ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಬಿಜೆಪಿ ವಿಪಕ್ಷ ಸ್ಥಾನ ಅಲಂಕರಿಸಿದೆ. 16ನೇ ವಿಧಾನ ಸಭೆಯ ಮೊದಲ ಅಧಿವೇಶನವು ಬಿಜೆಪಿ ವಿರೋಧ ಪಕ್ಷದ ನಾಯಕರಿಲ್ಲದೇ ಆರಂಭ ವಾಗಿರುವುದು ವಿಶೇಷವಾಗಿದೆ. ಇದು ಮೂರು ದಶಕದ (30 ವರ್ಷ) ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದ ಅಧಿವೇಶನ ನಡೆಯುತ್ತಿದೆ.
ಆರಂಭದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕೇಳಿ ಬಂದಿತು.
ವಿರೋಧ ಪಕ್ಷದ ನಾಯಕರಷ್ಟೇ ಅಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೆಸರು ಅಂತಿಮಗೊಳ್ಳಬೇಕಿದೆ.