Saturday, 14th December 2024

ಅವರು ಪಾಕಿಸ್ತಾನದಲ್ಲಿ ಹುಟ್ಟಿದರೂ, ನೈಜ ಭಾರತೀಯ !

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

ಕರ್ನಾಟಕದಾದ್ಯಂತ ಹಿಜಾಬ್ ವಿವಾದ ಆದಾಗ ತಾವೂ ಹಿಜಾಬ್ ಧರಿಸಿ, ‘ಒಂದೊಮ್ಮೆ ಹಿಜಾಬ್ ಧರ್ಮದ ವಿಷಯ ವಾಗಿದ್ದರೆ, ಗಂಡಸರೂ ಹಿಜಾಬ್ ಹಾಕಿಕೊಂಡು ಓಡಾಡಲಿ’ ಎಂದು ಕುಹಕ ಮಾಡಿದ್ದರು. ಇಡೀ ದೇಶದಲ್ಲಿ ಮುಸಲ್ಮಾನರಿಂದ ಯಾವುದೇ ದೊಂಬಿ, ಗಲಾಟೆಗಳುಂಟಾದರೂ ಎಲ್ಲಕ್ಕಿಂತ ಮೊದಲು ಅದನ್ನು ವಿರೋಧಿಸುತ್ತಿದ್ದುದು ಇದೇ ಫತಾಹ್.

ಇದೇ ಕೆಲವು ವರ್ಷಗಳ ಹಿಂದೆ ಇಸ್ಲಾಂ ವಿರುದ್ಧ ಯಾರು ಮಾತೆತ್ತುವವರಿಲಿಲ್ಲ. ಅದು ಯಾವುದೇ ಊರಲ್ಲಿಯಾದರೂ ಆಗಲಿ, ಅವರೇನೇ ಮಾಡಿದರೂ ಯಾರೂ ತುಟಿ ಪಿಟಿಕ್ ಅಂತಿರಲಿಲ್ಲ. ಇನ್ನು ಬೇರೆ ಧರ್ಮದಲ್ಲಿ ಹುಟ್ಟಿದರೂ ಇಸ್ಲಾಂ ಅನ್ನು, ಅದರ ಆಚರಣೆಯನ್ನು ಬೆಂಬಲಿಸುವವರ ಸಂಖ್ಯೆಗೆ ಕಡಿಮೆಯೇನಿರಲಿಲ್ಲ. ಇಸ್ಲಾಂನ ಹೆಸರು ಹೇಳಿಕೊಂಡು ಎಷ್ಟೇ ದಾಂಧಲೆ ಗಳನ್ನು ಮಾಡಿದರೂ ಅದರ ವಿರುದ್ಧ ಮಾತನಾಡಲೂ ಯಾರ ಬಳಿಯೂ ಧ್ವನಿ ಇರಲಿಲ್ಲ.

ಇವತ್ತಿನ ಮಟ್ಟಿಗೆ ಬಿಜೆಪಿ ಸರಕಾರ ಇದೆ. ಸಂಘದ ಬೇರುಗಳು ಗಟ್ಟಿಯಾಗಿವೆ, ಮುಸಲ್ಮಾನರ ವಿರುದ್ಧ ಮಾತನಾಡಿ, ‘ಫೈರ್ ಬ್ರ್ಯಾಂಡ್’ ಆದವರಿಗೆ ರಾಜಮರ್ಯಾದೆ ಇದೆ. ಕೇಸ್‌ಗಳಾದರೂ ಬೇಲ್ ಕೊಟ್ಟು ಮೆರವಣಿಗೆ ಮಾಡಲು ಜನರಿದ್ದಾರೆ. ಆ ಫೈರ್‌ಬ್ರ್ಯಾಂಡ್ ಗಳ ತಂಟೆಗೆ ಹೋದವವರ ಜತೆ ಜಗಳವಾಡಿ, ಒದ್ದು ಬುದ್ಧಿ ಕಲಿಸಲೂ ಹುಡುಗರು ಇದ್ದಾರೆ. ಸ್ವಲ್ಪ ಮುಂದಕ್ಕೆ ಹೋದರೆ ಅವರಲ್ಲಿ ಕೆಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿಯೂ ಇರುತ್ತಾರೆ.

ಆಗಾಗ ತಮ್ಮ ಫೈರಿಂಗ್ ಸ್ಪೀಚ್‌ಗಳಿಂದ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿರುತ್ತಾರೆ. ಇವತ್ತು ಟಿಪ್ಪು ವಿರುದ್ಧ, ಇಸ್ಲಾಮಿನ ಬಗ್ಗೆ ಗಂಟೆಗಟ್ಟಲೇ ಮಾತನಾಡುವ ಹಲವು ರಾಜಕೀಯ ನಾಯಕರು (?!)oh Zm ಧರಿಸಿ, ಮುಸಲ್ಮಾನರನ್ನು
‘ಭಾಯ್ ಭಾಯ್’ ಎಂದು ಅಪ್ಪಿಕೊಂಡು ಫೋಟೋ ತೆಗೆಸಿಕೊಂಡವರೇ. ಮುಂದಿನ ಜನ್ಮದಲ್ಲಿ ಮುಸಲ್ಮಾನ್ ಆಗಿ ಹುಟ್ಟುವು ದಾಗಿ ಹೇಳಿಕೊಂಡವರೂ ಇದ್ದಾರೆ. ಆದರೆ, 1990ರಿಂದ ಕಾಶ್ಮೀರದಲ್ಲಿ ಹಲವಾರು ಹಿಂದೂಗಳ ಮಾರಣ ಹೋಮವಾದರೂ ಅವರ ವಿರುದ್ಧ ಮಾತನಾಡಲು ಜನರಿರಲಿಲ್ಲ, ಮುಸಲ್ಮಾನ್ ರಾಜರ ಕಾಲದಲ್ಲಿ ಕೋಟ್ಯಂತರ ಹಿಂದೂಗಳ ಹತ್ಯೆ, ಮತಾಂತ ರವಾದರೂ ಅವರುಗಳೆಲ್ಲ ನಮಗೇ ಹೀರೋಗಳೇ.

ಅದು ಆಗಿದ್ದು ಭಾರತದಲ್ಲೇ! ಎಷ್ಟೋ ವರ್ಷಗಳ ಕಾಲ ದರೋಡೆಕೋರರು, ಧರ್ಮಾಂಧರು, ಕೊಲೆಗಡುಕರೆಲ್ಲ ನಮ್ಮ ಪಠ್ಯಪುಸ್ತದಲ್ಲಿ ತುಂಬಿ ತುಳುಕಿದರು. ಮುಸಲ್ಮಾನರ ಈ ಹತ್ಯಾಕಾಂಡ, ಕರಾಳ ದಿನಗಳು, ಅವರು ಮುಚ್ಚಿಟ್ಟಂತಹ ಕಟು ಸತ್ಯಗಳು, ಅವರ ಧರ್ಮದ ನ್ಯೂನತೆಗಳು, ಅಟ್ಟಹಾಸ, ಕಟುಕತನಗಳ ವಿರುದ್ಧ ಮಾತನಾಡಲು ಯಾರ ಹತ್ತಿರವೂ
ಧೈರ್ಯವಿರಲಿಲ್ಲ. ಮುಸಲ್ಮಾನರು ಬಿಡಿ, ಬೇರೆ ಧರ್ಮದವರೂ ಅದರ ವಿರುದ್ಧ ಧ್ವನಿಯೆತ್ತಿದ್ದು ತುಂಬಾ ಕಡಿಮೆಯೇ. ಆ ಕಾಲದಲ್ಲಿ ಮುಸಲ್ಮಾನ್ ಕಠೋರತೆಯ ವಿರುದ್ಧ ಧ್ವನಿಯೆತ್ತಿ, ಎಷ್ಟೋ ಬೆದರಿಕೆ, ಫತ್ವಾಗಳಿಗೂ ಹೆದರದೇ, ಧೈರ್ಯವಾಗಿ ಸೆಟೆದು ನಿಂತು ಮುಸಲ್ಮಾನರನ್ನೂ ಲಿಬರಲ್ ಆಗಿ ಎಂದು ಕೂಗಿ ಹೇಳಿದವರ ಸಾಲಲ್ಲಿ ಬರುವ ಮೊದಲ ಹೆಸರೇ ತಾರೆಖ್
ಫತಾಹ್!

1949ರಲ್ಲಿ ಪಾಕಿಸ್ತಾನದಲ್ಲಿ ಹುಟ್ಟಿ, 1980ರ ಹೊತ್ತಿಗೆ ಕೆನಡಾಗೆ ಹೋಗಿ, ಅಲ್ಲಿ ರಾಜಕೀಯ ಕಾರ್ಯಕರ್ತನಾಗಿ, ನಿರ್ಭೀತ ಪತ್ರಕರ್ತನಾಗಿ, ಲೇಖಕನಾಗಿ, ವಿಚಾರವಾದಿ, ಚಿಂತಕ, ಅಂಕಣಕಾರ ಆಗಿ… ಎಲ್ಲದಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಮತ್ತು ಇಸ್ಲಾಮ್ ಮೂಲಭೂತವಾದದ ಕಟ್ಟರ್ ವಿರೋಧಿ ಆಗಿ, ಕೆಲವರ ಕಣ್ಣಿಗೆ ವಿಶ್ವ ಹಿಂದೂ ಪರಿಷತ್ತಿನ ನಾಯಕರಾಗಿ ಕಂಡೂ ವಿಶ್ವಾದ್ಯಂತ ಸುದ್ದಿಯಾದವರು. ಪ್ರಪಂಚ ಮತ್ತು ಭಾರತದ ಎಷ್ಟೋ ಜನ ಮೋದಿ ಮತ್ತವರ ಎನ್‌ಡಿಎ ಸರಕಾರ ವನ್ನು ವಿರೋಧಿಸುತ್ತಿದ್ದಾಗ, ಮೋದಿಯನ್ನು ಬೆಂಬಲಿಸಿದ್ದೂ ಇವರೇ.

ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕೀರಣ, ಚರ್ಚೆ ಇನ್ನೂ ಹಲವಾರು ವೇದಿಕೆಗಳಲ್ಲಿ ಮೊದಲು ಕಾಣಿಸುತ್ತಿದ್ದುದೂ ಇವರೇ. ಮುಖದಲ್ಲಿ ತುಂಬಿದ ನಗು, ಅತೀ ಕಠಿಣ ವಿಷಯಗಳನ್ನು ಜಾಲಿಯಾಗಿ ಹೇಳುತ್ತಿದ್ದ ಅವರ ಮಾತಿನ ಶೈಲಿ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುತ್ತಿತ್ತು. ಅವರು ಹುಟ್ಟಿದ್ದು ಪಾಕಿಸ್ತಾನದಲ್ಲಿಯಾದರೂ, ಜೀವನದುದ್ದಕ್ಕೂ ಹೇಳಿಕೊಂಡಿದ್ದು ತಾನೊಬ್ಬ
ಭಾರತೀಯ ಎಂದು. ಇಸ್ಲಾಂನಲ್ಲಿ ಜನಿಸಿದ್ದರೂ ತಮ್ಮನ್ನು ತಾವು ‘ಪಂಜಾಬಿ’ ಎಂತಲೇ ಕರೆದುಕೊಂಡಿದ್ದರು.

‘ಸಲ್ಮಾನ್ ರಷ್ದೀ ಅವರ ‘ಮಿಡ್ ನೈಟ್ ಚಿಲ್ಡ್ರನ್’ನಲ್ಲಿನಂತೆ ನಾನೂ ಒಬ್ಬ ಮಿಡ್ ನೈಟ್ ಚೈಲ್ಡ್; ನಾವು ಪ್ರಪಂಚದ ಅತಿದೊಡ್ಡ ನಾಗರಿಕತೆಯಲ್ಲಿ ಹುಟ್ಟಿದ್ದರೂ, ನಮ್ಮನ್ನು ತೊಟ್ಟಿಲಿನಿಂದ ಕಿತ್ತುಕೊಂಡು ಶಾಶ್ವತ ನಿರಾಶ್ರಿತರನ್ನಾಗಿ ಮಾಡಿ, ಮರೀಚಿಕೆ ಯಾದ ಓಯಾಸಿಸ್ ಅನ್ನು ಹುಡುಕಲು ಕಳುಹಿಸಿದರು’ ಎಂದು ಆಗಾಗ ತಮ್ಮ ಮನದ ವೇದನೆಯನ್ನು ಹೇಳಿಕೊಳ್ಳುತ್ತಿದ್ದರು.

ಮನದ ತುಂಬಾ ಭಾರತಿಯತೆಯನ್ನು, ಭಾರತಮಾತೆಯನ್ನು ತುಂಬಿಕೊಂಡಿದ್ದರು. ಭಾರತದ ವಿಭಜನೆಯನ್ನು ಕಟುವಾಗಿ ವಿರೋಧಿಸಿದ್ದರು. ಜನ್ಮತಃ ಮುಸಲ್ಮಾನರಾಗಿದ್ದರೂ ಅವರ ಮಾತನ್ನು ಕೇಳಿದವರ‍್ಯಾರು ಅವರನ್ನು ಮುಸಲ್ಮಾನ್ ಅಂತಿರಲಿಲ್ಲ! ಮಾತಲ್ಲಿ ಕಟು ಸತ್ಯ, ಯಾವುದೇ ಹೆದರಿಕೆ ಬೆದರಿಕೆಗಳಿಗೂ ಅವರು ಬೆಚ್ಚಲಿಲ್ಲ. ಫ್ರೆಂಚ್ ಭಾಷೆಯ ಚಾರ್ಲೀ ಹೆಬ್ಡೋ ಮ್ಯಾಗಜೀನ್, ಮೊಹಮ್ಮದ್‌ನ ಕಾರ್ಟೂನ್ ಪ್ರಕಟಿಸಿದ್ದಕ್ಕಾಗಿ ಹಲವಾರು ದೊಂಬಿಗಳು ಫ್ರಾನ್ ನಾದ್ಯಂತ ನಡೆಯು ತ್ತಿರುವಾಗ, ‘ನಾನೂ ಚಾರ್ಲೀ ಹೆಬ್ಡೋ’ ಅಂತ ಬೋರ್ಡ್ ಹಿಡಿದು ದೊಂಬಿಗಳನ್ನು ವಿರೋಧಿಸಿದ್ದರು.

ಕರ್ನಾಟಕದಾದ್ಯಂತ ಹಿಜಾಬ್ ವಿವಾದ ಆದಾಗ ತಾವೂ ಹಿಜಾಬ್ ಧರಿಸಿ, ‘ಒಂದೊಮ್ಮೆ ಹಿಜಾಬ್ ಧರ್ಮದ ವಿಷಯ ವಾಗಿದ್ದರೆ, ಗಂಡಸರೂ ಹಿಜಾಬ್ ಹಾಕಿಕೊಂಡು ಓಡಾಡಲಿ’ ಎಂದು ಕುಹಕ ಮಾಡಿದ್ದರು. ಇಡೀ ದೇಶದಲ್ಲಿ ಮುಸಲ್ಮಾನರಿಂದ ಯಾವುದೇ ದೊಂಬಿ, ಗಲಾಟೆ, ಹೋರಾಟ, ಕೊಲೆ, ಬೆದರಿಕೆಗಳುಂಟಾದರೂ ಎಲ್ಲಕ್ಕಿಂತ ಮೊದಲು ಅದನ್ನು ವಿರೋಧಿಸು ತ್ತಿದ್ದುದು ಇದೇ ತಾರೇಖ್ ಫತಾಹ್!

ಭಾರತದ ೪೦ ಸಾವಿರಕ್ಕೂ ಅಽಕ ದೇವಸ್ಥಾನಗಳನ್ನು ಕೆಡವಿ, ಮಸೀದಿಗಳನ್ನು ಕಟ್ಟಿದ್ದು ಗೊತ್ತೇ ಇದೆ. ಕೆಲ ನಗಳ ಹಿಂದೆ ಗ್ಯಾನವಾಪಿ ಮಂದಿರದ ವಿವಾದಗಳು ಶುರುವಾದಾಗ, ‘40 ಸಾವಿರಕ್ಕೂ ಹೆಚ್ಚಿನ ಮಂದಿರಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿಸಿದ್ದು ಎಲ್ಲ ಮುಸಲ್ಮಾನರಿಗೂ ಗೊತ್ತು, ಆದರೆ, ಹಿಂದೂಗಳು ಕೇಳುತ್ತಿರುವುದು ಬರೀ ೩ ಮಂದಿರಗಳಷ್ಟೇ. ಆಯೋಧ್ಯೆ ಮಂದಿರದ್ದು ಕೋಟ್ ನಲ್ಲಿ ಇತ್ಯರ್ಥ ಆಯ್ತು, ಇನ್ನೂ ಗ್ಯಾನವಾಪಿ ಮತ್ತು ಮಥುರಾ ಮಂದಿರವನ್ನು ಹಿಂದೂಗಳಿಗೆ ಬಿಟ್ಟು ಕೊಡಲು ಏನು ಧಾಡಿ’ ಎಂದು ತಿವಿದಿದ್ದರು.

‘ಅಯೋಧ್ಯಾ ಮಂದಿರವನ್ನು ಮುಸಲ್ಮಾನರೇ ಹಿಂದೂಗಳಿಗಾಗಿ ಕಟ್ಟಿಸಿಕೊಡಬೇಕು’ ಎಂದು ವಾದಿಸಿದ್ದರು. ‘ಭಾರತದ
ಮುಸಲ್ಮಾನರೇಕೆ ಅರಬ್ಬಿ, ಉರ್ದು ಭಾಷೆಯ ಹೆಸರನ್ನು ಇಟ್ಟುಕೊಳ್ಳುವುದು. ಹಿಂದಿ ಅಥವಾ ಭಾರತದ ಯಾವುದೇ
ಭಾಷೆಯ ಹೆಸರನ್ನೇಕೆ ಇಟ್ಟು ಕೊಳ್ಳುವುದಿಲ್ಲ?’ ಎಂದು ಇಲ್ಲಿನ ಮುಸಲ್ಮಾನರ ಸ್ವಾಟೆ ತಿವಿದಿದ್ದರು. ಭಾರತದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನುವವರು, ಸುಖಾ ಸುಮ್ಮನೆ ದೊಂಬಿಗಳನ್ನು ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಾಗಿಲು ತೆಗೆದು ನಿಂತಿದ್ದರು.

ಭಾರತದಲ್ಲಿದ್ದು ಪಾಕಿಸ್ತಾನ್ ಜಿಂದಾಬಾದ್ ಅನ್ನುವವರು, ನಾಲ್ಕು ಭಾಷಣ ಬಿಗಿದು ಕಟ್ಟರ್ ಹಿಂದೂ, ಹಿಂದೂ ಫಾರ್ ಬ್ರ್ಯಾಂಡ್ ಅನ್ನಿಸಿಕೊಳ್ಳುವವರು, ಫತಾಹ್ ಅವರ ಭಾಷಣವನ್ನು, ಅವರು ಪಾಲ್ಗೊಂಡಿದ್ದ ಚರ್ಚೆಗಳನ್ನು ಕೇಳಲೇ ಬೇಕು. ಆಗಲಾದರೂ ಅವರ ಭಾಷಣಕ್ಕೆ, ಮಾತಿಗೆ ತೂಕವಾದರೂ ಬರುತ್ತದೆ. ಧರ್ಮಾಂಧತೆಯ ಅಮಲಿನಲ್ಲಿ ತೇಲಾಡುತ್ತಿರುವವರು, ಪ್ರತಿ ಯೊಂದು ವಿಷಯದಲ್ಲೂ ಭಾರತವನ್ನು ವಿರೋಧಿಸುವವರಿಗೂ ಫತಾಹ್ ಅವರ ಭಾಷಣವೇ ಮದ್ದು. ಇಲ್ಲಿನವರು ಮಾಡು ತ್ತಿರುವ ಅಂಡೆಪಿರ್ಕಿ ಕೆಲಸಗಳು ಅವರಿಗೇ ಹೇಸಿಗೆಯನ್ನು ತರಿಸುತ್ತವೆ.

ಮೊನ್ನೆ ದೀರ್ಘಕಾಲದ ಅನಾರೋಗ್ಯ ಮತ್ತು ಕ್ಯಾನ್ಸರ್‌ನ ಕಾರಣದಿಂದ ಹಿಂದೆ ಕೊನೆಉಸಿರೆಳೆದ ತಾರೇಖ್ ಫತಾಹ್ ಅವರ ದೇಹಾಂತ್ಯವನ್ನು ಅವರ ಮಗಳು ನತಾಶಾ ಫತಾಹ್ ತಿಳಿಸಿದ್ದು ‘ಪಂಜಾಬಿನ ಸಿಂಹ. ಭಾರತದ ಮಗ. ಕೆನಡಾದ ಪ್ರೇಮಿ. ಸತ್ಯದ ವಾಗ್ಮಿ. ನ್ಯಾಯದ ಹೋರಾಟಗಾರ. ಧ್ವನಿಯಿಲ್ಲದವರ, ದುರ್ಬಲ (underdogs) ಮತ್ತು ತುಳಿತಕ್ಕೊಳಗಾದವರ ಧ್ವನಿ… ತಾರೇಖ್ ಫತಾಹ್ ಅವರು ತಮ್ಮ ಕೆಲಸವನ್ನು ಉಳಿದವರಿಗೆ ದಾಟಿಸಿ ಹೋಗಿದ್ದಾರೆ. ಅವರ ಎಲ್ಲ ಕ್ರಾಂತಿಕಾರಿ ಕೆಲಸಗಳೂ ಅವರನ್ನು ತಿಳಿದ ಮತ್ತು ಪ್ರೀತಿಸಿದವರಿಂದ ಮುಂದುವರಿಯುತ್ತವೆ.

ಈ ಕೆಲಸದಲ್ಲಿ ನೀವು ನಮ್ಮ ಜೊತೆಯಾಗುವಿರೇ?’ ಎಂದು ಟ್ವೀಟ್ ಮಾಡಿದ್ದರು. ಆಗ ಇಡೀ ಪ್ರಪಂಚಕ್ಕೆ ದೇಹಾಂತ್ಯದ ಬಗ್ಗೆ ತಿಳಿದಿದ್ದು. ಫತಾಹ್ ಸಾಹೇಬ್ ತಮ್ಮ ಆಸೆಯಂತೆ ಮುಂದಿನ ಜನ್ಮದಲ್ಲಿ ಭಾರತದಲ್ಲಿಯೇ ಹುಟ್ಟಿಬರಲಿ. ಮತ್ತೊಮ್ಮೆ
ಕ್ರಾಂತಿಯನ್ನು ಮಾಡಲಿ. ಅಲ್ಲಿಯವರೆಗೂ ಮಿಸ್ ಯೂ ತಾರೇಖ್‌ಜೀ!