ಪಾಟ್ನಾ : ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಮತ್ತು ಆರ್ಥಿಕ ಸಮೀಕ್ಷೆಯನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್ ಗುರುವಾರ ತನ್ನ ಮಧ್ಯಂ ತರ ಆದೇಶದಲ್ಲಿ ತಡೆಯಾಜ್ಞೆ ನೀಡಿದೆ.
ಪಾಟ್ನಾ ಹೈಕೋರ್ಟ್ ವಿಚಾರಣೆಯನ್ನ ಪೂರ್ಣಗೊಳಿಸಿ ತನ್ನ ತೀರ್ಪನ್ನ ಒಂದು ದಿನಕ್ಕೆ ಕಾಯ್ದಿರಿಸಿದೆ. ಇನ್ನು ಅಖಿಲೇಶ್ ಕುಮಾರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನ ಮುಖ್ಯ ನ್ಯಾಯಮೂರ್ತಿ ಕೆ.ವಿ.ಚಂದ್ರನ್ ಅವರ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಕೀಲರಾದ ದಿನು ಕುಮಾರ್, ರಿತು ರಾಜ್ ಮತ್ತು ಅಭಿನವ್ ಶ್ರೀವಾಸ್ತವ ಮತ್ತು ರಾಜ್ಯದ ಪರವಾಗಿ ಅಡ್ವೊಕೇಟ್ ಜನರಲ್ ಪಿ.ಕೆ.ಶಾಹಿ ಅವರು ಕಕ್ಷಿದಾ ರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ರಾಜ್ಯ ಸರ್ಕಾರವು ಜಾತಿ ಮತ್ತು ಆರ್ಥಿಕ ಸಮೀಕ್ಷೆಗಳನ್ನು ನಡೆಸುತ್ತಿದೆ ಎಂದು ದಿನು ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. ಸಮೀಕ್ಷೆ ನಡೆಸುವ ಈ ಹಕ್ಕು ರಾಜ್ಯ ಸರ್ಕಾರದ ವ್ಯಾಪ್ತಿಯನ್ನು ಮೀರಿದೆ ಎಂದು ಅವರು ಹೇಳಿದರು.