ಮುಂಬೈ: ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಅರುಣ್ ಗಾಂಧಿ ಅಲ್ಪಕಾಲದ ಅಸೌಖ್ಯದಿಂದ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
89 ವರ್ಷದ ಲೇಖಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರಾದ ಅರುಣ್ ಅವರ ಅಂತ್ಯಕ್ರಿಯೆಯನ್ನು ಕೊಲ್ಲಾಪುರದಲ್ಲಿ ನಡೆಸಲಾಗುವುದು ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.
ಏಪ್ರಿಲ್ 14, 1934 ರಂದು ಡರ್ಬನ್‌ನಲ್ಲಿ ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದ ಅರುಣ್ ಗಾಂಧಿ, ಕಾರ್ಯಕರ್ತನಾಗಿ ತಮ್ಮ ಅಜ್ಜನ ಹೆಜ್ಜೆಗಳನ್ನು ಅನುಸರಿಸಿದರು.