Saturday, 14th December 2024

ವಿ.ಸೆಂಥಿಲ್ ಬಾಲಾಜಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಚೆನ್ನೈ: ಬಂಧಿತ ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜು.26 ರವರೆಗೆ ವಿಸ್ತರಿಸಿ ನಗರದ ನ್ಯಾಯಾಲಯವು ಆದೇಶ ಹೊರಡಿಸಿದೆ.
ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ ಅರ್ಜಿಯ ಮೇರೆಗೆ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಅಲ್ಲಿ ಅವರು ಬಾಲಾಜಿಯ ಬಂಧನ ಅವಧಿಯನ್ನು ವಿಸ್ತರಿಸಿ ದ್ದಾರೆ.
ಉದ್ಯೋಗಕ್ಕಾಗಿ ಹಣ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಜೂನ್ 14 ರಂದು ತಮಿಳುನಾಡು ಸಚಿವರನ್ನು ಬಂಧಿಸಿತ್ತು. ಆದಾಗ್ಯೂ, ಇಡಿ ದಾಳಿಯ ಸಮಯದಲ್ಲಿ ಅವರು ಅಸ್ವಸ್ಥಗೊಂಡಿದ್ದರಿಂದ ಚೆನ್ನೈನ ಒಮಂದೂರಾರ್ ಆಸ್ಪತ್ರೆಗೆ ದಾಖಲಿಸಲಾಯಿತು.