Saturday, 14th December 2024

ನರ್ಸುಗಳ ಮೇಲೆ ಅವಹೇಳನಕಾರಿಯಾಗಿ ರೀಲ್ಸ್: 11 ವಿದ್ಯಾರ್ಥಿಗಳ ಅಮಾನತು

ಹುಬ್ಬಳ್ಳಿ: ನರ್ಸುಗಳ  ಮೇಲೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ವೈದ್ಯಕೀಯ ಸಂಸ್ಥೆಯ 11 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಆವರಣದಲ್ಲಿ ಈ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಆರೋಪಿ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಿ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ. ನರ್ಸುಗಳನ್ನು ಕೆಟ್ಟದಾಗಿ ಮತ್ತು ಅವಮಾನಕರ ರೀತಿಯಲ್ಲಿ ಚಿತ್ರಿಸುವ ರೀಲ್ಗಳನ್ನು ಅವರ ಅನುಮತಿಯಿಲ್ಲದೆ ಮಾಡಲಾಗಿದೆ.

ಜನಪ್ರಿಯ ಕನ್ನಡ ಚಲನಚಿತ್ರ ಹಾಡಿನ ಸಂಗೀತವನ್ನು ಸೇರಿಸಿ ಈ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮ ದಲ್ಲಿ ಹಂಚಿಕೊಳ್ಳಲಾಗಿದೆ. ಹುಡುಗಿಯರನ್ನು ನಂಬಬಾರದು, ನರ್ಸ್ಗಳನ್ನು ನಂಬಬಾರದು ಎಂಬ ಸಾಲುಗಳಿದ್ದು ಈ ಹಾಡಿಗೆ ಹುಡುಗರೂ ನೃತ್ಯ ಸಹ ಮಾಡಿದರು.