Saturday, 14th December 2024

ಸಿಪಿಎಚ್ಐ ಮತ್ತು ಪಿಎಂಇಸಿ ಇಂಡಿಯಾ ಎಕ್ಸ್ಪೋ: ಹೊಸ ಫಾರ್ಮಸ್ಯುಟಿಕಲ್ ಕಲ್ಪನೆಗಳೊಂದಿಗೆ ಮತ್ತೆ ಬಂದಿದೆ

• ಸಿಪಿಎಚ್ಐ ಮತ್ತು ಪಿಎಂಇಸಿ ಇಂಡಿಯಾ ಎಕ್ಸ್ಪೋದ 16 ನೇ ಆವೃತ್ತಿ, ನವೆಂಬರ್ 28-30, 2023 ದೆಹಲಿಯ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್‌ನಲ್ಲಿ ನಡೆಯಲಿದೆ.
• ಈ ಪ್ರದರ್ಶನಕ್ಕೆ 45,000 ಸಂದರ್ಶಕರು, 10,000+ ಉತ್ಪನ್ನಗಳ 1,500 ಪ್ರದರ್ಶಕರು ಮತ್ತು ಉದ್ಯಮ ತಜ್ಞರು ಆಗಮಿಸಲಿದ್ದಾರೆ. ಪರಸ್ಪರ ಭೇಟಿಯಾಗಲು, ಕಲಿಯಲು, ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅವರ ವ್ಯವಹಾರವನ್ನು ಮುಂದಕ್ಕೊಯ್ಯಲು ಇದೊಂದು ಅನನ್ಯ ವಾತಾವರಣವನ್ನು ಒದಗಿಸುತ್ತದೆ.

ಬೆಂಗಳೂರು: ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಸಿಪಿಎಚ್ಐ ಮತ್ತು ಪಿಎಂಇಸಿ ಇಂಡಿಯಾ ಎಕ್ಸ್ಪೋ ಗೆ ಇದು 16 ನೇ ವರ್ಷ. ಇದರ ಆಯೋಜಕರು, ಭಾರತದ ಪ್ರಮುಖ ಬಿ2ಬಿ ಇವೆಂಟ್ ಆಯೋಜಕರಾದ ಇನ್ಫಾರ್ಮ ಮಾರ್ಕೆಟ್ಸ್ ಇನ್ ಇಂಡಿಯಾ. ದಕ್ಷಿಣ ಏಷ್ಯಾದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರವಾದ ಔಷಧೀಯ ಉದ್ಯಮದ ಇವೆಂಟ್‌ ಆದ ಈ ಸಿಗ್ನೇಚರ್ ಎಕ್ಸ್ಪೋ ನವೆಂಬರ್ 28 ರಿಂದ ನವೆಂಬರ್ 30, 2023 ರವರೆಗೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿರುವ ಇಂಡಿಯಾ ಎಕ್ಸ್ಪೋ ಸೆಂಟರ್‌ನಲ್ಲಿ ನಡೆಯುತ್ತದೆ.

ಔಷಧೀಯ ಪರಿಸರ ವ್ಯವಸ್ಥೆಯನ್ನು ಒಗ್ಗೂಡಿಸುವುದು: ಮತ್ತೊಮ್ಮೆ ಈ ಎಕ್ಸ್ಪೋ, ಜ್ಞಾನ-ತಂತ್ರಜ್ಞಾನ-ಮಾರುಕಟ್ಟೆ ಗಳನ್ನು ಒಳಗೊಂಡಂತೆ ಉದ್ಯಮದ ವಿವಿಧ ಅಂಶಗಳನ್ನು ಸಂಪರ್ಕಿಸುವ ಮಾರು ಕಟ್ಟೆಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಸಿಪಿಎಚ್ಐ ಮತ್ತು ಪಿಎಂಇಸಿ ಇಂಡಿಯಾ ದಲ್ಲಿ 1500+ ಪ್ರದರ್ಶಕರು ಭಾಗವಹಿಸಲಿದ್ದಾರೆ ಮತ್ತು 3 ದಿನಗಳ ಈ ಇವೆಂಟ್‌ 150+ ದೇಶಗಳಿಂದ 45,000+ ಸಂದರ್ಶಕರನ್ನು ಆಕರ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಉನ್ನತ ಶ್ರೇಣಿಯ ಫಾರ್ಮಸ್ಯುಟಿ ಕಲ್ ಎಕ್ಸಿಕ್ಯುಟಿವ್ ಗಳು, ಖರೀದಿದಾರರು, ಖರೀದಿ ವ್ಯವಸ್ಥಾಪಕರು, ಗುತ್ತಿಗೆ ತಯಾರಕರು, ಆಸ್ಪತ್ರೆ ನಿರ್ವಾಹಕರು, ಹಾಗೇ ರಾಷ್ಟ್ರೀಯ ಮತ್ತು ರಾಜ್ಯ ನಿಯಂತ್ರಣ ಮಂಡಳಿಗಳು ಮತ್ತು ನೀತಿ ನಿರೂಪಕರ ಪ್ರತಿನಿಧಿಗಳೊಂದಿಗೆ ನೇರ ಸಂಪರ್ಕ ಹೊಂದಲು ಇದೊಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಭಾರತದಲ್ಲಿನ ಆರ್ಥಿಕ ಅನಿಶ್ಚಿತತೆಗಳು ಮತ್ತು ದೇಶೀಯ ವ್ಯಾಪಾರದ ಸವಾಲುಗಳನ್ನು ಪರಿಹರಿಸಲು ಈ ಪಾಲುದಾರರೆಲ್ಲ ಒಟ್ಟಾಗಿ ಸೇರಲು, ವ್ಯಾಪಾರ ನಡೆಸಲು ಮತ್ತು ಹೊಸ ಹೊಸ ಪರಿಹಾರಗಳನ್ನು ಅನ್ವೇಷಿಸಲು ಎಕ್ಸ್ಪೋ ಒಂದು ಉತ್ತಮ ವೇದಿಕೆ.

ಜಾಗತಿಕ ಫಾರ್ಮಸ್ಯುಟಿಕಲ್ ಚಿತ್ರಣವನ್ನು ಬದಲಾಯಿಸುವ ವೇದಿಕೆಯಾಗಬಹುದು. ನಿರಂತರ ಆಧುನೀಕರಣದ ಮೂಲಕ ಸಿಪಿಎಚ್ಐ ಮತ್ತು ಪಿಎಂಇಸಿ ಇಂಡಿಯಾ, ಜಾಗತಿಕ ಪೂರೈಕೆ ಸರಪಳಿಗೆ ಒಂದು ಮಾರ್ಗವಾಗಿ ಬೆಳೆದಿದೆ; ಒಂದು ವಿಶಾಲವಾದ ಛಾವಣಿಯ ಅಡಿಯಲ್ಲಿ ವೈವಿಧ್ಯಮಯ ಅಂಶಗಳನ್ನೆಲ್ಲ ಸೇರಿಸುತ್ತ ಬಂದಿದೆ. ಈ ಇವೆಂಟ್, ತನ್ನ ಪೂರಕ ಕಾರ್ಯಕ್ರಮಗಳ ಜೊತೆಗೆ, ಭಾರತದ ಔಷಧೀಯ ಯಂತ್ರೋಪಕರಣಗಳು, ತಂತ್ರಜ್ಞಾನ ಮತ್ತು ಪದಾರ್ಥಗಳ ವಲಯಕ್ಕೆ ವೇಗವನ್ನು ನೀಡುವ ನಿಟ್ಟಿನಲ್ಲಿ ಪ್ರಮುಖವಾಗುವ ತಾಂತ್ರಿಕ ಪ್ರಗತಿಗಳ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಭಾರತೀಯ ಔಷಧೀಯ ಉದ್ಯಮ ಗಮನಾರ್ಹ ವಾಗಿ ವಿಸ್ತಾರಗೊಳ್ಳುವ ಹಂತದಲ್ಲಿದೆ.

2028 ರ ವೇಳೆಗೆ ಮಾರುಕಟ್ಟೆ ಮೌಲ್ಯ 102.7 ಶತಕೋಟಿ ಡಾಲರ್ (8.5 ಲಕ್ಷ ಕೋಟಿ ರೂಗಳು) ಮತ್ತು ಯೋಜಿತ ಸಿಎಜಿಆರ್ ಶೇ. 13 ತಲುಪಬೇಕೆಂಬ ಗುರಿಯಿದೆ. ಈ ವರ್ಷದ ಸಿಪಿಎಚ್‌ಐ ಮತ್ತು ಪಿಎಂಇಸಿ ಇಂಡಿಯಾ ಎಕ್ಸ್ಪೋದ ಘೋಷಣೆಯ ಕುರಿತು ಮಾತ ನಾಡುತ್ತಾ, ಭಾರತದಲ್ಲಿನ ಇನ್‌ಫಾರ್ಮಾ ಮಾರ್ಕೆಟ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಯೋಗೇಶ್ ಮುದ್ರಾಸ್ ಹೀಗೆ ನುಡಿ ದಿದ್ದಾರೆ: “2023 ರಲ್ಲಿ, ಭಾರತೀಯ ಫಾರ್ಮ ಉದ್ಯಮ ಒಂದೇ ಸಮನೆ ಮೇಲ್ಮುಖವಾಗಿದೆ.

ಇದಕ್ಕೆ ಕಾರಣ: ದೇಶೀಯ ಉತ್ಪಾದನಾ ನೆಲೆ, ಹೆಚ್ಚುತ್ತಿರುವ ನಾವೀನ್ಯತೆ ಮತ್ತು ಸರ್ಕಾರದ ಭದ್ರ ಬೆಂಬಲ. ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ರಿಸಿಕೊಂಡ ಉದ್ದೇಶಗಳ ಪ್ರಕಾರ, 2024 ರ ವೇಳೆಗೆ ಭಾರತದಲ್ಲಿನ ಫಾರ್ಮ ಉದ್ಯಮ 65 ಶತಕೋಟಿ ಡಾಲರ್ ಮತ್ತು 2030 ರ ವೇಳೆಗೆ 130 ಶತಕೋಟಿ ಡಾಲರ್ ಗುರಿಯನ್ನು ಮೀರುತ್ತದೆ. ಇದಕ್ಕೆ ಕಾರಣ: ಹೆಚ್ಚಿದ ಫಾರ್ಮಸ್ಯುಟಿಕಲ್ ಆವಿಷ್ಕಾರಗಳು, ತಾಂತ್ರಿಕ ಪ್ರಗತಿಗಳು, ಮತ್ತು ಹೊಸ ಪಥ ನಿರ್ಮಾಪಕ ಉತ್ಪನ್ನಗಳ ಮೇಲೆ ಗಮನ. ಲಸಿಕೆ ಉತ್ಪಾದನಾ ಶಕ್ತಿ ಕೇಂದ್ರಗಳಲ್ಲೊಂದಾಗಿರುವ ಭಾರತ, ಜಾಗತಿಕ ಲಸಿಕೆ ಬೇಡಿಕೆಯ ಶೇ.60+ ಬೇಡಿಕೆಯನ್ನು ಪೂರೈಸುವ ಮೂಲಕ ಮುಂಚೂಣಿ ಯಲ್ಲಿದೆ.

ಭವಿಷ್ಯ ಉತ್ತಮವಾಗಿದೆ. ಏಕೆಂದರೆ: ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯ, ಖಾಸಗಿ ಸಂಸ್ಥೆಗಳ ಸಹಯೋಗ ಮತ್ತು 2026 ರ ಹೊತ್ತಿಗೆ 30 ಮಿಲಿಯನ್ ಡಿಜಿಟಲ್ ಕೌಶಲ್ಯಗಳಲ್ಲಿ ವೃತ್ತಿಪರರಿಗೆ ತರಬೇತಿ ನೀಡುವ ಬದ್ಧತೆ.” ಕಳೆದ 15 ವರ್ಷಗಳಿಂದಲೂ ಸಿಪಿಎಚ್ಐ ಮತ್ತು ಪಿಎಂಇಸಿ ಇಂಡಿಯಾ ಎಕ್ಸ್ಪೋ, ಫಾರ್ಮ ಉದ್ಯಮದ ಉದ್ದೇಶ ಮತ್ತು ಗಮನಗಳಿಗೆ ಅನುಗುಣವಾಗಿದೆ.

ವಿಶ್ವದ ಅತಿದೊಡ್ಡ ಜಾಗತಿಕ ಔಷಧೀಯ ಸಮುದಾಯದ ಭಾಗವಾಗಿ, ಇದೊಂದು ಸಾಂಪ್ರದಾಯಿಕ ವ್ಯಾಪಾರ ಪ್ರದರ್ಶನವೂ ಹೌದು, ಸ್ಪೂರ್ತಿದಾಯಕ ಪ್ರಯಾಣದ ಸಂಕೇತವೂ ಹೌದು. ಈ ಇವೆಂಟ್, ವ್ಯಾಪಾರ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ ನೈಜ-ಸಮಯದ ಒಳನೋಟಗಳನ್ನು ಉತ್ತೇಜಿಸುತ್ತದೆ; ಜಾಗತಿಕ ಔಷಧೀಯ ಬೆಳವಣಿಗೆಗಳಲ್ಲಿ ನಮ್ಮನ್ನು ಮುಂಚೂಣಿಯಲ್ಲಿ ಇರಿಸುತ್ತದೆ.