ಇದೇ ಅಂತರಂಗ ಸುದ್ದಿ
vbhat@me.com
ಇಂದಿನ ದಿನಗಳಲ್ಲಿ, ನೀವು ಕೆಲವು ರಾಜಕಾರಣಿಗಳ ಜತೆ ವ್ಯವಹರಿಸುವಾಗ ವಾರ್ ರೂಮ್ ಎಂಬ ಪದವನ್ನು ಪದೇ ಪದೆ ಕೇಳುತ್ತೀರಿ. ಈಗ ಈ ಪದವನ್ನು ಎಲ್ಲ ರಾಜಕಾರಣಿಗಳೂ ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅದರಲ್ಲೂ ಚುನಾವಣಾ ಸಮಯದಲ್ಲಿ ಎಲ್ಲ ಪಕ್ಷ ಗಳ ರಾಜಕಾರಣಿಗಳೂ ವಾರ್ ರೂಮ್ ಪದವನ್ನು ಬಳಕೆ ಮಾಡುವುದು ಸಾಮಾನ್ಯವಾಗಿದೆ.
ಬೆಳಗಿನ ಜಾವ ಒಂದೂವರೇ-ಎರಡು ಗಂಟೆ. ಒಬ್ಬ ಯುವಕ ಕಂಪ್ಯೂಟರ್ ಸ್ಕ್ರೀನ್ ನೋಡುತ್ತಿರುತ್ತಾನೆ. ಇನ್ನೊಬ್ಬ ‘ಎಲ್ಲರಿಗೂ ಕಾಫಿ ಕೊಡ್ರೋ’ ಎಂದು ಆದೇಶಿಸುತ್ತಾನೆ. ಇನ್ನೊಬ್ಬ ಯುವಕ ವಿಪಕ್ಷದ ಅಭ್ಯರ್ಥಿ ಮಾಡಿದ್ದ ಭಾಷಣದ ಪ್ರತಿಯನ್ನು ತೆಗೆದುಕೊಳ್ಳುತ್ತಿದ್ದಾನೆ. ಇನ್ನೊಬ್ಬ ಟ್ವಿಟರ್‌ನಲ್ಲಿ ವಿಪಕ್ಷದ ಸಮರ್ಥಕರು
ಏನು ಪೋ ಹಾಕಿzರೆಂದು ಗಮನಿಸುತ್ತಿರುತ್ತಾನೆ. ಮತ್ತೊಬ್ಬ ವಿಪಕ್ಷದ ನಾಯಕನ ಹೇಳಿಕೆ ಸುಳ್ಳು ಎಂಬುದಕ್ಕೆ ಕಾರಣಗಳನ್ನು ನೋಟ್ ಮಾಡುತ್ತಿರುತ್ತಾನೆ. ಇನ್ನೊಬ್ಬ ವಿಪಕ್ಷ ನಾಯಕನನ್ನು ಅಡ ಕತ್ತರಿಯಲ್ಲಿ ಸಿಕ್ಕಿಸಲು, ಆತನ ಹೇಳಿಕೆಯ ವೈರುಧ್ಯವನ್ನು ಹುಡುಕುತ್ತಿರುತ್ತಾನೆ. ವಿಪಕ್ಷದ ರೇಟಿಂಗ್ ಕಡಿಮೆ ಮಾಡುವುದು
ಹೇಗೆ ಎಂಬುದರ ಕುರಿತಾಗಿ ಮಗದೊಬ್ಬ ಆಲೋಚನೆಯಲ್ಲಿ ತೊಡಗಿರುತ್ತಾನೆ.
ಹುಡುಗ ಕಾಫೀ ಹಂಚುತ್ತಿದ್ದಾನೆ. ಅಷ್ಟರಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಬರುತ್ತಾನೆ. ಎಲ್ಲರೂ ಸೇರಿಕೊಂಡು ಆ ದಿನ ಮಾಡಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸುತ್ತಾರೆ. ಯಾರು ಯಾವ ವಿಭಾಗವನ್ನು ಕವರ್ ಮಾಡುವುದೆಂದು ಅವರ ತೀರ್ಮಾನ ಮಾಡಿಕೊಳ್ಳುತ್ತಾರೆ. ಗ್ರೌಂಡ್ ಸರ್ವೆಗೆ ಹೋಗುವವರು ಯಾರು, ಸಂಶೋಧನೆ ಯಾರ ಕೆಲಸ, ಯುವಕರನ್ನು ಸೆಳೆಯುವ ತಂತ್ರಗಾರಿಕೆ ರೂಪಿಸುವವರು ಯಾರು, ಡಿಜಿಟಲ್ ಸಂವಾದಕ್ಕೆ ತಯಾರಿ ಯಾರದ್ದು, ಟ್ರೋಲ್ ಮಾಡುವ ಕೆಲಸ ಯಾರದ್ದು ಹೀಗೆ ಎಲ್ಲವನ್ನೂ ನಿಗದಿಪಡಿಸುತ್ತಾರೆ. ಎಲ್ಲರೂ ಬೆಳಗಿನ ಜಾವ ಮೂರಕ್ಕೆ ಮಲಗುತ್ತಾರೆ. ಅಷ್ಟರಲ್ಲಿ ಎರಡನೇ ಟೀಮ್ ಬಂದು ಮತ್ತೊಂದು ಆವೃತ್ತಿಯಲ್ಲಿ ಕೆಲಸ ಶುರು ಮಾಡುತ್ತದೆ.
ಲೋಕಸಭೆ-ವಿಧಾನಸಭೆಗಳಿಗೆ ಸ್ಪರ್ಧಿಸುವವರು ಇಂಥ ತಂಡ ಕಟ್ಟಿಕೊಂಡಿರುತ್ತಾರೆ. ಅದಕ್ಕೆ ತಕ್ಕುದಾದ ಕೌಶಲ ಇರುವವರನ್ನು ಆರಿಸಿ ನೇಮಿಸಿ ಕೊಂಡಿರು ತ್ತಾರೆ. ಚುನಾವಣಾ ತಂತ್ರಗಳನ್ನು ನಿರ್ಧರಿಸುತ್ತಾರೆ. ಭಾಷಣಗಳನ್ನು ಸಿದ್ಧ ಪಡಿಸುತ್ತಾರೆ. ಯಾರೂ ನಾನು ಮನೆಗೆ ಹೋಗಿ ಬರಲೇನು ಎಂದು ಕೇಳುವುದಿಲ್ಲ. ಒಂದು ರಾಜ್ಯದ ಚುನಾವಣೆ ಮುಗಿಯುತ್ತಿದ್ದಂತೆ, ಸರ್ಕಸ್ ಕಂಪನಿ ಒಂದೂರಿಂದ ಮತ್ತೊಂದು ಊರಿಗೆ ಹೋಗುವಂತೆ, ಚುನಾವಣೆ ನಿರೀಕ್ಷೆ ಯಲ್ಲಿರುವ ಮತ್ತೊಂದು ರಾಜ್ಯಕ್ಕೆ ಹೊರಡುತ್ತಾರೆ. ಇಂಥ ವಾರ್ ರೂಮುಗಳಲ್ಲಿ ಕೆಲಸ ಮಾಡುವವರಿಗೆ ಕೈತುಂಬಾ ಹಣ. ಏನಿಲ್ಲವೆಂದರೂ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಸಂಬಳ. ಮೂರರಿಂದ ಆರು ತಿಂಗಳ ಅವಽಗೆ ಇಂಥ ನೌಕರಿ ಮಾಡಿ ದರಾಯಿತು. ಮುಂದಿನ ಸ್ಟಾಪ್ ಬೇರೆ ರಾಜ್ಯ. ಹತ್ತಾರು ರಾಜ್ಯಗಳ ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆ, ಲೋಕಸಭಾ ಚುನಾವಣೆಗೆ ಸಿದ್ಧತೆ ಶುರು. ಸಮೂಹವನ್ನು ಆಕರ್ಷಿಸುವುದು ಹೇಗೆ, ವಿಪಕ್ಷದವರನ್ನು ಮಣಿಸುವುದು ಹೇಗೆ, ಮುಜುಗರಕ್ಕೆ ಈಡು ಮಾಡುವುದು ಹೇಗೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದು ಹೇಗೆ, ಅದನ್ನು ನಿಭಾಯಿಸುವುದು ಹೇಗೆ.. ಹೀಗೆ ತಂತ್ರಗಾರಿಕೆ ಮಾಡುವ ವರು ಇಲ್ಲಿ ಗೆಲ್ಲುತ್ತಾರೆ.
ನೀವು ವಾರ್ ರೂಮಿನಲ್ಲಿ ಒಬ್ಬ ಸಾಮಾನ್ಯ ಹೆಲ್ಪ ಬಾಯ್ ಆಗಿ ಒಳಹೊಕ್ಕರೂ ಸಾಕು, ನಿಮ್ಮ ತಿಳಿವಳಿಕೆಯ ಮಟ್ಟ ಹೆಚ್ಚುತ್ತದೆ, ಮೊದಲಿನಂತೆ ಇರುವುದಿಲ್ಲ. ನಂತರ ನೀವು ಯಾವುದೇ ಮಾರ್ಕೆಟಿಂಗ್ ಕೆಲಸವನ್ನೂ ಮಾಡಬಹುದು. ಇದೊಂದು ಚಿಮ್ಮುಹಲಗೆ. ಕನ್ನಡ ಪತ್ರಿಕೋದ್ಯದಮದಲ್ಲಿದ್ದ ನೂರಾರು ಹುಡುಗರು ನ್ಯೂಸ್ ರೂಮ್ ಬಿಟ್ಟು ಈ ವಾರ್ ರೂಮ್ ಸೇರಿಬಿಟ್ಟಿzರೆ. ಒಬ್ಬೊಬ್ಬ ಪತ್ರಕರ್ತ ಮೂರ್ನಾಲ್ಕು ರಾಜಕಾರಣಿಗಳ ಸೋಶಿಯಲ್ ಮೀಡಿಯಾ ನಿರ್ವಹಿಸುತ್ತಿzನೆ. ಆತನಿಗೆ ದಿನವಿಡೀ ತನ್ನ ಧಣಿಯ ವಿರೋಧಿಗಳನ್ನು ಹಣಿಯುವುದು. ಆತನ ವಿರುದ್ಧ ಕಾಮೆಂಟ್ಸ್ ಹಾಕುವುದು, ಆ ಕಾಮೆಂಟುಗಳನ್ನು ಬೆಂಬಲಿಸಿ ಮತ್ತಷ್ಟು ಕಾಮೆಂಟುಗಳನ್ನು ಬರೆಯುವುದು, ತಮ್ಮ ಪರವಾದ ಪೋಸ್ಟು, ಟ್ವೀಟ್‌ಗಳಿಗೆ ಲೈP ಕೊಡುವುದು, ರಿಟ್ವೀಟ್ ಮಾಡುವುದು ಇದೇ ಕೆಲಸ. ಒಬ್ಬ ಕನಿಷ್ಠ ನೂರಾರು ಫೇಕ್ ಅಕೌಂಟುಗಳ ವಾರಸುದಾರ.
ಒಬ್ಬೊಬ್ಬರ ಮುಂದೆ ಹತ್ತಾರು ಮೊಬೈಲ್, ಎರಡು-ಮೂರು ಕಂಪ್ಯೂಟರುಗಳು, ಲ್ಯಾಪ್ ಟಾಪ್, ಟ್ಯಾಬ್ಸ್, ಐಪ್ಯಾಡ್ ಬಿದ್ದಿರು ತ್ತವೆ. ಸೋಶಿಯಲ್ ಮೀಡಿಯಾ ಎಂಬ ಬಿಸಿಲ್ಗುದುರೆ ಎಲ್ಲ ರಾಜಕಾರಣಿಗಳನ್ನು ಹುಚ್ಚಾಪಟ್ಟೆ ಓಡಿಸುತ್ತಿದೆ. ಲೈಕ್, ಕಾಮೆಂಟ್ಸ್, ವ್ಯೂಸ್, ವೈರಲ್ ಕ್ರೇಜು ತಲೆಗೆ ಹತ್ತಿಬಿಟ್ಟಿದೆ. ಒಂದು ಟ್ವೀಟ್
ಮಾಡಿ ಸುಮ್ಮನಾಗುವಂತಿಲ್ಲ. ಹಾಗೆ ನೋಡಿದರೆ ಅಲ್ಲಿಂದ ಕೆಲಸ ಶುರುವಾಗುತ್ತದೆ. ಒಂದು ಟ್ವೀಟ್ ಮಾಡಿ ಅದರ ಲಿಂಕ್‌ನ್ನು ವಾಟ್ಸಾಪ್‌ಗಳಲ್ಲಿ ಹರಿಬಿಡುತ್ತಾರೆ. ಕೆಲವರ ಬಳಿ ತಮ್ಮ ಕ್ಷೇತ್ರದ ಎಲ್ಲ ಮತದಾರರ ಮೊಬೈಲ್ ಡಾಟಾ ಬೇಸ್‌ಗಳಿವೆ. ಅವರಿಗೆ ದಿನವೂ ಮೂರ್ನಾಲ್ಕು ಸಂದೇಶಗಳು ಹೋಗುತ್ತವೆ. ತಮ್ಮ
ಸೋಶಿಯಲ್ ಮೀಡಿಯಾ ಟೀಮಿನಲ್ಲಿ ಮೂವತ್ತು-ನಲವತ್ತು ಜನರನ್ನು ಇಟ್ಟು ಕೊಂಡಿರುವವರೂ ಇದ್ದಾರೆ.
ಪೊಲೀಸ್ ಕಂಟ್ರೋಲ್ ರೂಮ್ ಮಾದರಿಯಲ್ಲಿ ಇಲ್ಲಿ ಕೆಲಸ ನಡೆಯುತ್ತಿರುತ್ತವೆ. ಒಬ್ಬರಿಗೊಬ್ಬರು ಮಾತಾಡುವಷ್ಟು ಪುರುಸೊತ್ತಿಲ್ಲ. ಅಕ್ಷರಶಃ ಅವರು ಯುದ್ಧನಿರತ. ಉದಾಹರಣೆಗೆ, ನಾನು ಸಿದ್ದರಾಮಯ್ಯ ಅವರ ಪರವಾಗಿ ಒಂದು ಟ್ವೀಟ್ ಮಾಡಿದೆ ಅಂತ ಇಟ್ಟುಕೊಳ್ಳಿ. ತಕ್ಷಣ ಬಿಜೆಪಿ ರಾಜಕಾರಣಿಗಳ ಅಥವಾ ಸಿದ್ದರಾಮಯ್ಯ ವಿರೋಽಗಳ ಸೋಷಿಯಲ್ ಮೀಡಿಯಾ ಟೀಮ್ ಜಾಗೃತವಾಗುತ್ತದೆ. ನನ್ನ ವಿರುದ್ಧ ಏಕಾಏಕಿ ಎಲ್ಲರೂ ಮುಗಿಬೀಳುತ್ತಾರೆ. ‘ಲೋ ಭಟ್ಟಾ, ನೀನು ಸಿದ್ದ ರಾಮಯ್ಯನಿಂದ ಎಷ್ಟು ಲಂಚ ತೆಗೆದುಕೊಂಡಿದ್ದೀಯಾ? ನೀನು ಬಿಜೆಪಿ ಬಕೆಟ್ ಆಗಿದ್ದವನು ಯಾವಾಗ ಕಾಂಗ್ರೆಸ್ಸಿನಿಂದ ಸುಪಾರಿ ತೆಗೆದುಕೊಂಡೆ?’ ಎಂದು ಶುರು ಹಚ್ಚಿಕೊಳ್ಳುತ್ತಾನೆ.
ಅವನೇ ಬೇರೆ ಬೇರೆ ಅಕೌಂಟುಗಳಲ್ಲಿ ಬಂದು ನನ್ನ ಮೇಲೆ ಅಸಹ್ಯ ಪದಗಳಲ್ಲಿ ದಾಳಿ ಮಾಡುತ್ತಾನೆ. ಅವರು ಬಳಸುವ ಭಾಷೆ ಅದೆಷ್ಟು ಕೆಟ್ಟದಾಗಿರುತ್ತದೆ ಅಂದರೆ, ನನ್ನ ಅಭಿಮಾನಿಗಳಿಗೆ ನನ್ನನು ಬೆಂಬಲಿಸಿ, ಕೌಂಟರ್ ಮಾಡಲು ಸಹ ಮನಸ್ಸು ಬರುವುದಿಲ್ಲ. ಒಬ್ಬನೇ ಕನಿಷ್ಠ ಇಪ್ಪತ್ತು ಹೆಸರುಗಳಲ್ಲಿ ಬಂದು ಪರಚಿ ಹೋಗಿಬಿಡುತ್ತಾನೆ. ಈತ ತನ್ನ ಪಕ್ಕದಲ್ಲಿರುವವರನ್ನು ತಿವಿಯುತ್ತಾನೆ. ಅವರೂ ದಾಳಿ ಮುಂದುವರಿಸುತ್ತಾರೆ. ಇನ್ನು ನಾನು ಯಾರನ್ನಾದರೂ ಟೀಕಿಸಿ ಟ್ವೀಟ್ ಮಾಡಿದರೆ, ಅವರ ಪರವಾಗಿರುವವರು ಯುದ್ಧಕ್ಕೆ ಸಿದ್ಧವಾಗಿರುತ್ತಾರೆ. ಈ ಸೋಷಿಯಲ್ ಮೀಡಿಯಾ ಟೀಮಿನಲ್ಲಿರುವವರು ಆ ದಿನದ ಕೊನೆಯಲ್ಲಿ, ತಾವು ಎಷ್ಟು ಮಂದಿಯನ್ನು ಟ್ರೋಲ್ ಮಾಡಿದೆವು, ಎಷ್ಟು ಜನರ ಮೇಲೆ ದಾಳಿ ಮಾಡಿದೆವು, ಕೆಟ್ಟ ಕಾಮೆಂಟು ಬರೆದೆವು, ಎಷ್ಟು ಲೈಕ್ಸ್ ಬಂತು… ಅಂತ ರಾಜಕಾರಣಿಗಳಿಗೆ ಲೆಕ್ಕ ಕೊಡುತ್ತಾರೆ. ಇದು ಆ ದಿನದ ರಿಪೋರ್ಟ್ ಕಾರ್ಡ್. ಈ ದಾಳಿಗೆ ವಿರೋಧ ಪಕ್ಷದವರೇ ಆಗಬೇಕೆಂದಿಲ್ಲ. ತಮ್ಮ ಪಕ್ಷದಲ್ಲಿರುವ ವಿರೋಧಿಯೂ ಆಗಬಹುದು. ನಿಮ್ಮ ಪಕ್ಷದಲ್ಲಿ ನಿಮ್ಮ ಪಕ್ಕದಲ್ಲಿರುವವನೇ, ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಮಾನ ಹರಾಜಿಗೆ ಸ್ಕೆಚ್ ಹಾಕಿರುತ್ತಾನೆ.
ಬಾಣಗಳು ಎಲ್ಲಿಂದ ತೂರಿ ಬರುತ್ತಿವೆ ಎಂಬುದು ಮಾತ್ರ ಗೊತ್ತಾಗುವುದಿಲ್ಲ. ಈ ಸೋಷಿಯಲ್ ಮೀಡಿಯಾ ವಾರ್ ಬೆಂಗಳೂರಿಗೆ ಮಾತ್ರ ಅಲ್ಲ, ಜಿಲ್ಲೆ ಮತ್ತು ತಾಲೂಕಾ ಕೇಂದ್ರ ಗಳಿಗೂ ಹರಡಿದೆ. ಪರಿಣಾಮ, ಎಡೆ ಸುದ್ದಿಮನೆಗಳಲ್ಲಿ ಪತ್ರಕರ್ತ ರಿಗೆ ಬರ. ಸೋಷಿಯಲ್ ಮೀಡಿಯಾ ಎಂಬುದು ಕೊಳಚೆಗುಂಡಿ ಗಿಂತ ಹೆಚ್ಚು ಕೊಚ್ಚೆಯಾಗಿಬಿಟ್ಟಿದೆ. ಬರೀ ಬೈಗುಳ, ಟೀಕೆ, ಪ್ರಹಾರ, ಅಪಹಾಸ್ಯ, ಲೇವಡಿ, ನೆಗೆಟಿವ್ ಮನಸ್ಥಿತಿಗಳೇ ಸಾಮಾಜಿಕ ಜಾಲ ತಾಣಗಳನ್ನು ಆವರಿಸಿಬಿಟ್ಟಿವೆ. ಸದ್ಯಕ್ಕಂತೂ ಇದಕ್ಕೆ ಪರಿಹಾರ ಕಾಣು ತ್ತಿಲ್ಲ.
ಮೋದಿಯವರು ಒಬ್ಬರನ್ನು ಹೊಗಳಿ ಟ್ವೀಟ್ ಮಾಡಿದರೂ, ಅಸಹ್ಯವಾಗಿ ಕಾಮೆಂಟು ಮಾಡುವವರೇನು ಕಮ್ಮಿಯಿಲ್ಲ. ಇವರು ಯಾರನ್ನೂ ಬಿಡುವವರಲ್ಲ. ಅಷ್ಟಕ್ಕೂ ಇವರನ್ನು ನೇಮಿಸಿ ಕೊಂಡಿರುವುದೇ ಆ ಕೆಲಸಕ್ಕೆ ತಾನೇ?!
ಮನೆಯೇ ಸಣ್ಣ ಸಂಸತ್ತು
ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭವಾದಾಗ, ದೆಹಲಿಯ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆ, ಭಾರತದ ಪ್ರಪ್ರಥಮ ಮಹಿಳಾ ಸ್ಪೀಕರ್ ಮೀರಾ ಕುಮಾರ್ ಸಂದರ್ಶನ ಪ್ರಕಟಿಸಿತ್ತು. ಸೋಮನಾಥ ಚಟರ್ಜಿ ನಂತರ, ೨೦೦೯ ರಿಂದ ೨೦೧೪ ರವರೆಗೆ ಮೀರಾ ಕುಮಾರ್ ಲೋಕಸಭಾ ಸ್ಪೀಕರ್ ಆಗಿದ್ದರು. ಜಗಜೀವನ್ ರಾಮ್ ಪುತ್ರಿಯಾದ ಮೀರಾ ಕುಮಾರ್, ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಭಾರತೀಯ ವಿದೇಶಾಂಗ ಸೇವೆಯಲ್ಲಿ ಅಧಿಕಾರಿಯಾಗಿದ್ದರು. ಹತ್ತು ವರ್ಷಗಳ ಕಾಲ ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದರು. ನಂತರ ತಂದೆಯ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶಿಸಿದರು.
ಐದು ಸಲ ಲೋಕಸಭಾ ಸದಸ್ಯರಾದ ಅವರು, ಸಾಮಾಜಿಕ ನ್ಯಾಯ, ಜಲ ಸಂಪನ್ಮೂಲ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ೨೦೧೭ ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ ಕೋವಿಂದ ವಿರುದ್ಧ ಸ್ಪಽಸಿ ಸೋತಿದ್ದರು. ಎಕ್ಸ್ ಪ್ರೆಸ್ ಪತ್ರಕರ್ತ ಅವರಿಗೆ, ‘ನೀವು ಮೊದಲ ಸಲ ಲೋಕಸಭಾ ಸದಸ್ಯರಾಗಿದ್ದಾಗ ಮತ್ತು ಈಗ ಏನು ವ್ಯತ್ಯಾಸ ಕಾಣುತ್ತೀರಿ?’ ಎಂದು ಕೇಳಿದ್ದಕ್ಕೆ ಮೀರಾ ಕುಮಾರ್ ಹೇಳಿದರು -‘ಆಗಿನದಕ್ಕೂ, ಈಗಿನದಕ್ಕೂ ಭಾರಿ ವ್ಯತ್ಯಾಸ ಕಾಣಬಹುದು.
ಆಗ ಸೆಕ್ಯೂರಿಟಿ ಇರಲೇ ಇಲ್ಲ. ಈಗ ಹೆಜ್ಜೆ ಹೆಜ್ಜೆಗೂ ಸೆಕ್ಯೂರಿಟಿ.
ಸಂಸತ್ತನ್ನು ಪ್ರವೇಶಿ ಸುವಾಗ ಪೊಲೀಸರು ಕಾಣಿಸುತ್ತಲೇ ಇರಲಿಲ್ಲ. ಈಗ ಎಡೆ ಚೆಕ್ ಮಾಡುತ್ತಾರೆ. ಸಾಮಾನ್ಯ ಜನರೂ ಆಗ ಸಂಸತ್ ಭವನದೊಳಗೆ ಮುಕ್ತವಾಗಿ ಪ್ರವೇಶಿಸಬಹುದಾಗಿತ್ತು. ಈಗ ಅದನ್ನು ಕಲ್ಪಿಸಿಕೊಳ್ಳು ವುದಕ್ಕೂ ಆಗುವುದಿಲ್ಲ. ಕಾಲಕಾಲಕ್ಕೆ ಸಂಸದರ ಸಂಖ್ಯೆ ಜಾಸ್ತಿ ಆಗುತ್ತಾ ಹೋಯಿತು. ನಾನು
ಜೀವನದಲ್ಲಿ ಲೋಕಸಭೆಯನ್ನು ಪ್ರವೇಶಿಸುತ್ತೇನೆ ಎಂದು ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ನಾನು ಮೊದಲ ಬಾರಿಗೆ ಸದಸ್ಯನಾದಾಗ, ಹಿಂದಿನ ಸಾಲಿನಲ್ಲಿ ನನಗೆ ಆಸನ ನೀಡಿದ್ದರು.
ಅಲ್ಲಿ ಕುಳಿತಾಗ ಇಡೀ ಸದನ ಕಾಣಿಸುತ್ತಿತ್ತು. ಮುಂದೊಂದು ದಿನ ನಾನು ಸ್ಪೀಕರ್ ಸ್ಥಾನಕ್ಕೇರಿದೆ. ಆಗಲೂ ಮತ್ತೊಂದು ತುದಿಯಿಂದ ನಾನು ಇಡೀ ಸದನವನ್ನು ನೋಡುವಂತಾಯಿತು.’ ಮತ್ತೊಂದು ಪ್ರಶ್ನೆ – ಲೋಕಸಭಾ ಸದಸ್ಯರಾಗಿ ನಿಮ್ಮ ನೆನಪಿನಲ್ಲಿರುವ ಪ್ರಸಂಗಗಳು? ಒಂದು ಪ್ರಸಂಗ ಹೇಳ ಬಹುದಾ? ಅದಕ್ಕೆ ಮೀರಾ ಕುಮಾರ್ ಹೇಳಿದ್ದರು-‘ನಾನು ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಲೋಕಸಭೆಗೆ ಆಯ್ಕೆಯಾದಾಗ, ನನ್ನ ತಂದೆ ಬಾಬು ಜಗಜೀವನ ರಾಮ್ ಪ್ರತಿಪಕ್ಷದಲ್ಲಿದ್ದರು. ನಾವಿ ಬ್ಬರೂ ಒಟ್ಟಿಗೇ ಸಂಸತ್ತಿಗೆ ಆಗಮಿಸುತ್ತಿzವು. ನಂತರ ಅವರು ಎಡಕ್ಕೆ ತಿರುಗಿ ಪ್ರತಿಪಕ್ಷದ ಸದಸ್ಯರು ಕುಳಿತುಕೊಳ್ಳುವ ಕಡೆ ಹೋಗುತ್ತಿ
ದ್ದರು. ನಾನು ಬಲಕ್ಕೆ ತಿರುಗಿ ಆಡಳಿತ ಪಕ್ಷದ ಸದಸ್ಯರು ಆಸೀನ ರಾಗುವ ಕಡೆಗೆ ಹೋಗುತ್ತಿದ್ದೆ.
ನಂತರ ನಾನು ನನ್ನ ತಂದೆಯವರ ಜತೆ ಮನೆಗೆ ಒಟ್ಟಿಗೆ ಆಗಮಿಸುತ್ತಿದ್ದೆ. ನಮ್ಮ ಮನೆಯೇ ಸಣ್ಣ ಸತ್ತು ಎಂದು ತಮಾಷೆ ಮಾಡುತ್ತಿದ್ದರು. ಆಡಳಿತ ಪಕ್ಷ ಮತ್ತು
ಪ್ರತಿಪಕ್ಷದ ಸದಸ್ಯರು ಒಂದೇ ಮನೆಯಲ್ಲಿದ್ದೆವು.’
ಸ್ಪಷ್ಟ ನಿಲುವಿನ ಲೀ ಕುಆನ್ ಯು
ಸಿಂಗಾಪುರವನ್ನು ಕಟ್ಟಿದವರು ಆ ದೇಶದ ಪ್ರಥಮ ಪ್ರಧಾನಿ ಲೀ ಕುಆನ್ ಯು. ಮೂವತ್ತೊಂದು ವರ್ಷಗಳ ಕಾಲ ಆ ದೇಶದ ಪ್ರಧಾನಿಯಾಗಿದ್ದ ಯು, ಇಂದಿಗೂ ಆ ದೇಶದ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರಿಗೆ ಪ್ರತಿ ವಿಷಯದ ಬಗ್ಗೆ ಸ್ಪಷ್ಟವಾದ, ಖಚಿತ ವಾದ ಅಭಿಪ್ರಾಯಗಳಿದ್ದವು. ಯಾವುದೇ ವಿಷಯದ ಬಗ್ಗೆ ಅವರ
ಅಭಿಪ್ರಾಯವನ್ನು ಬಯಸಿದಾಗ ಅವರು ನುಣುಚಿಕೊಳ್ಳುತ್ತಿರಲಿಲ್ಲ. ತಮ್ಮ ಪ್ರತಿಕ್ರಿಯೆಯಿಂದ ಇಲ್ಲದ ವಿವಾದ ಸೃಷ್ಟಿಯಾಗಬಹುದು ಎಂದು ಅವರು ಅಂಜುತ್ತಿರಲಿಲ್ಲ.
ನಾಯಕನಾದವನಿಗೆ ಖಚಿತ ನಿಲುವುಗಳಿರಲೇಬೇಕು ಎಂದು ಹೇಳುತ್ತಿದ್ದ ಅವರು, ತಮ್ಮ ಮುಚ್ಚುಮರೆಯಿಲ್ಲದ ಅಭಿಪ್ರಾಯ ಗಳಿಂದಲೇ ಆಪ್ತರಾಗುತ್ತಿದ್ದರು. I have been accused of many things in my life, but not even my worst enemy has ever accused me of being afraid to speak my mind ಎಂದು ಅವರು ಹೇಳುತ್ತಿದ್ದರು.
ಒಮ್ಮೆ ಅವರಿಗೆ ‘ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದಾಗ, ‘ಸಿಂಗಾಪುರದ ದೃಷ್ಟಿಯಿಂದ ಭಾರತದ ಮಹತ್ವದ ದೇಶ. ಭಾರತ ಮೊದಲು ಕೆಂಪುಪಟ್ಟಿ ಆಡಳಿತವನ್ನು ನಿಲ್ಲಿಸಬೇಕು. ಲೈಸೆ ರಾಜ್‌ನ್ನು ಕಿತ್ತೆಸೆಯಬೇಕು. ಖಾಸಗಿ ರಂಗ ವನ್ನು ಉತ್ತೇಜಿಸಬೇಕು, ಕಾರ್ಮಿಕ ಸಂಬಂಽ ಕಾನೂನನ್ನು ಸುಧಾ
ರಿಸಬೇಕು, ಮೂಲಭೂತ ಸೌಕರ್ಯಗಳನ್ನು ಉತ್ತಮ ಪಡಿಸ ಬೇಕು, ವಿದೇಶಿ ಬಂಡವಾಳವನ್ನು ಆಕರ್ಷಿಸಬೇಕು ಮತ್ತು ತಯಾರಿಕಾ ಕ್ಷೇತ್ರವನ್ನು ಬಲಪಡಿಸಬೇಕು. ಭಾರತವನ್ನು ಅಭಿವೃದ್ಧಿ ಪಡಿಸಲು ಇವುಗಳಿಗಿಂತ ಉತ್ತಮ ಮಾರ್ಗಗಳಿಲ್ಲ’ ಎಂದು ನೇರ ವಾಗಿ ಹೇಳಿದ್ದರು.
ವಿದೇಶಿ ಪತ್ರಕರ್ತನೊಬ್ಬ ಒಮ್ಮೆ ಯು ಅವರನ್ನು, ‘ನಿಮ್ಮ ದೇಶದ ಬಗ್ಗೆ ನಿಮ್ಮ ಅಭಿಪ್ರಾಯ ವೇನು?’ ಎಂದು ಕೇಳಿದ್ದ. ಆ ಪ್ರಶ್ನೆಗೂ ಅವರು ನೇರವಾಗಿ ಹೇಳಿದ್ದರು -‘ನಾವು ಶೂನ್ಯದಿಂದ ಸಿಂಗಾಪುರವನ್ನು ನಿರ್ಮಿಸಿದ್ದೇವೆ. ನೂರು ವರ್ಷಗಳ ಹಿಂದೆ, ಸಿಂಗಾಪುರ ಮೀನು ಹಿಡಿಯು ವವರ ಹಳ್ಳಿಯಾಗಿತ್ತು. ಅಲ್ಲಿಂದ ಈಗ
ಅದು ಜಗತ್ತಿನ ಪ್ರಮುಖ ಮೆಟ್ರೋ ಪಾಲಿಟನ್ ನಗರ ಅಥವಾ ದೇಶವಾಗಿದೆ. ಇಂದು ಜಗತ್ತಿನ ಯಾವ ಕಂಪನಿಯೂ ಸಿಂಗಾಪುರವನ್ನು ಹೊರತುಪಡಿಸಿ
ವ್ಯವಹಾರ ಮಾಡಲು ಸಾಧ್ಯವಿಲ್ಲ. ಅಂಥ ವಾತಾವರಣವನ್ನು ನಾವು ನಿರ್ಮಿಸಿದ್ದೇವೆ. ನಾನು ಪ್ರಧಾನಿ ಯಾಗುವುದಕ್ಕಿಂತ ಮುನ್ನ, ಮೂರು ರಾಷ್ಟ್ರಗೀತೆಗಳನ್ನು ಹೇಳುತ್ತಿದ್ದೆವು. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ God Save the Queen ಎಂಬ ರಾಷ್ಟ್ರಗೀತೆ ಹಾಡುತ್ತಿದ್ದೆವು.
ಅನಂತರ ಜಪಾನಿಯರ Kimigayo, ನಂತರ ಮಲೇಶಿಯನ್ನರ Negara Ku ರಾಷ್ಟ್ರಗೀತೆಯಾಗಿತ್ತು. ಅಂತಿಮವಾಗಿ ಸಿಂಗಾ ಪುರದ ರಾಷ್ಟ್ರಗೀತೆ
‘ಮಜೂಲಾಹ್ ಸಿಂಗಾಪುರ’ ಹಾಡಲಾರಂಭಿ ಸಿದೆವು. ಜಗತ್ತಿನ ಬುದ್ಧಿಶಾಲಿಗಳು ಯಾವ ದೇಶ, ಜಾತಿ, ಲಿಂಗ, ಪ್ರದೇಶದವರೇ ಇರಲಿ, ನಮಗೆ ಅವರು ಬೇಕು. ಉತ್ತಮ ಮಾನವ ಸಂಪನ್ಮೂಲ ವಿಲ್ಲದೇ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಬುದ್ಧಿಮತ್ತೆ, ದಕ್ಷತೆ, ಪ್ರಾಮಾಣಿಕತೆ ಸಿಂಗಾಪುರದ ಗುಣಲಕ್ಷಣಗಳು. ಕಟ್ಟು ನಿಟ್ಟಾದ
ಕಾನೂನು ರಚನೆ ಇಲ್ಲದ ಯಾವ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.’
ಪ್ರಧಾನಿಯಾಗಿ ಇಪ್ಪತ್ತೈದು ವರ್ಷ ಪೂರೈಸಿದ ಸಂದರ್ಭದಲ್ಲಿ ಯು ಅವರನ್ನು ಪತ್ರಕರ್ತರು ಕೇಳಿದ್ದರು – ‘ನಾಯಕತ್ವದ ಬಗ್ಗೆ ನಿಮ್ಮ ಅನಿಸಿಕೆಯೇನು?’ ಅದಕ್ಕೆ ಅವರು ಹೇಳಿದ್ದರು – ‘ನಾನು ಯಾವತ್ತೂ ಒಂದು ಥಿಯರಿಯಿಂದ ಬಂದಿಯಲ್ಲ. ನನಗೆ ಕಾರಣ ಮತ್ತು ವಾಸ್ತವ ಮುಖ್ಯ. ಯಾವುದೇ ಕಾರ್ಯಕ್ರಮ ಅಥವಾ
ಕಾನೂನನ್ನು ಜಾರಿ ಮಾಡುವಾಗ ನಾನು ನನಗೆ ಕೇಳಿಕೊಳ್ಳುವ ಒಂದು ಪ್ರಶ್ನೆ ಅಂದ್ರೆ – ‘ಇದು ಕಾರ್ಯಸಾಧುವಾ? ಇದರಿಂದ ಸಮಾಜಕ್ಕೆ, ಜನರಿಗೆ ಒಳ್ಳೆಯ ದಾಗುವುದಾ? ದೇಶಕ್ಕೆ ಒಳ್ಳೆಯದಾಗು ವುದಾ?’ ಅಷ್ಟೇ. ನಮ್ಮ ದೌರ್ಬಲ್ಯಗಳಿಗೆ ಯಾರೂ ಗೌರವ ನೀಡು ವುದಿಲ್ಲ. ಎಲ್ಲಿ ತನಕ ನಾಯಕನಾದವನು ತನ್ನ
ಪ್ರಜೆಗಳ ಒಳಿತನ್ನು ಗಮನಿಸುತ್ತಾನೋ, ಅಲ್ಲಿ ತನಕ ಜನ ಆತನ ಮಾತುಗಳನ್ನು ಶಾಸನದಂತೆ ಶಿರಸಾ ವಹಿಸಿ ಪಾಲಿಸುತ್ತಾರೆ.
ನಾಯಕನು ಎಲ್ಲೋ ಉದ್ಭವಿಸಿದವನಲ್ಲ. ಅಷ್ಟಕ್ಕೂ ಆತ ಜನರ ಮಧ್ಯವೇ ಹುಟ್ಟಿ ಬೆಳೆದವನು. ಈ ಸಂಗತಿ ನಾಯಕನಾದವನಿಗೆ ಗೊತ್ತಾಗಬೇಕು.’
ಭಾರತೀಯರು – ಒಳ ಉಡುಪು
ಕೆಲ ದಿನಗಳ ಹಿಂದೆ, ‘ಎಕನಾಮಿಕ್ ಟೈಮ್ಸ’ ಪತ್ರಿಕೆಯಲ್ಲಿ ಒಂದು ಸುದ್ದಿಯನ್ನು ಓದುತ್ತಿದ್ದೆ. ‘ಜೋಕಿ, ರೂಪಾ, ಡಾಲರ್ ಬ್ರಾಂಡಿನ ಒಳಗಡೆ ಇನ್ನೊಂದು ಸಂಗತಿ ಇತ್ತು. ಅದೇನೆಂದರೆ, ಪ್ರಮುಖ ಬ್ರಾಂಡುಗಳ ಶರ್ಟ್, ಪ್ಯಾಂಟ್ ಮಾರಾಟದಲ್ಲಿ ಏರಿಕೆ ಎಂಬ ಸಂಗತಿ. ಈ ಸುದ್ದಿಯನ್ನು ಓದಿದವರಿಗೆ ಈ ಸಂದೇಹಗಳು ಮೂಡ ಬಹುದು.
ಅದೇನೆಂದರೆ..
? ಭಾರತೀಯರು ಶರ್ಟ್ ಮತ್ತು ಪ್ಯಾಂಟುಗಳನ್ನು ಖರೀದಿಸುವಂತೆ, ಒಳ ಉಡುಪುಗಳನ್ನು ಖರೀದಿಸುವುದಿಲ್ಲ.
? ಭಾರತೀಯರು ಪ್ರದರ್ಶನ ಪ್ರಿಯರು. ಶರ್ಟು ಮತ್ತು ಪ್ಯಾಂಟು ಎಲ್ಲರಿಗೂ ಕಾಣುವುದರಿಂದ, ಅವುಗಳಿಗೆ ಪ್ರಾಮುಖ್ಯ ಕೊಡುತ್ತಾರೆ. ಒಳ ಉಡುಪುಗಳು ಯಾರಿಗೂ ಕಾಣದಿರುವುದರಿಂದ, ಅವುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ.
? ಒಳಗೆ ಯಾವ ಬಟ್ಟೆ ಧರಿಸಿದರೇನು, ಹೊರಗಿನ ಬಟ್ಟೆ ಚೆಂದವಾಗಿರಬೇಕು.
? ಒಳ ಉಡುಪನ್ನು ಯಾರೂ ನೋಡುವುದಿಲ್ಲ. ಬ್ರಾಂಡೆಡ್ ಒಳ ಉಡುಪು ಧರಿಸಿ ಪ್ರಯೋಜನವೇನು?
? ಭಾರತೀಯರು ಆಗಾಗ ಒಳ ಉಡುಪುಗಳನ್ನು ಬದಲಿಸುವುದಿಲ್ಲ.
? ಹಳೆಯದಾದರೂ ಒಳ ಉಡುಪುಗಳನ್ನು ಬಿಸಾಡುವುದಿಲ್ಲ. ಈ ವರದಿಯಲ್ಲಿದ್ದ ಇನ್ನೊಂದು ಸಂಗತಿಯಿತ್ತು. ಕೆಲವರು ತಾವು ಧರಿಸಿದ ಅಂಗಿ ಅಥವಾ ಪ್ಯಾಂಟನ್ನು ಅನಾಥ ಮಕ್ಕಳಿಗೆ, ಭಿಕ್ಷುಕ ರಿಗೆ, ಅಬಲಾಶ್ರಮವಾಸಿಗಳಿಗೆ ದಾನ ಮಾಡುತ್ತಾರೆ. ಆದರೆ ಒಳಉಡುಪುಗಳನ್ನು ಬಿಸಾಡುವುದಿಲ್ಲ. ಮನೆಯಲ್ಲಿ ಕನಿಷ್ಠ ನೆಲ ಒರೆಸುವುದಕ್ಕಾದರೂ ಬಳಸುತ್ತಾರೆ.
ಈ ಸುದ್ದಿಯನ್ನು ಓದಿದಾಗ ಸುಮಾರು ಮೂವತ್ತು ವರ್ಷಗಳ ಹಿಂದಿನ ಪ್ರಸಂಗವೊಂದು ನೆನ ಪಾಯಿತು. ನಾನು ಒಬ್ಬ ಸಚಿವರನ್ನು ಸಂದರ್ಶಿಸಲೆಂದು ವಿಧಾನ ಸೌಧದಲ್ಲಿರುವ ಅವರ ಕೋಣೆಗೆ ಹೋಗಿದ್ದೆ. ಅವರು ಉದ್ದ ತೋಳಿನ, ಕತ್ತು ಮುಚ್ಚುವ ಕಾಲರ್ ಉಳ್ಳ ( ಬಂದ್ ಗಲಾ) ಕೋಟ್ ಧರಿಸಿದ್ದರು. ಸಂದರ್ಶನ
ಆರಂಭ ವಾಗಿ ಕೆಲ ಕ್ಷಣಗಳಲ್ಲಿ ಅವರ ಕೋಟ್ ಒಳಗೆ ಇರುವೆ ಕಡಿಯಲು ಶುರು ಹಚ್ಚಿಕೊಂಡಿರ ಬೇಕು, ತುರಿಸಿಕೊಳ್ಳಲು ಆರಂಭಿಸಿದರು. ಸಂದರ್ಶನ ಮುಂದುವ ರಿಯಿತು. ಆದರೂ ಅವರ ತುರಿಕೆ ಕಮ್ಮಿಯಾಗಲಿಲ್ಲ.
ಅವರಿಗೆ ಬೇರೆ ಮಾರ್ಗವೇ ಇರಲಿಲ್ಲ, ಅವರು ನನ್ನ ಮುಂದೆಯೇ ತಮ್ಮ ಕೋಟನ್ನು ಬಿಚ್ಚಿದರು. ತಮಾಷೆ ಅಂದ್ರೆ ಅವರು ಒಳಗೆ ಅಂಗಿಯನ್ನೇ ಧರಿಸಿರಲಿಲ್ಲ. ಅದಕ್ಕೂ ತಮಾಷೆಯ ಸಂಗತಿ ಅಂದ್ರೆ ಅವರು ಧರಿಸಿದ್ದ ಬನಿಯನ್ ಕಂಕುಳು ಮತ್ತು ಬೆನ್ನಿನ ಭಾಗದಲ್ಲಿ ತೂತಾಗಿತ್ತು. ಅವರು ಆ ಒಳ ಉಡುಪನ್ನು ಖರೀದಿಸಿ ಎಷ್ಟು ವರ್ಷಗಳಾಗಿತ್ತೋ?
ಕೋಫಿ ಅನ್ನಾನ್ ಹೇಳಿದ್ದು
ಚಿಕ್ಕ ಚಿಕ್ಕ ೨೨೨ ನಾಣ್ನುಡಿಗಳನ್ನೊಳಗೊಂಡ ಪುಟ್ಟ ಪುಸ್ತಕ (The Less You Preach, The More You Learn) ವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್, ಜೋಸೆ- ಝಕಾರಿಯಸ್ ಅವರೊಡಗೂಡಿ ಬರೆದಿದ್ದನ್ನು ಹಿಂದಿನ ವಾರ ಈ ಅಂಕಣದಲ್ಲಿ ವಿವರವಾಗಿ ಬರೆದಿದ್ದೆ. ಈ ಕೃತಿಯಲ್ಲಿ ತರೂರ್, ತಾವು ಅಭಿಮಾನ ದಿಂದ ಕಾಣುವ, ವಿಶ್ವಸಂಸ್ಥೆಯ ಅಂದಿನ ಸೆಕ್ರೆಟರಿ ಜನರಲ್ ಕೋಫಿ ಅನ್ನಾನ್ ಆಗಾಗ ಹೇಳುತ್ತಿದ್ದ ಅವರ ಇಷ್ಟದ ಒಂದು ವಾಕ್ಯವನ್ನು ನೆನಪಿಸಿ ಕೊಂಡಿದ್ದಾರೆ. ಕೋಫಿ ಅನ್ನಾನ್ ಆಗಾಗ ತಮ್ಮ ಮಾತಿನಲ್ಲಿ If the sharks bite you, do not bleed (ಶಾರ್ಕ್ ಮೀನುಗಳು ಕಡಿದರೆ, ರಕ್ತಸ್ರಾವ ವಾಗುವುದಿಲ್ಲ) ಎಂದು ಹೇಳುತ್ತಿ ದ್ದರಂತೆ. ಇದರ ಅರ್ಥವನ್ನು ಅರಿಯಲು ತರೂರ್‌ಗೆ ಬಹಳ ವರ್ಷ ಹಿಡಿಯಿತಂತೆ.
ಕೊನೆಯಲ್ಲಿ ತರೂರ್ ಬರೆಯುತ್ತಾರೆ – Never let your enemies have the satisfaction of seeing you suffer. (ನೀವು ಕಷ್ಟಪಡುವುದನ್ನು ನೋಡಿ ಆನಂದಿಸುವ ಅವಕಾಶವನ್ನು ನಿಮ್ಮ ವೈರಿಗಳಿಗೆ ಕೊಡಬಾರದು.)