Saturday, 14th December 2024

ಅಸಂಘಟಿತ ಕಾರ್ಮಿಕರನ್ನೂ ಪರಿಗಣಿಸಬೇಕಿದೆ

ಇಂದು ಕಾರ್ಮಿಕರ ದಿನಾಚರಣೆ. ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಆಚರಿಸುತ್ತಲೇ ಬಂದಿವೆ. ಆದರೆ ನಿಜವಾಗಿಯೂ ಸಮಾಜದಲ್ಲಿ ಎಲ್ಲ ಕಾರ್ಮಿಕರಿಗೆ ಸೂಕ್ತ ಸೌಲಭ್ಯ, ಗೌರವ ಸಿಗುತ್ತಿದೆಯೇ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ.

ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿ ದ್ದಾರೆ. ದೇಶದಲ್ಲಿ ಇವರ ಸಂಖ್ಯೆ ಶೇ.೨೦ರಷ್ಟು ಮಾತ್ರ ಇದೆ. ಇವರೆಲ್ಲರೂ ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಶೇ.೮೫ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶ ದಲ್ಲಿ ದುಡಿಯುವ ಕೃಷಿ ಕಾರ್ಮಿಕರು, ನಗರಗಳ ಹೋಟೆಲ್‌ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯು ವವರಿದ್ದಾರೆ.

ಇವರೆಲ್ಲ ಅಸಂಘಟಿತ ಕಾರ್ಮಿಕರು. ಇವರೆಲ್ಲರೂ ಇಂದಿಗೂ ಶೋಷಣೆಗೆ ಒಳಪಟ್ಟಿದ್ದಾರೆ. ಇಂತಹ ಕಾರ್ಮಿಕರನ್ನು ಗಮನ ದಲ್ಲಿಟ್ಟುಕೊಂಡು ಸ್ವಾತಂತ್ರ್ಯಾ ನಂತರ ಕೇಂದ್ರ ಸರಕಾರ ೧೯೪೯ರಲ್ಲಿ ಕನಿಷ್ಠ ಕೂಲಿ ಕಾಯಿದೆಯನ್ನು ಜಾರಿಗೆ ತಂದಿದೆ. ಆದರೆ ಆ ಕಾಯಿದೆಯು ಹಲ್ಲಿಲ್ಲದ ಹಾವಂತಾಗಿದೆ. ನಾಲ್ಕು ಕೋಟಿ ಅಧಿಕ ಸಂಖ್ಯೆಯಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪರಿಹಾರ ನೀಡುವ ಪ್ರಯತ್ನವಾಗಬೇಕಿದೆ. ಅವರನ್ನೂ ಅಧಿಕೃತ ವಲಯದ ಉದ್ಯೋಗಿಗಳಾಗಿ ಪರಿಗಣಿಸಬೇಕಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೂ ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಅಧಿಕೃತ ವಲಯದ ನೌಕರರನ್ನಾಗಿ ಪರಿಗಣಿಸಬೇಕಿದೆ.

ಇಂಥ ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ಧಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಇತರ ಸೌಲಭ್ಯಗಳನ್ನು ನೀಡಬೇಕಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯಿದೆ-೧೯೯೬ ಅಧಿನಿಯಮವನ್ನು ಸಂಸತ್ತು ರೂಪಿಸಿದ್ದರೂ ನಿರ್ಮಾಣ ಕಾರ್ಮಿಕರ ದುರಾವಸ್ಥೆ ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಂಡಿಲ್ಲ. ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯ ಬದುಕು ಸಾಗಿಸುತ್ತಿದೆ. ಇಂತಹ ಶೋಷಣೆಯ ವಿರುದ್ಧ ಸಂಘ ಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯತೆಯಿಂದ ಒಕ್ಕೂಟ ರಚಿಸಿ ಹೋರಾಡಬೇಕಿದೆ.