ಪ್ರಸ್ತುತ
ಶಾಲಿನಿ ರಜನೀಶ್
ಹುಲಿ ಉಗುರು ರಾಜ್ಯದಲ್ಲಿ ಕಂಪನ ಎಬ್ಬಿಸಿದೆ. ರಿಯಾಲಿಟಿ ಷೋ ಒಂದರಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರನ್ನು ಹುಲಿಯುಗುರು ಅಳವಡಿಸಿದ್ದ ಲಾಕೆಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅರಣ್ಯ ಇಲಾಖೆ ಬಂಧಿಸಿತ್ತು. ಸದ್ಯಕ್ಕೆ ಅವರಿಗೆ ಜಾಮೀನು ದೊರೆತಿದೆ. ಹಲವರಿಗೆ ಅರಿವಿಲ್ಲದ ಈ ಕಾನೂನು ಈಗ ಸಾಮಾಜಿಕ ಜಾಲತಾಣಗಳಲ್ಲಿ, ಕಚೇರಿಯ ಸಹೋದ್ಯೋಗಿಗಳಲ್ಲಿ, ವಾಕಿಂಗ್ ತೆರಳುವ ಸಹಚರರಲ್ಲಿ ಅತಿಹೆಚ್ಚು ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ ಆಗಿದೆ.
ಇಷ್ಟಕ್ಕೆಲ್ಲ ಕಾರಣವಾದದ್ದು ವಾಹಿನಿಯೊಂದರ ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದ ಸ್ಪಽಯೊಬ್ಬರು ಧರಿಸಿದ್ದ ಹುಲಿಯುಗುರಿನ ಲಾಕೆಟ್. ಇದನ್ನು ನೋಡಿದ ಒಬ್ಬರು ಅರಣ್ಯಾಧಿಕಾರಿಗಳಿಗೆ ದೂರಿತ್ತರು. ವನ್ಯಜೀವಿ ವನ್ಯಜೀವಿ ಕಾಯಿದೆಯ ಪ್ರಕಾರ ಹುಲಿ, ಚಿರತೆ, ಕೃಷ್ಣಮೃಗ ಮುಂತಾದ ಪ್ರಾಣಿಗಳನ್ನು ಬೇಟೆಯಾಡುವುದು, ಕೊಲ್ಲುವುದು ಮತ್ತು ಈ ಪ್ರಾಣಿಗಳ ಅಂಗಗಳನ್ನು ಬಳಸಿ ತಯಾರಿಸಿದ ಯಾವುದೇ ವಸ್ತುವನ್ನು ಆಭರಣದಂತೆ ಧರಿಸುವುದು ಅಪರಾಧ. ಹೀಗಾಗಿ ಈ ಅಪರಾಧ ಮಾಡಿದ ವ್ಯಕ್ತಿಯನ್ನು ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೇ ಹೋಗಿ ಬಂಽಸಿದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಸದ್ಯಕ್ಕೆ ಎದ್ದಿರುವ ಪ್ರಶ್ನೆ ಎಂದರೆ ಈ ಕಾನೂನಿನ ಬಗ್ಗೆ ಎಷ್ಟು ಜನರಿಗೆ ಅರಿವಿದೆ ಎನ್ನುವುದು! ಕಾನೂನಿನ ಬಗೆಗಿನ ಅಜ್ಞಾನಕ್ಕೆ ರಿಯಾಯಿತಿ ಇಲ್ಲ. ಅರಿವಿಲ್ಲದೇ ಅಪರಾಧ ಮಾಡಿದರೂ ಅವರಿಗೆ ಶಿಕ್ಷೆ ತಪ್ಪದು ಎನ್ನುವುದೇನೋ ಸರಿ. ಆದರೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಈವರೆಗೆ ಸಂಬಂಧಪಟ್ಟವರು ಮಾಡಿದ್ದಾರೆಯೇ? ವನ್ಯಜೀವಿ ಕಾಯಿದೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವಂಥ ಎಷ್ಟು ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ನಡೆಸಿದೆ ಎನ್ನುವುದರ ತನಿಖೆಯನ್ನೂ ನಡೆಸಿದರೆ ತಪ್ಪಾ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಹುಲಿಯುಗುರು ಇರುವ ಸರ ಧರಿಸುವುದು ಉಳ್ಳವರ ಶೋಕಿ ಎಂದು ಜನ ಭಾವಿಸುವಂತೆ ಶ್ರೀಮಂತರು ಇದನ್ನು ಧರಿಸುತ್ತಿದ್ದರು. ಇದು ಅಪರಾಧ ಎಂದು ಬಹುತೇಕರಿಗೆ ತಿಳಿದಿರಲಿಲ್ಲ. ತಿಳಿಸುವ ಪ್ರಯತ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿರಲಿಲ್ಲ. ಈಗ ಸಂತೋಷ್ ವರ್ತೂರು ಪ್ರಕರಣ ಪ್ರಚಾರ ಪಡೆಯುತ್ತಿದ್ದಂತೆ ಹುಲಿಯುಗುರಿನ ಲಾಕೆಟ್ ಧರಿಸಿರುವ ಸಿಲೆಬ್ರಿಟಿಗಳು ಸಾಲುಸಾಲು ಹೆಸರುಗಳು ಹೊರಬಿದ್ದಿವೆ. ಅರ್ಚಕರು, ಶಾಸಕರ ಸಂಬಂಧಿಗಳು, ಅಷ್ಟೇ ಯಾಕೆ ಅರಣ್ಯಾಧಿಕಾರಿಯೊಬ್ಬರ ವಿರುದ್ಧವೇ ದೂರುಗಳು ಕೇಳಿಬಂದಿವೆ. ಅರಣ್ಯಾಧಿಕಾರಿಗಳಿಂದ ತನಿಖೆ ಬಿರುಸಾಗಿದೆ. ಕೆಲವರನ್ನು ಬಂಽಸಿ
ಹುಲಿಯುಗುರನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವರು ತಾವೇ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅರ್ಚಕರೊಬ್ಬರಿಗೆ ಈ ಸಂಬಂಧ ನ್ಯಾಯಾಂಗ ಬಂಧನ ವಿಽಸಲಾಗಿದೆ. ಯಾರಾದರೂ ಸಿಲೆಬ್ರಿಟಿಯನ್ನು ಬಂಧಿಸುವ ಧೈರ್ಯವನ್ನು ಅರಣ್ಯಾಧಿಕಾರಿಗಳು ತೋರಿಸುತ್ತಾರೆಯೇ ಎನ್ನುವ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೆ ನೋಡುತ್ತಿದ್ದರೆ ವನ್ಯಮೃಗ ಕಾಯಿದೆಯ ಬಗ್ಗೆ ಸಾರ್ವಜನಿಕರಿಗೆ ಯಾವ ಮಟ್ಟದ ತಿಳಿವಳಿಕೆಯಿತ್ತು ಎನ್ನುವುದು ಅರ್ಥವಾಗುತ್ತದೆ. ಜನರ ಅeನದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಅರಿವಿರಲಿಲ್ಲವೆ? ಅಥವಾ ಕಾನೂನಿನ ಬಗೆಗಿನ ಅರಿವನ್ನು ಬೆಳೆಸಿಕೊಳ್ಳುವುದು ಜನರ ಜವಾಬ್ದಾರಿಯಷ್ಟೇ ಹೊರತು ಅರಿವು ಮೂಡಿಸುವ ಯಾವ ಪ್ರಯತ್ನವನ್ನೂ ನಾವು ಮಾಡಬೇಕಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಭಾವನೆಯೆ? ಹಳ್ಳಿಗರ ಬಹುತೇಕ ಮನೆಗಳಲ್ಲಿ ವನ್ಯಮೃಗಗಳಿಗೆ
ಸಂಬಂಧಪಟ್ಟ ಅಲಂಕಾರಿಕ ನೋಡಬಹುದು.
ಜಿಂಕೆ, ಕಡವೆ, ಕಾಡೆಮ್ಮೆಗಳ ಕೋಡುಗಳನ್ನು ಅಲಂಕಾರಕ್ಕೆ ಗೋಡೆಗಳಿಗೆ ತೂಗು ಹಾಕುವುದು ತೀರಾ ಸಾಮಾನ್ಯ. ಅದೊಂದು ಅಪರಾಧ ಎನ್ನುವುದು ಬಹುತೇಕರಿಗೆ ತಿಳಿದಿರಲಿಲ್ಲ. ಒಂದೆರಡುತಲೆಮಾರುಗಳಷ್ಟು ಹಿಂದಕ್ಕೆ ಹೋದರೆ ಆಗ ಕಾಡಂಚಿನ ಮನೆಗಳಿಗೆ, ತೋಟಗಳಿಗೆ ವನ್ಯಮೃಗಗಳ ದಾಳಿ ಸಾಮಾನ್ಯ ವಾಗಿದ್ದುದರಿಂದ ಅಲ್ಲಿ ವನ್ಯಮೃಗಗಳ ಬೇಟೆಯೂ ಅತಿ ಸಾಧಾರಣ ವಿಷಯವಾಗಿತ್ತು. ಕ್ರಮೇಣ ಜನಸಂದಣಿ ವೃದ್ಧಿಯಾಗಿ, ಕಾಡುಗಳು ನಾಶವಾಗಿ ವನ್ಯಮೃಗಗಳು ಕಣ್ಮರೆ ಯಾದವು. ಬೇಟೆ ಸಂಸ್ಕೃತಿ ನಶಿಸಿತು.
ಆದರೆ ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಜಿಂಕೆ, ಕಾಡೆಮ್ಮೆಗಳಂಥ ಪ್ರಾಣಿಗಳ ಕೊಂಬುಗಳು ಇನ್ನೂ ಗೋಡೆಗಳಲ್ಲಿವೆ. ಈಗ ಸಂತೋಷ್ ಪ್ರಕರಣ ನಡೆದ ಬೆನ್ನಲ್ಲೇ ಜನರಿಗೂ ಭಯ ಆರಂಭವಾಗಿ ತಮ್ಮ ಮನೆಯ ಗೋಡೆಗಳಲ್ಲಿರುವ ವನ್ಯಮೃಗಗಳ ಕೊಂಬುಗಳನ್ನು ಏನು ಮಾಡಬೇಕೆಂಬುದೇ ಅರಿವಾಗದೇ ಭಯ ಪಡುತ್ತಿದ್ದಾರೆ. ಅರಣ್ಯಾಧಿಕಾರಿಗಳಿಗೆ ಒಪ್ಪಿಸೋಣ ಎಂದರೆ ತೆಗೆದುಕೊಂಡು ಹೋದಾಗಲೇ ಅರೆಸ್ಟ್ ಮಾಡಿದರೆ ಏನು ಗತಿ
ಎಂದು ಆತಂಕ ಪಡುವ ಮುಗ್ಧರೂ ಹಳ್ಳಿಗಳಲ್ಲಿದ್ದಾರೆ.
ವಕೀಲರ ಜತೆಗೇ ಹೋಗಬೇಕಷ್ಟೇ ಎಂಬ ಚರ್ಚೆಯೂ ಆರಂಭವಾಗಿದೆ. ಮೇಲ್ನೋಟಕ್ಕೆ ಇದೆಲ್ಲ ತಮಾಷೆ ಎನ್ನಿಸಿದರೂ ವನ್ಯಮೃಗಗಳಿಗೆ ಸಂಬಂಧಪಟ್ಟಂಥ ವಸ್ತುಗಳ ಬಗೆಗೆ ಮುಗ್ಧ ಜನಗಳಲ್ಲಿ ಹುಟ್ಟಿಕೊಂಡ ಭಯ ಮಾತ್ರ ಪ್ರಾಮಾಣಿಕ. ಇಷ್ಟಕ್ಕೆಲ್ಲ ಪ್ರಸ್ತುತ ಇರುವ ಕಾನೂನಿನ ಬಗ್ಗೆ ಅರಿವು
ಮೂಡಿಸುವಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಒಂದು ಕಾರಣ ಎಂದು ಹೇಳಬಹುದು. ನಿನ್ನೆ ಮೊನ್ನೆಯವರೆಗೂ ಎಷ್ಟು ಜನರಿಂದ ಈ ಕಾನೂನಿನ ಉಲ್ಲಂಘನೆ ಆಗುತ್ತಿತ್ತು ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ. ಹುಲಿ ಚರ್ಮದ ಮೇಲೆ ಕುಳಿತವರ, ಹುಲಿಯುಗುರಿನ ಲಾಕೆಟ್ ಧರಿಸಿದವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ (ಇವುಗಳಲ್ಲಿ ಕೆಲವು ನಕಲಿ ಈಗಾಗಲೇ ಹೇಳಲಾಗಿದೆ) ಇವರಲ್ಲಿ ಹಲವರು ಸಿಲೆಬ್ರೆಟಿ ಗಳೂ ಆಗಿದ್ದಾರೆ.
ಸಂತೋಷರನ್ನು ಬಂಧಿಸಿದಂತೆ ಸಿಲೆಬ್ರಿಟಿ ಗಳನ್ನು ಬಂಧಿಸುವುದು ಸಾಧ್ಯವೆ? ಎಂಬ ಪ್ರಶ್ನೆಗಳೂ ಸಾರ್ವಜನಿಕರನ್ನು ಕಾಡುತ್ತಿವೆ. ಅವೆ ನಕಲಿ ಎಂದು ಹೇಳಿದರೆ ಆ ಪ್ರಕರಣಗಳು ಮುಕ್ತಾಯವಾದಂತೆ ಎಂದೂ ಜನ ಸಾಮಾನ್ಯರು ಆಡಿಕೊಳ್ಳುತ್ತಿದ್ದಾರೆ. ತಪ್ಪು ಮಾಡಿದವರನ್ನು ಬಂಧಿಸುವ ಮೂಲಕ ಅರಣ್ಯಾಧಿಕಾರಿಗಳು ಕಾನೂನನ್ನು ಪಾಲಿಸಿzರೆ. ಆದರೆ ಅಷ್ಟೇ ಉತ್ಸಾಹವನ್ನು ಜನಜಾಗೃತಿ ಮೂಡಿಸುವಲ್ಲಿಯೂ ತೋರಿಸಬೇಕಿತ್ತಲ್ಲವೆ? ಪರಿಸರ ಮಾಲಿನ್ಯದ ವಿಷಯವನ್ನೇ ಉದಾ ಹರಣೆಯಾಗಿ ತೆಗೆದುಕೊಂಡರೆ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಸಾಕಷ್ಟು ಜಾಹೀರಾತುಗಳು ಪ್ರಕಟ
ವಾಗುತ್ತವೆ. ಈ ಮೂಲಕ ಜನರಲ್ಲಿ ಅರಿವು ಮೂಡುತ್ತದೆ.
ಇಂದು ಪ್ರಚಾರಕ್ಕೆ ಸಾಕಷ್ಟು ವಿಧಾನಗಳಿವೆ. ಜಾಹೀರಾತು ನೀಡಿದರೆ ಪ್ರಕಟಿಸುವುದಿಲ್ಲ ಎಂದು ಯಾವ ಪತ್ರಿಕೆಯವರೂ ಹೇಳುವುದಿಲ್ಲ. ಈ ಬಗ್ಗೆ ಹಣದ ಕೊರತೆಯೂ ಖಂಡಿತಾ ಇಲಾಖೆಗಿಲ್ಲ. ಈಗಲಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ. ವನ್ಯಮೃಗ ಕಾಯಿದೆಯ ಬಗೆಗೆ ಜನರಿಗೆ ಅರಿವಿಲ್ಲ ಎಂಬ ಅರಿವು ಈಗ ಲಾದರೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬಂದಿರ ಬಹುದು. ತಮ್ಮ ಪೂರ್ವಜರ ಮೂಲಕ ತಮಗೆ ಬಂದಿದ್ದ
ವನ್ಯಜೀವಿಗಳ ಅಂಗಾಂಗಗಳಿಂದ ಮಾಡಿದ ಉತ್ಪನ್ನಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ದೃಢೀಕರಣದ ಮೂಲಕ ಕಾನೂನುಬದ್ಧವಾಗಿ ತಮ್ಮ ದಾಗಿಸಿಕೊಳ್ಳುವ ಅವಕಾಶ ೨೦೦೩ರ ವರೆಗೂ ಇತ್ತು.
೧೯೭೨ರಲ್ಲಿ ರೂಪುಗೊಂಡಿದ್ದ ಈ ಕಾನೂನು ೧೯೯೨ರಲ್ಲಿ ಮತ್ತು ೨೦೧೩ರಲ್ಲಿ ಜನರಿಗೆ ಈ ಅವಕಾಶವನ್ನು ನೀಡಿತ್ತು. ಆದರೆ ಎಷ್ಟು ಜನರು ಈ ಮೂಲಕ ವನ್ಯಜೀವಿಗಳ ದೇಹದ ಭಾಗಗಳ ಕಾನೂನುಬದ್ಧ ಮಾಲೀಕರಾಗಿದ್ದಾರೆ ಎಂಬುದರ ಮಾಹಿತಿ ತೆಗೆದರೆ ಈ ಬಗೆಗಿನ ಜನರ ಅರಿವಿನ ಕೊರತೆ ಅರಣ್ಯಾದ್ದಾಕಾರಿಗಳಿಗೆ ತಿಳಿಯಬಹುದು.ಸರಕಾರ ಈ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳುತ್ತಾರೆ.
ಅರಣ್ಯ ಇಲಾಖೆಯ ಕಾನೂನುಗಳ ಬಗೆಗೆ ಜನರಿಗೆ ಮಾಹಿತಿಯ ಕೊರತೆಯಿಂದ ಕಾಯಿದೆಗಳ ಉಲ್ಲಂಘನೆ ನಡೆಯುತ್ತಿದೆ. ಅರಣ್ಯ ಕಾಯಿದೆ ಮತ್ತು ವನ್ಯಜೀವಿ ಕಾಯಿದೆ ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಇತರ ಕಾನೂನುಗಳ ಬಗೆಗೆ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿ
ಕೊಳ್ಳಲು ಅರಣ್ಯ ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲಾಗುವುದು.
ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಹೊಂದಿರುವವರು ಅವುಗಳನ್ನು ಸರಕಾರಕ್ಕೆ ಮರಳಿಸಲು ಕೊನೆಯ ಅವಕಾಶವನ್ನು ನೀಡುವ ಬಗ್ಗೆ ಚಿಂತನೆಯು ನಡೆದಿದೆ. ಚಿನ್ನಾಭರಣ ಮಳಿಗೆಗಳಲ್ಲಿಯೂ ವನ್ಯಜೀವಿಯ ಅಂಗಗಳನ್ನು ಬಳಸಿ ಆಭರಣ ತಯಾರಿಕೆ ಮತ್ತು ಮಾರಾಟ ಶಿಕ್ಷಾರ್ಹ
ಅಪರಾಧ ಎಂಬ ಫಲಕ ಹಾಕಲು ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ ಎಂಬಲ್ಲಿಗೆ ಈ ಬಗ್ಗೆ ಅರಿವು ಮೂಡಿಸುವಲ್ಲಿ ಆಡಳಿತ ವ್ಯವಸ್ಥೆಯೇ ವಿಫಲವಾಗಿದೆ ಎಂದು ಖುದ್ದು ಸಚಿವರೇ ಒಪ್ಪಿಕೊಂಡಂತಾಯಿಲ್ಲವೆ? ಈ ವೈಫಲ್ಯಕ್ಕೆ ಯಾರು ಹೊಣೆ? ಜನಪ್ರಿಯ ಕಾರ್ಯಕ್ರಮದ ನಡುವೆಯೇ ಸಂತೋಷರನ್ನು ಬಂಧಿಸಿದ್ದರಿಂದ ಈ ಪ್ರಕರಣಕ್ಕೆ ವ್ಯಾಪಕ ಪ್ರಚಾರ ದೊರೆತಿದೆ.
ಸಂತೋಷರಿಗೆ ಶಿಕ್ಷೆ ವಿಧಿಸುವ ಮೂಲಕ ಅರಣ್ಯ ಕಾಯಿದೆಯ ಬಗಿಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಅರಣ್ಯಾಧಿಕಾರಿಗಳು ಮಾಡಿದ್ದಾರೆ ಎಂದು ಸಾವರ್ಜನಿಕರು ಆಡಿಕೊಳ್ಳುತ್ತಿದ್ದಾರೆ.