Saturday, 14th December 2024

ಈಕ್ವೆಡಾರ್‌ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ʻಫರ್ನಾಂಡೊ ವಿಲ್ಲಾವಿಸೆನ್ಸಿಯೊ ಹತ್ಯೆ

ಈಕ್ವೆಡಾರ್‌ನ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ʻಫರ್ನಾಂಡೊ ವಿಲ್ಲಾವಿಸೆನ್ಸಿಯೊ(Fernando Villavicencio)ʼವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಉತ್ತರದ ನಗರವಾದ ಕ್ವಿಟೊದಲ್ಲಿ ನಡೆದ ಕಾರ್ಯಕ್ರಮದ ವೇಳೆ ದೇಶದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಫರ್ನಾಂಡೊ ವಿಲ್ಲಾವಿಸೆನ್ಸಿಯೊ ಮೇಲೆ ದಾಳಿ ನಡೆಸಲಾಯಿತು.

ಅವರ ಪ್ರಚಾರ ತಂಡದ ಸದಸ್ಯರೊಬ್ಬರು ಮಾತನಾಡಿ, ವಿಲ್ಲಾವಿಸೆನ್ಸಿಯೊ ಕಾರಿಗೆ ಬರಲು ಹೊರಟಿದ್ದಾಗ ಒಬ್ಬ ವ್ಯಕ್ತಿ ಮುಂದೆ ಬಂದು ಅವರ ತಲೆಗೆ ಗುಂಡು ಹಾರಿಸಿದನು ಎಂದು ಹೇಳಿದ್ದಾರೆ.

ಸಾವನ್ನು ಪ್ರಸ್ತುತ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದಾರೆ. ಈಕ್ವೆಡಾರ್‌ನ ಅಧ್ಯಕ್ಷೀಯ ಚುನಾವಣೆ ಆಗಸ್ಟ್ 20 ರಂದು ನಡೆಯಲಿದೆ.