ಗುಬ್ಬಿ : ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ ಹಾಗೂ ಕರ್ನಾಟಕದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ತನಿಕೆ ನಡೆಸುವಂತೆ ಡಿ ಎಸ್ ಎಸ್ ತಾಲೂಕು ಶಾಖೆ ವತಿಯಿಂದ ಪ್ರತಿಭಟನೆ ನಡೆಸಿದರು .
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ಯವರಿಗೆ ವಾದ್ಯಗೋಷ್ಠಿಯೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಾ ತಾಲೂಕು ಕಚೇರಿಯ ಮುಂಬಾಗ ತಲುಪಿದರು.ದಲಿತ್ ಗಂಗಣ್ಣನವರು ಕ್ರಾಂತಿ ಗೀತೆ ಹಾಡುವ ಮೂಲಕ ಪ್ರತಿಭಟನಾಕಾರರನ್ನು ಹುರಿದುಂಬಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಇಡೀ ದೇಶವೇ ತಲೆತಗ್ಗಿಸುವ ವಿಚಾರವಾಗಿದೆ.ಮಣಿಪುರದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆಗೆ ನೀಡಬೇಕು ಹಾಗೂ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ಪರಿಶೀಲನೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ ಜಗನ್ನಾಥ್ ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿರುವುದು ಸರ್ವರು ಸಮಾನತೆ ಸಹಬಾಳ್ವೆಯಿಂದ ಜೀವನ ನಡೆಸಲು.ಬಿಜೆಪಿ ಸರ್ಕಾರ ದಲಿತರ ಸವಲತ್ತುಗಳನ್ನು ಕಸಿಯುತ್ತಿದ್ದು ದಲಿತ ಸಮುದಾಯ ಎಚ್ಚೆತ್ತುಕೊಂಡು ಜಾಗರೂಕರಾಗಿ ಸಂಘಟನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ದ ಸಂ ಸ ವಿಭಾಗಿಯ ಸಂಚಾಲಕ ಎನ್ ಎ ನಾಗರಾಜ್ ಮಾತನಾಡಿ ತಾಲೂಕಿನಲ್ಲಿ ದಲಿತರ ಸಮಸ್ಯೆಗಳು ಸರಮಾಲೆಯಂತಿದ್ದು ಅಧಿಕಾರಿಗಳು ದಲಿತರ ಬೇಡಿಕೆಗೆ ಸ್ಪಂದಿಸಬೇಕಾಗಿದೆ.
ನಿಟ್ಟೂರು ಹೋಬಳಿಯ ಕರಡಿ ಕಲ್ಲು ಗ್ರಾಮದ ಮುನಿಯಪ್ಪನವರು ಸುಮಾರು 50 ವರ್ಷಗಳಿಂದ ಜಮೀನನ್ನು ಉಳುಮೆ ಮಾಡುತ್ತಿದ್ದು ಉನ್ನತ ಜಾತಿಯವರು ಅದನ್ನು ಕಸಿದುಕೊಳ್ಳುವ ಉನ್ನಾರ ಮಾಡುತ್ತಿದ್ದಾರೆ. ಸುಮಾರು ವರ್ಷದಿಂದ ದಲಿತ ಮುಖಂಡರು ಜನಪರವಾಗಿ ಹೋರಾಟ ನಡೆಸುತ್ತಿದ್ದು ಅವರಿಗೆ ವಸತಿ ಕಲ್ಪಿಸಿಕೊಡಬೇಕು. ತಾಲೂಕಿನಲ್ಲಿ ಸ್ಮಶಾಣಕ್ಕೆ ನೀಡಿದ ಜಾಗದಲ್ಲಿ ಉಳ್ಳವರು ತೆಂಗಿನ ಸಸಿ ಅಡಿಕೆ ಸಸಿ ನೆಟ್ಟು ಜಾಗ ಕಬಳಿಸುವ ಕೆಲಸ ಮಾಡುತ್ತಿದ್ದಾರೆ. ದಲಿತರಿಗೆ ಸ್ಮಶಾನ ನೀಡುವ ಕೆಲಸ ಮಾಡಬೇಕು. ಜಿ ಹರಿವೆಸಂದ್ರ ಗ್ರಾಮದಲ್ಲಿ ದಲಿತ ಕಾಲೋನಿಯ ಪಕ್ಕ ಇಟ್ಟಿಗೆ ಫ್ಯಾಕ್ಟ್ರಿಯನ್ನು ತೆರೆವುಗೊಳಿಸಬೇಕು.
ಎಂ ಎನ್ ಕೋಟೆ ಗ್ರಾಮದ ಕೋಟೆ ಗುಡ್ಡಕ್ಕೆ ಹೋಗುವ ದಾರಿ ಒತ್ತುವರಿ ತೆರವುಗೊಳಿಸಬೇಕೆಂದು. ದಲಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಲಿತ ಸಂಘಟನೆ ಮುಖಂಡರು ತಹಶೀಲ್ದಾರ್ ಬಿ ಆರತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಹಿರಿಯ ಹೋರಾಟಗಾರ ಮಾರನಹಳ್ಳಿ ಶಿವಣ್ಣ, ಉಸ್ತುವಾರಿ ಸಂಚಾಲಕರಾದ ಅದಲಗೆರೆ ಈಶ್ವರಯ್ಯ,ಜಿ ಹರಿವೇಸಂದ್ರ ಕೃಷ್ಣಪ್ಪ , ಸಂಘಟನಾ ಸಂಚಾಲಕರಾದ ಕಡಬ ಶಂಕರ್,ಕಿಟ್ಟದಗುಪ್ಪೆ ನಾಗರಾಜ್, ಸಿ ಎಸ್ ಪುರ ಬೆಟ್ಟಸ್ವಾಮಿ, ಕುಂದರನಹಳ್ಳಿ ನಟರಾಜ್, ಎನ್ ಎ ನಾಗರಾಜ್, ನಾಗಭೂಷಣ್, ಕೋಟೆ ಕಲ್ಲೇಶ್,ಕಲ್ಲೂರ್ ರವಿಕುಮಾರ್, ನರಸಿಂಹಮೂರ್ತಿ, ಶಿವಸ್ವಾಮಿ ರವಿ ಕುಮಾರ್, ದೊಡ್ಡಯ್ಯ , ರಮೇಶ್, ತೊಗರಿ ಘಟ್ಟ ರಂಗಸ್ವಾಮಿ, ಮಾದಲಾಪುರ ಲೋಕೇಶ್, ಮಾದಣ್ಣ ಇತರರು ಹಾಜರಿದ್ದರು.