ತುಮಕೂರು: ವಿವೇಕಾನಂದ ಸ್ಪೋಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ತುಮಕೂರು,ವಿವೇಕಾನಂದ ಸೂಟಿಂಗ್ ಅಕಾಡಮಿ, ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಮತ್ತು ತುಮಕೂರು ಜಿಲ್ಲಾ ರೈಫಲ್ ಮತ್ತು ಪಿಸ್ತೂಲ್ ಅಸೋಸಿ ಯೇಷನ್ ಸಹಕಾರದಲ್ಲಿ ರಾಷ್ಟ್ರ ಮಟ್ಟದ ಮುಕ್ತ ಆಹ್ವಾನಿತ ಶೂಟಿಂಗ್ ಚಾಂಪಿಯನ್ ಶಿಫ್ ಪಂದ್ಯಾವಳಿಯನ್ನು ಸೆಪ್ಟಂಬರ್ 28 ರಿಂದ ಅಕ್ಟೋಬರ್ 02ರವರೆಗೆ ಐದು ದಿನಗಳ ಕಾಲ ಹಮ್ಮಿಕೊಂಡಿದೆ ಎಂದು ವಿವೇಕಾನಂದ ಶೂಟಿಂಗ್ ಅಕಾಡೆಮಿಯ ತರಬೇತುದಾರ ಅನಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಹಾತ್ವಗಾಂಧಿ ಕ್ರೀಡಾಂಗಣದ ಎದುರು ಇರುವ ಒಳಾಂಗಣ ಕ್ರೀಡಾಂಗಣ ದಲ್ಲಿ ರಾಷ್ಟ್ರ ಮಟ್ಟದ 10 ಮೀ. ಏರ್ ರೈಫಲ್ ಶೂಟಿಂಗ್ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಫ್ ಎಂದು ಹೆಸರಿಡಲಾಗಿದೆ.ಐದು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ವಿವಿಧ 56 ಕ್ಯಾಟಗೆರಿಯಲ್ಲಿ ಸಬ್ ಜೂನಿಯರ್, ಜೂನಿಯರ್,ಸಿನಿಯರ್ ಸೇರಿ ಒಟ್ಟು 800ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿ ದ್ದಾರೆ. ಮೊದಲ ಬಹುಮಾನವಾಗಿ 5000, ಎರಡನೇ ಬಹುಮಾನವಾಗಿ 3000 ಮತ್ತು 3ನೇ ಬಹುಮಾನವಾಗಿ 2000 ಸೇರಿದಂತೆ ಒಟ್ಟು 4 ಲಕ್ಷ ಬಹುಮಾನ ಈ ಟೂನಿಯಲ್ಲಿ ನೀಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆಯ ಧನಿಯಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ್,ಮಂಜುನಾಥ್, ವಿಕಾಶ್, ನಿಖಿಲ್ ಮತ್ತು ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಉಪಸ್ಥಿತರಿದ್ದರು.