Saturday, 23rd November 2024

ಹೆಚ್ ಡಿಕೆಶಿ ವಿರಸ ಪ್ರಸಂಗ

ತುಂಟರಗಾಳಿ

ಸಿನಿಗನ್ನಡ

ಕಳೆದ ವಾರದ ತುಂಬಾ ಕನ್ನಡ ಸಿನಿಮಾಗಳಿಗೆ ಎಂಥ ಪರಿಸ್ಥಿತಿ ಬಂತು ಅನ್ನೋದೇ ದೊಡ್ಡ ಸುದ್ದಿ ಆಗಿತ್ತು. ನಮ್ಮ ಕನ್ನಡ ಚಿತ್ರಗಳಿಗೆ ಚಿತ್ರ
ಮಂದಿರದವರು ಪೋತ್ಸಾಹ ಕೊಡಲ್ಲ. ನಾವು ಎಷ್ಟೇ ಕೇಳಿ ಕೊಂಡರೂ ನಮಗೆ ಶೋ ಕೊಡಲ್ಲ, ಬರೀ ಶೋ ಕೊಡ್ತಾರೆ ಅಂತ ಎಲ್ಲರೂ ಕನ್ನಡ ಚಿತ್ರರಂಗದ ಬಗ್ಗೆ ಕಳಕಳಿ ಯಿಂದ ಮಾತಾಡಿದ್ರು. ಆದರೆ ನಮ್ಮವರೇ ತಮಿಳು ಸಿನಿಮಾ ಗಳನ್ನು ನೋಡೋದು ಬಿಟ್ಟು ಕನ್ನಡ ಸಿನಿಮಾ
ಗಳನ್ನು ನೋಡೋಕೆ ತಯಾರಿರಲಿಲ್ಲ.

ಅದರ ಪರಿಣಾಮವಾಗಿ ಜಾಸ್ತಿ ಬೇಡಿಕೆ ಇದ್ದ ಲಿಯೋ ಸಿನಿಮಾಗೆ ಕನ್ನಡದ ಘೋ ಸಿನಿಮಾಗಿಂತ ಹೆಚ್ಚಿನ ಪ್ರದರ್ಶನಗಳು ಸಿಕ್ಕಿದ್ದವು. ಆದರೆ ಫಲಿತಾಂಶ ಉಲ್ಟಾ ಆಯ್ತು. ಘೋ ಮಾಸ್ ಹಿಟ್ ಎನಿಸಿಕೊಂಡರೆ, ಲಿಯೋ ಆರ್ಭಟ ಒಂದೇ ದಿನಕ್ಕೆ ಕಮ್ಮಿ ಆಯ್ತು. ಎರಡನೇ ದಿನ ಲಿಯೋ ತಂಡಕ್ಕೆ ಸುಮಾರು ೫೦ ಪರ್ಸೆಂಟ್ ನಷ್ಟು ಶೋ ಗಳು ಕಮ್ಮಿ ಆದವು. ಆದರೆ ಘೋ ಚಿತ್ರ ಶೇಕಡಾ ೯೨ರಷ್ಟು ಪ್ರದರ್ಶನಗಳನ್ನು ಉಳಿಸಿಕೊಂಡಿತ್ತು. ಅದರರ್ಥ ಸಿನಿಮಾ ನೋಡೋರ ಸಂಖ್ಯೆ ಎಷ್ಟಿರತ್ತೋ ಅದರ ಮೇಲೆ ಪ್ರದರ್ಶನಗಳ ಸಂಖ್ಯೆ ಅವಲಂಬಿತ ಆಗಿರುತ್ತೆ ಅನ್ನೋದು ಪ್ರೂವ್ ಆಯ್ತು. ಯಾಕಂದ್ರೆ ಸಿನಿಮಾ ಚೆನ್ನಾಗಿಲ್ಲ ಅಂತ ಲಿಯೋ ನೋಡೋಕೆ ಎರಡನೇ ದಿನವೇ ಜನ ಆಸಕ್ತಿ ತೋರಿಸಲಿಲ್ಲ.

ಒಳ್ಳೆ ಕನ್ನಡ ಸಿನಿಮಾ ಮೂಲಕ ಪರಭಾಷಾ ಚಿತ್ರಕ್ಕೆ ಸವಾಲು ಹಾಕುವಂಥ ಕ್ವಾಲಿಟಿ ಕೊಟ್ಟಿದ್ದಕ್ಕೆ ಹೆಂಗೋ ಬಚಾವ್ ಆದ್ವಿ. ಆದರೆ ಪ್ರತಿಸಲ ಇದೇ ಥರ ಆದ್ರ ಹೆಂಗೆ ಅನ್ನೋ ಪ್ರಶ್ನೆ ಇದೆ. ಪರಭಾಷೆ ಚಿತ್ರಗಳು ಚೆನ್ನಾಗಿದ್ರೆ ನೋಡಲಿ, ಅವೂ ಇಲ್ಲಿ ಓಡಲಿ, ಆದ್ರೆ ನಮ್ಮ ಜನ ಪರಭಾಷೆ ಚಿತ್ರಗಳ ಬಗ್ಗೆ ಬಿಡುಗಡೆ ಆಗೋಕೆ ಮುಂಚೆನೇ ಸುಖಾ ಸುಮ್ಮನೆ ಪ್ರೀತಿ ತೋರಿಸೋದು ಬಿಟ್ಟರೆ ಸರ್ಕಾರನ್ನು ಬೇಡಿಕೊಳ್ಳೋದು, ವಾಣಿಜ್ಯ ಮಂಡಳಿ ಮುಂದೆ ಧರಣಿ ಕೂರೋದು ಯಾವುದೂ ಬೇಡ ಅನ್ನೋದು ಈ ಬಾರಿ ಅಂತೂ ಪ್ರೂವ್ ಆಗಿದೆ.

ಲೂಸ್ ಟಾಕ್

ಏನ್ ಕುಮಾರಸ್ವಾಮಿ ಅವರೇ ಡಿಕೆಶಿ ಅವರ ಮೇಲೆ ಉರ್ಕೊಂಡ್ ಬೀಳ್ತಾ ಇದೀರಲ್ಲ. ನೀವಿಬ್ರೂ ಅಣ್ತಮ್ಮ ಇದ್ದ ಹಂಗೆ ಅಂತ ಕೇಳಿದ್ವಿ, ಇದೇನಿದು?
– ರಾಜಕಾರಣ ಮಾಡ್ತಾ ಮಾಡ್ತಾ ಎಲ್ಲರೂ ಅಣ್ಣ ತಮ್ಮಂದಿರು, ಅಧಿಕಾರ ಸಿಕ್ಕಮೇಲೆ ದಾಯಾದಿಗಳು ಬ್ರದರ‍್

ಓಹೋ, ಸರಿ, ಅದೇನು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಅಂತೀರಲ್ಲ, ಅ ವಿಧಾನಸೌಧದ ಮುಂದೆ ಹೈಕೋರ್ಟ್ ಇಲ್ವಾ?

– ಅಯ್ಯೋ ಅದೆಲ್ಲ ನಮಗೆ ಸರಿ ಹೋಗಲ್ಲ, ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ತೀರ್ಮಾನ ನಾನು ಧರ್ಮಸ್ಥಳ ದೇವಸ್ಥಾನದ ಮೆಟ್ಟಿಲ ಮಾಡ್ತೀನಿ.

ಆದ್ರೂ ಡಿಕೆಶಿ ನೀವೂ ತುಂಬಾ ಕ್ಲೋಸ್ ಆಗಿದ್ರಿ. ಈಗ ಯಾಕೆ ಹಿಂಗಾಯ್ತು?
– ಈಗ್ಲೂ ಕ್ಲೋಸೇ ಬ್ರದರ್. ಬೇಕಿದ್ರೆ ನಮ್ ಹೆಸರುಗಳನ್ನೇ ನೋಡಿ ಹೆಚ್ ಡಿಕೆಶಿ ಅಂತ ಎಷ್ಟು ಚೆನ್ನಾಗಿ ಬೆಸೆದುಕೊಂಡಿವೆ.

ಮತ್ತೆ..ಈಗ ಯಾಕೆ ಹಿಂಗೆ ಜಗಳ? ನಿಮ್ಮಬ್ಬರ ಮಧ್ಯೆ ರ್ಯಾ ಬಂದ್ರು ಕಡ್ಡಿ ಅಡ್ಸೋಕೆ?
– ನಮ್ಮ ಹೆಸರಿನ ಮಧ್ಯದ ಇದೆಯ ಎಚ್ ಡಿಕೆ’ಶಿ ಅಂತ. ಆ ದಿನೇಶ್ ಕಾರ್ತಿಕ್ ಕೆಲ್ಸನೇ ಇರ್ಬೇಕು ಇದು. ಅಯ್ಯೋ ಪಾಪ, ಅವರಲ್ಲಿ
ಕ್ರಿಕೆಟ್ ಕಾಮೆಂಟರಿ ಮಾಡ್ಕೊಂಡ್ ಇದ್ದಾರೆ ಅವರನ್ಯಾಕೆ ಅಂತೀರಿ.

ಹೋಗ್ಲಿ, ಡಿಕೆಶಿ ಅವರನ್ನ ಟಿವಿ ಚಾನೆಲ್ ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಅಂತ ಕರೆದಿದ್ದೀರಲ್ಲ ಯಾವ ಚಾನೆಲ್ ನಲ್ಲಿ?
– ಬಹಿ’ರಂಗ’ ಚರ್ಚೆ ಅಂತ  ಹೇಳಿದ್ಮೇಲೂ ಗೊತ್ತಾಗಲ್ವಾ ಬ್ರದರ್‌, ಪಬ್ಲಿಕ್ ಟಿವಿಯಲ್ಲಿ

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಖೇಮು ತನ್ನ ಕೋತಿಯೊಂದಿಗೆ ಪಬ್ಗೆ ಹೋದ. ಅವನು ಟೇಬಲ್ ಮೇಲೆ ಕೂತು ಎರಡು ಪೆಗ್‌ಗೆ ಆಡರ್ ಮಾಡಿದ ಮೇಲೆ ಅವನ ಕೋತಿ ಎಂದರಲ್ಲಿ ಸುತ್ತುತ್ತಾ ಅಲ್ಲಿ ಫ್ರಿಜ್ ಮೇಲೆ ಇಟ್ಟಿದ್ದ ಸೌತೆಕಾಯಿ, ಕ್ಯಾರೆಟ್ ಎಲ್ಲಾ ತಿಂದುಬಿಡ್ತು. ಆ ಪಬ್‌ನಲ್ಲಿ ಸ್ನೂಕರ್ ಪಾಯಿಂಟರ್ ಕೂಡ ಇತ್ತು, ಸ್ನೂಕರ್ ಟೇಬಲ್ ಮೇಲೆ ಹಾರಿದ ಕೋತಿ ಒಂದು ಸ್ಪೂಕರ್‌ಬಾಲ್ ತಗೊಂಡು ತಿಂದುಬಿಡ್ತು.ಅಷ್ಟರಲ್ಲಿ ಸಪ್ಲೈರ್ಯ ಬಂದು’ ನಿಮ್ಮ ಕೋತಿ ಏನ್ ಮಾಡ್ತಾ ಇದೆ ನೋಡಿದ್ರಾ?’ ಅಂತ ಖೇಮುವನ್ನು ಕೆಳಿದ, ಅದಕ್ಕೆ ಟೀಮು ನಂಗೆಲ್ಲ ಗೊತ್ತು, ಅದು ಸ್ವಲ್ಪ ಹಂಗೆನೇ, ನಾನು ಎಲ್ಲದರ ಬಿಲ್ ಪೇ ಮಾಡ್ತೀನಿ, ಡೋಂಟ್‌ವರಿ ಅಂದು ಕುಡಿತ ಮುಗಿಸಿ ಬಿಲ್ ಕೊಟ್ಟು ಮನೆಗೆ ಹೊರಟ.

ಒಂದು ವಾರದ ನಂತರ ಮತ್ತು ಖೇಮು ಮತ್ತೆ ಕೋತಿಯೊಡನೆ ಪಬ್‌ಗೆ ಬಂದ, ಈ ಬಾರಿಯೂ ಕೋತಿ ಸಿಕ್ಕ ಸಿಕ್ಕದನ್ನೆ ತಿನ್ನುತ್ತಿತ್ತು, ಆದರೆ ಪ್ರತಿ ಬಾರಿ ಏನನ್ನಾದರೂ ತಿನ್ನುವ ಮುನ್ನ ಅದನ್ನು ತನ್ನ ಗುದದ್ವಾರದ ಒಳಗೆ ಇಟ್ಟುಕೊಂಡು ನಂತರ ತೆಗೆದು ತಿನ್ನುತ್ತಿತ್ತು. ಅದನ್ನು ನೋಡಿ ವಿಚಿತ್ರ ಮತ್ತು ಅಸಹ್ಯ ಭಾವನೆಯೊಂದಿಗೆ ಸಪ್ಲೈರ್ಯ ಹೇಳಿದ ‘ಸಾರ್, ನಿಮ್ ಕೋತಿ ಏನ್ ಮಾಡ್ತಾ ಇದೆ ನೋಡ್ತಾ ಇದೀರಾ?’ ಖೇಮು ಹೇಳಿದ’ ಹೌದು, ಅದೇನಾಯ್ತು ಅಂದ್ರೆ, ಲಾಸ್ಟ್ ಟೈಮ್ ಸ್ನೂಕರ್‌ಬಾಲ್ ತಿಂದ ಮರುದಿನ ಬೆಳಗ್ಗೆ ಅದಕ್ಕೆ ಮೋಷನ್ ಟೈಮಲ್ಲಿ ಸಿಕ್ಕಾಬಟ್ಟೆ ಸಮಸ್ಯೆ ಆಯ್ತು. ಹಾಗಾಗಿ ಈಗ ಅದು ಏನು ತಿನ್ನಬೇಕಾದರೂ ಮೊದಲು ಸೈಜ್ ಟೆ ಮಾಡಿಕೊಂಡು ಆಮೇಲೆ ತಿನ್ನುತ್ತೆ’

ಲೈನ್ ಮ್ಯಾನ್
ಇತ್ತೀಚಿನ ಕ್ರಿಕೆಟ್ ಟ್ರೆಂಡ್

– ನವಾಜ್, ಪಾಕಿಸ್ತಾನದ ಪಾಲಿಗೆಐರನ್ ಲೆಗ್ ಸ್ಪಿನ್ನರ್’

ಯುವಜನರು ವಾರಕ್ಕೆ ೭೦ ಗಂಟೆ ದುಡಿಬೇಕು
– ಯುವಜನ್ರು ದುಡೀಬೇಕು ಕಣ್ರಪ್ಪ ಯಜಮಾನ್ರು ತಿನ್ನಬೇಕು ಕಣ್ರಪ್ಪ

ಸಿನಿಸಿಕೆ

– ನಮ್ ಜನ ಮಾಮೂಲಿ ಸಿನಿಮಾ ಕೊಟ್ರೆ ನೋಡಲ್ಲ. ಅವರಿಗೆ ಸ್ಪೆಷಲ್ ಕ್ವಾಲಿಟಿ ಬೇಕು, ಒಳ್ಳೆ ಸಿನಿಮಾ ಕೊಟ್ರೆ ಮಾತ್ರ ನೋಡ್ತಾರೆ ಅಂತ ನಮ್
ಸಿನಿಮಾದವ್ರು ದೊಡ್ ದೊಡ್ ಮಾತಾಡ್ತಾರೆ. ನಮ್ ಜನಕ್ಕೆ ಏನೋ ಸೀಮೆಗಿಲ್ಲದ ಸಿನಿಮಾ ಮಾಡ್ಬೇಕು ಅನ್ನೋ ಥರ. ನಮ್ ಜನ ನೋಡಿದ್ರೆ
‘ನಾನು ನಂದಿನಿ’ ಹಾಡು ಕೇಳ್ಕೊಂಡ್, ರೀಲ್ಸ್ ಮಾಡ್ಕೊಂಡು ಮಜಾ ಮಾಡ್ತಾ ಇದ್ದಾರೆ. ಯಾರನ್ನೂ ಓವರ್ ಎಸ್ಟಿಮೇಟ್ ಮಾಡಬಾರದು.

ಘೋಸ್ಟ್ ಕ್ವೆಶ್ಚನ್
– ಶಿವಣ್ಣ ಘೋ ಸಿನಿಮಾದಲ್ಲಿ ‘uಜ’ ಆಗಿರೋ ಶಿವಣ್ಣ ‘ಅಜ’ ಅಂತಾನೂ ಒಂದ್ ಸಿನಿಮಾ ಮಾಡಿದ್ದಾರೆ. ಯಾವುದದು? ‘ಬೆಳ್ಳಿ’

ಗಾದೆ- ತಗಾದೆ

– ನಿಮ್ಮತ್ರ ಹುಲಿ ಉಗುರು ಇದೆ, ನಿಮ್ಮನ್ನ ಅರೆ ಮಾಡ್ತಿದ್ದೀವಿ’ ‘ಸರ್, ಅದೆಲ್ಲ ಯಾಕೆ? ಇ ಸೆಟಲ್‌ಮೆಂಟ್ ಮಾಡ್ಕೊಳ್ಳೋಣ’ ‘ಸರಿ ಹಂಗಾದ್ರೆ, ೧ ಕೋಟಿ ಕೊಡಿ’ ‘ಅಷ್ಟೊಂದಾ? ಪರವಾಗಿಲ್ಲ, ಜೈಲಿಗೇ ಹಾಕ್ಬಿಡಿ, ಬೇಲ್ ತಗೊಳ್ಳೋದು ನಂಗೊತ್ತು. ‘ಉಗುರಲ್ಲಿ ಹೋಗೋದಕ್ಕೆ ೧ ಕೋಟಿ ‘ಕೊಡಲಿ’
ಯಾಕೆ? ’

ನೈಲ್ ಕಟ್ಟರ್
– ಸಾಮಾನ್ಯವಾಗಿ ಎ ರಿಯಲ್ ಎಸ್ಟೇಟ್ ಕುಳಗಳ ಕತ್ತಲ್ಲೂ ಪ್ರಾಣಿಗಳ ಉಗುರು ಇರುತ್ತೆ. ಆದ್ರೆ ಟಾರ್ಗೆಟ್ ಆಗ್ತಿರೋರಲ್ಲಿ ಜಾಸ್ತಿ ರೀಲ್ ಎಸ್ಟೇಟ್ ಕುಳಗಳು.

ಉಗುರ ದರ್ಶನ
– ಇ ದಿನ, ನಂದೊಂದ್ ಕೂದ್ಲೂ ಕಿತ್ಕೊಳ್ಳೋಕಾಗಲ್ಲ ನೀವು ಅಂತಿದ್ರು ದರ್ಶನ್, ಈಗ ಪೊಲೀಸ್ನೋರು ಹೋದ್ರೆ, ನಂದೊಂದ್ ಉಗುರೂ
ಕಿತ್ಕೊಳ್ಳೋಕಾಗಲ್ಲ ಅಂತಾರೆ

ನೈಲ್ ಟೆರರಿಸಂ
– ಮೊನ್ನೆಯಿಂದ ಎಲ್ ನೋಡಿದ್ರೂ ಬರೀ ‘ಉಗುರ’ಗಾಮಿಗಳೇ.

ನೈಲ್ ಬೈಟಿಂಗ್ ಕ್ವೆಶ್ಚನ್

-‘ಸರ್ ನಿಮ್ಮತ್ರನೂ ಹುಲಿ ಉಗುರು ಇದೆಯಂತೆ?’ “Yes, U “nail’ed it’

ಟ್ರಾಫಿಕ್ ಸೆನ್ಸ್
– ದುರಹಂಕಾರ ಇರ್ಬೇಕು, ಆದ್ರೆ ತೀರಾ, ಗಾಡಿ ಓಡಿಸುವಾಗ ರೋಡಲ್ಲಿ ಹಂಪ್ ಬಂದ್ರೆ ಹಾರ್ನ್ ಹೊಡೆಯುವಷ್ಟು ಇರಬಾರದು.