ನವದೆಹಲಿ: ದೃಢವಾದ ಜಿಡಿಪಿ ದೃಷ್ಟಿಕೋನ, ಮಧ್ಯಮ ಪ್ರಮಾಣದ ಹಣದುಬ್ಬರ ಮತ್ತು ವಿದೇಶಿ ಹೂಡಿಕೆದಾರರ ಬಲವಾದ ಖರೀದಿಗಳು ಸೇರಿದಂತೆ ವಿವಿಧ ಸಕಾರಾತ್ಮಕ ಅಂಶಗಳಿಂದಾಗಿ ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಸ್ವಲ್ಪ ಮಟ್ಟಿಗೆ ಏರಿಕೆ ಕಂಡವು.
ಈ ಬೆಳವಣಿಗೆ ಹೂಡಿಕೆದಾರರಿಗೆ ಆಶಾದಾಯಕವಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿವೆ. ಪ್ರಸ್ತುತ ಸಮಯದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.1 ರಿಂದ 0.2 ರಷ್ಟು ಹೆಚ್ಚಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಬಡ್ಡಿದರವನ್ನು ಹೆಚ್ಚಿಸಿದ ನಂತರ ಅಂತಿಮವಾಗಿ ಬಡ್ಡಿದರ ಏರಿಸುವ ಕ್ರಮಕ್ಕೆ ವಿರಾಮ ನೀಡಿದ ಅಮೆರಿಕದ ಸೆಂಟ್ರಲ್ ಬ್ಯಾಂಕ್ ನೀತಿ ಕೂಡ ಹೂಡಿಕೆದಾರರಲ್ಲಿ ಭರವಸೆ ಹುಟ್ಟಿಸಿದೆ.
ಅಮೆರಿಕ ಫೆಡರಲ್ ರಿಸರ್ವ್‌ನ ಹಣಕಾಸು ನೀತಿ ಸಮಿತಿಯು ಬುಧವಾರದ ತನ್ನ ಇತ್ತೀಚಿನ ಸಭೆಯಲ್ಲಿ ಪ್ರಮುಖ ಬಡ್ಡಿದರ ವನ್ನು ಸ್ಥಿರವಾಗಿರಿಸಿದೆ. ಪಾಲಿಸಿ ದರವನ್ನು 5.0 ರಿಂದ 5.25 ಪ್ರತಿಶತದಲ್ಲಿ ನಿರ್ವಹಿಸಲಾಗಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಸತತ ಹತ್ತನೇ ಬಾರಿಗೆ ಬಡ್ಡಿದರವನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು.
ಷೇರು ಮಾರುಕಟ್ಟೆಗಳು ಆರು ತಿಂಗಳ ನಂತರ ಈಗ ಹೊಸ ಗರಿಷ್ಠ ಮಟ್ಟಕ್ಕೇರುವ ಸನಿಹದಲ್ಲಿವೆ. ಸದ್ಯದ ಟ್ರೆಂಡ್ಗಳ ಪ್ರಕಾರ ಏರಿಕೆ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ.