ಸಿಡ್ನಿ (ಆಸ್ಟ್ರೇಲಿಯಾ): ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ಗೆ ಇನ್ನು ಕೇವಲ ಎರಡು ತಿಂಗಳು ಬಾಕಿ ಇದೆ. ಹೀಗಿರುವಾಗ ಕ್ರಿಕೆಟ್ ಆಸ್ಟ್ರೇಲಿಯಾ ವಿಶ್ವಕಪ್ಗೆ ತೆರಳುವ ತಂಡವನ್ನು ಈಗಾಗಲೇ ಪ್ರಕಟಿಸಿದೆ.
ಸದ್ಯ 18 ಜನ ಆಟಗಾರರ ತಂಡವನ್ನು ಮಾಡಿದ್ದು, ವಿಶ್ವಕಪ್ ವೇಳೆಗೆ ಇವರಲ್ಲಿ ಮೂವರನ್ನು ಕೈಬಿಟ್ಟು 15 ಜನರನ್ನು ಆಯ್ಕೆ ಮಾಡಿಕೊಳ್ಳಲಿದೆ. ರಚಿಸಿರುವ ತಂಡದಲ್ಲಿ ಕೆಲ ಅಚ್ಚರಿಯ ಆಯ್ಕೆಗಳೂ ನಡೆದಿದೆ.
ವಿಶ್ವಕಪ್ ತಂಡಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಸಪ್ಟೆಂಬರ್ 28ರ ಒಳಗೆ ಆಟಗಾರರನ್ನು ಅಂತಿಮಗೊಳಿಸ ಬೇಕು ಎಂದಿದೆ. 2023ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಅಕ್ಟೋಬರ್ 8 ರಂದು ಭಾರತದ ವಿರುದ್ಧ ಚೆನ್ನೈನ ಮೈದಾನದಲ್ಲಿ ಮೊದಲ ಪಂದ್ಯವನ್ನು ಆಡಲಿದೆ.
1987, 1999, 2003, 2007 ಮತ್ತು 2015 ರ ಹಿಂದಿನ ಯಶಸ್ಸಿನ ನಂತರ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿ ಪಡೆದುಕೊಳ್ಳಬಹುದು ಎಂದು ಬೈಲಿ ವಿಶ್ವಾಸದಲ್ಲಿದ್ದಾರೆ.
ಆಸ್ಟ್ರೇಲಿಯಾದ ಟಿ20 ತಂಡದ ಉತ್ತರಾಧಿಕಾರಿ ಮಿಚೆಲ್ ಮಾರ್ಷ್ ಅವರನ್ನು ನೇಮಕ ಮಾಡಲಾಗಿದೆ. 2021 ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಪಿಂಚ್, 2022ರ ಟಿ20 ವಿಶ್ವಕಪ್ ನಂತರ ನಿವೃತ್ತಿ ಘೋಷಿಸಿದ್ದರು.
ಆಸ್ಟ್ರೇಲಿಯಾದ ಏಕದಿನ ವಿಶ್ವಕಪ್ ತಂಡ : ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಸ್ಟೀವ್ ಸಂಘ , ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.
ದಕ್ಷಿಣ ಆಫ್ರಿಕಾ ಪ್ರವಾಸದ ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆಂಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ.