ಇಂಡಿ: ಜಿಲ್ಲಾ ಪಂಚಾಯತ ಇಂಜನಿಯರಿ0ಗ್ ವಿಭಾಗ ಇಂಡಿ ಸರ್.ಎಂ.ವಿಶ್ವೇಶ್ವರಯ್ಯನವರ ಜಯಂತ್ತೋತ್ಸವ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಈ ಸಂಧರ್ಬದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್ ರುದ್ರವಾಡಿ ಮಾತನಾಡಿ ಸರ್ ಎಂ ವಿಶ್ವೇಶ್ವರಯ್ಯನವರು ಪ್ರಖ್ಯಾತ ಇಂಜಿಯರ್ ಮತ್ತು ರಾಜನೀತಿ ತಜ್ಞರಾಗಿದ್ದರು. ಇವರನ್ನು ಆಧುನಿಕ ಭಾರತದ ವಾಸ್ತುಶಿಲ್ಪಿ ಎಂದರೆ ತಪ್ಪಾಗುವುದಿಲ್ಲ. ಕೃಷ್ಣಾ ರಾಜ ಸಾಗರ ಆಣೆಕಟ್ಟಿನ ವಾಸ್ತುಶಿಲ್ಪಿ ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯಲು ಉಕ್ಕಿನ ಬಾಗಿಲುಗಳನ್ನು ರೂಪಿಸಿದರು.
ಸರ್.ಎಂ, ವಿಶ್ವೇಶ್ವರಯ್ಯನವರು ೧೮೮೩ರ ಎಲ್.ಸಿ.ಇ ಮತ್ತು ಎಫ್.ಸಿ.ಇ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅವರು ತಮ್ಮ ಸಾಮರ್ಥ್ಯ ತೋರಿಸಿದರು. ವಿಶ್ವೇಶ್ವರಯ್ಯನವರು ದೇಶದ ನೀರಾವರಿ ಕ್ಷೇತ್ರದ ದಿಗ್ಗಜ್ಜರು ದಖ:ನ್ ಪ್ರಸ್ಥ ಭೂಮಿಯಲ್ಲಿ ನೀರಾವರಿ ಕ್ರಾಂತಿಗೆ ಕಾರಣಿಕರ್ತರಾಗಿದ್ದಾರೆ, ಇಂತಹ ಅಪ್ರತಿಮ ಕನ್ನಡಿಗ ಜಯಂತಿ ಮಾಡುತ್ತಿರು ವುದು ನಮ್ಮೇಲ್ಲರ ಸೌಭಾಗ್ಯ ಇವರ ಆದರ್ಶಗಳೇ ನಮಗೇಲ್ಲಾ ಪ್ರೇರಣೆಯಾಗಲಿ ಎಂದರು.
ಎಸ್.ಆರ್.ರುದ್ರವಾಡಿ, ಎಲ್ಟಿ ರಾಠೋಡ, ಐ.ಬಿ ಚೌಹಾಣ, ಎಸ್.ಬಿ ಬಾನಿ, ಶಶೀಧರ, ಮೇಡೆದಾರ , ಅಖೀಲ ಹವಾಲ್ದಾರ, ಮಲಕಪ್ಪಹೊಸಮನಿ, ಪಿ.ಎಸ್ ಹಳ್ಳಿ, ರಾಜು ವಾಲಿ,ಸಿದ್ದರಾಮಪ್ಪ ಪಾಟೀಲ, ಎಸ್,.ಎನ್ ಶೇಖ, ವ್ಹಿ,ಎಸ್ ನಿವರಗಿ, ಶಿವಾನಂದ ಬ್ಯಾಗೇಳ್ಳಿ,ಪರಶುರಾಮ ದಶವಂತ, ಶರಣು ನಾಟೀಕಾರ, ಪ್ರಜ್ವಲ ಕೊಷ್ಠೇ , ರಾಮನಗೌಡ ಬಿರಾದಾರ, ಸೇರಿದಂತೆ ಅನೇಕ ಸಿಬ್ಬಂದಿ ಉಪಸ್ಥಿತರಿದ್ದರು.