ಸ್ವಚ್ಛ ಭಾರತ
ಬಸವರಾಜ ಶಿವಪ್ಪ ಶಿರಗಾಂವಿ
ಹೆಚ್ಚುತ್ತಿರುವ ನಗರೀಕರಣ ಹಾಗೂ ಕೈಗಾರಿಕೀಕರಣದ ಪರಿಣಾಮ ಜನವಸತಿ ಪ್ರದೇಶಗಳಲ್ಲಿ ಚರಂಡಿ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದೆ. ಇದರ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ರೋಗಗಳ ಹಾವಳಿ, ಕ್ರಿಮಿ-ಕೀಟಗಳು ಮತ್ತು ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿರುವುದು ಸುಳ್ಳೇನಲ್ಲ. ಆದರೆ ಸದ್ಯದ ದಿನಮಾನಗಳಲ್ಲಿ ಜನರ ಬದುಕಿಗೆ ನಗರೀಕರಣದೊಂದಿಗೆ ಕೈಗಾರಿಕೀಕರಣವು ಅತ್ಯವಶ್ಯವಾಗಿದೆ.
ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದು ಹಾಗೂ ಸುಧಾರಿಸುವುದು ಸಹ ಅನಿವಾರ್ಯವಾಗಿದೆ. ಆದ್ದರಿಂದ ಈ ಚರಂಡಿ ನೀರನ್ನು ನದಿ, ಹಳ್ಳ-ಕೊಳ್ಳಗಳಲ್ಲಿ ಹರಿಬಿಡದೆ ವ್ಯವಸ್ಥಿತವಾಗಿ ಸೂಕ್ತವಾದ ಸ್ಥಳದಲ್ಲಿ ಮರುಪೂರಣ ಹಾಗೂ ಸಂಸ್ಕರಣೆಯನ್ನು ಮಾಡಿದಲ್ಲಿ ಸಮು ದಾಯದ ಆರೋಗ್ಯ ಹಾಗೂ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.
ಜಪಾನ್ ಸೇರಿದಂತೆ ಮುಂದುವರಿದ ಹಲವು ದೇಶಗಳಲ್ಲಿನ ಸಂಸ್ಕರಿಸಿದ ಚರಂಡಿ ನೀರಿನಲ್ಲಿ ಮೀನುಸಾಕಣೆ ಮಾಡುತ್ತಿದ್ದಾರೆ ಎಂದು ಕೇಳಿದ್ದೇವೆ. ಆದರೆ ಭಾರತದ ಚರಂಡಿಗಳ ಸಮೀಪದಲ್ಲಿ ಯಾವುದೇ ಜೀವಿಗಳು ಸುಳಿದಾಡದಷ್ಟು ಗಬ್ಬು ವಾಸನೆ ಹಾಗೂ ಕೊಳಚೆ ತುಂಬಿರುತ್ತದೆ. ಸಾಮಾನ್ಯವಾಗಿ ಚರಂಡಿ
ನೀರು ಎಂದರೆ ಕೊಳಚೆಯುಕ್ತ ನೀರು ಅಲ್ಲವೆ? ಎನ್ನಬಹುದು. ಚರಂಡಿ ನೀರಿನಲ್ಲಿ ಹಲವಾರು ಸಂಯುಕ್ತಗಳು ಅಂದರೆ ವಿವಿಧ ಕಶ್ಮಲಗಳು ಸೇರಿ ಕೊಂಡು ಅನವಶ್ಯಕ ಹಾಗೂ ಹಾನಿ ಕಾರಕ ಅಂಶಗಳಾಗಿ ಪರಿವರ್ತನೆಯಾಗಿರುತ್ತವೆ. ಆದರೆ ಚರಂಡಿ ನೀರಿನಲ್ಲಿರುವ ಎಲ್ಲಾ ಅಂಶಗಳು ಹಾನಿಕಾರಕ ವಾಗಿರುವುದಿಲ್ಲ.
ಸಂಸ್ಕರಣೆಯ ಸಮಯದಲ್ಲಿ ಅನವಶ್ಯಕ ಹಾಗೂ ಹಾನಿಕಾರಕ ಅಂಶಗಳನ್ನು ಬೇರ್ಪಡಿಸುವುದಲ್ಲದೆ ಅವಶ್ಯಕ ಅಂಶಗಳನ್ನು ಮಿಶ್ರಣ ಮಾಡಿ ಸೂಕ್ತ ರೀತಿಯಲ್ಲಿ ಬಳಸಬಹುದಾಗಿದೆ. ಚರಂಡಿ ನೀರಿನ ಸಂಸ್ಕರಣೆಯು ಈ ಕೆಳಗಿನಂತೆ ನಿರಂತರವಾಗಿ ನಡೆಯುತ್ತಿರಬೇಕು:
? ವಿಶ್ವದ ಬೃಹತ್ ಮಹಾನಗರಗಳಾದ ನ್ಯೂಯಾರ್ಕ್, ವಾಷಿಂಗ್ಟನ್, ಟೋಕಿಯೋ, ಲಂಡನ್, ಪ್ಯಾರಿಸ್ ಸೇರಿದಂತೆ ಹಲವಾರು ಸ್ಥಳಗಳಲ್ಲಿರುವ ಚರಂಡಿ ನೀರಿನ ಮರು ಪೂರಣ ಹಾಗೂ ಸಂಸ್ಕರಣೆಯ ವ್ಯವಸ್ಥೆಯನ್ನು ಜಾರಿ ಮಾಡಬೇಕು.
? ಚರಂಡಿ ನೀರನ್ನು ಸೋಸಿ ಅದರಲ್ಲಿರುವ ಪ್ಲಾಸ್ಟಿಕ್ ಹಾಗೂ ಗಾಜುಗಳನ್ನು ಬೇರ್ಪಡಿಸಿ ಪುನರ್ಬಳಕೆ ಮಾಡ ಬೇಕು.
? ಪ್ಲಾಸ್ಟಿಕ್ ಹಾಗೂ ಗಾಜನ್ನು ಬೇರ್ಪಡಿಸಿದ ನಂತರ ಉಳಿಯುವ ಘನತ್ಯಾಜ್ಯಗಳನ್ನು ಸಂಸ್ಕರಿಸಿ ಸಾವಯವ ಗೊಬ್ಬರವನ್ನು ತಯಾರಿಸಬೇಕು.
? ಪ್ರತಿಯೊಂದು ಮನೆಗೂ ಮಳೆನೀರು ಕೊಯ್ಲು ಪದ್ದತಿಯ ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು.
? ಮಳೆನೀರಿನ ಇಂಗುಗುಂಡಿಯಲ್ಲಿ ಚರಂಡಿ ನೀರು ಇಂಗುವ ವ್ಯವಸ್ಥೆಯಾಗಬೇಕು, ಕಾರಣ ಮಳೆನೀರು ಅತ್ಯಂತ ಶುದ್ಧವಾದ ಹಾಗೂ ಖನಿಜಾಂಶವುಳ್ಳ ನೀರು ಎನಿಸಿಕೊಂಡಿದೆ. ಇದರಿಂದ ಗಮನಾರ್ಹವಾಗಿ ಮಾಲಿನ್ಯವನ್ನು ತಡೆಗಟ್ಟ ಬಹುದು.
? ಚರಂಡಿ ನೀರು ಹರಿಯುವಾಗ ಮಾತ್ರ ಕಡ್ಡಾಯವಾಗಿ ಸಿಮೆಂಟ್ ಕಾಂಕ್ರೀಟ್ ಮಾರ್ಗಗಳಿರಬೇಕು. ಆದರೆ ಚರಂಡಿ ನೀರು ಯಾವುದೇ ಕಾರಣಕ್ಕೂ ಸಿಮೆಂಟ್ ಕಾಂಕ್ರೀಟ್‌ನಲ್ಲಿ ಸಂಗ್ರಹವಾಗಬಾರದು. ಕಾರಣ ನೇರ ವಾಗಿ ಮಣ್ಣಿನ ಮೇಲೆ ನಿಲ್ಲುವುದರಿಂದ ಮಣ್ಣಿನಲ್ಲಿರುವ ಕೆಲವು ಜೀವಾಣು ಗಳನ್ನು ಚರಂಡಿ ನೀರಿನಲ್ಲಿರುವ ಹಾನಿಕಾರಕ ಕಶ್ಮಲಗಳು ನಾಶಗೊಳಿಸುತ್ತವೆ.
? ಪ್ರತಿಮನೆಗೆ ಸೆಪ್ಟಿಕ್ ಟ್ಯಾಂಕುಗಳು ಹೇಗೆ ಅವಶ್ಯ ವಿವೆಯೋ ಹಾಗೆಯೇ ನಮ್ಮ ಪೂರ್ವಜರ ಸಮಯ ದಲ್ಲಿದ್ದ ಬಚ್ಚಲು ಗುಂಡಿಗಳು ಸಹ ನಿರ್ಮಾಣ ವಾಗಬೇಕು. ಪ್ರತಿ ಮನೆಯಲ್ಲಿ ಬಳಸಿದ ನೀರು ಈ ಗುಂಡಿಯಲ್ಲಿಯೇ ಇಂಗು ವಂತೆ ಕ್ರಮಕೈಗೊಳ್ಳಬೇಕು. ಪ್ರತಿ ಯೊಂದು ಗ್ರಾಮ ಹಾಗೂ ಪಟ್ಟಣಗಳಲ್ಲಿ ಅತ್ಯಾಧು ನಿಕ ಚರಂಡಿ ನೀರು ಸಂಸ್ಕರಣಾ ಘಟಕಗಳು ನಿರ್ಮಾಣ ವಾಗಬೇಕು.
? ಇತ್ತೀಚಿನ ದಿನಮಾನಗಳಲ್ಲಿ ಶುದ್ಧ ನೀರಿನ ಘಟಕಗಳು ಅಲ್ಲಲ್ಲಿ ಬಹುವಾಗಿ ತಲೆಯೆತ್ತಿವೆ. ಇವುಗಳಿಂದ ಹೊರಬರುವ ನಿರುಪಯುಕ್ತ ನೀರು ಸಂಪೂರ್ಣವಾಗಿ ಖನಿಜರಹಿತವಾಗಿರುತ್ತದೆ. ಈ ನೀರು ಚರಂಡಿ ನೀರಿನೊಂದಿಗೆ ಬೆರೆಯುವುದರಿಂದ ಮತ್ತಷ್ಟು ಹಾನಿಕಾರಕವಾಗುತ್ತದೆ. ಆದ್ದರಿಂದ ಈ ಶುದ್ಧ ನೀರು ಘಟಕಗಳಿಂದ ಹೊರಬರುವ ನಿರುಪಯುಕ್ತ ನೀರನ್ನು ಪ್ರತ್ಯೇಕವಾಗಿ ಮರುಪೂರಣ ಮಾಡುವುದು ಉತ್ತಮ.
? ಚರಂಡಿಯ ಪ್ರತಿ ಮಾರ್ಗದ ನಿರ್ವಹಣೆಯು ಪ್ರತಿದಿನ ನಡೆಯುತ್ತಿರಬೇಕು. ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಯನ್ನು ಆಯಾ ನಿವೇಶನ/ ಸ್ಥಳದ ಮಾಲೀಕರಿಗೆ ವಹಿಸ ಬೇಕು. ತಪ್ಪಿತಸ್ಥರಿಂದ ಕಡ್ಡಾಯವಾಗಿ ದಂಡ ವಸೂಲಿ ಮಾಡಬೇಕು.
? ಚರಂಡಿ ನೀರನ್ನು ಹೊರಹಾಕಲು ಕಾಲುವೆಗಳ ಬದಲಾಗಿ ಸಾಧ್ಯವಾದಷ್ಟು ಪೈಪ್‌ಲೈನ್ ಬಳಸಬೇಕು. ಹಿಂದೆ ನಮ್ಮ ಪೂರ್ವಜರು ಪ್ರತಿಮನೆಗಳಿಗೆ ಅಂಟಿಕೊಂಡಂತೆ ಬಚ್ಚಲುಗುಂಡಿಗಳನ್ನು ನಿರ್ಮಿಸಿಕೊಂಡಿದ್ದರು. ಅವು ಒಂದು ರೀತಿಯ ಇಂಗುಗುಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದವು. ಹೀಗಾಗಿ ಸ್ನಾನದ ಹಾಗೂ ಪಾತ್ರೆಗಳನ್ನು ತೊಳೆದ ನೀರು ಆ ಇಂಗುಗುಂಡಿಯಲ್ಲಿಯೇ ಬಿದ್ದು ಇಂಗುತ್ತಿತ್ತು. ವರ್ಷಕ್ಕೊಮ್ಮೆ ಈ ಇಂಗುಗುಂಡಿಯಲ್ಲಿನ ಘನತ್ಯಾಜ್ಯ
ಗಳನ್ನು ಹೊರತೆಗೆದು ತಿಪ್ಪೆಗುಂಡಿಯಲ್ಲಿ ಹಾಕುತ್ತಿದ್ದರು.
ನಂತರ ಆ ಘನತ್ಯಾಜ್ಯವು ತಿಪ್ಪೆಗೊಬ್ಬರದೊಂದಿಗೆ ಕೃಷಿಭೂಮಿ ಸೇರುತ್ತಿತ್ತು. ಇಂದು ಬಹುತೇಕವಾಗಿ ಬಚ್ಚಲುಗುಂಡಿಗಳು ಮಾಯವಾಗಿವೆ. ಅದರಂತೆ ಜಾನುವಾರಗಳ ಸಾಕಣೆಯೂ ಕಡಿಮೆಯಾಗಿದ್ದರಿಂದ ತಿಪ್ಪೆಗುಂಡಿಗಳು ಮಾಯವಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ‘ಕಾಂಕ್ರೀಟೀಕರಣ’ದ
ಪರಿಣಾಮ ಬಳಸಿದ ನೀರನ್ನು ಹೊರಹಾಕಲು ಇಂದು ಪ್ರತಿ ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆ(ಗಟಾರ)ಗಳು ನಿರ್ಮಾಣ ಗೊಂಡಿವೆ. ಇವುಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಗಟಾರಗಳಲ್ಲಿ ಹರಿಯಬೇಕಾಗಿದ್ದ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಇಂದು ಎಲ್ಲ ಸ್ಥಳಗಳಲ್ಲಿ
ದುರ್ನಾತ ಸರ್ವೇಸಾಮಾನ್ಯವಾಗಿದೆ. ಇದರಿಂದ ಕ್ರಿಮಿ – ಸೊಳ್ಳೆಗಳು ಹೆಚ್ಚಾಗಿ ಸ್ವಚ್ಛತೆಯ ಅರಿವಿಲ್ಲದ ಮುಗ್ಧ ಜನರ ಆಹಾರಗಳ ಮೇಲೆ ಅವು ದಾಂಗುಡಿ ಯಿಡುವುದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.
ಸರಕಾರಗಳು ದೇಶ ರಕ್ಷಣೆಗಾಗಿ ಲಕ್ಷಾಂತರ ಕೋಟಿ ರು. ಹಣವನ್ನು ವ್ಯಯಿಸುತ್ತಿವೆ. ಅದ ರಂತೆಯೇ ಜನತೆಗೆ ಅವಶ್ಯ ವಿರುವ ಇನ್ನಿತರ ಮೂಲ ಭೂತ
ಸೌಕರ್ಯಗಳಿಗಾಗಿಯೂ ಅವಶ್ಯವಿರುವಷ್ಟು ಹಣವನ್ನು ವಿನಿ ಯೋಗಿಸಬೇಕು. ಮುಖ್ಯವಾಗಿ ಆರೋಗ್ಯದ ಸುಧಾರಣೆಯ ದೃಷ್ಟಿಯಿಂದ ಪ್ರಥಮ
ಹೆಜ್ಜೆಯಾಗಿ ಈ ಚರಂಡಿ ನೀರಿನ ವಿಲೇವಾರಿಗಾಗಿ ಗಂಭೀರ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಜನಸಮು ದಾಯಕ್ಕೆ ಆಕಸ್ಮಿಕವಾಗಿ ಆವರಿಸಬಹುದಾದ ಕಾಯಿಲೆಗಳನ್ನು ತಪ್ಪಿಸ ಬಹುದು. ದೇಶದಲ್ಲಿ ಜಲವಿವಾದಗಳ ಕುರಿತು ಪರಿಣಾಮ ಕಾರಿ ಚರ್ಚೆಗಳು ನಡೆಯುತ್ತಿವೆ. ಆದರೆ ಲಭ್ಯವಿರುವ ಜಲದ ಶುದ್ಧತೆಯ ಕುರಿತು ಇಂಥದೇ ಚರ್ಚೆ ನಡೆಯದಿರುವುದು ಹಾಗೂ ಪ್ರಗತಿಯಾಗದಿರುವುದು ದುರಂತ. ಇನ್ನೊಂದು ಗಂಭೀರ
ವಿಷಯವೇನೆಂದರೆ, ಇಂದು ದೇಶದ ಬಹುತೇಕ ನಗರಗಳಲ್ಲಿ ಮಾಲಿನ್ಯವು ದಿನದಿಂದ ದಿನಕ್ಕೆ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿರುವುದು ಗುಟ್ಟೇನಲ್ಲ. ಚರಂಡಿ ನೀರಿನ ಸಮರ್ಪಕ ನಿರ್ವಹಣೆಯ ಕೊರತೆಯೇ ಈ ಮಾಲಿನ್ಯದ ಮೂಲವಾಗಿದೆ.
ಚರಂಡಿ ನೀರಿನ ಸಮರ್ಪಕ ನಿರ್ವಹಣೆ ಯಾಗದಿದ್ದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪರಿಸರ ಮಾಲಿನ್ಯ ಕಟ್ಟಿಟ್ಟಬುತ್ತಿ. ಆರೋಗ್ಯ ಹಾಗೂ ಸ್ವಚ್ಛತೆಯ ವಿಷಯದಲ್ಲಿ ಸರಕಾರ ಮತ್ತು ನಾಗರಿಕರು ವಿಶೇಷ ಮುತವರ್ಜಿಯಿಂದ ಚರಂಡಿ ನೀರಿನ ಸಮರ್ಪಕ ನಿರ್ವಹಣೆ ಯನ್ನು ಕೈಗೊಳ್ಳ ಬೇಕು. ಇದು ಈ
ಕ್ಷಣದ ಅನಿವಾರ್ಯ.
(ಲೇಖಕರು ಕೃಷಿತಜ್ಞರು ಹಾಗೂ
ಸಹಾಯಕ ಮಹಾಪ್ರಬಂಧಕರು)