ತುಂಟರಗಾಳಿ
ಸಿನಿಗನ್ನಡ
ಈಗ ನಡೀತಾ ಇರೋ ಕಾವೇರಿ ಕಿರಿಕ್ ನೋಡಿ ಜಯಲಲಿತ ಕಾಲದ ಕಥೆ ನೆನಪಾಯ್ತು. ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವ್ರು ಕಾವೇರಿ ವಿವಾದದ ಸಮಯದಲ್ಲಿ ಅಮೆರಿಕಕ್ಕೆ ಅಕ್ಕ ಸಮ್ಮೇಳನಕ್ಕೆ ಅಂತ ಹೋಗಿದ್ರು. ಅಂಬಿ ಇದರ ಬಗ್ಗೆ ಏನೂ ಮಾತಾಡಲಿಲ್ಲ ಅಂತ ಜನ ಬೇಸರ ಮಾಡಿಕೊಂಡಿದ್ರು.
ಅಮೆರಿಕದಿಂದ ಬಂದ ಮೇಲೆ ಅಂಬರೀಷ್ ಅವರು ತಿಪ್ಪೆ ಸಾರಿಸೋ ಥರ ಮಾತಾಡಿ ಸುಮ್ಮನಾಗಿದ್ದರು. ಆದರೆ, ನಿಜಕ್ಕೂ ನಮ್ಮ ಅಂಬಿ ರೆಬೆಲ್ ಸ್ಟಾರ್ ಶೈಲಿಯಲ್ಲಿ ಹೀಗೆ ಮಾತಾಡಬೇಕಿತ್ತು ಅಂತ ಜನರಿಗೆ ಅನ್ನಿಸಿತ್ತು. ಹೇಗೆ? ಮುಂದೆ ಇದೆ, ಓದಿ. ನಾನು ಕಾವೇರಿ ಗಲಾಟೆ ಆದ ಟೈಮಲ್ಲಿ ಊರಲ್ಲಿ ಇರಲಿಲ್ಲ. ಅಮೆರಿಕಕ್ಕೆ ಅಕ್ಕನ ನೋಡೋಕೆ ಹೋಗಿz. ಹಂಗಾಗಿ ಈ ಅಮ್ಮನ ವಿಚಾರಿಸಿಕೊಳ್ಳೋಕೆ ಆಗಲಿಲ್ಲ. ಈಗ ಜಯಲಲಿತಾ ಅವರನ್ನು ಕರೆಸಿ ಮಾತನಾಡೋಣ ಅಂದ್ರೆ ನೀರಿಗೆ ಬಂದವಳು, ಊರಿಗೆ ಮಾತ್ರ ಬರಲ್ಲ ಅಂತಾಳೆ. ನಮ್ಮತ್ರ ನೀರಿಲ್ಲ ಅಂದ್ರು ಮತ್ತೆ ಮತ್ತೆ ನೀರು ಬಿಡಿ ಅಂತ ಕೇಳ್ತಾರೆ. ಹೊಟ್ಟೆಗೆ ಅದೇನ್ ಅನ್ನ ತಿಂತಾರೋ, ಇಲ್ಲ ಉಪ್ಪು ತಿಂತಾರೋ ಗೊತ್ತಿಲ್ಲ. ಯಾವಾಗಲೂ ಬರೀ ನೀರು ಕೇಳುತ್ತಾರೆ.
ಇರ್ಲಿ, ಆದ್ರೂ ನಾವು ನೀರು ಬಿಡಲ್ಲ. ಹಂಗೆ ನೀರು ಕೇಳೋ ಅವರನ್ನೂ ಸುಮ್ನೆ ಬಿಡಲ್ಲ. ಅವರ ಮೈಯಲ್ಲಿ ಹರಿತಿರೋದು ಕಾವೇರಿ ನೀರೇ ಅನ್ನೋದನ್ನು ಅವರು ಮರೆತಿzರೆ. ನೀರು ಕುಡಿದೋರು ಸುಸ್ಸು ಮಾಡಲೇ ಬೇಕು, ಮಾಡಿಕೊಳ್ಳೋ ಹಾಗೆ ಮಾಡ್ತೀವಿ. ಜಯ ‘ಲಲಿತಾ ಸಹಸ್ರನಾಮ’ ಮಾಡೋ ಅಲ್ಲಿನ ರಾಜಕಾರಣಿಗಳ ಥರ ಅಲ್ಲ ನಾವು. ಇಲ್ಲಿ ನಮ್ಮ ಜನಾನೇ ಕುಡಿಯುವ ನೀರಿಗೆ ಕ್ಯೂನಲ್ಲಿ ನಿಂತ್ಕೊಂಡಿರ್ತಾರೆ. ಇನ್ನುಇವರಿಗೆ ಕ್ಯೂಸೆಕ್ಸ ಗಟ್ಟಲೆ ನೀರು ಬಿಡಕ್ಕಾಗುತ್ತಾ?. ಇವರಿಗೆ ಡಿ ಹೈಡ್ರೇಶನ್ ಅದಾಗಲೆಲ್ಲ ಕೆಆರ್ಎಸ್ ನೀರೇ ಬೇಕು ಅಂತಾರೆ. ಯಾಕೆ, ಓಆರ್ಎಸ್ ಕುಡಿದರೆ ಆಗಲ್ವಾ? ಸುಮ್ನೆ, ನೀರು ಬಿಡಿ ಅಂದ್ರೆ ಎಲ್ಲಿಂದ ಬಿಡೋದು? ಇಲ್ಲಿ ನಮಗೆ ಕುಡಿಯೋಕೇ’ ನೀರಿಲ್ಲ.’
ಲೂಸ್ ಟಾಕ್
ಏನ್ ಪುಕೆ ಅವ್ರೇ..
– ರೀ, ಏನ್ರೀ ಅದೂ ಪುಕೆ ಅಂತ, ಕೆಟ್ಟದಾಗಿ ಕೇಳ್ಸುತ್ತೆ, ನನ್ನ ಹೆಸ್ರು ಪುನೀತ್ ಕೆರೆಹಳ್ಳಿ ಅಂತ. ಹೇಳೋದಿದ್ರೆ ಪೂರ್ತಿ ಹೆಸರು ಹೇಳಿ
ನಿಮ್ಮನ್ನ ಶಾರ್ಟ್ ಆಗಿ ಪುಕೆ ಅಂತ ಕರೀತಾರೆ ಅಂದ್ಕೊಂಡಿದ್ದೆ, ಎಲೆಕ್ಷನ್ ಟೈಮಲ್ಲಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದಾಗ ಸೆಕೆ, ಪುಕೆ ಅಂದಿದ್ರಲ್ಲ ,
ಅದು ನಿಮಗಲ್ವಾ?
– ಓಹ್ ಹೌದಾ? ಗೊತ್ತಿರಲಿಲ್ಲ ಯೋಗಿಜಿ ಹೇಳಿದ್ದಾರೆ ಅಂದ್ಮೇಲೆ ಸೆಕೆ, ಪುಕೆ ಎ ಓಕೆ
ಅದಿರ್ಲಿ, ಆಸ್ಪತ್ರೆಯಲ್ಲಿ ಡಾಕ್ಟರು ಡೀ ಹೈಡ್ರೇಷನ್ ಆಗಿದೆ, ಲಿಕ್ವಿಡ್ ಪುಡ್ ತಗೊಳ್ಲಿ ಅಂದ್ರೆ ಅವರ ಮಾತೇ ಕೇಳ್ತಾ ಇಲ್ವಂತೆ?
– ನಾನು ಕೇಳೋ ಅಂಥ ಲಿಕ್ವಿಡ್ ಫುಡ್ ಕೊಟ್ರೆ ನಾನ್ಯಾಕೆ ಬೇಡ ಅಂತೀನಿ..
ಅವ್ರು ಡಾಕ್ಟರು ಕಣ್ರೀ, ಮಕ್ಕಳಿಗಷ್ಟೇ ಅವರು ಬ್ರಾಂಡಿ ಕೊಡೋದು. ಸರಿ, ರೌಡಿ ಥರ ಆಡಿದ್ದಕ್ಕೆ ತಾನೇ ನಿಮ್ಮನ್ನ ಜೈಲಿಗೆ ಹಾಕಿದದು. ಈಗ್ಲೂ ಹಂಗೇ
ಆಡ್ತಾ ಇದ್ದೀರಲ್ಲ, ಸರಿನಾ?
ಏನ್ ಮಾಡೋಕಾಗುತ್ತೆ?. ನಾನು ಪುನೀತ್.. ಆದ್ರೆ ರಾಜ್ ಕುಮಾರ್ ಅಲ್ಲ.
ಸರಿ, ಪುನೀತ್ ರಾಜ್ ಕುಮಾರ್ ಅವರ ಅಣ್ಣಾ ಬಾಂಡ್ ಸ್ಟೆ ಲಲ್ಲಿ, ಈ ಪುನೀತ್ ನಮ್ಮ ಸರ್ಕಾರಕ್ಕೆ ಏನ್ ಹೇಳೋಕೆ ಇಷ್ಟಪಡ್ತಾರೆ?
– ಅರೆ ಮಾಡ್ಬಿಡಿ, ಜೈಲಿಗೋಗ್ತೀನಿ, ರಿಲೀಸ್ ಮಾಡ್ಬೇಡಿ, ರೌಡಿ ಆಗ್ತೀನಿ, ಟಡಾಂ ಟಾಂಟ ಟಡಡಾಣ್, ಕೆಂಪು ಬಸ್ಸಿಗೆ ಬೆಂಕಿ ಹಚ್ತಿನಿ, ವಿಧಾನ್ ಸೌಧಕೆ ಕಲ್ಲು
ಹೊಡಿತಿನಿ ಟಡಾಂ ಟಾಂಟ ಟಡಡಾಣ್..
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಒಂದು ಗಿಣಿ ಅಂಗಡಿಗೆ ಹೋದ. ಪಂಜರದಲ್ಲಿರೋ ಎರಡು ಮಾತಾಡೋ ಗಿಣಿಗಳನ್ನು ನೋಡಿದ. ತುಂಬಾ ಇಷ್ಟ ಆಯ್ತು ಅವನಿಗೆ. ಆ ಎರಡು ಗಿಣಿಗಳೂ ಹೆಣ್ಣು ಗಿಣಿಗಳಾಗಿದ್ವು. ಅವನ್ನು ಮಾತಾಡಿಸೋಕೆ ಅಂತ, ಹಾಯ, ಹ್ಯಾವಿಂಗ್ ಫೋನ್?’ ಅಂತ ಕೇಳಿದ ಖೇಮು. ಅದಕ್ಕೆ ಆ ಗಿಣಿಗಳು, ಲೋ ಮಚ್ಚಾ,, ನಾವಿಲ್ಲಿ ನಮಗೆ ಬಾಯ್ ಫ್ರೆಂಡ್ ಇಲ್ಲ ಅಂತ ಬರಗೆಟ್ಟು ಕೂತಿದ್ದೀವಿ, ಹ್ಯಾವಿಂಗ್ ಫೊನ್ ಅಂತ ಕೇಳ್ತೀಯಾ, ನಿನ್ ಮುಖ ಮುಚ್ಚಾ’ ಅಂತ ಬೈದ್ವು. ಅಂಗಡಿಯವನು ಬ್ಯಾಡ ಸರ್, ಆ ಗಿಣಿಗಳು ತುಂಬಾ ಮಾಡರ್ನ್ ಗಿಣಿಗಳು, ಸುಮ್ನೆ ಏನೇನೋ ತರ್ಲೆ ಮಾತಾಡ್ತವೆ’ ಅಂತ ಹೇಳ್ದ.
ಆದ್ರೂ ಖೇಮು ಬಿಡಲಿಲ್ಲ. ಇಲ್ಲ ನಂಗೇ ಅವೇ ಬೇಕು ಅಂತ ಹಠ ಹಿಡಿದು ಗಣಿಗಳನ್ನು ಕೊಂಡುಕೊಂಡು ಹೋದ. ಖೇಮು ಅವನ್ನ ಮನೆಗೆ ತಂದು ಪಂಜರದಲ್ಲಿ ಹಾಕಿ ನೇತು ಹಾಕೆ. ಆದ್ರೆ ಆ ಗಿಣಿಗಳು ಯಾವಾಗ್ಲೂ ಅಯ್ಯೋ, ನಮಗೆ ಈ ಜನ್ಮದಲ್ಲಿ ಬಾಯ್ ಫ್ರೆಂಡ್ ಸಿಗಲ್ಲ, ಇವ್ರ್ ನೋಡಿದ್ರೆ ನಮ್ಮನ್ನ ಇಲ್ಲಿ ತಂದು ಕೂಡಿ
ಹಾಕಿದ್ದಾರೆ, ನಮ್ಮ ಹಣೆಬರಹ’ ಅಂತ ವಟ ವಟ ಅಂತಾನೇ ಇದ್ವು. ಖೇಮುಗೂ ದಿನಾ ಇದನ್ನೇ ನೋಡಿ ನೋಡಿ ಸಾಕಾಯ್ತು.
ಫ್ರೆಂಡ್ ಹತ್ರ ವಿಷ್ಯ ಹೇಳಿದ. ಅವನು ಬಾ ನನ್ನ ಜೊತೆ ಅಂತ ಒಂದು ಆಶ್ರಮಕ್ಕೆ ಕರ್ಕೊಂಡು ಹೋದ. ಅಲ್ಲಿನ ಸ್ವಾಮೀಜಿಗೆ ಸಮಸ್ಯೆ ಹೇಳಿಕೊಂಡ ಖೇಮು ಅದಕ್ಕೆ, ಸ್ವಾಮೀಜಿ, ನೋಡಪ್ಪಾ, ಮನುಷ್ಯ ಆಗ್ಲಿ ಗಿಣಿ ಆಗ್ಲಿ, ಅವು ಬೆಳೆದಿರೋ ವಾತಾವರಣದ ಮೇಲೆ ಅವರ ವರ್ತನೆ ಡಿಪೆಂಡ್ ಆಗುತ್ತೆ. ಅದೇ ನಮ್ಮ ಆಶ್ರಮದಲ್ಲೂ ಎರಡು ಗಂಡು ಗಿಣಿ ಇವೆ. ಗಂಡು ಗಿಣಿಗಳಾದ್ರೂ ಗರ್ಲ್ ಫ್ರೆಂಡ್ ಬೇಕು ಅನ್ನದೆ ಯಾವಾಗ ನೋಡಿದರೂ ಮಾಲೆ ಹಿಡ್ಕೊಂಡು ಜಪ ಮಾಡ್ತಾ ಪ್ರಾರ್ಥನೆ ಮಾಡ್ತಾ ಇರ್ತವೆ. ಅವುಗಳ ಜೊತೆ ನಿನ್ನ ಗಿಣಿಗಳನ್ನು ತಂದು ಬಿಡು. ತಾವಾಗೇ ಸರಿ ಹೋಗ್ತವೆ’ ಅಂದ್ರು.
ಸರಿ ಅಂತ ಹೇಳಿ ಖೇಮು ತನ್ನ ಗಿಣಿಗಳನ್ನು ತಂದು ಆಶ್ರಮದ ಗಿಳಿಗಳ ಜೊತೆ ಬಿಟ್ಟ. ಆಶ್ರಮದ ಗಿಣಿಗಳನ್ನು ನೋಡಿ, ಖೇಮು ಮನೆ ಗಿಣಿಗಳು, ನಾವಿಲ್ಲಿ ಬಾಯ್ ಫ್ರೆಂಡ್ ಇಲ್ಲ ಅಂತ ಸಾಯ್ತಾ ಇದ್ರೆ, ಈ ನನ್ಮಕ್ಕಳು ಜನ ಮಾಡ್ತಾ ಕುಂತವ್ರೆ ಅಂತ ಎಂದಿನಂತೆ ಬೈಕೊಂಡ್ವು. ಅದನ್ನು ಕೇಳಿದ ಒಂದು ಆಶ್ರಮದ ಗಿಣಿ ತನ್ನ ಕೈಯಲ್ಲಿದ್ದ ಜಪಮಾಲೆಯನ್ನು ಪಕ್ಕಕ್ಕಿಡ್ತಾ ಇನ್ನೊಂದು ಣಿಗೆ ಹೇಳಿತು, ಬ್ರದರ್, ಕೊನೆಗೂ ದೇವರು ನಮ್ಮ ಪ್ರಾರ್ಥನೆಗೆ ಪ್ರತಿಫಲ ಕೊಟ್ಟ’
ಲೈನ್ ಮ್ಯಾನ್
ಗಣಪತಿ ಪೆಂಡಾಲ್ ನಲ್ಲಿ ಸೊಂಟದ ವಿಷ್ಯ ಬ್ಯಾಡಮ ಶಿಷ್ಯ, ಸೊಂಟ ಸೂಪರು ಆದ್ರೆ ಭಾರಿ ಡೇಂಜರು ಅಂತ ಹಾಡು ಹಾಕಿದ್ರು
– ಮೋಸ್ಟ್ಲೀ, ಗಣಪತಿ ಸೊಂಟದಲ್ಲಿರೋ ಹಾವಿನ ಬಗ್ಗೆ ಹೇಳ್ತಿರಬೇಕು ಬಿಡಿ.
ಬಾಂಡ್ಲಿಯಲ್ಲಿ ಹಾಕಿದ ಪೂರಿ ಎದ್ದೇಳಬೇಕು ಅಂದ್ರೆ ಏನ್ ಮಾಡಬೇಕು ?
– ರಾಷ್ಟ್ರಗೀತೆ ಹಾಕ್ಬೇಕು
ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ನೋಡೋಕೆ ಜನನೇ ಬರ್ತಾ ಇಲ್ವಂತೆ.
– ಅದಕ್ಕೇ ಹೇಳೋದು, ದೇಶದಲ್ಲಿ ಎಲೆಕ್ಷನ್ ರಾಜಕೀಯದ ಹವಾ ಕಮ್ಮಿ ಮಾಡಿ ಅಂತ. ಈಗ ಜನ ಕ್ರಿಕೆಟ್ ಮ್ಯಾಚಿಗೂ ೫೦೦ ರುಪಾಯಿ
ಜೊತೆಗೆ ಬಿರಿಯಾನಿ ಕೇಳ್ತಾರೆ.
ಕೂಲ್ ಕಸ್ಟರ್ಮ ಅಂದ್ರೆ ಯಾರು?
– ಐಸ್ ಕ್ರೀಮ್ ಅಂಗಡಿಯ ಗ್ರಾಹಕ
ಸಿನಿಮಾ ರಂಗದಲ್ಲಿ ಸಂಭಾವಿತರು ಅಂದ್ರೆ ಯಾರು?
– ಸಂಭಾವನೆ ಕೇಳದೇ ಇರೋರು
ಸಿಗರೇಟು ಸೇದೋದನ್ನ ಬಿಡಲಾಗದವನಿಗೆ ಏನು ಹೇಳಬೇಕು?
– ಸುಟ್ಟು’ ಗುಣ ಸುಟ್ಟರೂ ಹೋಗಲ್ಲ
ಎಣ್ಣೆ ಹೊಡೆದು ಮಾಡೋ ವಿಡಿಯೋ ಕಾಲ್
– ಝೂಮ್ ಕಾಲ್
ಲೈಟ್ ಹಾರ್ಟೆಡ’ ಮನುಷ್ಯ ಅಂದ್ರೆ ಯಾರು?
– ಎದೆಯಲ್ಲಿ ಜ್ಞಾನದ ಹಣತೆ ಇರೋನು
ಟೆಲಿಪ್ರಾಂರ್ಪ್ಟನಲ್ಲಿ ಆಡೋ ಮಾತು
– ಕಿವಿಮಾತು
ಮಂಜು ಸುರಿದು ಆಗುವ ಸಾವು ನೋವಿಗೆ ಕಾರಣ
-ಸ್ನೋ ಪಾಯಿಸನ್