35ರಷ್ಟು ರಿಯಾಯಿತಿ ಪಡೆಯಬಹುದು. ಇನ್ನು, ಇತರೆ ಕಾಲೇಜು ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡ್ ತೋರಿಸುವ ಮೂಲಕ ಶೇ. 20 ರಷ್ಟು ರಿಯಾ ಯಿತಿ ಕೊಡುಗೆ ಪಡೆಯಬಹುದು. ಇದಲ್ಲದೆ, ಲೈವ್ಶೋ, ಫುಡ್ಫೆಸ್ಟಿವಲ್, ಫನ್ಗೇಮ್, ಅಕ್ರೋಬ್ಯಾಟಿಕ್ಸ್, ಡಿಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿಮನ್ನು ರಂಜಿಸಲಿವೆ.
ಈ ಕುರಿತು ಪ್ರತಿಕ್ರಿಯಿಸಿದ ವಂಡರ್ಲಾ ಹಾಲಿಡೇಸ್ವ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪಿಲ್ಲಿ, ” ಬೇಸಿಗೆ ರಜೆಯನ್ನು ರೋಮಾಂಚನ ಗೊಳಿಸುವ ಉದ್ದೇಶದಿಂದ ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸುತ್ತಿದ್ದೇವೆ. ವಂಡರ್ಲಾಗೆ ಭೇಟಿ ನೀಡುವವರು ಆನ್ಲೈನ್ ನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಅಥವಾ ನೇರವಾಗಿಯೂ ಪಾರ್ಕ್ಗೆ ಭೇಟ ನೀಡಿ ಟಿಕೆಟ್ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ, www.wonderla.com ಗೆ ಭೇಟಿ ನೀಡಿ ಅಥವಾ +91 80372 30333, +91 80350 73966 ಗೆ ಕರೆ ಮಾಡಿ.