ಬರ್ಲಿನ್: ಜರ್ಮನಿ ತನ್ನ ಮರು ಏಕೀಕರಣದ 30 ನೇ ವಾರ್ಷಿಕೋತ್ಸವವನ್ನು ಆಚರಿಸಿತು.
ಅಧ್ಯಕ್ಷ ಫ್ರ್ಯಾಕ್ ವಾಲ್ಟರ್ ಸ್ಟೇನ್ಮಿಯರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 230 ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋವಿಡ್ ಹರಡುವಿಕೆ ನಿಯಂತ್ರಿಸುವ ನಿಟ್ಟಿ ನಲ್ಲಿ ಬಹಳ ಸರಳ ರೀತಿಯಲ್ಲಿ ವಾರ್ಷಿಕೋತ್ಸವ ಆಚರಿಸ ಲಾಯಿತು.
ಶೀತಲ ಸಮರದ ನಂತರ 1990 ರ ಅಕ್ಟೋಬರ್ 3 ರಂದು ಜರ್ಮನಿ ಮರು ಏಕೀಕರಣ ಗೊಂಡಿತು.
‘ನಾವು 30 ವರ್ಷಗಳಲ್ಲಿ ಬಹಳಷ್ಟು ಸಾಧಿಸಿದ್ದೇವೆ. ಪೂರ್ವ ಮತ್ತು ಪಶ್ಚಿಮ ಜರ್ಮನಿಯ ನಡುವಿನ ಜೀವನ ಮಟ್ಟಗಳ ನಡುವಿನಲ್ಲಿದ್ದ ವ್ಯತ್ಯಾಸಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿ ಯಾಗಿದ್ದೇವೆ ಎಂದು ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಹೇಳಿದರು.