ತುಂಟರಗಾಳಿ
ಸಿನಿಗನ್ನಡ
ಪರಭಾಷಾ ಸಿನಿಮಾಗಳ ಜೊತೆ ಕನ್ನಡ ಸಿನಿಮಾಗಳ ಒದ್ದಾಟ, ಗುದ್ದಾಟ ಇಂದು ನಿನ್ನೆಯದಲ್ಲ. ಇದಕ್ಕೆ ಕಾವೇರಿ ನೀರಿನ ಸಮಸ್ಯೆಯಷ್ಟೇ ದೊಡ್ಡ ಇತಿಹಾಸ ಇದೆ. ಹಿಂದೆ ಒಂದ್ ಲೆಕ್ಕದಲ್ಲಿ ಇದು ನಿಯಂತ್ರಣದಲ್ಲಿತ್ತು. ಆದರೆ ಈಗ ಹೇಳೋರು ಕೇಳೋರೂ ಯಾರೂ ಇಲ್ಲ. ಅದರಲ್ಲೂ ಈ ಮಲ್ಟಿ
ಪ್ಲೆಕ್ಸ್ ಗಳು ಬಂದ ಮೇಲೆ ಅವರದ್ದೇ ಆಟ, ನಮ್ಮ ಕನ್ನಡ ಚಿತ್ರಗಳಿಗೆ ದಿನ ನಾಲ್ಕು ಆಟ ಅನ್ನಂಗಿಲ್ಲ. ನಮಗೆ ಅವರು ಕೊಟ್ಟಷ್ಟೇ ಆಟ. ಈಗ ತಮಿಳಿನ
ಲಿಯೋ ಮತ್ತು ಕನ್ನಡದ ಘೋ ಸಿನಿಮಾಗಳ ನಡುವೆಯೂ ಇದೇ ಸಮಸ್ಯೆ ಆಗಿತ್ತು.
ಕಡೆಗೆ ಲಿಯೋಗೆ ನಿರೀಕ್ಷಿತ ಯಶಸ್ಸು ಸಿಗದೆ ಚಿತ್ರಮಂದಿರಗಳ ಸಂಖ್ಯೆ ಕಮ್ಮಿ ಆಗಿದೆ. ಅಲ್ಲದೆ ಲಿಯೋ ಚಿತ್ರದ ಟಿಕೆಟ್ ದರ ಕೂಡಾ ಗಾಬರಿ ಬೀಳಿಸು ವಂತಿತ್ತು. ಇದು ಮಲ್ಟಿಪ್ಲೆಕ್ಸ್ ಗಳ ದರ್ಬಾರು ನಿಜ. ಆದರ ಇದರಲ್ಲಿ ನಾವು ಕನ್ನಡಿಗರು ಮಾಡೋ ಕೆಲಸನೂ ಇದೆ. ಲಿಯೋ ಸಿನಿಮಾಗೆ ಅಷ್ಟೊಂದ್ ಸ್ಕ್ರೀ, ೨೦೦೦ ರೂಪಾಯಿ ಟಿಕೆಟ್ ಅಂತ ಬೇರ್ಜಾ ಮಾಡ್ಕೋತಾ ಇದ್ದೀವಿ. ಬೆಂಗಳೂರಲ್ಲಿ ಅಚ್ಚ ತಮಿಳರು ಎಷ್ಟಿದ್ದಾರೆ? ಅವರೆಲ್ಲ ತಮಿಳು ಸಿನಿಮಾ ಬಿಡುಗಡೆ ಆದ ಕೂಡ್ಲೇ ಒಟ್ಟಿಗೇ ಬಂದು ನೋಡಿದ್ರೂ ಅದೆಷ್ಟು ಶೋ ತುಂಬಿಸಬಹುದು? ಅದರಲ್ಲೂ ಒಂದು ಸಿನಿಮಾಗೆ ೧೫೦೦-೨೦೦೦ ರೂಪಾಯಿ ಕೊಟ್ಟು ಸಿನಿಮಾ ನೋಡೋ ಶ್ರೀಮಂತ ತಮಿಳರು ಎಷ್ಟಿದ್ದಾರೆ? ಕಾರ್ಮಿಕ ವರ್ಗದವರೇ ಜಾಸ್ತಿ ಇರೋದು.
ಅವರು ಯಾರೂ ೨೦೦೦ ರೂಪಾಯಿ ಕೊಟ್ಟು ಸಿನಿಮಾ ನೋಡಲ್ಲ. ಸೋ, ಇವೆಲ್ಲ ನೋಡೋದು ನಾವೇ. ನಮ್ಮ ವಾಣಿಜ್ಯ ಮಂಡಳಿ ಸುಮ್ನೆ ಇದೆ. ಪರಭಾಷೆ ಸಿನಿಮಾಗಳನ್ನ ೬ ವಾರ ಆದ್ಮೇಲೆ ಬಿಡುಗಡೆ ಮಾಡ್ಬೇಕು ಅಂತೀವಲ್ಲ. ಆ ೬ ವಾರಗಳ ಗಡುವನ್ನ ನಮಗೆ ನಾವೇ ಹಾಕ್ಕೊಂಡ್ರೆ, ಇದೇ ಸಿನಿಮಾ ೬ ವಾರದಲ್ಲಿ ಟಠಿಠಿ ಗೆ ಬರುತ್ತೆ. ಮುಂದಿನ ಸಲ ತಮಿಳ್ ಸಿನಿಮಾ ರಿಲೀಸ್ ಆದಾಗ ಜನ ಬರಲ್ಲ ಅಂತ ಮಲ್ಟಿಪ್ಲೆಕ್ಸ್ ನೋರು ಇಷ್ಟು ಸ್ಕ್ರೀ ಕೊಡಲ್ಲ. ಟಿಕೆಟ್ ಗೆ ಇಷ್ಟು ರೇಟ್ ಇಡಲ್ಲ ಅಷ್ಟೇ. ಡಿಮ್ಯಾಂಡ್ ಇಲ್ಲ ಅಂದ್ರೆ ಯಾರೂ ಸಪ್ಲೈ ಮಾಡಲ್ಲ ಅನ್ನೋದಂತೂ ನಿಜ.
ಲೂಸ್ ಟಾಕ್ – ಸಿಎಂ ಇಬ್ರಾಹಿಂ
ಏನ್ ಇಬ್ರಾಹಿಂ ಸಾಹೇಬ್ರೇ, ಕುಮಾರಸ್ವಾಮಿ ಉಚ್ಛಾಟನೆ ಮಾತೀನಿ ಅಂತಿದ್ರಿ, ನಿಮ್ಮನ್ನೇ ಹೊರಗೆ ಕಳಿಸಿಬಿಟ್ರಲ್ಲ?
– ಏನ್ ಮಾಡೋದು ಸ್ವಾಮಿ, ಜೆಡಿಎಸ್‌ನ ಬಿಜೆಪಿ ಬಿ ಟೀಂ ಅತಿದ್ರು, ಈಗ ಜೆಡಿಎಸ್‌ನ ಬಿ ಟೀಂ ಆಗುತ್ತೆ ಅಂದ್ರೆ ಯಾರೇನ್ ಮಾಡೋಕಾಗುತ್ತೆ?
ಅಂದ್ರೆ, ಕುಮಾರಸ್ವಾಮಿ ಅವರ ವಿರುದ್ಧ ಚಾಲೆಂಜ್ ಮಾಡೋಕೆ ರೆಡಿ ಇದ್ದೀರ ಅಂತಾಯ್ತು.
– ಅಯ್ಯೋ, ಇವರ ಮೇಲೆ ನಾನ್ಯಾಕೆ ಚಾಲೆಂಜ್ ಮಾಡ್ಲಿ? ನನ್ನ ಲೆವೆ ಬೇರೆ. ನಾನು ಸಿಎಂ ಇಬ್ರಾಹಿಂ, ನನ್ನ ಸ್ಪರ್ಧೆ ಏನಿದ್ರೂ ಮುಖ್ಯಮಂತ್ರಿ ಚಂದ್ರು ಅವರ ಜೊತೆ.
ಸರಿ,ರಾಜ್ಯಾಧ್ಯಕ್ಷರಾಗಿ ಪಕ್ಷದೊಳಗಿನ ಭಿನ್ನಾಭಿಪ್ರಾಯಕ್ಕೆ ಬೇರೆ ಉಪಾಯ ಕಂಡು ಹಿಡೀಬಹುದಿತ್ತು ಅಲ್ವಾ?
– ಇನ್ನೇನ್ ಮಾಡ್ಬೇಕಿತ್ತು. ಇಬ್ರಾಹಿಂ ಅಂತ ಹೆಸರಿದೆ ಅಂದಮಾತ್ರಕ್ಕೆ ದರ್ಗಾಕ್ಕೆ ಹೋಗಿ ಹ್ರಾಂ, ಹ್ರೀಂ, ಅಂತ ಮಂತ್ರ ಹಾಕಿಸ್ಬೇಕಿತ್ತಾ?
ಹಂಗಲ್ಲ, ಆದ್ರೂ ಜೆಡಿಎಸ್ ಮೊದ್ಲೇ ಕಷ್ಟದಲ್ಲಿದೆ, ಈಗ ನೀವೂ ಕೈ ಬಿಟ್ರೆ ಪಕ್ಷದ ಗತಿ?
– ನಂದೇನೂ ತಪ್ಪಿಲ್ಲ. ಮೊದ್ಲೇ ಅಪ್ಪ ಮಕ್ಳನ್ನ ಬಿಟ್ರೆ ಜೆಡಿಎಸ್ ಬಣ, ಬಣ ಅಂತಿತ್ತು. ಈಗ ಇನ್ನೊಂದು ಬಣ ಶುರು ಆಗುತ್ತೆ ಅಷ್ಟೇ.
ಮಹಿಳೆಯ ತಲೆ ಮೇಲೆ, ತೆನೆ ಅಲ್ಲ ಬಣವೆ ಹೊರೆಸಿದ್ರೂ ಈ ಪಕ್ಷದ ಬವಣೆ ತಪ್ಪಲ್ಲ.
ಅಂತೂ ಪಕ್ಷನ ಎರಡು ಭಾಗ ಮಾಡೋಕೆ ತಯಾರಾಗಿದ್ದೀರ. ಅದ್ರ ಬದ್ಲು ನೀವೇ ಹೊಸ ಪಕ್ಷ ಕಟ್ಟಬಹುದಲ್ವಾ?
– ಸ್ವಾಮೀ, ನಾನು ಬಡವ, ನೊಂದಿದೀನಿ, ದುಡ್ಡಿಲ್ಲ ನನ್ನತ್ರ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮುಗೆ ಯಾವಾಗ್ಲೂ ಇನ್ನೊಬ್ಬರ ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೆ ‘ಮೈ ಫುಟ್’ ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು ಇನ್ನೊಬ್ಬರು ಯಾರಾದ್ರೂ ಹೊಗಳಿದ್ರೆ ಸಾಕು, ‘ಅಯ್ಯೋ, ಅದೇನ್ ಮಹಾ, ಮೈ ಫುಟ್’ ಅಂತಲೇ ಮಾತು ಶುರು ಮಾಡ್ತಾ ಇದ್ದ.
ಹಾಗಾಗಿ ಖೇಮು ಕಂಡ್ರೆ ಆಫೀಸಿನಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಆದರೆ ಅವನ ಬಾಯಿ ಮುಚ್ಚಿಸೋಕಾಗದೆ ಒಳಗೊಳಗೇ ಬಯ್ಕೊಂಡು ಸುಮ್ನೆ ಇರ್ತಿದ್ರು. ಒಂದು ದಿನ ಆಫೀಸಿನಲ್ಲಿ ಖೇಮು ಸಹೋದ್ಯೋಗಿಯಾಗಿದ್ದ ಸೋಮು ಬೆಳಗ್ಗೆನೇ ಬಂದವನು ಎಲ್ಲರಿಗೂ ಇಲ್ಲಿ ನೋಡಿ ಅಂತ ಒಂದು ಗಿಳಿ ತೋರಿಸುತ್ತಿದ್ದ. ಎಲ್ಲರೂ ಏನು ಈ ಗಿಳಿ ವಿಶೇಷ? ಅಂತ ಕೇಳಿದ್ರು.ಅದಕ್ಕೆ ಸೋಮು ಇದು ಡೆಡ್ಲಿ ಗಿಣಿ, ಇದರ ಕರಾಮತ್ತು, ನೀವೇ ನೋಡಿ ಅಂತ ಗಿಣಿಯನ್ನ ಟೇಬಲ್ ಮೇಲಿಟ್ಟು ಅದರ ಕಡೆ ನೋಡಿ, ‘ಡೆಡ್ಲಿ ಗಿಣಿ, ಟೇಬಲ’ ಅಂದ.
ಏನಾಶ್ಚರ್ಯ, ಗಿಣಿ ತನ್ನ ಕೊಕ್ಕಿನಿಂದ ಆ ಇಡೀ ಟೇಬಲ್ ಅನ್ನು ಕುಕ್ಕಿ ಕುಕ್ಕಿ ಎರಡೇ ಕ್ಷಣದಲ್ಲಿ ಪುಡಿ ಮಾಡಿಬಿಡ್ತು. ಎಲ್ಲರೂ ದಂಗು ಬಡಿದು ಹೋದರು. ಆಫೀಸಿನ ಜವಾನ ‘ಡೆಡ್ಲಿ ಗಿಣಿ, ವಿಂಡೋ’ ಅಂದ. ಗಿಣಿ ಒಂದೇ ಕ್ಷಣದಲ್ಲಿ ಇಡೀ ಕಿಟಕಿಯನ್ನು ಕುಕ್ಕಿ ಕುಕ್ಕಿ ಪುಡಿ ಮಾಡಿಬಿಡ್ತು. ಅಷ್ಟರಲ್ಲಿ ಖೇಮು ಆಫೀಸಿಗೆ ಬಂದ. ಎಲ್ಲರೂ ಸುತ್ತುವರೆದು ನಿಂತಿರೋದು ನೋಡಿ, ‘ಏನ್ ನಡೀತಾ ಇದೆ ಇಲ್ಲಿ?’ ಅಂತ ಕೇಳಿದ. ಅದಕ್ಕೆ ಒಬ್ಬ ಎಂಪ್ಲಾಯಿ, ‘ಸಾರ್ ಇದು ಡೆಡ್ಲಿ ಗಿಣಿ’ ಅಂದ. ಅದನ್ನು ಕೇಳಿದವನೇ ಖೇಮು ಎಂದಿನಂತೆ ಹೇಳಿದ ‘ಡೆಡ್ಲಿ ಗಿಣಿ? ಮೈ ಪುಟ್’.
ಲೈನ್ ಮ್ಯಾನ್
ಇಂಡಿಯಾದೋರು ಈ ವಿಶ್ವಕಪ್ ನಲ್ಲಿ ಎಲ್ಲಾ ಮ್ಯಾಚೂ ದೊಡ್ಡ ಅಂತರದಿಂದ ಗೆದ್ರೂ ಸೆಕೆಂಡ್ ಪ್ಲೇಸಲ್ಲಿದ್ದೀವಿ. ಯಾಕೆ?
– ಈ ನ್ಯೂಜಿಲ್ಯಾಂಡ್ ನೋರು ಮಕ್ಕಳು, ಮೊಮ್ಮಕ್ಕಳಿಗಾಗುವಷ್ಟು ರನ್ ರೇಟ್ ಮಾಡಿಟ್ಟವ್ರೆ, ಅದಕ್ಕೆ.
ರಕ್ಷಕ್ ಬುಲೆಟ್ ಗೆ ೫ ಮದುವೆ ಆಗೋ ಯೋಗ ಇದೆಯಂತೆ.
– ೫ ಜನ ರಾಖಿ ಕಟ್ತಾರೆ ಅಂದಿದ್ರೆ ‘ರಕ್ಷಾ ಬಂಧನ’ ಆಗ್ತಿತ್ತು.
– ೫ ಜನಕ್ಕೆ ಇವ ತಾಳಿ ಕಟ್ಟಿದ್ರೆ ಪೊಲೀಸ್ ಕೇಸ್ ಆಗಿ ‘ರಕ್ಷಕ್ ಬಂಧನ’ ಆಗುತ್ತೆ ಅಷ್ಟೇ
ಘೋ ಸಿನಿಮಾದ ಹೈಲೈಟ್ಸ್
– ಶಿವರಾಜ್ ಕುಮಾರ್ ಅವರ ‘Ghost’ಅಪಿಯರೆ
– ಅರ್ಜುನ್ ಜನ್ಯ ಅವರ ವಾದ್ಯ ’Ghosti’ ಮತ್ತು gh’OST’
– ಪ್ರಸನ್ನ, ಮಾಸ್ತಿ ಅವರಂಥ ’Ghost writer’ ಗಳ ಲೈನ್ಸ್
– ಮಹೇನ್ ಸಿಂಹ ಅವರ ಕ್ಯಾಮರಾ ಲೆನ್ಸ್
– G”Host’ ಶ್ರೀನಿ ಅವರ ಟ್ರೀಟ್ಮೆಂಟ್
ಶಿವರಾಜ್ ಕುಮಾರ್ ಮತ್ತು ಸಲ್ಮಾನ್ ಖಾನ್ ಭೇಟಿ ಆಗಿ ತೆಗೆಸಿಕೊಂಡ ಫೋಟೋಗೆ ಕ್ಯಾಪ್ಶನ್
-‘ಭಜರಂಗಿ’ ಜೊತೆ ’ಭಾಯಿಜಾನ’
ಬಾಪ್ ರೇ ಬಾಪ್
– ಅಮಿತ್ ಶಾ – ನೋಡು, ನಮ್ ಕ್ರಿಕೆಟ್ ಪ್ಲೇಯರ್ಸ್ ಎಲ್ಲ ಎಷ್ಟ್ ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾರೆ. BCCI Secretary ಆಗಿ ನೀನೂ ಇದ್ದೀಯಾ. ಬ್ಬೆ ಬ್ಬೆ ಬ್ಬೆ ಅಂತೀಯ…waste body
– ಜೈ ಶಾ – ಪಪ್ಪಾ, ನಿಮ್ ಮಾತಿನ ಅರ್ಥ ಏನು? ನನ್ನನ್ನೂ ಪಾಕಿಸ್ತಾನಕ್ಕೆ ಹೋಗು ಅಂತಿದ್ದೀರಾ?
ಪ್ರಪಂಚದ ಅತಿ ದುರದೃಷ್ಟವಂತ ಅಂದ್ರೆ ಯಾರು?
– ಕುಡಿಯೋಕೆ ಕಂಪನಿ ಕೊಡೋ ಫ್ರೆಂಡ್ಸೂ ಕೂಡ ಇಲ್ಲದೇ ಇರೋನು ಇತ್ತೀಚಿನ ಕ್ರಿಕೆಟ್ ಟ್ರೆಂಡ್
– ಸೆಂಚುರಿ ಹತ್ರ ಇರೋ ನಮ್ ಬ್ಯಾಟ್ಸಮನ್‌ಗಳು, ಬೋಲರ್‌ನ ಒಳ್ಳೆ ಬಾಲಿಗೆ ಔಟ್ ಆಗೋಕಿಂತ, ಆ ಕಡೆ ಬ್ಯಾಟ್ಸ ಮನ್ ೬, ೪ ಹೊಡೆಯೋದು ನೋಡಿ ಭಯ ಬಿದ್ದು, ಬೇಗ ಸೆಂಚುರಿ ಮಾಡ್ಬೇಕು ಅಂತ ತಾವೂ ಹೊಡೆಯೋಕೆ ಹೋಗಿ ಔಟ್ ಆಗೋದೇ ಜಾಸ್ತಿ
ನಮ್ಮ ಕೆಜಿಎಫ್ ರಾಕಿ ಭಾಯ್ ಯಶ್, ಕ್ರಿಕೆಟರ್ ಆಗಿದ್ದಿದ್ರೆ ಏನಂತ ಡೈಲಾಗ್ ಹೊಡಿತಿದ್ರು?
– ಪ್ಲೇಯಿಂಗ್ ಇಲೆವೆನ್ ನಲ್ಲಿ ಇಲ್ಲಾ ಅಂದ್ರೂ, ಜನ ನನ್ನ ಡ್ರೀಮ್ ಇಲೆವೆನ್ ನಲ್ಲಿ ಹಾಕ್ಕೊತಾರೆ ಗೊತ್ತಾ?
‘ಭೈರಪ್ಪ’ ಅವರ ಪರ್ವ ಕಾದಂಬರಿನಾ ಸಿನಿಮಾ ಮಾಡ್ತಿರೋ ವಿವೇಕ್ ಅಗ್ನಿಹೋತ್ರಿ ಹೇಳಿದ್ದು
– ಸಿನಿಮಾ ಚೆನ್ನಾಗಿಲ್ಲ ಅಂದ್ರೆ
‘ಬೈಬೇಡ್ರಪ್ಪ’