ಇಂಡಿ: ನಂಜು0ಡಪ್ಪ ವರದಿಯಂತೆ ಬ್ರಿಟಿಷರ ಕಾಲದಿಂದಲೂ ಕರ್ನಾಟಕ ಮಹಾರಾಷ್ಟç ಗಡಿ ಭಾಗದಲ್ಲಿರುವ ಇಂಡಿ ಬರಗಾಲಕ್ಕೆ ತುತ್ತಾಗಿರುವ ಭಾಗ ಇದರ ಜೊತೆ ಜೊತೆಗೆ ರಾಜಕೀಯವಾಗಿಯು ಕೂಡಾ ಮಂತ್ರಿಗಿರಿ ಇಲ್ಲದೆ ಅಸಮಾನತೆಯ ಛಾಯಯಿಂದ ನರಳುತ್ತಿದೆ.
ಪ್ರಾದೇಶಿಕ,ರಾಜಕೀಯ,ಶೈಕ್ಷಣಿಕ,ಆರೋಗ್ಯ,ಔದ್ಯೋಗಿಕ ಅಸಮತೋಲನವನ್ನು ನಿವಾರಣೆಗೆ ಆದ್ಯತೆ ನೀಡಿ,ಅಭಿವೃದ್ದಿ ಪಡಿಸುವ ಕುರಿತು ನಂಜು0ಡಪ್ಪ ವರದಿಯನ್ನು ಆಡಳಿತ ಮಾಡಿದ ಯಾವ ಸರ್ಕಾರಗಳು ಅನುಷ್ಠಾನಕ್ಕೆ ತಾರದೆ ಇರುವುದರಿಂದ ಇಂದು ಗಡಿಭಾಗದಲ್ಲಿರುವ ಅತ್ಯಂತ ಹಿಂದುಳಿದ ತಾಲೂಕು ಇಂಡಿ ತಾಲೂಕು ಈ ಎಲ್ಲವುಗಳ ಇಲ್ಲದಂತಾಗಿ ವಂಚಿತಗೊ0ಡಿದೆ.
ಸ್ವಾತಂತ್ರ÷್ಯ ನಂತರದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವ ಪಕ್ಷದ ಸರ್ಕಾರಗಳು ಸಹ ರಾಜಕೀಯವಾಗಿ ಇಂಡಿ ತಾಲೂಕಿಗೆ ಆದ್ಯತೆ ನೀಡದೆ ಮಲತಾಯಿ ಧೋರಣೆ ಅನುಸರಿಸಿವೆ.ಈ ಭಾಗದಲ್ಲಿ ಕಾಲಕಾಲಕ್ಕೆ ಮಳೆಯಾಗದೆ ಇರುವುದರಿಂದ ಬರಗಾಲ ಪೀಡಿತ ಪ್ರದೇಶವೆಂದು ಹೆಸರು ಪಡೆದು ಕೊಂಡರೆ, ತಾಲೂಕಿನ ಎಲ್ಲ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡದೆ ಇರುವುದರಿಂದ ನೀರಾವರಿ ಬರ,ಮೆಡಿಕಲ್ ಕಾಲೇಜು, ಇಂಜನೀಯರಿ0ಗ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಇಲ್ಲದೆ ಇರುವುದರಿಂದ ಶೈಕ್ಷಣಿಕ ಬರ,ಈ ಪ್ರದೇಶದ ಜನರು ಆರೋಗ್ಯಕ್ಕಾಗಿ ಆಸ್ಪತ್ರೆಗಳಿಗೆ ಸಮೀಪದ ಮಹಾ ರಾಷ್ಟçದ ಸೋಲಾಪೂರ,ಮಿರಜ್, ಸಾಂಗಲಿ ಜಿಲ್ಲೆಗೆ ಹೋಗಬೇಕು.
ಆರೋಗ್ಯ ಚಿಕಿತ್ಸೆಗಾಗಿ ದೊಡ್ಡ ಪ್ರಮಾಣದ ಆಸ್ಪತ್ರೆಗಳಿಲ್ಲ,ಹೀಗಾಗಿ ಆರೋಗ್ಯ ಚಿಕತ್ಸೆ ಬರ,ಸ್ವಾತಂತ್ರ÷್ಯ ಬಂದಾಗಿನಿ0ದ ಇಲ್ಲಿಯವರೆಗೆ ರಾಜಕೀಯ ವಾಗಿ ಸಚಿವ ಸ್ಥಾನ ದೊರೆಯದೆ ಇರುವುದರಿಂದ ರಾಜಕೀಯ ಬರ(ಸಚಿವ ಸ್ಥಾನ ಬರ) ಅಂಟಿಕೊ0ಡಿದೆ. ಎಲ್ಲ ಕ್ಷೇತ್ರದಲ್ಲಿಯೂ ಬರದ ಹಣೆಪಟ್ಟಿ ಕೊಂಡಿರುವ ಗಡಿಭಾಗ ಹಿಂದುಳಿದ ಇಂಡಿ ತಾಲೂಕು ಬರದ ಹಣೆಪಟ್ಟಿ ಕಳಚುವುದು ಯಾವಾಗ ಎಂಬ ಪ್ರಶ್ನೆ ತಾಲೂಕಿನ ಪ್ರಜ್ಞಾವಂತ ನಾಗರಿಕ ರದ್ದಾಗಿದೆ.
೨೦೧೩ ರಲ್ಲಿ ರಾಜ್ಯದಲ್ಲಿ ಆಡಳಿತ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬಬಲೇಶ್ವರ ಹಾಗೂ ಬಸವನ ಬಾಗೇವಾಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವ ಮೂಲಕ ಹಿಂದುಳಿದ ಇಂಡಿ ಮತಕ್ಷೇತ್ರಕ್ಕೆ ಅಂದೂ ಸಚಿವ ಸ್ಥಾನ ನೀಡಲಿಲ್ಲ. ಇಂಡಿ ಭಾಗದ ಮತದಾರರು ಸದಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರನ್ನು ಸದಾ ಇಂದಿನವರೆಗೆ ಬೆಂಬಲಿಸುತ್ತಾ ಬಂದಿದ್ದಾರೆ. ಇಂದು ಸಹ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬಂದರೂ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡದೆ,ಅನ್ಯಾಯ ಮಾಡಲಾಗಿದೆ ಎಂಬ ಅಸಮಾಧಾನ ಕ್ಷೇತ್ರದ ಜನರದ್ದಾಗಿದೆ.
ಬರಪೀಡಿತ ಗಡಿನಾಡು ಪ್ರದೇಶ ಇಂಡಿ-ಚಡಚಣ ವ್ಯಾಪಾರಿ ಕೇಂದ್ರವಾಗಿದ್ದು,ಅದು ಅಭಿವೃದ್ದಿ ಆಗಬೇಕಾಗಿದೆ. ಕಬ್ಬು, ಲಿಂಬೆ, ದ್ರಾಕ್ಷಿ, ದಾಳಿ0ಬೆ, ರೇಷ್ಮೆ ಬೆಳೆಯುವ ಪ್ರದೇಶವಾಗಿರುವ ಇಂಡಿ ಸಂಪೂರ್ಣ ನೀರಾವರಿಗೆ ಒಳಪಡಬೇಕಾಗಿದೆ.ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಇಲ್ಲದೆ ಶೈಕ್ಷಣಿಕ ಬರ ಎದುರಿಸುತ್ತಿರುವ ಇಂಡಿ ಶೈಕ್ಷಣಿಕ ವಾಗಿ, ಮೇಲ್ದರ್ಜೆ, ಉನ್ನತ ಯಂತ್ರೋಪಕರಣಳು ಹೊಂದಿರುವ ಆಸ್ಪತ್ರೆಗಳು ಇಲ್ಲದೆ ಇರುವುದರಿಂದ ಆರೋಗ್ಯ ಚಿಕಿತ್ಸೆಯ ಬರ, ಬಡತನ, ಕೂಲಿ ಕಾರ್ಮಿಕರಿಂದ ಕೂಡಿದ ಇಂಡಿ ಪ್ರದೇಶದಲ್ಲಿ ಸಣ್ಣ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆ ಕೇಂದ್ರಗಳು, ಕಾರ್ಖಾನೆಗಳು ಇಲ್ಲದೆ ಇರುವುದರಿಂದ ಈ ಭಾಗದ ಹಲವು ಜನರು ಇಂದಿಗೂ ಗೋವಾ,ಮಹಾರಾಷ್ಟç ರಾಜ್ಯಗಳಿಗೆ ಗೂಳೆ ಹೋಗುತ್ತಿದ್ದಾರೆ.
ಕನ್ನಡ ಸಾರಸತ್ವ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿಗಳಾದ ಮಧುರಚೆನ್ನ,ಸಿಂಪಿ ಲಿಂಗಣ್ಣ,ಶ್ರೀರAಗರAತ ಮೇಧಾವಿಗಳಿಗೆ ಜನ್ಮ ನೀಡಿದ ಈ ಪ್ರದೇಶಲ್ಲಿ ಅವರನ್ನು ನೆನಪಿಸುವ ಸ್ಮಾರಕಗಳು ಮಾಡುವಲ್ಲಿ ಹಿಂದೆ ಬಿದ್ದಿದ್ದು,ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಯಾವುದೇ ಪಕ್ಷದ ಸರ್ಕಾರಗಳು ಇದ್ದರೂ ಗಡಿಭಾಗ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವುದರ ಮೂಲಕ ಎಲ್ಲ ಬರಗಳಿಗೆ ಇತಿಶ್ರೀ ಹಾಡಬೇಕಿತ್ತು.ಯಾವ ಸರ್ಕಾರಗಳು ಈ ಕೆಲಸ ಮಾಡಿರುವುದಿಲ್ಲ.ಹೀಗಾಗಿ ಈ ಭಾಗದ ಜನರು ಎಚ್ಚತ್ತುಕೊಳ್ಳಬೇಕು. ರಾಜಕೀಯ ಪ್ರಾತಿನಿಧ್ಯಸಿಗದ,ಶೈಕ್ಷಣಿಕ,ಆರೋಗ್ಯ,ಔದ್ಯೋಗಿಕ,ನೀರಾವರಿಗೆ ಆಧ್ಯತೆ ನೀಡದ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಈ ಭಾಗದ ಜನರು ಮಾಡುವುದಕ್ಕಿಂತ ಹಾಗೂ ಈ ಭಾಗದ ಜನರು ಸಹನೆ ಕಳೆದುಕೊಳ್ಳುವ ಮುಂದೆ ಈ ಭಾಗಕ್ಕೆ ಸಿಗಬೇಕಾದ ರಾಜಕೀಯ ಸ್ಥಾನ ಮಾನ ನೀಡಬೇಕು ಎಂಬುದು ಕ್ಷೇತ್ರದ ಪ್ರಜ್ಞಾವಂತರ ಆಕ್ರೋಶವಾಗಿದೆ.
*
ಹಿಂದುಳಿದ ಗಡಿಭಾಗ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿ ನ್ಯಾಯ ನೀಡುತ್ತಾರೆ ಎಂಬ ಭರವಸೆಯಲ್ಲಿ ಇದ್ದೇವು.ಆದರೆ ಸಚಿವ ಸ್ಥಾನ ಪಡೆದವರಿಗೆ ಪದೆ ಪದೇ ಸಚಿವ ಸ್ಥಾನ ನೀಡುವ ಮೂಲಕ ಗಡಿಭಾಗದ ಅಭಿವೃದ್ದಿಗೆ ಅನ್ಯಾಯ ಮಾಡಲಾಗಿದೆ. ಹಿರಿತನ,ಅನುಭವ ಆಧಾರದ ಮೇಲೆ ಸಚಿವ ಸ್ಥಾನ ನೀಡು ವುದಾದರೆ, ಹಿಂದುಳಿದ ಪ್ರದೇಶಗಳು ರಾಜಕೀಯವಾಗಿ ಮುಂದೆ ಬರುವುದು ಯಾವಾಗ.ಈ ಭಾಗದ ಜನರು ಸಹನೆ ಶೀಲರು,ಭೀಮಾತೀರದ ಜನರು ಸಹನೆ ಕಳೆದುಕೊಳ್ಳುವ ಮುಂಚೆ ಇಂಡಿ ಮತಕ್ಷೇತ್ರಕ್ಕೆ ರಾಜಕೀಯ ಬರ ಅಳಿಸಿ,ಸಚಿವ ಸ್ಥಾನ ನೀಡಬೇಕು.
ರಾಘವೇಂದ್ರ ಕುಲಕರ್ಣಿ,ಸಾಹಿತಿ,ಇಂಡಿ.