Friday, 13th December 2024

ಬುಗುಡನಹಳ್ಳಿ ಕೆರೆಗೆ ಹರಿಯುತ್ತಿರುವ ಹೇಮಾವತಿ

ತುಮಕೂರು: ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಗೂರೂರು ಜಲಶಾಯದಿಂದ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು ಜನತೆಯಲ್ಲಿ ಸಂತಸ ಮೂಡಿ ಸಿದೆ.
ಈ ಹಿನ್ನೆಲೆಯಲ್ಲಿ  ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಮಾತನಾಡಿ,  ಬುಗುಡನಹಳ್ಳಿ ಕೆರೆಗೆ ನೀರನ್ನು ಹರಿಸುವ ಸಂಬಂಧ  ಸಚಿವರಾದ  ಡಾ. ಜಿ.ಪರಮೇಶ್ವರ್,  ಕೆ.ಎನ್.ರಾಜಣ್ಣಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ನೀರು ಬಿಡಲಾಗಿದೆ.  ನಗರದ ಜನತೆಯ ಪರವಾಗಿ  ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದರು.
ಬುಗುಡನಹಳ್ಳಿ ಕೆರೆ ಕಾಲುವೆ ಮರುನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ತಡವಾಯಿತು, ಇಲ್ಲದಿದ್ದಲ್ಲಿ ಇನ್ನು ತುರ್ತಾಗಿ ನೀರು ಹರಿಸಲಾಗುತ್ತಿತ್ತು.‌ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ ,  ನಗರಕ್ಕೆ ಹೇಮಾವತಿ ನೀರು ಬಂದಿದೆ ಹಾಗೂ ಈಗಾಗಲೇ ಮರಳೂರು ಕೆರೆ, ಗಂಗಸಂದ್ರ ಕೆರೆ, ಅಮಾನಿಕೆರೆಯಲ್ಲಿ ನೀರು ತುಂಬಿ ಸಿರುವ ಕಾರಣ ಕುಡಿಯುವ ನೀರಿಗೆ ಯಾವುದೇ ಭಂಗವಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣು ವರ್ಧನ, ಸದಸ್ಯರಾದ ಮಲ್ಲಿಕಾರ್ಜುನ್, ವೀಣಾ ಮನೋಹರಗೌಡ, ಶ್ರೀನಿವಾಸ್, ಮುಖಂಡರಾದ ಮಹೇಶ್ ಬಾಬು, ಪುಟ್ಟರಾಜು ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.