ಸಾಧನಾಪಥ
ಡಿ.ಎಸ್.ಅರುಣ್
ಪ್ರಜಾಪ್ರಭುತ್ವ ಮಾದರಿಯ ಆಡಳಿತದ ಆಶಯವೇ ಪ್ರಜಾಕಲ್ಯಾಣ. ಪ್ರಾಯಶಃ ಇದರ ಅರಿವಾಗುವುದು, ದೇಶದ ಜನರ ಜೀವನಮಟ್ಟದಲ್ಲಿ ಸುಧಾರಣೆಯ ಚಿಹ್ನೆಗಳು ಗೋಚರಿಸಿದಾಗ ಮಾತ್ರ. ಈ ಗ್ರಹಿಕೆಯನ್ನು ಆಧಾರವಾಗಿಟ್ಟುಕೊಂಡು ೨೦೧೪ರ
ಲೋಕಸಭಾ ಚುನಾವಣೆಯ ಸಂದರ್ಭವನ್ನು ಗಮನಿಸಿದಾಗ, ಭಾರತದ ರಾಜಕೀಯ ವ್ಯವಸ್ಥೆ ಹೊಸರೂಪ ತಳೆದಿದ್ದರ ಅರಿವಾಗುತ್ತದೆ. ಇದು ಜನರ ರಾಜಕೀಯ ಪ್ರಜ್ಞೆ ಹಾಗೂ ಗತಿಯನ್ನೇ ಬದಲಾಯಿಸಿತು.
ಆದ್ದರಿಂದಲೇ ವಿಶ್ವದ ನೋಟ ವಿಂದು ಭಾರತದತ್ತ ಹರಿದಿದೆ. ಮಾತ್ರವಲ್ಲ, ವಿಶ್ವವೇ ಒಪ್ಪುವ ನಾಯಕರಿವರು ಎನ್ನುವಷ್ಟರ ಮಟ್ಟಿಗೆ ಎಲ್ಲೆಡೆಯೂ ಪ್ರಧಾನಿ ಮೋದಿಯವರ ಕುರಿತಾದ ಪ್ರಶಂಸೆ ಕೇಳಿಬರುತ್ತಿದೆ. ವಿಶ್ವದ ಬಲಿಷ್ಠ ನಾಯಕರನ್ನು ಒಳಗೊಂಡಂತೆ ಎಲ್ಲ ರಾಷ್ಟ್ರದವರು ಮೋದಿಯವರನ್ನು ವಿಶ್ವದ ಮುಂಚೂಣಿ ನಾಯಕ ಎಂದೇ ಪರಿಗಣಿಸಿದ್ದಾರೆ. ಕಾರಣ ಇಷ್ಟೇ- ದೇಶದ ವಿಭಿನ್ನ ಸಮಸ್ಯೆಗಳನ್ನು ಮಾತ್ರವಲ್ಲದೆ ವಿವಿಧ ರಾಷ್ಟ್ರಗಳ ನಡುವಿನ ಸಮಸ್ಯೆಗಳು, ವಿದೇಶಾಂಗ ನೀತಿ ಹೀಗೆ ವಿವಿಧ ವಿಷಯಗಳಲ್ಲಿ ಮೋದಿಯ ವರು ಆಲೋಚಿಸುವ ವಿಧಾನ ಮತ್ತು ತೆಗೆದು ಕೊಳ್ಳುವ ದಿಟ್ಟ ನಿರ್ಧಾರಗಳು ವಿಶ್ವದ ಅನೇಕ ನಾಯಕರನ್ನು ನಿಬ್ಬೆರಗಾಗಿಸಿದೆ.
೨೦೧೪ರ ಲೋಕಸಭಾ ಚುನಾವಣೆಯ ನಂತರ ದೇಶದ ರಾಜಕೀಯ ಕ್ಷೇತ್ರದಲ್ಲಿ ಹೊಸಹೆಜ್ಜೆಗಳು ಮೂಡಿದ್ದನ್ನು ನಾವು
ಗಮನಿಸಬಹುದಾಗಿದೆ. ಗುಜರಾತ್ನಲ್ಲಿನ ಆಡಳಿತದಲ್ಲಿ ನವಪರ್ವವನ್ನೇ ಹುಟ್ಟುಹಾಕಿ ಸಾಕಷ್ಟು ಜನರ ಮನಸ್ಸಿನಲ್ಲಿ ನೆಲೆಯೂರಿದ್ದ ನರೇಂದ್ರ ಮೋದಿಯವರು, ದೇಶದ ಅನೇಕ ನಾಯಕರ ಆಶಯದಂತೆ ಪ್ರಧಾನಿ ಹುದ್ದೆಯನ್ನು ಅಲಂಕ
ರಿಸಿದ ನಂತರ, ಆ ಸ್ಥಾನಕ್ಕೆ ಹೊಸ ಮೆರಗು ಬರಲು ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಅಂದಿನಿಂದ ಇಂದಿನವರೆಗೆ ೨ ಬಾರಿ ದೇಶದ ಪ್ರಧಾನಿಯಾಗಿ, ಒಟ್ಟು ೯ ವರ್ಷ ಅತ್ಯುತ್ತಮ ಆಡಳಿತ ನೀಡಿ, ಹೊಸ ಚಿಂತನೆಗಳ ಮೂಲಕ ಅವರು ದೇಶದ ದಿಕ್ಕನ್ನೇ ಸಕಾರಾತ್ಮಕವಾಗಿ ಬದಲಾಯಿಸಿದ್ದಾರೆ. ಕಾರಣ, ಅವರ ಚಿಂತನೆಯು ಸಂಕುಚಿತ ದೃಷ್ಟಿಯದ್ದಾಗಿರದೆ ವಿಶ್ವಮಾನ್ಯವಾಗಿರುವಂಥದ್ದಾಗಿದೆ. ಮಾನವ ಕಲ್ಯಾಣವೇ ಅಂತಿಮ ಎಂಬ ಆಶಯ ಅವರ ಚಿಂತನೆಯಲ್ಲಿ ಕೆನೆಗಟ್ಟಿದೆ.
ಮೋದಿಯವರ ಆಡಳಿತದಲ್ಲಿನ ಹೆಜ್ಜೆಗುರುತುಗಳನ್ನು ಗಮನಿಸುತ್ತಾ ಹೋದರೆ ಅಚ್ಚರಿಯ ಸಂಗತಿಗಳು ಅನಾವರಣಗೊಳ್ಳು ತ್ತವೆ. ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರಿಸಿರುವ ಭಾರತ ೨೦೨೨-೨೩ನೇ ಸಾಲಿನಲ್ಲಿ ಶೇ. ೭.೨ರಷ್ಟು
ಜಿಡಿಪಿ ಸಾಽಸಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಅನೇಕ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚಿನದ್ದು ಎಂಬುದಿಲ್ಲಿ
ಗಮನಾರ್ಹ. ಹಾಗೆಯೇ, ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರ ಕೃಷಿ ಚಟುವಟಿಕೆಗಳಿಗೆ ಮೋದಿಯವರು ನೀಡಿ
ರುವ ಕೊಡುಗೆ ವೈಶಿಷ್ಟ್ಯಪೂರ್ಣವಾದುದು.
ರೈತರ ಬದುಕನ್ನು ಗಟ್ಟಿಗೊಳಿಸಬೇಕು, ಅವರ ಆದಾಯ ನಿರಂತರವಾಗಿರಬೇಕು, ಕೃಷಿ ಚಟುವಟಿಕೆಗಳು ಆರ್ಥಿಕ ಸದೃಢತೆ ಹೊಂದಿರಬೇಕು ಎಂಬ ಸದಾಶಯದೊಂದಿಗೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವಲ್ಲಿ, ಸಿರಿಧಾನ್ಯಗಳ ಮಹತ್ವ ವನ್ನು ವಿಶ್ವಕ್ಕೇ ಸಾರುವ ಮೂಲಕ ಭಾರತದ ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ನಿರ್ಮಿಸುವಲ್ಲಿ ಮೋದಿಯವರು ಯಶ ಕಂಡಿದ್ದಾರೆ. ಇನ್ನು, ಮಧ್ಯವರ್ತಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದ್ದುದನ್ನು ತಪ್ಪಿಸಿ, ‘ಪಿಎಂ ಕಿಸಾನ್ ನಿಧಿ’ ಎಂಬ
ಕಾರ್ಯಕ್ರಮದಡಿಯಲ್ಲಿ ಆರ್ಥಿಕ ಸಹಾಯಧನ ರೈತರ ಖಾತೆಗೆ ನೇರವಾಗಿ ಜಮೆಯಾಗುವಂತೆ ಅವರು ಕ್ರಮ ಕೈಗೊಂಡಿದ್ದು ಕೂಡ ಶ್ಲಾಘನೀಯವೇ ಸರಿ.
‘ಹಿಂದೆಂದಿಗಿಂತಲೂ ನಮ್ಮ ಬದುಕು ಹೊಸರೀತಿಯಲ್ಲಿ ಸಾಗುತ್ತಿದೆ, ಕೃಷಿಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುತ್ತಿದೆ’ ಎಂಬ ರೈತರ ಅಭಿಪ್ರಾಯವೇ ಈ ಮಾತಿಗೆ ಪುಷ್ಟಿನೀಡುತ್ತದೆ. ವಿಶ್ವವನ್ನೇ ಅಲುಗಾಡಿಸಿದ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಿ ದೇಶದ ಜನರನ್ನು ರಕ್ಷಿಸಿ ಅವರ ಬದುಕನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮೋದಿಯವರು ಕೈಗೊಂಡ ಕ್ರಮಗಳು ಎಂಥವರೂ ಮೆಚ್ಚುವಂಥವು. ದೇಶವನ್ನು ಕೋವಿಡ್ ಮಹಾಮಾರಿ ಆವರಿಸಿದ್ದರೂ, ದೇಶದೆಲ್ಲ ನಾಗರಿ
ಕರಿಗೆ ಎರಡು ಬಾರಿ ಉಚಿತ ಲಸಿಕೆ ನೀಡುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದು ಅವರ ಹೆಗ್ಗಳಿಕೆ.
ಮಾತ್ರವಲ್ಲ, ವಿಶ್ವದ ಅನೇಕ ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ರವಾನಿಸುವ ಮೂಲಕ ಅಲ್ಲಿನ ಜನಗಳ ಆರೋಗ್ಯ ಸುಧಾರಣೆ
ಯಲ್ಲೂ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಥ ಸಮಯದಲ್ಲೂ ದೇಶದ ಆರ್ಥಿಕ ಸ್ಥಿತಿ ಹದಗೆಡದಂತೆ ನೋಡಿ ಕೊಂಡಿದ್ದು ಅವರ ದಕ್ಷತೆಗೆ ಸಾಕ್ಷಿ. ‘ಭೂಮಿಯ ಮೇಲಿನ ಸ್ವರ್ಗ’ ಎಂದೇ ಹೆಸರಾಗಿದ್ದ ಕಾಶ್ಮೀರದಲ್ಲಿ ಕಾಲ ಕಳೆದಂತೆ ರಕ್ತದೋಕುಳಿ ರಾರಾಜಿಸಿದಾಗ, ಅಲ್ಲಿ ಶಾಂತಿಯ ಮರುಸ್ಥಾಪನೆಯಾಗುವ ನಿಟ್ಟಿನಲ್ಲಿ ಮೋದಿಯವರು ದಿಟ್ಟಹೆಜ್ಜೆ ಇಟ್ಟ ಪರಿಣಾಮವಾಗಿ ಕಾಶ್ಮೀರವಿಂದು ಮತ್ತೊಮ್ಮೆ ನಳನಳಿಸುತ್ತಿದೆ, ಶಾಂತಿ-ನೆಮ್ಮದಿಯ ನೆಲೆವೀಡಾಗಿದೆ.
ಜಿ-೨೦ ಶೃಂಗಸಭೆಯು ಕಾಶ್ಮೀರದಲ್ಲಿಯೇ ನಡೆದು ವಿಶ್ವನಾಯಕರನ್ನು ಸೆಳೆಯುವಂತಾಗಿದ್ದು ಈ ನಿಟ್ಟಿನಲ್ಲಿ ಉಲ್ಲೇಖನೀಯ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಇಡೀ ವಿಶ್ವಕ್ಕೆ ಸಾರುವಲ್ಲಿ ಮೋದಿಯವರು ಕೈಗೊಂಡ ಈ ಕ್ರಮವನ್ನು ಮೆಚ್ಚಲೇಬೇಕಲ್ಲವೇ? ದೇಶರಕ್ಷಣೆಯಲ್ಲಿ ವ್ಯಸ್ತರಾಗಿರುವ ನಮ್ಮ ಯೋಧರ ಬಗ್ಗೆ ಮೋದಿಯವರಿಗಿರುವ ಕಾಳಜಿ ನಿಜಕ್ಕೂ ಪ್ರಶಂಸನೀಯ ಮತ್ತು ಅಭಿನಂದನಾರ್ಹ. ಅವರನ್ನು ಕೇವಲ ಯೋಧರು ಎಂದಷ್ಟೇ ಕರೆಯದೆ ಈ ದೇಶದ ಹೆಮ್ಮೆಯ ಪುತ್ರರು ಎಂಬಂತೆ ಪರಿಗಣಿಸುವ, ಯೋಧರ ಮಧ್ಯೆ ಸಮಯ ಕಳೆಯುವ ಮೂಲಕ ಅವರ ಸಮಸ್ಯೆಗಳನ್ನು ಅರಿತು ಸೂಕ್ತವಾಗಿ ಸ್ಪಂದಿ
ಸುವ ಮೂಲಕ ಮೋದಿಯವರು ಯೋಧಸಮೂಹಕ್ಕೆ ನಿಜಗೌರವವನ್ನು ಸಲ್ಲಿಸುತ್ತಿದ್ದಾರೆ.
ಯೋಧರೇ ಹೇಳುವಂತೆ ‘ನಮ್ಮ ಹೆಮ್ಮೆಯ ಪ್ರಧಾನಿ’ ಎಂಬ ಅಭಿದಾನಕ್ಕೂ ಕಾರಣರಾಗಿದ್ದಾರೆ. ಇನ್ನು, ಯುವಜನಾಂಗವು ರಾಷ್ಟ್ರರಕ್ಷಣೆಗೆ ಮುಂದಾಗಬೇಕು ಎಂಬ ಸದಾಶಯದೊಂದಿಗೆ ‘ಅಗ್ನಿಪಥ್’ ಎಂಬ ಕಾರ್ಯಕ್ರಮವನ್ನು ಘೋಷಿಸಿ, ದೇಶದ ಯುವ ಪಡೆಯು ಸಹಜವಾಗಿ ಮತ್ತು ಅಭಿಮಾನಪೂರ್ವಕವಾಗಿ ಸೇನೆಯನ್ನು ಸೇರಿ ಸೇವೆ ಸಲ್ಲಿಸುವ ಮೂಲಕ ತಮ್ಮ ವೈಯಕ್ತಿಕ ಬದುಕನ್ನು ಗಟ್ಟಿಗೊಳಿಸಿಕೊಳ್ಳುವಂತಾಗುವಲ್ಲಿ ಮೋದಿಯವರ ಯೋಗದಾನವಿದೆ ಎಂದರೆ ತಪ್ಪಾಗಲಾರದು.
ಹಿಂದೂಗಳ ಭಾವನಾತ್ಮಕ ವಿಷಯಗಳಲ್ಲಿ ಒಂದಾಗಿರುವ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯ ವಿಷಯದಲ್ಲಿ ಮೋದಿ
ಯವರು ತೋರಿದ ಶ್ರದ್ಧೆಯನ್ನು ಬಿಡಿಸಿ ಹೇಳಬೇಕಿಲ್ಲ. ೨೦೨೦ರ ಆಗಸ್ಟ್ನಲ್ಲಿ ಅಯೋಧ್ಯೆಯಲ್ಲಿ ಭೂಮಿಪೂಜೆ ನೆರವೇರಿಸಿ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ನಾಂದಿಹಾಡಿದ್ದು ಮೋದಿಯವರೇ. ಮಾತ್ರವಲ್ಲ, ಮುಸಲ್ಮಾನ್ ಹೆಣ್ಣು ಮಕ್ಕಳ ನೋವನ್ನು ಗ್ರಹಿಸಿ, ಅವರ ಜೀವನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ‘ತ್ರಿವಳಿ ತಲಾಖ್’ ಪದ್ಧತಿಯನ್ನು ರದ್ದುಗೊಳಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ.
ಕಳೆದ ೯ ವರ್ಷಗಳಲ್ಲಿ, ಬ್ರಿಟಿಷರ ಕಾಲದಿಂದಿದ್ದ ಮತ್ತು ಪ್ರಸಕ್ತ ಕಾಲಘಟ್ಟಕ್ಕೆ ಅಪ್ರಸ್ತುತವೆನಿಸುವ ೨೦೦೦ಕ್ಕೂ ಹೆಚ್ಚಿನ
ಕಾನೂನುಗಳನ್ನು ರದ್ದುಗೊಳಿಸಿ ಜನರಿಗೆ ಅನುಕೂಲ ಮಾಡಿ ಕೊಟ್ಟಿರುವ ಮೋದಿಯವರು, ತಮ್ಮ ಈ ಎಲ್ಲ ಆಡಳಿತಾತ್ಮಕ
ಚಟುವಟಿಕೆಗಳ ನಡುವೆಯೂ ತೋರುವ ಸಮಯ ಪಾಲನೆಯ ಪರಿಪಾಠ ನಿಜಕ್ಕೂ ಅನುಕರಣೀಯ. ತಮ್ಮ ದಿನಚರಿಯಲ್ಲಿ ಹೆಚ್ಚಿನ ಸಮಯವನ್ನು ಆಡಳಿತದ ಸುಧಾರಣೆ, ಜನರ ಸಮಸ್ಯೆಗಳ ಪರಿಹಾರ ಇತ್ಯಾದಿ ಬಾಬತ್ತುಗಳಿಗೆಂದೇ ಮೀಸಲಿರಿ ಸಿರುವ ಅವರು ವಿಶ್ರಾಂತಿಗೆ ವಿನಿಯೋಗಿಸುವುದು ಅತ್ಯಲ್ಪ ಸಮಯವನ್ನು ಮಾತ್ರ.
ಹೀಗಾಗಿ ಅವರದು ಮಾದರಿ ವ್ಯಕ್ತಿತ್ವ. ಅವರ ವ್ಯಕ್ತಿತ್ವದಲ್ಲಿ ಇಂಥ ಹಲವು ಉತ್ತಮಿಕೆ ಮತ್ತು ದಕ್ಷತೆಗಳು ಮಿಳಿತವಾಗಿರುವು ದರಿಂದಲೇ ಕೃಷಿ ಉತ್ಪಾದನೆ, ನಿರ್ಮಾಣ, ಸೇವೆ, ಗಣಿಗಾರಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಪ್ರಗತಿ ದಾಖಲಾಗಿ ಆರ್ಥಿಕತೆಗೆ ಆನೆಬಲ ದಕ್ಕಿದೆ. ಹೀಗಾಗಿ, ಕಾರ್ಮಿಕರು, ಯೋಧರು, ರೈತರು, ಗುರುವೃಂದ, ಧಾರ್ಮಿಕ ಮುಖಂಡರು ಹೀಗೆ ಸಮಾಜದ ಎಲ್ಲ ವರ್ಗದ ಜನರೂ ಮೋದಿಯವರ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯವೆಂದರೆ- ‘ಅವರು ದೇಶ ಕಂಡ ಅಪ್ರತಿಮ
ನಾಯಕ’. ಈ ಕಾರಣದಿಂದಲೇ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಾಗಲೆಲ್ಲ ‘ಮೋದಿ ಮೋದಿ’ ಎಂಬ ಅಭಿಮಾನ ಪೂರ್ವಕ ಜನದನಿಯು ಭಾರತದಲ್ಲಿ ಮಾತ್ರ ವಲ್ಲದೆ ವಿದೇಶಿ ನೆಲಗಳಲ್ಲಿಯೂ ಅನುರಣಿಸುತ್ತದೆ, ಮೋದಿಯವರ ಕುರಿತಾದ ಅಭಿಮಾನ ಮುಗಿಲುಮುಟ್ಟುತ್ತದೆ.
ಮೋದಿಯವರು ಕೇವಲ ಆಡಳಿತಗಾರರಲ್ಲ, ದಕ್ಷ ಆಡಳಿತಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಅಗ್ರನಾಯಕ. ಮೋದಿಯವರಿಗೆ
ಸರಿಸಮಾನರೆಂದರೆ ಬಹುಶಃ ಮೋದಿಯವರೊಬ್ಬರೇ. ೨೦೧೪ರ ಲೋಕಸಭಾ ಚುನಾವಣಾ ಭಾಷಣದಲ್ಲಿ ‘ಭಾರತ
ದಲ್ಲಿ ಸ್ವರ್ಣಯುಗ ಬರಲಿದೆ’ ಎಂದು ಘೋಷಿಸಿ, ತದನಂತರ ಅಧಿಕಾರದ ಚುಕ್ಕಾಣಿ ಹಿಡಿದು, ದೇಶವಾಸಿಗಳು ಅಮೃತಕಾಲ
ದಲ್ಲಿ ಬದುಕುವಂತೆ ಮಾಡುತ್ತಿರುವ ಮೋದಿಯವರ ಕಾರ್ಯ ಎಂದಿಗೂ ಸ್ಮರಣೀಯ. ಮುಂದೆಯೂ ಅವರ ನಾಯಕತ್ವದಲ್ಲಿ ದೇಶವು ಸದೃಢವಾಗಿ ಎಲ್ಲ ಆಯಾಮ ಗಳಲ್ಲೂ ಬೆಳೆಯುತ್ತದೆ ಎಂಬುದು ಬಹುಜನರ ವಿಶ್ವಾಸ ಮತ್ತು ನಂಬಿಕೆ. ಇದರಲ್ಲಿ ಎರಡು ಮಾತಿಲ್ಲ.
(ಲೇಖಕರು ವಿಧಾನ ಪರಿಷತ್ ಸದಸ್ಯರು)