“ಇಂದುಇಲ್ಲಿ ಸನ್ಮಾನಿತರಾಗಿರುವ ಹತ್ತುಜನರೂ ಮಹತ್ತರ ಸಾಧನೆ ಮಾಡಿದ್ದು, ತಮ್ಮ ಸಾಧನೆಯ ಹಾದಿಯಲ್ಲಿ ಅನೇಕ ಮುಳ್ಳುಗಳನ್ನು ಎದುರಿಸಿ ಬಂದಿದ್ದಾರೆ.ಸಮಾಜಕ್ಕೆ ಬಹು ದೊಡ್ಡಕೊಡುಗೆ ನೀಡಿರುವಇಂತಹ ಸಾಧಕರನ್ನು ಮೆಚ್ಚಿಅವರ ಬೆನ್ನುತಟ್ಟುವ ಮನೋಭಾವವನ್ನು ನಾವೆಲ್ಲಾ ಹೊಂದಿರಬೇಕು.ಬದುಕು ಶಾಶ್ವತವಲ್ಲ ಸಾಧನೆ ಶಾಶ್ವತಎಂಬುದನ್ನುಎಲ್ಲರೂಅರಿಯಬೇಕು” ಎಂದು ವಿಶ್ರಾಂತಐ.ಎ.ಎಸ್.ಅಧಿಕಾರಿ ಡಾ.ಸಿ.ಸೋಮಶೇಖರ ಮನವಿ ಮಾಡಿಕೊಂಡರು.
೧-೧೦-೨೦೨೩ರ0ದು ಎಫ್.ಕೆ.ಸಿ.ಸಿ.ಐ ಸರ್ ಎಂ.ವಿ.ಸಭಾ0ಗಣದಲ್ಲಿಏರ್ಪಾಡಾಗಿದ್ದ ಎ.ಎಸ್.ವಿ.ಎನ್. ವಿ.ಹಿರಿಯ ವಿದ್ಯಾರ್ಥಿಗಳ ಸಂಘದ ೧೫ನೇ ವಾರ್ಷಿಕೋತ್ಸವ, ೮ನೇ ಸ್ನೇಹ ಸಮ್ಮಿಲನ ಹಾಗೂ ಸಂಘದ ವೆಬ್‌ಸೈಟ್ ಲೋಕಾರ್ಪಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್ ಹದಿನೈದು ವರ್ಷಗಳಿಂದ ಮಾನವೀಯ ನೆಲೆಯಲ್ಲಿ ರಚನಾತ್ಮಕ ವಾಗಿ ಕಾರ್ಯ ನಿರ್ವಹಿಸುತ್ತಿರುವ ನಗರ್ತ ಹಿರಿಯ ವಿದ್ಯಾರ್ಥಿಗಳ ಸಂಘದಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು. ತಾವೇ ರಚಿಸಿರುವ “ತಪ್ಪುಮಾಡದವರುಯಾರವರೇ” ಮತ್ತಿತರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಸಂಘದ ಅಧ್ಯಕ್ಷ ಬಿ.ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಎಸ್.ವಿ.ಎನ್.ವಿ. ಸಂಘದ ಅಧ್ಯಕ್ಷ ಎಸ್.ಪ್ರಕಾಶ್ ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು. ರೇಡಿಯೋ ಜಾಕಿ ಮಧುಚೈತ್ರಾ ನಿರೂಪಿಸಿದರು. ನಗರ್ತ ಸಮುದಾಯದ ವಿವಿಧ ಸಂಘಟನೆಗಳು ನಡೆದು ಬಂದ ದಾರಿಯ ಬಗ್ಗೆ ವಿಡಿಯೋ ಪ್ರದರ್ಶನವೂ ನಡೆಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸಿ.ಗಿರೀಶ್ ಸ್ವಾಗತಿಸಿದರು. ಸಮುದಾಯದ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.