ಇದೇ ಅಂತರಂಗ ಸುದ್ದಿ
vbhat@me.com
‘ಶರ್ಟುಗಳಿಗೆ ಬಟನ್ ಗಳೇಕೆ ಇರಬೇಕು? ಯಾವುದು ಅಗತ್ಯವಿರುವುದಿಲ್ಲವೋ, ಅವನ್ನು ಬಳಸಬಾರದು. ನಾವು ಬಳಸುವ ವಸ್ತು ಅತ್ಯಂತ ಸರಳವಾಗಿ ರಬೇಕು. ನಾವು ಧರಿಸುವ ವಾಚಿನಲ್ಲಿ ಅನಗತ್ಯ ಭಾಗ ಅಥವಾ ಬಿಡಿಭಾಗಗಳಿರುತ್ತವೆಯಾ ನೋಡಿ. ಇಲ್ಲ ತಾನೇ? ಈ ನಿಯಮ ವನ್ನು ನಾವು ಧರಿಸುವ ಡ್ರೆಸ್ಸಿಗೂ ಅನ್ವಯ ಮಾಡಿ ನೋಡಿ’ ಎಂದು ಸ್ಟೀವ್ ಜಾಬ್ಸ ಹೇಳಿದ್ದರು. ಅವರು ವಾಚ್ ಧರಿಸುತ್ತಿರಲಿಲ್ಲ. ಪ್ಯಾಂಟಿಗೆ ಬೆಲ್ಟ ಹಾಕುತ್ತಿರಲಿಲ್ಲ. ಈ -ಬಿಯಾ ಇತ್ತು. ಹೀಗಾಗಿ ಆತ ಬಟನ್ಗಳಿರುವ ಶರ್ಟುಗಳನ್ನು ಧರಿಸುತ್ತಿರಲಿಲ್ಲ.
ಕೆಲದಿನಗಳ ಹಿಂದೆ, ನಾನು ಡಿಕ್ಷನರಿ (ಪದಕೋಶ) ಓದುವಾಗ Arachibutyrophobia (ಅರಾಚಿಬುಟಿರೋ-ಬಿಯಾ) ಎಂಬ ಪದ ಕಾಣಿಸಿತು. ಅದೊಂದು ತೀರಾ ಅಪರೂಪದ ಮಾನಸಿಕ ಕಾಯಿಲೆ. ಐದು ಲಕ್ಷದಲ್ಲಿ ಒಬ್ಬರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದಂತೆ. ಪೀನಟ್ ಬಟರ್ (ಶೇಂಗಾ ಚಟ್ನಿ ಅಥವಾ ಶೇಂಗಾ ಚಟ್ನಿಯ ಪೇ) ಸೇವಿಸುವಾಗ ಅದು ನಾಲಗೆ ಮೇಲೆ ಅಂದರೆ ಬಾಯಿಯ ಚಾವಣಿಗೆ ಮೆತ್ತಿಕೊಳ್ಳಬಹುದು ಎಂಬ ಆತಂಕ.
ಈ ಕಾಯಿಲೆ ಇದ್ದವರು ಪೀನಟ್ ಬಟರ್ ಕಂಡ ಕೂಡಲೇ, ಅದು ತುಂಬಿದ್ದ ಬಾಟಲಿಯನ್ನು ದೂರ ತಳ್ಳುತ್ತಾರೆ. ಕೆಲವೊಮ್ಮೆ ಆ ಬಾಟಲಿಯನ್ನು ಬಿಸಾಡುತ್ತಾರೆ. ಅದನ್ನು ನೋಡಿದವರಿಗೆ, ‘ಇವರೇಕೆ ಹಾಗೆ ಮಾಡಿದರು?’ ಎಂದು ಅನಿಸುತ್ತದೆ. ಆದರೆ ಆ ಕಾಯಿಲೆ ಇದ್ದವರಿಗೆ ಅದನ್ನು ವಿವರಿಸಲು ಆಗುವುದಿಲ್ಲ. ಅವರ ಆ ವಿಚಿತ್ರ ವರ್ತನೆಯನ್ನು ನೋಡಿದವರಿಗೂ ಅದು ಗೊತ್ತಾಗುವುದಿಲ್ಲ. ಕೊನೆಗೂ, ಅದೊಂದು ಮಾನಸಿಕ ಕಾಯಿಲೆ ಎಂಬುದು ಅನೇಕರಿಗೆ ಅರಿವಿಗೇ ಬರುವುದಿಲ್ಲ. ಈ ಕಾಯಿಲೆ ಬಹಳ ಕಮ್ಮಿ ಜನರಲ್ಲಿ ಇರುವುದರಿಂದ ಅದು ಹೆಚ್ಚಿನವರ ಗಮನಕ್ಕೂ ಬರುವುದಿಲ್ಲ.
ಇನ್ನೊಂದು ಬಗೆಯ ಫೋಬಿಯಾ ಅಥವಾ ಭಯ ಇದೆ. ಅದು Hippopotomonstrosesquippedaliophobia. ಅಂದರೆ ಉದ್ದವಾದ ಪದಗಳನ್ನು ಕಂಡರೆ ಆಗುವ ಭಯ. ಇದಕ್ಕೆ Sesquipedalophobia ಎಂಬ ಪರ್ಯಾಯ ಪದವೂ ಇದೆ. ಕೆಲವರಿಗೆ ಉದ್ದವಾದ ಪದಗಳನ್ನು ಹೇಳುವಾಗ, ತಮಗೆ ಅದನ್ನು ತೊಡಕಿಲ್ಲದೇ, ತುಂಡರಿಸದೇ ಹೇಳಲು ಆಗುವುದಾ ಎಂಬ ಭಯವಿರುತ್ತದೆ.
ಇಂಥ ಪದಗಳನ್ನು ಹೇಳುವಾಗ ನಾಲಗೆ ಹೊರಳುವುದಾ ಎಂಬ ಸಂದೇಹವುಂಟಾಗಿ ತಪ್ಪುಗಳನ್ನು ಮಾಡುತ್ತಾರೆ. ಧಾರ್ಮಿಕ ಅಥವಾ ಮಂಗಳ ಕಾರ್ಯ ಮಾಡುವಾಗ ಪುರೋಹಿತರು ತಾವು ಹೇಳಿದ ಮಂತ್ರವನ್ನು ಹೇಳಿ ಎಂದು ಹೇಳಿದಾಗ, ಹೇಳಿಕೊಟ್ಟಿದ್ದನ್ನು ಯಥಾವತ್ತು ಹೇಳಲಾಗದೇ ಕೆಲವರು ತಡವರಿಸುತ್ತಾರೆ. ಅಂಥವರಿಗೆ ಈ ಭಯ (ಫೋಬಿಯಾ) ಕಾಡುವುದುಂಟು. ಸಂಸ್ಕೃತ ಶ್ಲೋಕಗಳನ್ನು ಹೇಳುವಾಗ ಅನೇಕರಿಗೆ ಈ ಭಯ ಆಗುವುದುಂಟು. ಇನ್ನು ಕೆಲವರಿಗೆ ಉದ್ದದ ಪದವನ್ನು ಉಚ್ಚರಿಸಲು ಆಗದೇ ತಡಕಾಡುವುದುಂಟು. ಕೆಲವರಿಗೆ ಅಪರಿಚಿತ ಉದ್ದದ ಪದಗಳನ್ನು ಹೇಳುವಾಗಲೂ ನಾಲಗೆ
ಹೊರಳದೇ ಪೇಚಾಡುವುದುಂಟು. ಕೆಲವರಿಗೆ ಇನ್ನೊಂದು ರೀತಿಯ ಭಯ ಇರುತ್ತದೆ.
ಆ ಭಯವೂ ಅಪರೂಪವೇ. ಅದು ಕನ್ನಡಿಯನ್ನು ಕಂಡರೆ ಆಗುವ ಭಯ. ಅದಕ್ಕೆ Eisoptrophobia ಎಂದು ಹೇಳುತ್ತಾರೆ. ಈ ಫೋಬಿಯ ಇರುವವರು ಕನ್ನಡಿ ಕಾಣುತ್ತಿರುವಂತೆ ಅಲ್ಲಿಂದ ದೂರವಾಗಲು ಬಯಸುತ್ತಾರೆ. ಕೆಲವರು ಕೈಗೆ ಸಿಕ್ಕಿದ ವಸ್ತುಗಳಿಂದ ಕನ್ನಡಿ ಮೇಲೆ ಎಸೆಯುತ್ತಾರೆ. ಹೆಂಗಸರಿಗೆ ಕನ್ನಡಿ ಕಂಡರೆ ಅತಿ ಪ್ರೀತಿ ತಾನೇ? ಹೀಗಾಗಿ ಈ ಫೋಬಿಯಾ ಗಂಡಸರ ಹೆಚ್ಚು. ಕೆಲವರಿಗೆ ತಾವು ಕುರೂಪ ಇದ್ದಿರಬಹುದು, ಮೂಗು ಸರಿ ಇಲ್ಲ, ಮುಖ ತುಂಬಾ ಗುಳ್ಳೆಗಳು.. ಎಂದೆಲ್ಲ ಯೋಚಿಸಿ, ತಮ್ಮ ಮುಖವನ್ನು ನೋಡಬಯಸುವುದಿಲ್ಲ.
ಅಂಥವರಿಗೆ ಕನ್ನಡಿ ಅಂದರೆ ಅಲರ್ಜಿ. ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ವ್ಯಾಪಿಸುತ್ತಿರುವ ಫೋಬಿಯಾ ಅಂದ್ರೆ Nomophobia. ಮೊಬೈಲ್ ಫೋನ್ ಇಲ್ಲದಿದ್ದರೆ ಏನು ಮಾಡುವುದು ಎಂಬ ಆತಂಕ ಈ ಫೋಬಿಯಾದ ಮುಖ್ಯ ಲಕ್ಷಣ. ಕೆಲವರ ಮೊಬೈಲ್ ಬ್ಯಾಟರಿ ಇನ್ನು ಕೆಲ ಕ್ಷಣಗಳಲ್ಲಿ ಖಾಲಿಯಾಗ ಬಹುದು ಅಥವಾ ನೆಟ್ ವರ್ಕ್ ಸಿಗದಿರಬಹುದು… ಈ ಸಂಗತಿಗಳೇ ಕೆಲವರಿಗೆ ಆತಂಕವಾಗಿ ಕಾಡುತ್ತದೆ. ನಾಳೆ ಬೆಳಗ್ಗೆ ಮನೆಯಿಂದ ಹೊರಡು ವಾಗ, ಹಿಂದಿನ ರಾತ್ರಿ ತಮ್ಮ ಮೊಬೈಲನ್ನು ಪೂರ್ತಿ ಚಾರ್ಜ್ ಮಾಡಿಕೊಳ್ಳುತ್ತಾರೆ. ತಮ್ಮ ಜತೆ ಚಾರ್ಜರನ್ನೂ ಕೊಂಡೊಯ್ದಿರುತ್ತಾರೆ. ಆದರೂ ಅವರಲ್ಲಿ ಮೊಬೈಲ್ ಬ್ಯಾಟರಿ ಖಾಲಿಯಾದರೆ, ಚಾರ್ಜ್ ಮಾಡಿಕೊಳ್ಳಲು ಪ್ಲಗ್ ಪಾಯಿಂಟ್ ಸಿಗದಿದ್ದರೆ ಎಂಬ ಉದ್ವೇಗ ಅವರ ಮನಸ್ಸಿನೊಳಗೆ ತೂತು ಕೊರೆಯು ತ್ತಿರುತ್ತದೆ. ಈ ದಿನಗಳಲ್ಲಿ ನೂರರಲ್ಲಿ ಹದಿನಾರು ಮಂದಿ ಈ ಫೊಬಿಯಾಕ್ಕೆ ತುತ್ತಾಗಿದ್ದಾರಂತೆ.
ಐದು ವರ್ಷಗಳ ಹಿಂದೆ ಈ ಸಂಖ್ಯೆ ಒಂಬತ್ತು ಇತ್ತು. ಅಂದರೆ ವರ್ಷದಿಂದ ವರ್ಷಕ್ಕೆ ಈ ಫೋಬಿಯಾ ಹೆಚ್ಚು ಜನರನ್ನು ಬಾಧಿಸುತ್ತಿದೆ ಎಂದಂತಾಯಿತು.
ನಾಲ್ಕು ವರ್ಷಗಳ ಹಿಂದೆ ಪ್ರಸಿದ್ಧ ಲೇಖಕಿ ಕೇಟ್ ಬ್ಯಾಟರ್ಸ್ಬಿ ’’Yes, I know my phobia is weird: For some, the sight of a button provokes pure disgust, ಇದಕ್ಕೆ ನಾನೂ ಹೊರತಲ್ಲ’ ಎಂದು ಬರೆದುಕೊಂಡಿದ್ದಳು. ಆಕೆಗೆ ಬಟನ್ ಎಂಬ ಪದವನ್ನು ಕೇಳಿದರೂ ವಾಂತಿ ಬಂದಂತಾಗುತ್ತಿತ್ತು. ಒಮ್ಮೆ ಬಟನ್ ಇರುವ ಶರ್ಟ್ ಧರಿಸಿದ ವ್ಯಕ್ತಿಯನ್ನು ನೋಡಿ, ಆಕೆ ತನಗಾದ ತಳಮಳವನ್ನು ಮಾರ್ಮಿಕವಾಗಿ ಬಣ್ಣಿಸಿದ್ದಳು.
ಬಟನ್ನುಗಳನ್ನು ಕಂಡರೆ ಸಾಕು, ಹೊಟ್ಟೆ ತೊಳೆಸಿದಂತಾಗುತ್ತಿತ್ತು. ಕೆಲಕ್ಷಣಗಳಲ್ಲಿ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಪ್ರಯಾಸಪಟ್ಟು ಈ ಆತಂಕವನ್ನು ನಿವಾರಿಸಿಕೊಳ್ಳಲು ಕೆಲವು ವರ್ಷಗಳೇ ಬೇಕಾದವು ಎಂದು ಆಕೆ ಬರೆದುಕೊಂಡಿದ್ದಾಳೆ. ಇನ್ನು ಕೆಲವರಿಗೆ ನಂಬರುಗಳೆಂದರೆ ಭಯ, ಅಲರ್ಜಿ. ಯಾರಾ ದರೂ ಅಂಕಿ-ಸಂಖ್ಯೆಗಳನ್ನು ಹೇಳಲಾರಂಭಿಸಿದರೆ ಮೂಗು ಮುರಿಯುತ್ತಾರೆ. ಅವರ ಮೇಲೆ ನಂಬರುಗಳು ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ನಂಬರುಗಳನ್ನು ದ್ವೇಷಿಸುತ್ತಾರೆ. ಏನೇ ಮಾಡಿದರೂ ನಂಬರುಗಳನ್ನು ಹೇಳಿ ಮನವರಿಕೆ ಮಾಡಿಕೊಡಲು ಸಾಧ್ಯವಾಗು ವುದಿಲ್ಲ. ಕಾರಣ ಅವರು ನಂಬರುಗಳನ್ನು ನಂಬುವುದಿಲ್ಲ.
ಅಂಕಿ-ಸಂಖ್ಯೆಗಳನ್ನು ಹೇಳಲು ಆರಂಭಿಸುತ್ತಿದ್ದಂತೆ, ‘ನೀವು ಸುಳ್ಳು ಹೇಳುತ್ತಿದ್ದೀರಿ, ನೀವು ಆಡುವ ಆಟ ನಮಗೆ ಗೊತ್ತಾಗುವುದಿಲ್ಲವಾ?’ ಎಂದು ಅಸಹನೆ ವ್ಯಕ್ತಪಡಿಸುತ್ತಾರೆ. ಇದನ್ನು Arithmophobia ಅಂತಾರೆ. ಬಾಲ್ಯದಲ್ಲಿ ಗಣಿತದ ಭಯ, ಈ ಫೋಬಿಯವಾಗಿ ಪರಿವರ್ತನೆಯಾಗುತ್ತದೆ. ಇದನ್ನು ಅನೇಕ ರಲ್ಲಿ ಕಾಣಬಹುದು. ಅವರ ಮೇಲೆ ನಂಬರುಗಳು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಈ ಫೋಬಿಯಾವನ್ನು ತಕ್ಕಮಟ್ಟಿಗೆ ಅರ್ಥ ಮಾಡಿಕೊಳ್ಳ ಬಹುದು. ಆದರೆ ಇನ್ನೊಂದು ರೀತಿಯ ಫೋಬಿಯವಿದೆ. ಅದು ೮ ನಂಬರನ್ನು ಕಂಡರೆ ಆಗುವ ಭಯ. ಇದಕ್ಕೆ Octophobia ಅಂತಾರೆ. ಈ ಫೋಬಿಯಾ ಇದ್ದವರು, ಆ ನಂಬರನ್ನು ಹೇಳಲು, ನೋಡಲು, ಕೇಳಿಸಿಕೊಳ್ಳಲು ಬಯಸುವುದಿಲ್ಲ. ಆ ನಂಬರಿನ ಹೋಟೆಲ್ ರೂಮಿನಲ್ಲಿ ಮಲಗುವು ದಿಲ್ಲ. ತಾವು ಬಳಸುವ ಫೋನ್ ಅಥವಾ ಕಾರಿನ ನಂಬರಿನಲ್ಲಿ ಆ ಸಂಖ್ಯೆ ಬರದಂತೆ ಎಚ್ಚರವಹಿಸುತ್ತಾರೆ.
ಈ ರೀತಿಯ ಮಾನಸಿಕ ಕಾಯಿಲೆ ಇದ್ದಿರಬಹುದು ಎಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಇತ್ತೀಚೆಗೆ ಹಿರಿಯ ಪತ್ರಕರ್ತ ಎಂ. ಜೆ.ಅಕ್ಬರ್ ಅವರ ಬರಹದಲ್ಲಿ ಒಂದು ಪದ ನೋಡಿ ನನಗೆ ಕುತೂಹಲ ಹೆಚ್ಚಾಯಿತು. ನೀವು Koumpounophobia ಎಂಬ ಪದವನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಕೇಳಿರದಿದ್ದರೆ ಹೇಳುತ್ತೇನೆ. ಇದೊಂದು ವಿಚಿತ್ರ ಮಾನಸಿಕ ಕಾಯಿಲೆ. ಈ ಕಾಯಿಲೆಯಿರುವವರಿಗೆ ಬಟನ್ (ಗುಂಡಿ) ಗಳಿರುವ ಅಂಗಿಗಳನ್ನು ಕಂಡರೆ ಒಂಥರಾ ಭಯ, ಅಲರ್ಜಿ, ಅಲವರಿಕೆ, ಅಸಹ್ಯ. ಇನ್ನು ಕೆಲವರಿಗೆ ಬಟನ್ಗಳಿರುವ ಅಂಗಿಗಳನ್ನು ಕಂಡರೆ ಎಲ್ಲಿಲ್ಲದ ಕೋಪ. ಅವರು ಅಂಥ ಅಂಗಿ ಯನ್ನು ಕಂಡಾಕ್ಷಣ ಸಿಡುಕುತ್ತಾರೆ. ಆ ಅಂಗಿಯನ್ನು ಬಿಸಾಡುತ್ತಾರೆ. ಈಗ ಸಂತೋಷದಿಂದ ಇದ್ದವರು ಮರುಕ್ಷಣದಲ್ಲಿ ಮೂಡು ಕೆಡಿಸಿಕೊಳ್ಳಲು ಅವರಿಗೆ ಬಟನ್ಗಳಿರುವ ಅಂಗಿ ಕಂಡರೂ ಸಾಕು, ತೋರಿಸಿದರೂ ಸಾಕು. ಈ ಕಾಯಿಲೆ ಇದ್ದವರು ಸಾಮಾನ್ಯವಾಗಿ ಜಿಪ್ ಲೈನ್ ಇರುವ ಟೀ-ಶರ್ಟ್ ಧರಿಸುತ್ತಾರೆ.
ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸಗೆ ಈ ಫೋಬಿಯಾ ಇತ್ತು. ಹೀಗಾಗಿ ಆತ ಬಟನ್ಗಳಿರುವ ಶರ್ಟುಗಳನ್ನು ಧರಿಸುತ್ತಿರಲಿಲ್ಲ. ಯಾವತ್ತೂ ಬಟನ್ಗಳಿರದ ‘ಟರ್ಟಲ್ ನೆಕ್’ ಟೀ-ಶರ್ಟುಗಳನ್ನು ಧರಿಸುತ್ತಿದ್ದ. ‘ಯಾವತ್ತೂ ನೀವು ಒಂದೇ ರೀತಿಯ ಟೀ-ಶರ್ಟ್ ಧರಿಸುತ್ತೀರಲ್ಲ? ನೀವೇಕೆ ಬಟನ್ ಗಳಿರುವ ಶರ್ಟುಗಳನ್ನು ತೊಡುವುದಿಲ್ಲ?’ ಎಂದು ಕೇಳಿದಾಗ, ಸ್ಟೀವ್ ಜಾಬ್ಸ, ‘ಶರ್ಟುಗಳಿಗೆ ಬಟನ್ ಗಳೇಕೆ ಇರಬೇಕು? ಯಾವುದು ಅಗತ್ಯವಿರುವು ದಿಲ್ಲವೋ, ಅವನ್ನು ಬಳಸಬಾರದು. ನಾವು ಬಳಸುವ ವಸ್ತು ಅತ್ಯಂತ ಸರಳವಾಗಿರಬೇಕು. ನಾವು ಧರಿಸುವ ವಾಚಿನಲ್ಲಿ ಅನಗತ್ಯ ಭಾಗ ಅಥವಾ ಬಿಡಿಭಾಗಗಳಿರುತ್ತವೆಯಾ ನೋಡಿ. ಇಲ್ಲ ತಾನೇ? ಈ ನಿಯಮವನ್ನು ನಾವು ಧರಿಸುವ ಡ್ರೆಸ್ಸಿಗೂ ಅನ್ವಯ ಮಾಡಿ ನೋಡಿ’ ಎಂದು ಹೇಳಿದ್ದರು. ಸ್ಟೀವ್ ಜಾಬ್ಸ ವಾಚ್ ಧರಿಸುತ್ತಿರಲಿಲ್ಲ. ಪ್ಯಾಂಟಿಗೆ ಬೆಲ್ಟ ಹಾಕುತ್ತಿರಲಿಲ್ಲ.
ಈ ನಿಯಮವನ್ನು ಅವರು ಆಪಲ್ ಪ್ರಾಡಕ್ಟ್ ಗಳಿಗೆ ಅನ್ವಯ ಮಾಡಿದರು. ಇವರ ಈ ಆಲೋಚನೆ ಕೀಬೋರ್ಡ್ ಇಲ್ಲದ, ಟಚ್ ಸ್ಕ್ರೀನ್ ಇರುವ ಫೋನ್, ಐಪ್ಯಾಡ್ ಆವಿಷ್ಕಾರಕ್ಕೆ ನಾಂದಿಯಾಯಿತು. ಅಲ್ಲಿ ತನಕ ಮೊಬೈಲ್ ಅಂದ್ರೆ ಬಟನ್ ಗಳಿರಲೇಬೇಕು ಎಂಬ ನಿಯಮವಿತ್ತು. ಆಪಲ್ ಫೋನ್ ಅತ್ಯಂತ
user-friendly (ಉಪಯೋಗಿಸ್ನೇಹಿ) ಎಂದು ಆ ದಿನಗಳಲ್ಲಿಯೇ ಕರೆಯಿಸಿಕೊಂಡಿತು. ಸ್ಟೀವ್ ಜಾಬ್ಸಗೆ ಇದ್ದ ಆ ಮಾನಸಿಕ ಕಾಯಿಲೆ, ಸ್ಟೀವ್ ಜಾಬ್ಸ್ ಆಲೋಚನೆ ಮೇಲೆ ಗಾಢವಾದ ಪ್ರಭಾವ ಬೀರಿತು. ಆಪಲ್ ಕಂಪನಿಗೆ ವರದಾನವಾಗಿ ಪರಿಣಮಿಸಿತು. ೨೦೦೭ ರಲ್ಲಿ ‘ದಿ ವಾಲ್ ಸ್ಟ್ರೀಟ್ ಜರ್ನಲ’ ಪತ್ರಿಕೆ
Hide the Button: Steve Jobs Has His Finger on It ಎಂಬ ಶೀರ್ಷಿಕೆಯಡಿಯಲ್ಲಿ, ಸ್ಟೀವ್ ಜಾಬ್ಸಗಿದ್ದ ಬಟನ್ ಫೋಬಿಯಾ ಬಗ್ಗೆ ಬರೆದಿತ್ತು.
೨೦೦೯ ರಲ್ಲಿ ಖ್ಯಾತ ಲೇಖಕ ನೀಲ್ ಗೈಮನ್ ತನ್ನ ಕಾದಂಬರಿಯನ್ನಾಧರಿಸಿದ ಸಿನಿಮಾ ‘ಕೆರೊಲಿನ್’ ಟ್ರೈಲರ್ ಬಿಡುಗಡೆ ಮಾಡಿದ್ದ. Koumpounophobia ಫೋಬಿಯಾ ಇದ್ದವರು ಯಾವ ರೀತಿ ಭಯಪಡುತ್ತಾರೆ ಎಂಬುದನ್ನು ಆ ಟ್ರೈಲರಿನಲ್ಲಿ ತೋರಿಸಿದ್ದ. ಆ ಸಿನಿಮಾದಲ್ಲಿನ ಮನುಷ್ಯರ ಕಣ್ಣುಗಳ ಜಾಗದಲ್ಲಿ ಬಟನ್ಗಳಿದ್ದವು. ಅಮೆರಿಕದಲ್ಲಿ ಈ ಬಟನ್ ಭಯ ಅಲ್ಲಿನ ಜನಸಂಖ್ಯೆಯ ಶೇ. ಒಂದರಷ್ಟು ಮಂದಿಯಲ್ಲಿ ಇದೆಯಂತೆ. ಇತ್ತೀಚೆಗೆ ಕನ್ನಡದ ಯುವತಿ ಸೋನು ಗೌಡ ಬಟನ್ಗಳಿರುವ ಶರ್ಟನ್ನು ಬಿಚ್ಚಿ, ಒಳ ಉಡುಪನ್ನು ಪ್ರದರ್ಶಿಸಿದ್ದು ವೈರಲ್ ಆಗಿ, ಭಾರಿ ಸುದ್ದಿ ಮಾಡಿತು. ಆ ವಿಡಿಯೋ ‘ಒಂದು ದಿನದಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ಕ್ಲಿಪ್’ ಎಂದು ಅನಿಸಿಕೊಂಡಿತು.
ಪಡ್ಡೆ ಹುಡುಗರು ಅದನ್ನೇ ಟ್ರೋಲ್ ಮಾಡಿ ಸಂತಸಪಟ್ಟರು. ಇದನ್ನು ಗಮನಿಸಿದರೆ ಸೋನು ಗೌಡಗೆ ಈ ಫೋಬಿಯಾ (ಬಟನ್ ಭಯ ಕಾಯಿಲೆ) ಇದ್ದಿರಬಹುದಾ ಎಂಬ ಸಂದೇಹ ಮೂಡಿದರೆ ಆಶ್ಚರ್ಯವಿಲ್ಲ. ಚಂದ್ರಯಾನ ಯಶಸ್ವಿ ಆದ ದಿನ.. ಮೊನ್ನೆ ‘ದೈನಿಕ್ ಭಾಸ್ಕರ್’ ಹಿಂದಿ ಪತ್ರಿಕೆ ಓದುವಾಗ,
ಅಂಕಣಕಾರ ಎನ್.ರಘುರಾಮನ್ ಬರೆದ ಒಂದು ಪುಟ್ಟ ಪ್ರಸಂಗವನ್ನು ಓದುತ್ತಿz. ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದೆನಿಸಿತು. ರಘುರಾಮನ್ ತಮ್ಮ ಒಂದು ಅನುಭವವನ್ನು ಬರೆದಿದ್ದರು-ಚಂದ್ರಯಾನದ ಬಾಹ್ಯಾಕಾಶ ನೌಕೆ ಚಂದ್ರನ ಅಂಗಳದಲ್ಲಿ ಇಳಿಯುತ್ತಿದ್ದಂತೆ ಭಾರತೀಯರೆಲ್ಲರೂ ಖುಷಿಪಟ್ಟರು. ಘೋಷಣೆ ಕೂಗಿ, ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಲ್ಲ ವಯೋಮಾನದವರು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟುಗೂಡಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆದ ಬಗ್ಗೆ ಹೆಮ್ಮೆಯಿಂದ ಮಾತನಾಡತೊಡಗಿದರು. ನಾನು ಅಂದು ಶಿರಡಿಯ ಸಾಯಿಬಾಬಾ ಮಂದಿರದಲ್ಲಿದ್ದೆ.
ಅಲ್ಲಿದ್ದ ಅನೇಕ ಮಂದಿ ತಮ್ಮ ದುಃಖ-ದುಮ್ಮಾನಗಳನ್ನು ಮರೆತು ಚಂದ್ರಯಾನದ ಸಫಲ ಲ್ಯಾಂಡಿಂಗ್ ಬಗ್ಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು. ನಾನೂ ಅದರಲ್ಲಿ ಭಾಗಿಯಾದೆ. ಅಲ್ಲಿದ್ದ ಒಬ್ಬ ವೃದ್ಧರು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ವಿಕ್ರಮ್ ಲ್ಯಾಂಡರ್ ಸಫಲವಾಗಿ ಕೆಲಸ ಮಾಡುವುದು ಸಾಧ್ಯವಾದರೆ ತಾವು ತಮ್ಮ ಪ್ರಿಯ ಖಾದ್ಯವನ್ನು ತ್ಯಜಿಸುವುದಾಗಿಯೂ ದೇವರಲ್ಲಿ ಕೇಳಿಕೊಂಡರು.
ಬಾಬಾ ದರ್ಶನದ ನಂತರ ನಾವು ಬೇರೆಬೇರೆಯಾದೆವು. ಮಂದಿರದಿಂದ ಹೊರಬೀಳುತ್ತಿದ್ದಂತೆ ನನ್ನ ಪರಿವಾರದೊಂದಿಗಿದ್ದ ನಾನು ಊಟಕ್ಕೆ ಯಾವ ರೆಸ್ಟೋರೆಂಟಿಗೆ ಹೋಗುವುದೆಂದು ಯೋಚನೆ ಮಾಡಿದೆ. ಮಂದಿರದ ಮುಂಭಾಗದ ‘ಸಾಯಿ ನೈವೇದ್ಯಂ’ ಹೆಸರಿನ ರೆಸ್ಟೋರೆಂಟಿಗೆ ಹೋದೆವು. ರೆಸ್ಟೋರೆಂಟಿನ ಹೆಸರು ಕೇಳಿ ಅಲ್ಲಿ ಭಕ್ತಿಭಾವನೆಯೇ ಪ್ರಧಾನವಾಗಿರಬಹುದು ಎಂದು ನಾನು ಭಾವಿಸಿದ್ದೆ
ರೆಸ್ಟೋರೆಂಟ್ ಶುಚಿಯಾಗಿತ್ತು. ಟೇಬಲ್ ಮುಂದೆ ಕುಳಿತಿದ್ದ ನಾನು, ದೇಗುಲದೊಳಗೆ ಖಾದ್ಯ ತ್ಯಜಿಸುವುದಾಗಿ ಹೇಳಿದ್ದ ವೃದ್ಧರನ್ನು ನೆನಪಿಸಿಕೊಂಡು, ಅವರು ಯಾವ ಖಾದ್ಯ ತ್ಯಜಿಸಬಹುದು ಎಂದು ಯೋಚಿಸತೊಡಗಿದೆ. ನಾನು ಒಂದು ಪ್ಲೇನ್ ದೋಸೆ ಆರ್ಡರ್ ಮಾಡಿದೆ. ಮೂವತ್ತೇ ಸೆಕೆಂಡುಗಳಲ್ಲಿ
ನನ್ನ ಆರ್ಡರು ಟೇಬಲಿಗೆ ಬಂತು. ತ್ರಿಕೋನಾಕಾರದಲ್ಲಿದ್ದ ಆ ದೋಸೆಯ ಒಂದು ಬದಿಯನ್ನು ಮುರಿದು ಬಾಯಿಗಿಟ್ಟೆ, ಸ್ವಾದಿಷ್ಟವಾಗಿತ್ತು. ನಾನು ದೋಸೆಯನ್ನು ಮಡಚಿ ಎರಡು ಭಾಗಗಳಾಗಿ ತುಂಡರಿಸಿದೆ. ಅದರೊಳಗೆ ಮಸಾಲೆದೋಸೆಯ ಈರುಳ್ಳಿ ತುಣುಕುಗಳನ್ನು ಕಂಡೆ.
ನಾನು ದೇವಾಲಯಗಳಿಗೆ ಹೋಗುವ ದಿನ ಈರುಳ್ಳಿ ತಿನ್ನುವುದಿಲ್ಲ. ಇದರಿಂದ ನಾನು ತುಸು ಗಲಿಬಿಲಿಗೊಳಗಾದೆ. ನನ್ನ ಆಚರಣೆಗೆ ಈ ರೆಸ್ಟೋರೆಂಟಿ ನವರು ಧಕ್ಕೆ ತಂದರ ಎಂದು ಸಿಟ್ಟು ಉಕ್ಕಿ ಬಂತು. ನಂತರ ಗೊತ್ತಾಗಿದ್ದೇನೆಂದರೆ, ಇದು ಬೇರಾರೋ ಆರ್ಡರು ಮಾಡಿದ ದೋಸೆಯಾಗಿತ್ತು, ಆದರೆ
ಅವರು ತುರ್ತಾಗಿ ಬೇರೆ ಹೋಗಬೇಕಿದ್ದ ಕಾರಣ ಆರ್ಡರು ಅವರ ಟೇಬಲಿಗೆ ಬರಲಿಲ್ಲ. ಕಿಚನ್ನಲ್ಲಿದ್ದರ ಅಚಾತುರ್ಯದಿಂದ ಆ ದೋಸೆಯೊಳಗಿದ್ದ ಈರುಳ್ಳಿಯನ್ನು ತೆಗೆದು ನನಗೆ ಕಳುಹಿಸಿದ್ದರು. ಆದರೂ ಅದರೊಳಗೆ ಅಲ್ಲಲ್ಲಿ ಈರುಳ್ಳಿ ತುಣುಕುಗಳ ಉಳಿದಿದ್ದವು.
ನಾನು ಅವರಿಗೆ ತಕ್ಷಣ ಚುರುಕು ಮುಟ್ಟಿಸಿದೆ ಮತ್ತು ಅಲ್ಲಿಂದ ಎದ್ದು ನಡೆದೆ. ಕಾರ್ ಪಾರ್ಕಿಂಗ್ ಸ್ಥಳದ ಬಳಿ ಬರುವಾಗ ಆ ವೃದ್ಧರು ಕಾಣಸಿಕ್ಕರು. ಅವರು ತೆಲಂಗಾಣದ ರೆಡ್ಡಿಗಳು. ರೆಸ್ಟೋರೆಂಟಿನಲ್ಲಿ ನನಗಾದ ಅನುಭವವನ್ನು ಅವರಲ್ಲಿ ಹೇಳಿಕೊಂಡೆ. ಅವರು ಸಾಯಿಬಾಬಾರಲ್ಲಿದ್ದ ಭಕ್ತಿಯನ್ನು ನನ್ನಲ್ಲಿ ಹೇಳಿಕೊಂಡರು. ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲಿಗೆ ಬರುವುದಾಗಿಯೂ, ವಿಕ್ರಮ್ ಲ್ಯಾಂಡಿಂಗ್ ಆಗುವ ದಿವಸವೇ ಪ್ರಾರ್ಥನೆ ಸಲ್ಲಿಸಲು ಬಂದಿರುವುದಾಗಿಯೂ ತಿಳಿಸಿದರು. ಅಲ್ಲದೇ ಮಾತು ಮುಂದುವರಿಸಿ, ಇನ್ನೊಬ್ಬರ ಭಕ್ತಿ-ಭಾವನೆಗಳನ್ನು ಗೌರವಿಸದೇ ಇರುವ ಇಂಥ ರೆಸ್ಟೋರೆಂಟುಗಳ ಮಾಲೀಕರು, ಲಾಭವೊಂದನ್ನೇ ಉದ್ದೇಶವಾಗಿಟ್ಟುಕೊಂಡಿರುತ್ತಾರೆ. ಯಾರು ತಮ್ಮ ತಪ್ಪನ್ನು ಒಪ್ಪಿಕೊಂಡು ತಮ್ಮನ್ನು ಸುಧಾರಿಸಿಕೊಳ್ಳುತ್ತಾರೋ ಆಗ ಅವರ ವ್ಯಕ್ತಿತ್ವಕ್ಕೆ ಹೊಳಪು ಬರುತ್ತದೆ. ಚಂದ್ರನ ಕುರಿತಾಗಿ ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ ಎಂದಿದೆಯಲ್ಲ.
ಚಂದ್ರನ ಮೇಲೆ ಲ್ಯಾಂಡ್ ಆದ ಮೇಲೆ ನಮಗೆ ಇನ್ನೂ ಏನೇನೋ ಹೊಸ ಸಂಗತಿಗಳು ಕಲಿಯುವುದು ಸಾಧ್ಯವಾಗಿದೆ. ನನಗೆ ಅರ್ಥವಾಗಿದ್ದು ತೀರಾ
ಸರಳವಾದದ್ದು. ಅಪ್ರಾಮಾಣಿಕತೆ ನಮ್ಮನ್ನು ಅಮಾವಾಸ್ಯೆಯೆಡೆಗೆ ಒಯ್ಯುತ್ತದೆ. ಆದರೆ ನಮ್ಮ ತಪ್ಪನ್ನು ಒಪ್ಪಿ ಮುನ್ನಡೆದರೆ ಆಗ ನಾವು ಹುಣ್ಣಿಮೆ ಯತ್ತ ಸಾಗುತ್ತೇವೆ. ಇಷ್ಟು ದಿನ ಚಂದ್ರ ನಮಗೆ ಕೈಗೆಟುಕದ ಚಂದಮಾಮ ಆಗಿದ್ದ. ಈಗ ಆತನ ಮೇಲೆಯೂ ನಾವು ಪಭುತ್ವ ಸಾಽಸಿದ್ದೇವೆ. ಭೂಮಿ ಮತ್ತು ಚಂದ್ರನ ಮಧ್ಯೆ ಸಂಪರ್ಕ ಸಾಧ್ಯವಾಗಿರುವುದರಿಂದ, ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ.