Friday, 13th December 2024

ಸಾಕೇತ್ ಕೋರ್ಟ್ ಒಳಗೇ ಮಹಿಳೆಗೆ ಶೂಟ್​

ನವದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಕೋರ್ಟ್ ​​ನ ಒಳಗೇ ಮಹಿಳೆಯೊಬ್ಬರಿಗೆ ಶೂಟ್​ ಮಾಡಲಾಗಿದೆ.

ತೀವ್ರವಾಗಿ ಗಾಯಗೊಂಡ ಅವರನ್ನು ಅಲ್ಲಿಯೇ ಕೋರ್ಟ್ ಆವರಣದಲ್ಲಿ ಇದ್ದ ಪೊಲೀಸ್​ ಅಧಿಕಾರಿ, ಮತ್ತಿತರರು ಸೇರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹಣಕಾಸಿಗೆ ಸಂಬಂಧಪಟ್ಟ ಯಾವುದೋ ಕೇಸ್​ನ ವಿಚಾರಣೆಗಾಗಿ ಈ ಮಹಿಳೆ ಕೋರ್ಟ್​ಗೆ ಬಂದಿದ್ದರು.

2021ರ ಸೆಪ್ಟೆಂಬರ್​ 24ರಂದು ದೆಹಲಿಯ ರೋಹಿಣಿ ಕೋರ್ಟ್​​ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.

ಇಬ್ಬರು ಶೂಟರ್​​ಗಳು, ಲಾಯರ್​ಗಳಂತೆ ಡ್ರೆಸ್​ ಧರಿಸಿಕೊಂಡು ಬಂದು ಕೋರ್ಟ್​ ಒಳಗೆ ಗುಂಡು ಹಾರಿಸಿದ್ದರು. ಅಂದು ಗ್ಯಾಂಗ್​ಸ್ಟರ್​ ಜಿತೇಂದರ್ ಮಾನ್​ ಅಲಿಯಾಸ್ ಗೋಗಿ ಎಂಬಾತನ ವಿಚಾ ರಣೆ ನಡೆಯುತ್ತಿತ್ತು. ಅದೇ ವೇಳೆ ಆಗಮಿಸಿದ್ದ ಶೂಟರ್​ಗಳಾದ ರಾಹುಲ್ ತ್ಯಾಗಿ ಮತ್ತು ಜಗದೀಪ್​ ಜಗ್ಗಾ ಎಂಬುವರು ಗೋಗಿ ಮೇಲೆ ಒಂದೇ ಸಮನೆ ಗುಂಡು ಹಾರಿಸಿ ಕೊಂದಿದ್ದರು. ಬಳಿಕ ಇವರಿಬ್ಬರನ್ನೂ ಪೊಲಿಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.