ವಿಚಾರ ಮಂಥನ
ಎಸ್.ಜಿ.ಹೆಗಡೆ
‘ನೆವರ್ ಸೇ ನೆವರ್’ ಎನ್ನುವ ವಿಚಾರ ಗಹನವಾದುದು. ‘ನನಗೆ ಅದೆಂದರೆ ಇಷ್ಟವೇ ಇಲ್ಲ. ನಾನೆಂದೂ ಹೀಗೆ ಮಾಡಲಾರೆ, ಹಾಗಿನ ವಿಚಾರ ಸರ್ವಥಾ ಸಾಧ್ಯವೇ ಇಲ್ಲ’- ಹೀಗೆಲ್ಲ ನಾವು ಬೇರೆ ಬೇರೆ ಸಂದರ್ಭಗಳಲ್ಲಿ ಅಂದುಕೊಂಡಿರುತ್ತೇವೆ. ಹಾಗೆ ಮನಸ್ಸಿನಲ್ಲಿ ನಿರ್ಧರಿಸಿಯೂ ಇರುತ್ತೇವೆ. ಆದರೆ ಕಾಲನಿರ್ಣಯ ಕೆಲವೊಮ್ಮೆ ಬೇರೆಯದಿರಬಹುದು. ಬೇರೆಯದೇ ಆದ ವ್ಯತಿರಿಕ್ತ ಹಾದಿಯನ್ನು ತುಳಿಯಬೇಕಾಗಿ ಬರಲೂ ಬಹುದು. ಕುತೂಹಲಕಾರಿ ಬೆಳವಣಿಗೆಯಲ್ಲಿ ಬೇರೆಯ ಸಂಗತಿ ನಿಜವಾಗಬಹುದು.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನೇತಾರ ರಾಘವ್ ಚಡ್ಡಾ ಕಳೆದ ಸೆಪ್ಟೆಂಬರ್ ೨೪ರಂದು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದಯಪುರದ ಲೀಲಾ ಪ್ಯಾಲೇಸ್ನಲ್ಲಿ ಮದುವೆಯು ನಡೆಯಿತು. ಈ ನಟಿ ಮತ್ತು ರಾಜಕಾರಣಿ ಅಲ್ಲಲ್ಲಿ ಭೇಟಿಯಾಗುತ್ತಿರುವ ವಿಷಯವು ಕೆಲ ತಿಂಗಳುಗಳಿಂದ ಬೆಳಕಿಗೆ ಬಂದಿತ್ತು.
‘ವುಮನ್ಸ್ ಎರಾ’ ನಿಯತಕಾಲಿಕದ ಇತ್ತೀಚಿನ ವರದಿಯ ಪ್ರಕಾರ, ಇವರಿಬ್ಬರ ಪ್ರೇಮಕಥೆ ಆರಂಭವಾಗಿದ್ದು ಕಳೆದ ವರ್ಷ, ‘ಚಮಕಿಲಾ’ ಚಿತ್ರದ ಚಿತ್ರೀ ಕರಣದಲ್ಲಿ ಪರಿಣಿತಿ ತೊಡಗಿಸಿಕೊಂಡಿದ್ದಾಗ. ಅಲ್ಲಿ ಇವರಿಬ್ಬರ ಭೇಟಿಯು ಪ್ರಣಯದ ತಿರುವು ಪಡೆಯಿತಂತೆ. ಈ ಹೊಸಜೋಡಿ ಜಂಟಿಯಾಗಿ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ, ‘ಮೊಟ್ಟಮೊದಲ ಬ್ರೇಕ್ ಫಾಸ್ಟ್ ಟೇಬಲ್ನಿಂದಲೇ ನಮ್ಮಿಬ್ಬರಹೃದಯ ಅರಿತಿದ್ದವು. ಈ ದಿನಕ್ಕೆಂದು ಬಹಳ ಕಾಲದಿಂದ ಕಾದಿದ್ದೆವು.
ಖಟ ಚ್ಝಿಛಿooಛಿb ಠಿಟ ಜ್ಞಿZqs ಚಿಛಿ I Zb Io, ಟ್ಠ್ಝb’ಠಿ eZqಛಿ ಜಿqಛಿb ಡಿಜಿಠಿeಟ್ಠಠಿ ಛಿZe ಟಠಿeಛ್ಟಿ ಟ್ಠ್ಟ ಟ್ಟಛಿqಛ್ಟಿ ಚಿಛಿಜಜ್ಞಿo ಟಡಿ’ ಎಂದು ಸಿನಿಮೀಯವಾಗಿ, ಅಷ್ಟೇ ರಾಜನೀತಿಯ ಶೈಲಿಯಲ್ಲಿ ಹೇಳಿಕೊಂಡಿರುವುದು ಸುದ್ದಿಯಾಗಿದೆ. ಪರಿಣಿತಿ ಮತ್ತು ರಾಘವ್ ಪರಿಚಯ ಹಳೆಯದು. ಇಬ್ಬರೂ ಅಪ್ರತಿಮ ಪ್ರತಿಭಾವಂತರು. ಲಂಡನ್ನಿನ ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಓದಿದವರು. ‘ಟಜ್ಠಛಿ’ ನಿಯತಕಾಲಿಕದ ೨೦೧೪ರ ವರದಿಯ ಪ್ರಕಾರ, ಪರಿಣಿತಿಯು ಮ್ಯಾಂಚೆಸ್ಟರ್ ಬಿಸಿನೆಸ್ ಸ್ಕೂಲ್ನಲ್ಲಿ ಫೈನಾನ್ಸ್ ಮತ್ತು ಇಕನಾಮಿಕ್ ನ ಮೂರು ವಿಷಯದ ಆನರ್ಸ್ ಪದವಿ ಪಡೆದವಳು. ರಾಘವ್ ಪ್ರಸಿದ್ಧ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿ ಓದಿದವ.
ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅರ್ಹತೆ ಪಡೆದವ. ಲಂಡನ್ನಿನಲ್ಲಿ ಅವರಿಬ್ಬರ ಪರಿಚಯದ ಮೊಳಕೆ ಒಡೆದಿತ್ತಂತೆ. ಇಂಡಿಯನ್-ಯುಕೆ ಸಾಧಕರ ಗೌರವಾರ್ಪಣೆ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಫಾರ್ಮಲ್ ಸೂಟ್ ಧರಿಸಿ ನಿಂತಿರುವ ಫೋಟೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ನಂತರ ಪರಿಣಿತಿ ಬಾಲಿವುಡ್ನ ನಟನಾ ಕ್ಷೇತ್ರದಲ್ಲಿ ಹಾಗೂ ರಾಘವ್ ರಾಜನೀತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಖ್ಯಾತರಾಗಿದ್ದು ವಿಶೇಷ. ರಾಘವ್ ಚಡ್ಡಾ ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಸಭೆಯನ್ನು ಪ್ರವೇಶಿಸಿದವರು ಮತ್ತು ಹಲವಾರು ಜವಾಬ್ದಾರಿಯನ್ನು ಈಗಾಗಲೇ ನಿರ್ವಹಿಸಿದವರು.
ರಾಜಕೀಯದ ಮೂಲಕ ಜನಸೇವೆಯ ಮಾರ್ಗ ಹುಡುಕಿ ಹೊರಟವರು. ಅವರು ಓದಿನಲ್ಲಷ್ಟೇ ಅಲ್ಲ, ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಳಲ್ಲೂ
ಪ್ರವೀಣ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾದವರು. ಪರಿಣಿತಿ ನಟನೆಯಲ್ಲಿ ಅಷ್ಟೇ ಅಲ್ಲದೆ ಹಾಡುವಿಕೆಯಲ್ಲೂ ನಿಸ್ಸೀಮಳು. ಇಬ್ಬರೂ ಬಹಳ
ವರ್ಷದಿಂದ ಪರಿಚಿತರು. ಆದರೂ ಈಗಿನ ನಂಟಿನ ಕುರಿತು ಊಹಿಸಿದ್ದವರು ಯಾರು? ಹಿಂದೊಮ್ಮೆ, ಸಿದ್ಧಾರ್ಥ ಮಲ್ಹೋತ್ರ ಮತ್ತು ಪರಿಣಿತಿ ಜತೆಯಾಗಿ ನಟಿಸಿದ್ದ ಚಲನಚಿತ್ರವೊಂದರ ಪ್ರಮೋಷನ್ ಸಮಯದಲ್ಲಿ ನಡೆದ ಸಂದರ್ಶನವೊಂದು ಈಗ ಬೆಳಕಿಗೆ ಬಂದಿದೆ. ಅದರಲ್ಲಿ ಪರಿಣಿತಿ ಹೇಳಿಕೊಂಡಿದ್ದು ಹೀಗೆ: ’Seಛಿ mಟಚ್ಝಿಛಿಞ ಜಿo, ಐ bಟ್ಞ’ಠಿ ಡಿZಠಿ ಠಿಟ ಞZqs Zqs mಟ್ಝಜಿಠಿಜ್ಚಿಜಿZ.
Seಛ್ಟಿಛಿ Zಛಿ ಠಿಟಟ ಞZqs ಜಟಟb ಟmಠಿಜಿಟ್ಞo, ಚ್ಠಿಠಿ ಐ bಟ್ಞ’ಠಿ ಡಿZಠಿ ಠಿಟ ಞZqs Zqs mಟ್ಝಜಿಠಿಜ್ಚಿಜಿZಛಿqಛ್ಟಿ’. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು. ‘ಬೆಟರ್ ನೆವರ್ ಸೇ ನೆವರ್’ ಎನ್ನುವ ನಾಣ್ಣುಡಿ ಮುನ್ನೆಲೆಗೆ ಬರಲು ಈ ಮಾತು ಕಾರಣವಾಗಿ ಎಲ್ಲೆಡೆ ಚರ್ಚೆಯಾಯಿತು. ‘ನೆವರ್ ಸೇ ನೆವರ್’ ಎನ್ನುವ ವಿಚಾರ ಗಹನವಾದುದು. ‘ನನಗೆ ಅದೆಂದರೆ ಇಷ್ಟವೇ ಇಲ್ಲ. ನಾನೆಂದೂ ಹೀಗೆ ಮಾಡಲಾರೆ, ಹಾಗಿನ ವಿಚಾರ ಸರ್ವಥಾ ಸಾಧ್ಯವೇ ಇಲ್ಲ’- ಹೀಗೆಲ್ಲ ನಾವು ಬೇರೆ ಬೇರೆ ಸಂದರ್ಭಗಳಲ್ಲಿ ಅಂದುಕೊಂಡಿರುತ್ತೇವೆ. ಹಾಗೆ ಮನಸ್ಸಿನಲ್ಲಿ ನಿರ್ಧರಿಸಿಯೂ ಇರುತ್ತೇವೆ. ಆದರೆ ಕಾಲನಿರ್ಣಯ ಕೆಲವೊಮ್ಮೆ ಬೇರೆಯದಿರಬಹುದು. ಬೇರೆಯದೇ ಆದ ವ್ಯತಿರಿಕ್ತ ಹಾದಿಯನ್ನು ತುಳಿಯಬೇಕಾಗಿ ಬರಲೂಬಹುದು.
ಕುತೂಹಲಕಾರಿ ಬೆಳವಣಿಗೆಯಲ್ಲಿ ಬೇರೆಯ ಸಂಗತಿ ನಿಜವಾಗಬಹುದು.
ಇಂಥ ಸಂಗತಿಗಳು ಎಲ್ಲರ ಬದುಕನ್ನು, ವೃತ್ತಿಜೀವನವನ್ನು ಸ್ಪರ್ಶಿಸಿರಬಹುದು. ‘ನೆವರ್ ಸೇ ನೆವರ್’ ಎನ್ನುವ ಗಾದೆಮಾತು ಅರ್ಥಗರ್ಭಿತವಾದದ್ದು. ನಾಣ್ಣುಡಿಗಳು ಹುಟ್ಟಿಕೊಳ್ಳುವುದು, ರೂಢಿಗೆ ಬರುವುದು ಹಾಗೆಯೇ- ಬದುಕಿನ ವಿಶೇಷ ಸಂದರ್ಭಗಳಿಂದ. ಅವು ಬಳಕೆಗೆ ಬರುವುದೂ ವಿಶೇಷ
ಸಂದರ್ಭದಿಂದಲೇ. ನಾಣ್ಣುಡಿಗಳು ಹುಟ್ಟುವುದಕ್ಕೆ ಕಾರಣವಾದ ಮೂಲ ಹಾಗೂ ಸಂದರ್ಭವನ್ನು ಅರಸುವ ಗೊಡವೆಗೆ ನಮ್ಮ ವ್ಯಕ್ತಿಗಳು, ಅಧ್ಯಯನ
ಸಂಸ್ಥೆಗಳು ಅಥವಾ ಸಮಾಜ ತೊಡಗಿಸಿಕೊಳ್ಳುವುದು ಮತ್ತು ಅವನ್ನು ದಾಖಲಿಸುವುದು ವಿರಳವೆನ್ನಬೇಕು. ಉದಾಹರಣೆಗೆ, ‘ಅಕ್ಕ ಸತ್ತರೆ ಅಮಾವಾಸ್ಯೆ
ನಿಲ್ಲುವುದೇ?’, ‘ನಾಯಿಯ ಬಾಲವನ್ನು ನಳಿಗೆಯಲ್ಲಿ ಹಾಕಿದಷ್ಟೇ ಹೊತ್ತು’, ‘ಆಡುವುದೆಲ್ಲ ಕಾಶಿಕಂಡ, ತಿನ್ನುವುದೆಲ್ಲ ಮಶಿಕೆಂಡ’ ಇತ್ಯಾದಿ ಹೇಳತೀರದಷ್ಟು ವಿಶಿಷ್ಟ ಗಾದೆಮಾತುಗಳಿವೆ. ಅವುಗಳ ಮೂಲ, ವಿವರದ ದಾಖಲೆಗಳು ಸಾಕಷ್ಟಿಲ್ಲ.
ಆದರೆ ಗಾದೆಮಾತುಗಳ ಮೂಲ ಅರಸುವ ಪ್ರವೃತ್ತಿಯು ಇಂಗ್ಲಿಷ್ ಜಗತ್ತಿನಲ್ಲಿದೆ. ಗಾದೆಮಾತುಗಳ ಮೂಲ ದಾಖಲಿಸಿದ ಪುಸ್ತಕಗಳಿವೆ. ಗ್ರೆಗೊರಿ ಟೈಟಲ್ಮನ್ಸ್ ಬರೆದ ‘ಅಮೆರಿಕಾಸ್ ಪಾಪ್ಯುಲರ್ ಪ್ರಾವರ್ಬ್ಸ್ ಆಂಡ್ ಸೇಯಿಂಗ್’ ಪ್ರಕಾರ ‘ನೆವರ್ ಸೇ ನೆವರ್’ ಹೇಳಿಕೆಯ ಮೊದಲ ಬಳಕೆಯು ಚಾರ್ಲ್ಸ್ ಡಿಕನ್ಸ್ನ ಮೊದಲ ಕಾದಂಬರಿ ‘ದಿ ಪಿಕ್ವಿಕ್ ಪೇಪರ್ಸ್’ನಲ್ಲಿ ಕಂಡುಬಂತು ಎನ್ನಲಾಗಿದೆ. ಅದಕ್ಕೂ ಮೊದಲು ‘ನೆವರ್ ಸೇ ಡೈ’ ಎನ್ನುವ ಮಾತು ೧೮೧೪ರಲ್ಲಿ ಹುಟ್ಟಿಕೊಂಡಿದ್ದು, ಸುಮಾರು ೨೦ ವರ್ಷಗಳ ನಂತರ ಡಿಕನ್ಸ್ ಮೂಲಕ ‘ನೆವರ್ ಸೇ ನೆವರ್’ ರೂಪದಲ್ಲಿ ಪ್ರಚಲಿತವಾಗಿದ್ದು.
ಅದು ಜನಪ್ರಿಯತೆ ದಕ್ಕಿಸಿಕೊಂಡಿದ್ದು ೧೯೩೯ರಲ್ಲಿ ಬಾಬ್ ಹೋಪ್ ಮತ್ತು ಮಾರ್ಥಾ ರಾಯೇ ನಟಿಸಿದ ಚಲನಚಿತ್ರದಿಂದ! ಹೀಗೆ ಲೋಕೋಕ್ತಿಗಳ ಕುರಿತು ಅರಿಯುವ ಮತ್ತು ಉಲ್ಲೇಖಿಸುವ ಸಂಗತಿಯು ಇಂಗ್ಲಿಷ್ ಸೇರಿದಂತೆ ಜಗತ್ತಿನ ಅನೇಕ ಭಾಷಾ ಪ್ರಾಂತ್ಯಗಳಲ್ಲಿರುವುದು ಗಮನಾರ್ಹ. ‘ನೆವರ್ ಸೇ ನೆವರ್’ ಅನ್ನುವ ಮಾತು ನಾವು ತೆಗೆದುಕೊಳ್ಳುವ ನಿರ್ಧಾರವನ್ನು ಪ್ರತಿಬಂಧಿಸುವುದಿಲ್ಲ. ಹಾಗೆ ಮಾಡುವುದೇ ಇಲ್ಲ ಅಥವಾ ಅದು ಸಾಧ್ಯವಿಲ್ಲ ಎನ್ನುವ ನಿರ್ಧಾರವನ್ನು ವಿರುದ್ಧವಾಗಿ ಬದಲಾಗಿಸಿದಾಗಿನ ವಿಚಾರದ ಕುರಿತು ಟಿಪ್ಪಣಿಯ ನ್ನಷ್ಟೇ ಅದು ಮಾಡುತ್ತದೆ. ಇಂಥ ಸಂದರ್ಭಗಳು ಸಾಕಷ್ಟು ಬಾರಿ ಎದುರಾಗುತ್ತವೆ. ಇಲ್ಲಿ ನನ್ನದೇ ಅನುಭವವನ್ನು ಹೇಳಬಹುದು. ಇದು ೧೯೮೪ರಲ್ಲಿ ನಾನು ರಸಾಯನ ಶಾಸದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರದ ವಿಷಯ. ಆ ಕಾಲದಲ್ಲಿ ಉದ್ಯೋಗ ಅರಸಿ ಊರಿನಿಂದ ಮುಂಬೈಗೆ ಬಂದಿದ್ದೆ.
ಅಂದು ರಸಾಯನ ಶಾಸ್ತ್ರದಲ್ಲಿ ಉನ್ನತ ಪದವಿ ಪಡೆದವರಿಗೆ ನೌಕರಿಯ ಪ್ರಶಸ್ತ ಪಟ್ಟಣವೆಂದರೆ ಮುಂಬೈ. ಏಕೆಂದರೆ ಅದರ ಪರಿಮಿತಿಯ
ಒಳಗೆ ಮತ್ತು ಆಸುಪಾಸಿನಲ್ಲಿ ರಸಾಯನ ಶಾಸ್ತ್ರವು ಬಳಕೆಯಾಗುವಂಥ/ ಅನ್ವಯವಾಗುವಂಥ ಕಾರ್ಖಾನೆಗಳು ಬಹಳ ಸಂಖ್ಯೆಯಲ್ಲಿದ್ದವು.
ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನಾ ವಿಭಾಗಗಳು, ಔಷಧ ತಯಾರಿಕಾ ಘಟಕಗಳು, ಬಣ್ಣ ತಯಾರಿಸುವ, ಪೆಟ್ರೋಲಿಯಂ ಸಂಬಂಽತ ಭಾರಿ
ಉದ್ಯೋಗ ಘಟಕಗಳು ಅಲ್ಲಿದ್ದವು. ಅಲ್ಲದೆ ರಾಸಾಯನಿಕ ಉತ್ಪನ್ನಕ್ಕೆ ಸಂಬಂಽಸಿದ ಸಹಸ್ರಾರು ಸಣ್ಣ ಪುಟ್ಟ ವಿಭಾಗಗಳಿದ್ದವು. ಬಾಬಾ ಅಣುವಿಜ್ಞಾನ
ಸಂಸ್ಥೆಯಂಥ ಪ್ರಸಿದ್ಧ ಸರಕಾರಿ ಸಂಸ್ಥೆಯು ರಸಾಯನ ಶಾಸದ ಪದವೀಧರರಿಗೆ ಉದ್ಯೋಗ ನೀಡುತ್ತಿತ್ತು. ಊರುಗಳಿಂದ ಮುಂಬೈಗೆ ಬಂದವರ ಮಾದರಿ ಕೂಡ ಕಣ್ಣ ಮುಂದಿತ್ತು. ಹೀಗಾಗಿ ಯಥೋಚಿತ ಉದ್ಯೋಗಕ್ಕೆ ಮುಂಬೈ ಮಹಾನಗರಿಯೇ ಸೂಕ್ತ ಅನ್ನಿಸಿತ್ತು.
ಮುಂಬೈಗೆ ಬಂದಾಗ ಆಶ್ರಯ ನೀಡುವ ಪುಣ್ಯಾತ್ಮ ಸಂಬಂಧಿ ಕೂಡ ಇದ್ದರು. ಮುಂಬೈನಂಥ ನಗರಿಯಲ್ಲಿರುವ ಅಂದಿನ ಸಣ್ಣ ಮನೆಗಳಲ್ಲಿ ಆಶ್ರಯ ನೀಡುವುದು ಎಷ್ಟು ಉದಾತ್ತವಾದ ಸಂಗತಿಯಾಗಿರಬಹುದು ಎಂಬುದನ್ನು ಯಾರೂ ಯೋಚಿಸಬಹುದು. ಅಂದು ಮುಂಬೈ ತಲುಪಿದ ನಂತರ ಕಾರ್ಖಾನೆಯೊಂದರಲ್ಲಿ ನೌಕರಿ ಸಿಕ್ಕಿದರೂ, ಮಹಾನಗರಿಯ ಗತಿ, ಜೀವನ ವಿಧಾನ ಮತ್ತು ಕ್ಲಿಷ್ಟತೆಗೆ ಒಗ್ಗಿಕೊಳ್ಳಲಾಗದೆ ಚಡಪಡಿಸುವ ಸ್ಥಿತಿ ಬಂದಿತ್ತು.
ಅಲ್ಲಿಂದ ಹೇಗೋ ಪಾರಾಗಿ ಮರಳಿ ಊರು ತಲುಪಿದ್ದೆ, ಇನ್ನೆಂದೂ ಮುಂಬೈಗೆ ಮತ್ತೆ ರಳುವುದಿಲ್ಲ ಎಂಬ ನಿರ್ಧಾರ ಮಾಡಿದ್ದೆ. ಹಾಗೆ ಹೇಳಿಕೊಂಡಿದ್ದೆ ಕೂಡ! ಆದರೆ ಕಾಲದ ನಿರ್ಧಾರ ಬೇರೆಯೇ ಇತ್ತು. ಮುಂಬೈಗೆ ಮತ್ತೆ ತೆರಳುವಂತಾಯಿತು.
ಅದರಿಂದ ನಷ್ಟವೇನೂ ಆಗಲಿಲ್ಲ, ಮೂರು ದಶಕಗಳಿಗೂ ಹೆಚ್ಚು ಕಾಲದ ಸುಂದರ ಬದುಕನ್ನು ಮುಂಬೈ ನೀಡಿತು. ಮಾಯಾನಗರಿಯು ಕ್ರಮೇಣ
ಮಾನಸ ನಗರಿಯಾಯಿತು! ‘ನೆವರ್ ಸೇ ನೆವರ್’ ಎನ್ನುವ ವಿಚಾರವು ಎಷ್ಟೋ ಸಂದರ್ಭಗಳನ್ನು ತಟ್ಟುತ್ತದೆ. ಯಾವ ವೃತ್ತಿಯನ್ನು ಬೇಡ ಅಂದು ಕೊಳ್ಳುತ್ತೇವೆಯೋ ಅಂಥ ವೃತ್ತಿಯನ್ನು ಸ್ವೀಕಾರ ಮಾಡುವ ಸ್ಥಿತಿ ಬಂದಿರುತ್ತದೆ. ಯಾವ ಸಂಬಂಧ ಬೇಡವಾಗಿರುತ್ತದೆಯೋ ಅದೇ ಸಂಬಂಧ ಸೀಮೆ ಯಾಗಿಬಿಡುತ್ತದೆ. ಯಾವ ನೆಲವನ್ನು ಬೇಡ ಅಂದುಕೊಳ್ಳುತ್ತೇವೆಯೋ ಅದೇ ನೆಲವು ನೆಲೆ ನೀಡುತ್ತದೆ.
ಒಟ್ಟಿನಲ್ಲಿ, ಯಾವುದು ಬೇಡವಾಗಿರುತ್ತದೆಯೋ ಅದು ನಮ್ಮ ಪಾಲಿಗೆ ಬಂದಿರುತ್ತದೆ. ಬೇಡ ಎಂದು ಹೇಳಿರುವ ಸಂಗತಿಗಳನ್ನು ಸದಾ ದೂರವಿಡುವ ವಿಚಾರವು ಅರ್ಥಹೀನವಾಗಿಬಿಡುತ್ತದೆ. ನಮ್ಯತೆಯಲ್ಲಿ ಧನ್ಯತೆ ಕಾಣಬೇಕಾಗುವುದು ಸೂಕ್ತವಾಗುತ್ತದೆ. ಅಂಥ ನಿರ್ಧಾರಗಳು ಯಶಸ್ಸು ಮತ್ತು ನೆಮ್ಮದಿಗೆ
ಕಾರಣವಾಗುವುದಾದರೆ ಏಕೆ ಬೇಡ? ಅನ್ನಿಸುತ್ತದೆ. ಮೊದಲಿನ ನಿರ್ಧಾರದ ವ್ಯತಿರಿಕ್ತ ಹಾದಿ ತೆರೆದುಕೊಳ್ಳುತ್ತದೆ!
‘ಎರಡು ಕನಸು’ ಒಂದು ಅದ್ಭುತ ಕನ್ನಡ ಸಿನಿಮಾ. ಈ ಚಿತ್ರದ ಕಥಾನಾಯಕ ರಾಜ್ಕುಮಾರ್ ಅವರು ಮಂಜುಳಾರನ್ನು ಪ್ರೀತಿಸಿರುತ್ತಾರೆ. ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಎಂದು ಹಾಡುತ್ತಾರೆ ಕೂಡ. ಆದರೆ ಪ್ರೀತಿ ಫಲಿಸದೆ ಕಲ್ಪನಾರನ್ನು ಮದುವೆಯಾಗಿ ಬದುಕುವ ವಾಸ್ತವ ಸ್ಥಿತಿಯನ್ನು ಅವರು ಸ್ವೀಕರಿಸಬೇಕಾಗಿ ಬರುತ್ತದೆ. ಇಳಿಜಾರು ಪ್ರದೇಶಕ್ಕೆ ಹರಿಯುವ ನೀರಿನಂತೆ ಬದುಕು ವಾಸ್ತವದಲ್ಲಿ ಸಾಗಿಬಿಡುತ್ತದೆ ಎನ್ನುವುದೇ ಅಲ್ಲಿ ಅಮರ ಸಂದೇಶವಾಗುತ್ತದೆ.
ಕೆನಡಿಯನ್ ಹಾಡುಗಾರ ಜಸ್ಟಿನ್ ಬೀಬರ್ನ ಪ್ರಸಿದ್ಧ ಹಾಡು ‘ನೆವರ್ ಸೇ ನೆವರ್’ ಇಲ್ಲಿ ನೆನಪಿಗೆ ಬರುತ್ತದೆ. ಆತ ಈ ಹಾಡನ್ನು ದಾಖಲಿಸುವ
ಮೊದಲು, ಮೂಲ ಕಲಾಕಾರರ ಜತೆ ಸೇರಿ ಅದನ್ನು ಮಾರ್ಪಡಿಸಿಕೊಂಡರು. ‘ಕರಾಟೆ ಕಿಡ್ಸ್’ ಕುರಿತ ಥೀಮ್ ಅನ್ನು ಹಾಡು ಪಡೆದಿದ್ದು, ಅದರ ಕೆಲವು
ಸಾಲುಗಳು ಹೀಗಿವೆ:
Never say never …….
See I never thought that I
Could walk through fire
I never thought that I
Could take the burn
I never had the strength
To take it higher
Until I reached the point of no return
And there’s just no turning back
When your heart’s under attack
Gonna give everything I have
It’s my destiny..
ಆದ್ದರಿಂದ, ‘ಎಂದಿಗೂ ಹಾಗೆ ಸಾಧ್ಯವಿಲ್ಲ’ ಎನ್ನುವ ಮುನ್ನ ಒಮ್ಮೆ ಯೋಚಿಸುವುದು ಸರಿ. ವ್ಯತಿರಿಕ್ತ ಹಾದಿ ತುಳಿಯಬೇಕಾಗಿ ಬಂದರೆ ತಪ್ಪೇನಿದೆ? ಯಶಸ್ಸು, ನೆಮ್ಮದಿಯ ದಾರಿಯಲ್ಲಿ ಹೇಗೂ ಸರಿಯೇ. ಅನ್ಯಾಯ, ಅನೈತಿಕತೆ ಇಲ್ಲದಿದ್ದರೆ ಮುಗಿಯಿತು. ವಿಽಲಿಖಿತದ ವಿಚಾರ ಬೇರೆಯೇ…
(ಲೇಖಕರು ಮುಂಬೈನ ಲಾಸಾ ಸೂಪರ್
ಜೆನರಿಕ್ಸ್ನ ನಿರ್ದೇಶಕರು)