Saturday, 23rd November 2024

ಚೆನ್ನೆಗೆ ಸೋಲಿನ ಕಹಿ, ಗೆದ್ದ ರಾಜಸ್ತಾನ

*ಪಂದ್ಯಶ್ರೇಷ್ಠ: ಸಂಜೂ ಸ್ಯಾಮ್ಸನ್
*ದುಬೈನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ್ದು ಸಂಜೂ ಸ್ಯಾಮ್ಸನ್
*ಒಂದು ಐಪಿಎಲ್(2020) ಸರಣಿಯಲ್ಲಿ ಅತೀ ಹೆಚ್ಚು ಸಿಕ್ಸರ್ – 33(ರಾಜಸ್ತಾನ್)
*2010ರ ಬಳಿಕ ಮೊದಲ ಬಾರಿ ರಾಜಸ್ತಾನ ತಂಡ ಚೆನ್ನೆöÊ ತಂಡವನ್ನು ಸೋಲಿಸಿತು.

ಶಾರ್ಜಾ: ಚೆನ್ನೆöÊ ಸೂಪರ್ ಕಿಂಗ್ಸ್ ರಾಜಸ್ತಾನ ರಾಯಲ್ಸ್ ತಂಡದ ವಿರುದ್ದ 16 ರನ್ನುಗಳಿಂದ ಸೋಲುಂಡಿತು.

ಇಲ್ಲಿನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 13ನೇ ಐಪಿಎಲ್‌ನ ನಾಲ್ಕನೇ ಪಂದ್ಯದಲ್ಲಿ ರಾಜಸ್ತಾನ ಪ್ರಚಂಡ ಆಟವಾಡಿತು.
ಚೆನ್ನೆöÊ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು, ಕ್ಷೇತ್ರ ರಕ್ಷಣೆ ಆಯ್ದುಕೊಂಡರೆ, ಬ್ಯಾಟಿಂಗಿಗೆ ಇಳಿಸಲ್ಪಟ್ಟ ರಾಜಸ್ತಾನಕ್ಕೆ ನಾಯಕ ಸ್ಟೀವ್ ಸ್ಮಿತ್ (69) ಹಾಗೂ ವಿಕೆಟ್ ಕೀಪರ್ ಸಂಜೂ ಸ್ಯಾಮ್ಸನ್ ಅವರ (74) ರನ್ ಚೆನ್ನೆöÊಗೆ ಸವಾಲೆನ್ನುವ ಮೊತ್ತ ಪೇರಿಸಿತು. ಸ್ಯಾಮ್ಸನ್ ಇನ್ನಿಂಗ್ಸö್ನಲ್ಲಿ ಒಂಭತ್ತು ಸಿಕ್ಸರ್ ಹಾಗೂ ಒಂದೇ ಬೌಂಡರಿ ಬಮದರೆ, ಸ್ಮಿತ್ ತಲಾ ನಾಲ್ಕು ಬೌಂಡರಿ ಹಾಗೂ ಅಷ್ಟೇ ಸಂಖ್ಯೆಯ ಸಿಕ್ಸರ್‌ಗಳನ್ನು ಬಾರಿಸಿ, ಇನ್ನಿಂಗ್ಸ್’ಗೆ ರಂದು ತಂದರು. ಇವರಿಬ್ಬರನ್ನು ಹೊರತುಪಡಿಸಿದರೆ, ಕೊನೆಯಲ್ಲಿ ವೇಗಿ ಜೋಫ್ರಾ ಆರ್ಚರ್ ಅವರ ಸ್ಲಾಗ್ ಓವರುಗಳಲ್ಲಿ ಸ್ಪೋಟಕ ಆಟ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿತು. ನಾಲ್ಕು ಸಿಕ್ಸರ್ ಈ ಇನ್ನಿಂಗ್ಸ್ನಲ್ಲಿ ಹರಿದು ಬಂದವು. ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಗೂ ವೇಗಿ ಲುಂಗಿ ಎನ್‌ಜಿಡಿ ಭಾರೀ ರನ್ ತೆತ್ತರು.

ಜವಾಬು ನೀಡಲಾರಂಭಿಸಿದ ಚೆನ್ನೆöÊಗೆ ಮುರಳಿ ವಿಜಯ್ ಸ್ಪೋಟಕ ಆರಂಭ ನೀಡಲಿಲ್ಲ. 21 ರನ್ ಗಳಿಸಲು ಅಷ್ಟೇ ಎಸೆತ ಬಳಸಿಕೊಂಡರು. ವನ್‌ಡೌನ್ ಬ್ಯಾಟ್ಸ್’ಮನ್ ಫಾಫ್ ಡು ಪ್ಲೆಸಿಸ್ 72 ಹಾಗೂ ಶೇನ್ ವ್ಯಾಟ್ಸನ್ 33 ರನ್ ಗಳಿಸಿದ್ದು, ತಂಡದ ಇನ್ನಿಂಗ್ಸ್ನ ಸರ್ವಾಧಿಕ ಮೊತ್ತ. ಕೋವಿಡ್‌ನಿಂದ ಗುಣಮುಖರಾಗಿ ತಂಡಕ್ಕೆ ಮರಳಿದ ಋತುರಾಜ್ ಗಾಯಕ್ವಾಡ್‌ರದ್ದು ಶೂನ್ಯ ರನ್ ಸಂಪಾದನೆ. ರಾಹುಲ್ ಟೆವಾಟಿಯಾ ಮೂರು ವಿಕೆಟ್ ಕಿತ್ತು, ಚೆನ್ನೆöÊ ತಂಡದ ರನ್ ಚೇಸ್ ಕುಂಠಿತಗೊಳಿಸಿದರು.

ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ 216/7
ಸ್ಟೀವ್ ಸ್ಮಿತ್ 69, ಸಂಜು ಸ್ಯಾಮ್ಸನ್ 74.
ಬೌಲಿಂಗ್: ಸ್ಯಾಮ್ ಕರ‍್ರನ್ 33/3
ಚೆನ್ನೆöÊ ಸೂಪರ್ ಕಿಂಗ್ಸ್ 200/6 
ಫಾಫ್ ಡು ಪ್ಲೆಸಿಸ್ 72, ಶೇನ್ ವ್ಯಾಟ್ಸನ್ 33, ಮಹೇಂದ್ರ ಸಿಂಗ್ ಧೋನಿ 29 ಅಜೇಯ
ಬೌಲಿಂಗ್: ರಾಹುಲ್ ಟೆವಾಟಿಯಾ 37/3