Wednesday, 11th December 2024

ಗೆಲ್ಲುವುದು ಸರಕಾರಕ್ಕೆ, ಸರಕಾರ ಮಾಡುವುದು ಚುನಾವಣೆಗೆ

ವಿಶ್ಲೇಷಣೆ

ಪ್ರೊ.ಆರ್‌.ಜಿ.ಹೆಗಡೆ

ರಾಜಕೀಯ ಪಕ್ಷಗಳ ಮನಸ್ಸಿನಲ್ಲಿ ಒಂದೇ ವಿಷಯ ಇದ್ದಂತಿದೆ. ಚುನಾವಣೆ ಗೆಲ್ಲಬೇಕು. ಏನು ಬೇಕಾದರೂ ಆಗಲಿ ಗೆಲ್ಲಲೇಬೇಕು. ಗೆಲ್ಲಲು ಏನು ತ್ಯಾಗ ಮಾಡುವುದಕ್ಕೂ ಅವು ಸಿದ್ಧವಿದ್ದಂತಿವೆ. ಯಾರಿಗೆ ಬೇಕಾದರೂ ಟಿಕೆಟ್ ಕೊಡಲು ಸಿದ್ಧ. ಎಂಥವರನ್ನು ಓಲೈಸಲೂ ರೆಡಿ. ವ್ಯಕ್ತಿ ನೂರಕ್ಕೆ ನೂರು ಕ್ರಿಮಿನಲ್ ಆಗಿರಬಹುದು, ದುಷ್ಟ ಆಗಿರಬಹುದು.

ಮರ್ಡರರ್ ಆಗಿರಬಹುದು. ಮಣೆ ಹಾಕಲು ರೆಡಿಯೇ! ಚುನಾವಣೆ ಗೆಲ್ಲಲೇಬೇಕು. ಹಾಗೆಯೇ ಕೊಡತೆಗೆದುಕೊಳ್ಳುವ ವಿಷಯ ದಲ್ಲಿಯೂ ಎಷ್ಟು ಬೇಕಾದರೂ ಖರ್ಚಾಗಲಿ, ಮಾಡೋಣ. ಗೆಲ್ಲುವುದು ಮುಖ್ಯ ಎನ್ನುವ ಮನಸ್ಥಿತಿಯಲ್ಲಿ ಪಕ್ಷಗಳು ಇದ್ದಂತಿವೆ. ಅದೆಲ್ಲ ಅನಿವಾರ್ಯ. ಏನು ಮಾಡಲಾಗುತ್ತದೆ? ಆಗಲಿ. ಮುಂದೆ ಸರಕಾರ ರಚಿಸಿದ ಮೇಲೆ ತಕ್ಕೊಂಡರಾಯಿತು ಎನ್ನುವ ವಿಚಾರ ದಲ್ಲಿ ಇದ್ದಂತಿವೆ.

ಜನರಿಗೆ ಪಾನಕ ಸೇವೆ ಇತ್ಯಾದಿ ಜತೆ ಸಾಧ್ಯವಿರುವ ಎಲ್ಲ ಅಷ್ಟಾವಧಾನ ಸೇವೆಗಳನ್ನೂ ಒದಗಿಸಲು ಸಿದ್ಧವಿವೆ. ಹಾಗೆಯೇ ಒಳ್ಳೆಯ ಮಾತುಗಳಲ್ಲಿ ಅವರು ಒಪ್ಪದಿದ್ದರೆ ಹೆದರಿಸಿ, ಬೆದರಿಸಿ ಮತ ಕಸಿಯಲು ಬೇಕಾದ ವ್ಯವಸ್ಥೆಯೂ ಅಲ್ಲಲ್ಲಿ ಇದೆ. ಮಠ, ಮಾನ್ಯ, ದೇವರು, ದಿಂಡರು ಎಲ್ಲರನ್ನೂ, ಎಲ್ಲವನ್ನೂ ಅವು ಮೊರೆಹೋಗಿವೆ. ಹೀಗೆ ಚುನಾವಣೆ ಗೆಲ್ಲಲು ಆಕಾಶ, ಭೂಮಿ ಪಾತಾಳ ಸೇರಿದಂತೆ ಎಲ್ಲ ಕಡೆ ಎಲ್ಲ ರೀತಿಯಲ್ಲಿ ಕಾಯಾ, ವಾಚಾ, ಮನಸಾ ಕಾರ್ಯಾಚರಣೆ ಮಾಡಲು ಅವು ಸಿದ್ಧವಿವೆ.

ಇವೆಲ್ಲ ಪಕ್ಷಗಳಿಗೆ ಗೊತ್ತಿದೆ. ಚುನಾವಣೆ ಗೆಲ್ಲಲೇಬೇಕು. ಅಧಿಕಾರಕ್ಕೆ ಬರಬೇಕು. ಖುರ್ಚಿಯಲ್ಲಿ ಕೂರಲೇಬೇಕು. ಏಕೆ ಗೆಲ್ಲ ಬೇಕೆಂದರೆ, ಗೆಲ್ಲದಿದ್ದರೆ ಅಧಿಕಾರದ ಕೀಲಿ ಕಾಯಿ ಕೈಗೆ ಸಿಗುವುದಿಲ್ಲ. ಅದು ಸಿಗಬೇಕು. ಅದು ಸಿಕ್ಕರೆ ಮಾತ್ರ ಜನ್ಮ ಪಾವನ ವಾಗುವುದು. ಚಾವಿ ಸಿಕ್ಕರೆ ಏನು ಬೇಕಾದರೂ ಮಾಡಲು ಬರುತ್ತದೆ. ಮನಸೋ ಇಚ್ಛೆ ದುಡ್ಡು ಮಾಡಬಹುದು. ಬೇರೆ ಬೇರೆ ಮಜಾ ಏನಾದರೂ ಮಾಡಿಕೊಳ್ಳುವುದಿದ್ದರೂ ಮಾಡಿಕೊಳ್ಳಬಹುದು. ಕಂಡರಾಗದಿದ್ದವರನ್ನು ಜೈಲಿಗೆ ಕಳಿಸಬಹುದು.

ಬೇಕಾದವರ ಮೇಲೆ, ಬೇಕಾದ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಮುಖ್ಯವಾಗಿ ಮುಂದಿನ ಚುನಾವಣೆಗಾಗಿ ದುಡ್ಡು ಮಾಡಬಹುದು. ಆ ಸಂಬಂಧಿ ಬೇರೆ ಬೇರೆ ತಯಾರಿ ಕೂಡ ಅಂದರೆ ಚುನಾವಣೆ ಗೆಲ್ಲಲು ಬೇಕಾಗುವ ರೀತಿಯ ಜಾತಿ, ಮತ, ಧರ್ಮ ಆಧರಿತ ರಿಸರ್ವೇಶನ್‌ಗಳು ಇತ್ಯಾದಿಗಳನ್ನು ಸೃಷ್ಟಿಸಿಟ್ಟುಕೊಳ್ಳಬಹುದು. ಸಹಾಯ ಮಾಡಬಹುದು. ಜನರನ್ನು ಒಡೆದು ಅವರೊಳಗೆ ಬೆಂಕಿ ಹಚ್ಚಿ ತಮಗೆ ಬೇಕಾಗುವಂತೆ ಇಟ್ಟುಕೊಳ್ಳಬಹುದು.

ಮತ್ತೆ ಅವಕ್ಕೆ ಗೊತ್ತಿದೆ. ಒಮ್ಮೆ ತಮಗೆ ಚುನಾವಣೆ ಗೆಲ್ಲಲು ಸಾಧ್ಯವಾಗದಿದ್ದರೆ, ವಿರೋಧಿ ಗೆದ್ದುಬಿಟ್ಟರೆ, ಜೀವನ ದುಃಸ್ವಪ್ನ ವಾಗುತ್ತದೆ. ಭಯಾನಕವಾಗುತ್ತದೆ. ದುಡ್ಡು ಬರುವುದು ನಿಂತುಹೋಗುತ್ತದೆ. ಇರುವ ದುಡ್ಡು ಇಟ್ಟುಕೊಳ್ಳುವುದೂ ಕಷ್ಟವಾಗಿ ಹೋಗಬಹುದು. ಇಂದಿನ ದಿನಗಳಲ್ಲಿ ಅದೆಲ್ಲ ಸುಲಭವಲ್ಲ. ಕಾರ್ಯಕರ್ತರು ಕೈಬಿಟ್ಟು ಹೋಗುತ್ತಾರೆ. ಬೇಕಾದಂತೆ ಕಾಯದೆ, ಕಾನೂನು ಮಾಡಿಕೊಳ್ಳುವ ಅಧಿಕಾರ ಹೊರಟು ಹೋಗುತ್ತದೆ. ಮನೆಯ ಮುಂದೆ ನಿಂತ ಅಂಗರಕ್ಷಕರು ಹೊರಟು ಹೋಗುತ್ತಾರೆ. ಎದುರಾಳಿಯ ಮನೆ ಕಾಯುವ ಕೆಲಸ ಮಾಡುತ್ತಾರೆ.

ತಮ್ಮ ಒಳ ವಿಷಯ, ವಿಡಿಯೋ ಬಯಲಲ್ಲಿ ಬಂದು ಬಿಡಬಹುದು. ತಾವೇ ಜೈಲಿಗೆ ಹೋಗಬೇಕಾಗಿ ಬಂದರೂ ಬರಬಹುದು. ತಮ್ಮದೇ ಸರ್ಕಾರವಿದ್ದರೆ ಜೈಲಿಗೆ ಹೋಗುವುದೂ ದೊಡ್ಡ ವಿಷಯವಲ್ಲ. ಅಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬಹುದು. ಸೋತರೆ ಹಾಗಾಗುವುದಿಲ್ಲ. ಹಾಗಾಗಿ ವಿಷಯ ಸ್ಪಷ್ಟ. ಗೆದ್ದು ಸರಕಾರ ಮಾಡಬೇಕು. ಮಾಡಿ ಮುಂದಿನ ಚುನಾವಣೆಗೆ ವ್ಯವಸ್ಥೆ ಮಾಡಿ ಕೊಳ್ಳಲೇಬೇಕು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಿಷಯ ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ಪಕ್ಷಗಳು ಸದ್ಯದ ಕರ್ನಾಟಕದ ಚುನಾವಣೆಯಲ್ಲಿಯೂ ತನು, ಮನ, ಧನ ತೊಡಗಿಸಿ ಕಾಯಕದಲ್ಲಿ ತೊಡಗಿಕೊಂಡಂತಿವೆ. ನೋಡು ತ್ತಿದ್ದೇವೆ.

ಒಂದನೇ ಪಟ್ಟಿ. ಎರಡನೇ ಪಟ್ಟಿ. ಮೂರನೇ ಪಟ್ಟಿ. ಮುಖ್ಯ ವಿಷಯ ಗೆಲ್ಲುವ ಕುದುರೆಯ ಹುಡುಕಾಟ. ಜತೆಯೇ ಖರ್ಚು ನಿಭಾ ಯಿಸಬಲ್ಲ ವ್ಯಕ್ತಿಯಾಗಿ ಹುಡುಕಾಟ. ಕಾಸು ಇರುವ, ನೂರು ವರ್ಷದ ಹತ್ತಿರ ಬಂದು ಶರಪಂಜರದ ಮೇಲೆ ಮಲಗಿದವರು, ಕ್ರಿಮಿನಲ್ ದರೋಡೆ, ಮರ್ಡರ್, ದಗಾಕೋರತನ, ಕಳ್ಳತನ, ಇತ್ಯಾದಿ ಹಿನ್ನೆಲೆ ಇದೆ ಎಂಬ ಗುಮಾನಿ ಇರುವರಿಗೂ ಅವರವರ ಕೋಟಾ ಟಿಕೆಟ್ ಕೊಟ್ಟಿವೆ. ಮುಂದಿನದು ಸಾರ್ವಜನಿಕ ಪ್ರಚಾರ. ಪಕ್ಷಗಳಿಗೆ ಗೊತ್ತಿದೆ. ಪ್ರಚಾರವೆಂದರೆ ಜನರನ್ನು ಗುಂಪು ಗಳನ್ನಾಗಿ ಪರಿವರ್ತಿಸುವುದು.

ಜಾತಿ, ಮತ, ಪಂಥ, ಹೆಣ್ಣು, ಗಂಡು, ಇತ್ಯಾದಿ ಆಧಾರದ ಮೇಲೆ ಒಡೆಯುತ್ತ, ಗುಂಪು ಮಾಡುತ್ತಾ ದೊಡ್ಡ ಗುಂಪು ತಮ್ಮನ್ನು ಬೆಂಬಲಿಸುವಂತೆ ಮಾಡುವುದು. ಪ್ರಚಾರ ಮಾಡಲು (ಏನಾದರೂ ಹೇಳಬೇಕಲ್ಲ!) ಸಿದ್ಧ ವಿಷಯಗಳು ಇವೆ. ಕ್ಯಾಪಿಟಲಿಸ್ಟ್, ಸಮಾಜವಾದಿ, ನೆಹರು, ಗಾಂಧಿ, ಹೀಗೆ. ಅವನ್ನೇ ಹೇಳಿಬಿಡುವುದು ಸುರಳೀತ. ಏಕೆಂದರೆ ಅವಕ್ಕೆಲ್ಲ ಈಗ ವಿಶೇಷ ಅರ್ಥವೇನೂ ಇಲ್ಲ. ಅವನ್ನು ಹೇಳಿದರೆ ಸಮಸ್ಯೆ ಆಗುವುದಿಲ್ಲ. ಹೊಸದು ಹೇಳಲು ಹೋದರೆ ರಗಳೆ ಆಗಿಹೋಗುತ್ತದೆ.

ಅಲ್ಲದೆ  ಪತ್ರಕರ್ತರಿಗೂ ಇವನ್ನೆಲ್ಲ ಬರೆದೂ ರೂಢಿಯಿದೆ. ತೊಂದರೆಯಿಲ್ಲ. ಮತ್ತೆ ಬೇರೆ ಹೇಳಿದರೂ ಅವರು ಬರೆಯುವುದು ಅದೇ. ಹಾಗಾಗಿ ಅದನ್ನೇ ಹೇಳಿದರಾಯಿತು. ಅಂತಹ ಇನ್ನೂ ಹಲವು ಶಬ್ದಗಳಿವೆ. ಉತ್ತರ ಕರ್ನಾಟಕದ ಅಭಿವೃದ್ಧಿ, ದೀನ ದಲಿತರ ಅಭಿವೃದ್ಧಿ, ಜಾತ್ಯತೀತತೆ, ರಾಷ್ಟ್ರೀಯತೆ ಹೀಗೆ. ಜನರಿಗೂ ಈ ಶಬ್ದಗಳ ಅರ್ಥ ಗೊತ್ತಾಗಿ ಹೋಗಿದೆ. ಉತ್ತರ ಕರ್ನಾಟಕ ಎಂದರೆ ಬಹುತೇಕ ಲಿಂಗಾಯಿತ ಅಭಿವೃದ್ಧಿ. ಜಾತ್ಯತೀತತೆ ಎಂದರೆ ಮೈನಾರಿಟಿಗಳ ತುಷ್ಟೀಕರಣ, ಬಲವಾದ ರಾಷ್ಟ್ರೀಯತೆ ಎಂದರೆ ಅದರ ವಿರುದ್ಧವಾಗಿದ್ದು. ಇದರ ಜೊತೆಯಲ್ಲಿ ಬೇರೆ ಬೇರೆ ಶಬ್ದಗಳನ್ನೂ ಹೇಳಬಹುದು.

ಬಡವರ ಅಭಿವೃದ್ಧಿ, ರೈತರ ಕೂಲಿ-ಕಾರ್ಮಿಕರ, ಹಿಂದುಳಿದವರ, ಮಹಿಳೆಯರ, ಯುವಕರ, ಹಿರಿಯ ನಾಗರಿಕರ ಅಭಿವೃದ್ಧಿ ಇತ್ಯಾದಿ. ಎಲ್ಲರಿಗೂ ಗೊತ್ತಿದೆ. ಈ ಮಾತುಗಳಿಗೆ ವಿಶೇಷ ಕಿಮ್ಮತ್ತೇನೂ ಇಲ್ಲ. ಮಾತನಾಡಲು ಬರುವವನಿಗೂ ದುಡ್ಡು ಕೊಡಬೇಕು. ಕೇಳಲು ಬರುವವರಿಗೂ ದುಡ್ಡು ಮುಟ್ಟಿಸುವುದು ಮುಖ್ಯ. ಇದೆಲ್ಲ ಪಕ್ಷಗಳಿಗೆ ಗೊತ್ತಿದೆ. ಒಪ್ಪಿಕೊಳ್ಳಬೇಕು. ಪಕ್ಷಗಳು
ಗೆಲ್ಲಲು ಹವಣಿಸುವುದರಲ್ಲಿ, ಪ್ರಯತ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಅದು ಸರಿಯೇ. ವಿಷಾದದ ವಿಷಯ ಇದಕ್ಕಾಗಿ ಅವು
ಅತಿರೇಕಕ್ಕೆ ಹೋಗಿರುವುದು. ಮತ್ತು ಇನ್ನೂ ಮುಖ್ಯ ವಿಷಯ ತಮ್ಮೆಲ್ಲ ಸಾಮಾಜಿಕ ಹೊಣೆ ಮರೆತು ಕುಳಿತುಬಿಟ್ಟಂತಿರುವುದು.

ಸಂವಿಧಾನ, ಸಮಾಜಗಳ ನಿರ್ದೇಶನಗಳೇ ಮರೆತು ಹೋದಂತಿರುವುದು. ಬಯಸುವ ಕೆಲಸವೇ ಮರೆತು ಹೋಗಿರುವುದು.
ಗಮನಿಸಬೇಕು. ಅವುಗಳ ಕೆಲಸ ಬರೇ ಏನಾದರೂ ಮಾಡಿಗೆಲ್ಲುವುದಲ್ಲ. ಅವುಗಳಿಗೆ ಒಂದು ಜವಾಬ್ದಾರಿ ಇದೆ. ಸಾಮಾಜಿಕ ಜಾಗೃತಿ ಮೂಡಿಸುವುದು, ಜನಾಭಿಪ್ರಾಯ ರೂಪಿಸುವುದು, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಕುರಿತ ನಿರಂತರ ಡಯಾಲಾಗ್, ಚರ್ಚೆ ಸೃಷ್ಟಿಸುವುದು, ಒಂದು ಸಮಗ್ರ ಚರ್ಚೆ ಯನ್ನು ಸಮಾಜದ ಮುಂದಿಡುವುದು, ಸಾಧನೆಯ ದಾರಿ ಕಂಡು ಹಿಡಿಯುವುದು, ಡಿಬೇಟ್ ಹುಟ್ಟಿಸುವುದು ಅವುಗಳ ಕೆಲಸ. ಅದು ಅವುಗಳ ಹೊಣೆ.

ಉದಾಹರಣೆಗೆ ಇಂದಿನ ಕರ್ನಾಟಕದ ಮುಂದೆ ಹಲವು ಸವಾಲುಗಳಿವೆ. ನಮ್ಮದು ಹೋಲಿಕೆಯಲ್ಲಿ ದೇಶದಲ್ಲಿ ಮುಂದುವರಿ ದಿರುವ ರಾಜ್ಯಗಳಲ್ಲಿ ಒಂದು. ಆದರೆ ನಮಗೆ ಇನ್ನೂ ಸಾಧಿಸಬಹುದಾದ ಹಲವು ಸಾಧ್ಯತೆಗಳಿವೆ. ನೀರಿಲ್ಲದ ಬಯಲು ಸೀಮೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಸಿರು ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಉತ್ತರ ಕರ್ನಾಟಕದಲ್ಲಿ ಭೂಮಿ ಮತ್ತು ಕಾರ್ಮಿಕರ ಹೇರಳ ಲಭ್ಯತೆ ಇದೆ. ಅವನ್ನು ಬಳಸಿಕೊಳ್ಳಲು ಬೆಂಗಳೂರು ಗುಲಬುರ್ಗಾ ಅಭಿವೃದ್ಧಿ ಕಾರಿಡಾರ್ ನಿರ್ಮಿಸಬೇಕು ಎಂದು ಮೋಹನ್‌ದಾಸ್ ಪೈ ಹೇಳಿದ್ದರು.

ಕಾರವಾರ ಬಂದರು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗ ಬೇಕಿದೆ. ಹಾಗೆ ಆದರೆ ಉತ್ತರ ಕರ್ನಾಟಕದ ಉತ್ನನ್ನಗಳ ರಫ್ತಿಗೆ
ಬಹಳ ಅನುಕೂಲವಾಗುತ್ತದೆ ಎಂದು ಕೂಡ ಮೋಹನ್ ದಾಸ್ ಪೈ ಹೇಳಿದ್ದರು. ಬೆಂಗಳೂರು ಹುಬ್ಬಳ್ಳಿ ದಶಪಥದ ಅಗತ್ಯತೆ ಇದೆ.
ಹುಬ್ಬಳ್ಳಿ ಅಂಕೋಲಾ ರೇಲ್ವೆ ಮತ್ತು ಚತುಷ್ಪಥ ಆಗಬೇಕಿದೆ. ದೊಡ್ಡ ವಿಷಯಗಳಾದ ಜಲಾನಯನ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಶಿಕ್ಷಣ ಸಂಬಂಧಿಸಿ ಹೇಗೆ ನಾವು ಮುಂದೆ ಹೋಗಬಹುದು ಎನ್ನುವ ಕುರಿತ ಸಮಗ್ರವಾದ ಮ್ಯಾನಿಫೆಸ್ಟೋ ಅನ್ನು
ಸಮಾಜದ ಮುಂದಿಡಬಹುದಾಗಿದೆ.

ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಅದರ ಯಶಸ್ಸಿಗೆ ದೊಡ್ಡ ಬಜೆಟ್ ಬೇಕು. ಜವಳಾಗುತ್ತಿರುವ ಅಥಣಿ ಪ್ರದೇಶದ ಭೂಮಿಯನ್ನು ಹೇಗೆ ರಕ್ಷಿಸಬೇಕು ಎನ್ನುವ ಚರ್ಚೆ ಬೇಕಿತ್ತು. ಉತ್ತರ ಕನ್ನಡ ಜಿಲ್ಲೆಗೊಂದು ಸಮಗ್ರ ಜಲಾನಯನ ಯೋಜನೆಯ ಅಗತ್ಯತೆ ಇದೆ. ಗಮನಿಸಬೇಕು. ಹಿಂದೆ ಇಂದಿರಾ ಗಾಂಧಿ ಇಪ್ಪತ್ತು ಅಂಶಗಳ ಕಾರ್ಯಕ್ರಮ ಮುಂದಿಟ್ಟು ಚುನಾವಣೆ ಎದುರಿಸಿದ್ದರು.

ರಾಜೀವ್ ಗಾಂಧಿ ಭಾರತವನ್ನು ಆಧುನಿಕವಾಗಿಸುವ ಒಂದು ಸಮಗ್ರ ಕಲ್ಪನೆ ಹೊಂದಿದ್ದರು. ವಾಜಪೇಯಿಯವರ , ಆದ್ವಾನಿ ಯವರ ನೇತೃತ್ವದಲ್ಲಿ ಪಕ್ಷಗಳು ಅಜೆಂಡಾ ಇಟ್ಟುಕೊಂಡು ಕಣಕ್ಕಿಳಿದಿದ್ದವು. ಮೋದಿ ನಾಯಕತ್ವದ ಬಿಜೆಪಿ ಕೇಂದ್ರ ಮಟ್ಟದಲ್ಲಿ ಒಂದು ಸ್ಪಷ್ಟ ಕಾರ್ಯಕ್ರಮ ಹೊಂದಿದೆ. ಆದರೆ ಕರ್ನಾಟಕದ ಅಭಿವೃದ್ಧಿಯ ಕುರಿತು ಯಾವ ಪಕ್ಷವೂ ಸಮಗ್ರ ಕಾರ್ಯಕ್ರಮ ಹೊಂದಿದಂತಿಲ್ಲ. ಆ ವಿಷಯವನ್ನೇ ಯಾವ ಪಕ್ಷವೂ ಎತ್ತುತ್ತಿಲ್ಲ. ಪಕ್ಷಗಳು ಕೆಲವು ಜನಪ್ರಿಯ ಗ್ಯಾರಂಟಿಗಳನ್ನು ನೀಡಿವೆ. ಅವೂ ಇರಲಿ. ಆದರೆ ಅದಕ್ಕೆಲ್ಲ ದುಡ್ಡು ಎಲ್ಲಿಂದ ತರುವುದು ಯೋಚಿಸಬೇಕಾಗುತ್ತದೆ.

ಚುನಾವಣೆ ಗೆಲ್ಲಲು ಪಕ್ಷಗಳು ನೀಡುವ ಭರವಸೆ ಸಮಗ್ರ ಅಭಿವೃದ್ಧಿಯ ಕುರಿತಾದ ಚಿಂತನ ಅಲ್ಲ. ಪಕ್ಷಗಳು ಆರಿಸಿಬರಲಿ.
ಸರಕಾರ ಮಾಡಲಿ. ಮುಂದಿನ ಚುನಾವಣೆಗೆ (ಮಿತಿಯಲ್ಲಿ) ದುಡ್ಡೂ ಮಾಡಿಕೊಳ್ಳಲಿ. ಬೇಸರವಿಲ್ಲ. ಪಕ್ಷಗಳಿಗೆ ಫ್ರೆಂಡ್ ಬೇಕು.
ನಿಜ. ಆದರೆ ಅಪಾಯ ಅವು ಎರಡೇ ವಿಚಾರ ಯೋಚಿಸುತ್ತಿರುವಂತೆ ಅನಿಸುತ್ತಿರುವುದು. ಪಕ್ಷಗಳಿಗೆ ಪ್ರಣಾಳಿಕೆಗಳೇ ಇರದಿ
ರುವುದು. ಅಥವಾ ಪ್ರಣಾಳಿಕೆಗಳು ಕೇವಲ ಕಾಟಾಚಾರದ ಕಟ್ ಅಂಡ್ ಪೇಸ್ಟ್ ಆಗಿರುವುದು.

ನೆನಪಿಡಬೇಕು. ಚುನಾವಣೆ, ಆಡಳಿತ, ಸರಕಾರ ಇವೆಲ್ಲ ಹುಡುಗಾಟಿಕೆ ಅಲ್ಲ. ಅದು ಒಂದು ಗಂಭೀರ ವ್ಯವಸ್ಥೆ. ಅಲ್ಲಿ ಒಂದು ಕನಿಷ್ಠ ಶಿಸ್ತು ಬೇಕು. ಸಾಮಾಜಿಕ ಕಾಳಜಿ ಬೇಕು. ಎಲ್ಲ ಬಿಟ್ಟು ನಡೆದರೆ ಕೆಲವೇ ಸಮಯದಲ್ಲಿ ನಮ್ಮ ಪರಿಸ್ಥಿತಿ ಶ್ರೀಲಂಕಾ,