ಚಿಂತಾಮಣಿ: ಶ್ರೀ ಯೋಗಿನಾರೇಯಣ ಸಂಗೀತ ಕಲೆ ಮತ್ತು ಎಜುಕೇಷನ್ ಟ್ರಸ್‌ಟ್ ವತಿಯಿಂದ ಶ್ರೀ ಕ್ಷೇತ್ರ ಕೈವಾರದ ಸದ್ಗುರು ಯೋಗಿನಾರೇಯಣ ಆಡಳಿತ ಕಚೇರಿಯ ಸಭಾಂಗಣದಲ್ಲಿ ಎರಡನೇ ವಾರ್ಷಿಕೋತ್ಸವ ಭಕ್ತಿಗಾಯನ ಸಮಾರಂಭ ನಡೆಯಿತು.
ಶ್ರೀ ಯೋಗಿನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್, ಶ್ರೀ ಕ್ಷೇತ್ರ ಕೈವಾರದ ನಾದಸುಧಾರಸದ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮನೀಷಾ, ವಿಭಾಕರರೆಡ್ಡಿ, ಎಲ್.ಎಸ್. ನಾಗೇಂದ್ರರೆಡ್ಡಿ, ರಾಮಣ್ಣ, ಕುಮಾರಿ ಪದ್ಮಾವತಿ, ಬೃಂದಾ ಶೈಲಜಾ, ಪರಿಮಳ ಅರಳುಮಲ್ಲಿಗೆ, ಆರ್.ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ವಾನರಾಶಿ ಬಾಲಕೃಷ್ಣ ಭಾಗವತ್ ನೇತೃತ್ವದಲ್ಲಿ ಶ್ರೀ ಯೋಗಿ ನಾರೇಯಣ ಸ್ವಾಮಿಗಳ ವಿರಚಿತ ಪಂಚರತ್ನ ಕೃತಿ ಗಾಯನ ಮತ್ತು ಶ್ರೀ ತ್ಯಾಗರಾಜ ಸ್ವಾಮಿಗಳ ವಿರಚಿತ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಹಾಗೂ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಪರಿಮಳ ಅರಳುಮಲ್ಲಿಗೆ ಅವರ ನೃತ್ಯಾಾಂಜಲಿ ಸಂಗೀತ ಕಲಾ ಅಕಾಡೆಮಿಯ ಶಿಷ್ಯವೃಂದದ ಪಾವನಿ ಕುಮಾರ್, ನಿಶ್ಚಿತಾ, ರಕ್ಷಾ, ತನುಶ್ರೀ ಸಂಗಡಿಗರಿಂದ ನಡೆದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.