Saturday, 23rd November 2024

ಕಡಿಮೆ ಮಾತಾಡಿದ್ರೆ- ಕೊರತೆ, ಜಾಸ್ತಿ ಮಾತಾಡಿದ್ರೆ- ಕೊರೆತ

ತುಂಟರಗಾಳಿ

ಸಿನಿಗನ್ನಡ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಹಿಟ್ ಆಗಿದೆ. ಸಹಜವಾಗಿಯೇ ಹೊಸಬರ ಸಿನಿಮಾ ಒಂದು ಅನಿರೀಕ್ಷಿತವಾಗಿ ಹಿಟ್ ಆದಾಗ ಬಹಳಷ್ಟು ಜನ ಹೊಗಳಿದರೂ ಕೆಲ ತೆಗಳುವವರೂ ಇರುತ್ತಾರೆ. ಅದಕ್ಕೆ ಕಾರಣಗಳೂ ವಿಚಿತ್ರ. ಹೊಸಬರ ಸಿನಿಮಾ ಹಿಟ್ ಆದಾಗ ತುಂಬಾ ಜನಕ್ಕೆ ಹೊಟ್ಟೆ ಉರಿ ಆಗುತ್ತೆ. ನಿನ್ನೆ ಏನೂ ಅಲ್ಲದವರಿಗೆ ಇವತ್ತು ಇಷ್ಟು ಬೆಲೆ ಸಿಕ್ತಾ ಇರೋದನ್ನ ನೋಡಿ ಇಂಥವರಿಗೆ ಸಹಿಸಿಕೊಳ್ಳೋಕೆ ಆಗಲ್ಲ. ಅಂಥವರು ಹೀಗೆ ಚೆನ್ನಾಗಿರೋ ಸಿನಿಮಾದ ಬಗ್ಗೆ ಇಲ್ಲ ಸಲ್ಲದ ಅಥವಾ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಆಡಿಕೊಳ್ಳೋದು ಕಾಮನ್. ಅದಕ್ಕೆ ಮದ್ದಿಲ್ಲ.

ಆದರೆ ಸಕ್ಸಸ್ ಅನ್ನು ತಡೆಯೋಕೆಯಾರಿಗೂ ಆಗಲ್ಲ. ಬರೀ, ಬಿಗ್ ಬಜೆಟ್ ಸಿನಿಮಾಗಳೇ ಗ್ರೇಟ್ ಅನ್ನೋ ಟೈಮಲ್ಲಿ ಇಂಥ ಸಿನಿಮಾಗಳು ನಿಜಕ್ಕೂ ಸ್ಪೆಷಲ್. ಚಿತ್ರ ತುಂಬಾ ಜನಕ್ಕೆ ಇಷ್ಟ ಆಗಿದೆ. ಎಲ್ಲ ಕಥೆಗಳಲ್ಲೂ, ಒಬ್ಬ ಮನುಷ್ಯ ಹುಟ್ಟಿದಾಗಿಂದ ಸಾಯೋವರೆಗಿನ ಕಥೆ ಇರಬೇಕಾಗಿಲ್ಲ. ಒಂದ್ ಸಣ್ ವಿಷ್ಯನೂ ಸಿನಿಮಾ
ಆಗಬಹುದು. ಈ ಸಿನಿಮಾದಲ್ಲಿ ಅದೇ ಆಗಿದೆ. ಕೊನೆಯಲ್ಲಿ ಸ್ವಲ್ಪ ಬೇಗ ಮುಗಿಸಬಹುದಿತ್ತು ಅಂತ ಅನ್ನಿಸಿದರೂ ನೋಡೋಕ್ ಕಷ್ಟ ಆಗೋದಿಲ್ಲ. ಕೆಲವರು ಹೇಳುವಂತೆ ಕೆಲವು ಹಳೇ ಡೈಲಾಗ್ಸ್ ಇದ್ರೂ ತುಂಬಾ ಕಡೆ ಫುಶ್ ಆಗಿದೆ. ಜೊತೆಗೆ ಬರೀ ಪಂಚ್ ಲೈನ್ ಅಷ್ಟೇ ಕಾಮಿಡಿ ಅಲ್ಲ.

ಕ್ಯಾಶುಯಲ್ ಮಾತಲ್ಲೂ ಕಾಮಿಡಿ ಕ್ರಿಯೇಟ್ ಮಾಡಿದ್ದಾರೆ. ಅಂದ್ರೆ ನಾವು ಇನ್ನೊಬ್ರಿಗೆ ಹೇಳಿದ್ರೆ ನಗು ಬರಲ್ಲ, ಆದ್ರೆ ನೋಡಿದಾಗ ನಗು ಬರುತ್ತೆ, ಅಂಥದ್ದು. ಆದರೆ, ಪ್ರತಿ ಸಲ ಹೊಸಬರು ಗೆದ್ದಾಗ ಅಸಮಾಧಾನಿಗಳು ಇದ್ದೇ ಇರ್ತಾರೆ. ೨೦೦೬-೦೭ ರಲ್ಲಿ ದುನಿಯಾ ವಿಜಯ್ ಅವರನ್ನು ನೋಡಿ, ಇವ್ನು ಹೀರೋನಾ ಅಂದ್ರು, ಮುಂಗಾರು ಮಳೆ ಗಣೇಶ್ ಅವರನ್ನು ನೋಡಿ ಗೂರ್ಖ ಅಂದ್ರು. ಆದ್ರೆ ಅವರೆ ಮೂರ್ಖರು ಅನ್ನೋದನ್ನು ಗಣೇಶ್ ಮತ್ತು ವಿಜಯ್ ನಿರೂಪಿಸಿ ಆಗಿದೆ. ಹಾಗೆಯೇ ಹಾಸ್ಟೆಲ್ ಹುಡುಗರ ಬಗ್ಗೆ ಬೇಕಂತಲೇ ಅಪಪ್ರಚಾರ ಮಾಡೋ ಮಂದಿ ಕೂಡಾ ಇದೇ ಸಾಲಿಗೆ ಸೇರುತ್ತಾರೆ.

ಲೂಸ್ ಟಾಕ್
ಡಿ.ಕೆ. ಶಿವಕುಮಾರ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ನಿಮ್ಮ ಸರಕಾರದಲ್ಲಿ ಬಸ್ ಕಂಡಕ್ಟರ್ ಟೋಪಿ ಹಾಕಿದ್ರೆ ತೆಗೆಸ್ತಾರೆ, ಬುರ್ಖಾ ಹಾಕಿಲ್ಲ ಅಂದ್ರೆ ಹುಡುಗಿಯರನ್ನ ಬಸ್ ಹತ್ತಿಸೊಲ್ಲ. ಏನಿದು
ಅವ್ಯವಸ್ಥೆ?
– ಏನ್ ಮಾಡೋದು, ನಮ್ ಜನ ಎಲ್ಲಾ ಬಿಟ್ಟು, ಬಟ್ಟೆ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸ್ಕೊಂಡಿದ್ದಾರೆ.

ಇದಕ್ಕೆ ಯಾರು ಕಾರಣ ಅಂತೀರಾ?
– ಬಿಜೆಪಿ ಶೈಲಿಯಲ್ಲಿ ಹೇಳೋದಾದ್ರೆ, ಇದಕ್ಕೆ ಹಿಂದಿನ ಸರಕಾರವೇ ಕಾರಣ. ಕಾಂಗ್ರೆಸ್ ನೋರು ಆ ಕಾಲದಲ್ಲಿ ರೋಟಿ, ಕಪ್ಡಾ, ಮಕಾನ್ ಅಂತ ಅಭಿವೃದ್ಧಿ
ಮಾತಾಡಿದ್ವಿ. ಆದ್ರೆ, ಈ ಬಿಜೆಪಿಯೋರು ಬರೀ ಕಪ್ಡಾಗೆ ಮಾತ್ರ ಬೆಲೆ ಕೊಟ್ಟಿದ್ದೇ ಇದಕ್ಕೆ ಕಾರಣ.

ಸರಿಹೋಯ್ತು. ಹೋಗ್ಲಿ, ಬಿಜೆಪಿಯ ಕಮಿಷನ್ ದಂಧೆ ನಿಮ್ಮ ಸರಕಾರದಲ್ಲೂ ಇದೆಯಂತೆ ಹೌದಾ?
– ಅಯ್ಯೋ, ಅದೆಲ್ಲ ಸುಳ್ಳು. ನಾವು ಕಾಂಗ್ರೆಸ್ ನೋರು, ‘ಕರಕುಶಲ ಕೈಗಾರಿಕೆ’ಗೆ ಮಾತ್ರ ಪ್ರೋತ್ಸಾಹ ಕೊಡ್ತೀವಿ. ‘ಶಾಸಕರ ಕರಕುಶಲ ಕೈಗಾರಿಕೆ’ಗೆ ಅಲ್ಲ.

ಆದ್ರೆ, ನಿಮ್ಮ ಸರಕಾರದಲ್ಲಿ ಕಮಿಷನ್ ಇಂತ ಹೆಂಗೆ ಪ್ರೂವ್ ಮಾಡ್ತೀರಾ?

– ಟಾಮ್ ಕ್ರೂಸ್‌ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿ ‘ಕಮಿಷನ್ ಇಂಪಾಸಿಬಲ್’ ಅಂತ ಅಭಿಯಾನ ಮಾಡ್ತೀವಿ.

ಮಾಡ್ತೀರ ಬಿಡಿ. ಸರಿ, ರಾಹುಲ್ ಗಾಂಧಿ ಥರ ಈಗ ಸಿದ್ರಾಮಯ್ಯನವರೂ ಮೋದಿ ವಿರುದ್ಧ ಮಾತಾಡಿದ್ದಾರೆ. ಸೋ, ಅವರನ್ನೂ ಅನರ್ಹ ಮಾಡಿದ್ರೆ ಮುಂದೆ ನೀವೇ ಸಿಎಂ ಅಲ್ವಾ?
– ಇದಕ್ಕೇ ಕಣ್ರೀ ಮೋದಿ ಅವರು ನಿಮ್ಮಂತ ಪತ್ರಕರ್ತರನ್ನ ಪ್ರಶ್ನೆ ಕೇಳೋದ್ರಿಂದ ಅನರ್ಹ ಮಾಡಿರೋದು.

ನೆಟ್ ಪಿಕ್ಸ್
ಮೂರು ಜನ ಹಿರಿಯ ನಾಗರಿಕರು ಕ್ಲೋಸ್ ಫ್ರೆಂಡ್ ಗಳಾಗಿದ್ರು. ಒಂದೇ ಊರಿನವರಲ್ಲದಿದ್ದರಿಂದ ಆಗಾಗ ಮಾತ್ರ ಸಿಗುವ ಅಭ್ಯಾಸ ಇತ್ತು. ಆದರೆ, ಸಿಕ್ಕಾಗ
ಮಾತಾಡೋಕೆ ಮಾತುಗಳಿಗೇನೂ ಬರ ಇರಲಿಲ್ಲ. ತಮ್ಮ ಹಳೆಯ ದಿನಗಳ ಬಗ್ಗೆ, ಜೀವನದಲ್ಲಿ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ತಾ ಇದ್ರು. ಒಂದು ದಿನ ಹೀಗೇ
ಮಾತಾಡುವಾಗ ಮಕ್ಕಳ ವಿಷಯ ಬಂತು. ಮೊದಲನೆಯ ಯಜಮಾನ್ರು ಹೇಳಿದ್ರು. ಅಯ್ಯೋ, ನನ್ನ ಮಗ ಬೆಂಗಳೂರಲ್ಲಿ ಎಂಜಿನಿಯರ್ ಆಗಿದ್ದಾನೆ. ಪ್ರತಿ ತಿಂಗಳೂ ನಂಗೆ ಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ, ಇಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಅಂತ ಒಂದ್ ಡೈಮಂಡ್ ನೆಕ್ಲೇಸ್ ಕೊಡ್ಸೋಕಾಗ್ತಿತ್ತಾ? ಅಂತ ಮಗನ ಬಗ್ಗೆ ಹೇಳಿಕೊಂಡರು. ಅದನ್ನು ಕೇಳಿ ಇನ್ನೊಬ್ಬ ಯಜಮಾನರಿಗೆ ಉತ್ಸಾಹ ಬಂತು. ಅಯ್ಯೋ, ನನ್ನ ಮಗನೂ ಬೆಂಗಳೂರಲ್ಲಿ ಇದ್ದಾನೆ.

ಚಾರ್ಟರ್ಡ್ ಅಕೌಂಟೆಂಟ. ಪ್ರತಿ ತಿಂಗಳೂ ನಂಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ, ಇಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಅಂತ ಒಂದ್ ಕಾರ್ ಕೊಡ್ಸೋಕಾಗ್ತಿತ್ತಾ? ಅಂತ ಹೇಳಿಕೊಂಡರು. ಮೂರನೇಯ ಯಜಮಾನ್ರು ಶುರು ಮಾಡಿದ್ರು ಅಯ್ಯೋ, ನನ್ ಮಗ ಬೆಂಗಳೂರಲ್ಲಿ ಡಾಕ್ಟರ್. ಪ್ರತಿ ತಿಂಗಳೂ ನಂಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ, ಇಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಅಂತ ಒಂದ್ -ಟ್ ಕೊಡ್ಸೋಕಾಗ್ತಿತ್ತಾ? ಅಂತ ಹೇಳಿ ಕೊಂಡರು. ಈಗ ಕೊನೆಯವರ ಸರದಿ, ಅವರೂ ಮೆಲ್ಲನೆ ಶುರು ಮಾಡಿಕೊಂಡ್ರು, ನನ್ ಮಗಳೂ ಬೆಂಗಳೂರ ಇದ್ದಾಳೆ. ಅವಳೂ ನಂಗೆ ಪ್ರತಿ ತಿಂಗಳೂ ದುಡ್ಡು ಕಳಿಸ್ತಾಳೆ. ಆದ್ರೆ ಏನ್ ಕೆಲ್ಸ ಮಾಡ್ತಾಳೆ ಅಂತ ಗೊತ್ತಿಲ್ಲ.

ಆದ್ರೂ ಚೆನ್ನಾಗೇ ದುಡಿತಾ ಇದ್ದಾಳೆ. ತುಂಬಾ ಬುದ್ಧಿವಂತೆ ಅನ್ಸುತ್ತೆ. ಇಂದ್ರೆ ಒಂದೇ ತಿಂಗಳಲ್ಲಿ ಅವಳಿಗೆ ಗಿಫ್ಟ್ ಅಂತ ಒಂದ್ ಕಾರು, ಒಂದ್ ಡೈಮಂಡ್ ನೆಕ್ಲೇಸ್, ಒಂದ್ -ಟ್ ಸಿಗ್ತಾ ಇತ್ತಾ?

ಲೈನ್ ಮ್ಯಾನ್
ಇದು ಒಂಡೇ ಮ್ಯಾಚು ಕಣೋ
– ಮೊನ್ನೆ ಮ್ಯಾಚಲ್ಲಿ ಲೋ ಆರ್ಡರ್ ಬ್ಯಾಟಿಂಗ್ ಬಂದ ರೋಹಿತ್ ಶರ್ಮಾದು ಗೆ ಅಪಿಯರೆ
– ಬ್ಯಾಟಿಂಗೇ ಆಡದ ವಿರಾಟ್ ಕೊಹ್ಲಿದು ಘೋ ಅಪಿಯರೆನ್ಸ್

ಹೆಣದ ಪಾತ್ರ ಮಾಡಿದವನ ಬಗ್ಗೆ ವಿಮರ್ಶೆ
– ಹೆಣದ ಪಾತ್ರಕ್ಕೆ ಜೀವ ತುಂಬಿದ್ದಾರೆ

ಫಿಲಾಸಫಿ
– ಹಳೇ ಸ್ನೇಹಿತ ನಿಮ್ಮನ್ನ ಅವಾಯ್ಡ ಮಾಡ್ತಾ ಇದ್ದಾನೆ ಅಂದ್ರೆ, ಅವನೇನೋ ದೊಡ್ಡ ಮನುಷ್ಯ ಆಗಿದ್ದಾನೆ, ತುಂಬಾ ದುಡ್ಡು ಮಾಡಿದ್ದಾನೆ ಅನ್ನೋದೇ ಕಾರಣ ಆಗಿರಲ್ಲ, ಕೆಲವರು ತಾವು ತುಂಬಾ ಕಷ್ಟದಲ್ಲಿದ್ದಾಗಲೂ ಸ್ನೇಹಿತರು, ಆತ್ಮೀಯರನ್ನ ಅವಾಯ್ಡ್ ಮಾಡ್ತಾರೆ.

ಗ್ಯಾಸ್ಟ್ರಿಕ್ ಪ್ಲಾಬ್ಲಮ್
– ಏನ್ ಪ್ರಾಬ್ಲಮ್ ಆದ್ರೂ ಅಸಿಡಿಟಿ ಪ್ರಾಬ್ಲಮ್ ಆಗ್ಬಾರ್ದು. ಆರೋಗ್ಯ ವಿಚಾರಿಸೋರು ‘ನಿಮ್ ಹೊಟ್ಟೆ ಉರಿ ಕಮ್ಮಿ ಆಯ್ತಾ?’ ಅಂತ ಕೇಳ್ತಾರೆ, ನಮ್
ಕ್ಯಾರೆಕ್ಟರ್ ಮೇಲೇ ಅನುಮಾನ ಬರೋ ಥರ.

ಬಿಜೆಪಿ ವಿರೋಧಿ ಟೀಮ್‌ನ Indian National Developmental Inclusive Alliance ಅನ್ನೋ ಹೆಸರು ನೋಡಿ ಅನ್ನಿಸಿದ್ದು
– ಇಷ್ಟು ‘ಕಾಂಪ್ಲಿಕೇಟೆಡ್’ ಹೆಸರಿಟ್ಟುಕೊಂಡ್ರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ‘ಸರಳ’ ಬಹುಮತ ಬರುತ್ತಾ?

ಕ್ರಿಕೆಟ್ ಪೊಲಿಟಿಕ್ಸ್
– ಲಂಚ ತಿನ್ನೋ ರಾಜಕಾರಣಿಗಳ ಬಾಯಿ, ವಿಕೆಟ್ ಹಿಂದೆ ನಿಂತಿರೋ ಕೀಪರ್ ಬಾಯಿ, ಎರಡೂ ಸುಮ್ನೆ ಇರಲ್ಲ.
ಕುಡುಕರ ಫಿಲಾಸಫಿ

– ಜೀವ್ನ ಬಿಯರ್ ಬಾಟಲ್ ಥರ ಡೆಲಿಕೇಟ, ಕುಡಿಯೋಕ್ ಮುಂಚೆ ಅಡಿಸ್ಬೇಡ.
– ಕುಡಿದ್ಮೇಲೆ ಅದೇ ಅಡಿಸುತ್ತೆ.

ಸಂಭಾಷಣಾ ತಜ್ಞ
– ಕಡಿಮೆ ಮಾತಾಡಿದ್ರೆ ಕೊರತೆ
– ಜಾಸ್ತಿ ಮಾತಾಡಿದ್ರೆ ಕೊರೆತ

ಮೋಡ ಬಿತ್ತನೆ ಮಾಡಿದರೆ ಮಳೆ ಬರುತ್ತದೆ ಅನ್ನೋದು
-‘ಮೋಡ’ ನಂಬಿಕೆ

ರೂಟ್ ಲೆವೆಲ್ ಪ್ರಾಬ್ಲಮ್
-ಬೇರು ಬಿಟ್ಟವರು ಅಂದ್ರೆ, ಬೇರನ್ನು ಬಿಟ್ಟು ಹೋದವರು ಅಂತ ಅರ್ಥನಾ?