Friday, 13th December 2024

ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕ 

ಗುಬ್ಬಿ: ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಭಾರತದ ಪ್ರಜೆಯ ರಾಜಕೀಯ, ಆರ್ಥಿಕ, ಶೈಕ್ಷಣಿಕ ಬೆಳವಣಿ ಗೆಗೆ ಸಂವಿಧಾನವು ಆಧಾರ ಸ್ತಂಭವಾಗಿದ್ದು ಇಂತಹ ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ ಉತ್ತಮ ನಾಗರೀಕ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಶಶಿಕಲಾ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಡಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 2015 ರಿಂದ ಪ್ರತಿ ವರ್ಷ ನವೆಂಬರ್ 26 ರ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು ವಿಶೇಷವಾಗಿ ಶಿಕ್ಷಕರು, ಅಧ್ಯಾಪಕರು, ವಕೀಲರು ಸಮಾಜದಲ್ಲಿನ ಪ್ರಜೆಗಳಿಗೆ ಸಂವಿಧಾನದ ಆಶಯಗಳನ್ನು ತಿಳಿಸು ವಂತಹ ಕೆಲಸ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಧುಸೂದನ್ ಮಾತನಾಡಿ, ಭಾರತ ಸಂವಿಧಾನವನ್ನು ಇಡೀ ಪ್ರಪಂಚವೇ ಮೆಚ್ಚುವಂತಹ ಬರಹದ ರೂಪದಲ್ಲಿ ರಚನೆಗೊಂಡಿ ರುವ ಒಂದು ಉತ್ಕೃಷ್ಟ ಮಾದರಿ ಸಂವಿಧಾನವಾಗಿದೆ. ಸಂವಿಧಾನದ ರಚನಾ ಸಭೆ 1946 ರಿಂದ ತನ್ನ ಕೆಲಸವನ್ನು ಪ್ರಾರಂಭಿಸಿ ಎರಡು ವರ್ಷ 11 ತಿಂಗಳು 18 ದಿನಗಳ ಕಾಲಾವಕಾಶವನ್ನು ತೆಗೆದುಕೊಂಡು ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಸಿದ್ಧಪಡಿಸಿ 1949ರ ನವೆಂಬರ್ 26ರಂದು ಅಧಿಕೃತ ವಾಗಿ ಘೋಷಣೆಯನ್ನು ಮಾಡಲಾಯಿತು. ಹಾಗಾಗಿ ಈ ದಿನವನ್ನು ಸಂವಿಧಾನ ಆಚರಣೆ ದಿನವನ್ನಾಗಿ ಮಾಡಲಾಗುತ್ತಿದೆ ಎಂದರು.
ದಲಿತ ಮುಖಂಡ ಚೇಳೂರು ಶಿವನಂಜಪ್ಪ  ಮಾತನಾಡಿ, ಇತ್ತೀಚಿನ ಕೆಲ ವರ್ಷಗಳಿಂದೀಚೆಗೆ ನಮ್ಮ ಸಂವಿಧಾನಕ್ಕೆ ಅಪಾಯಗಳು ಸಂಭವಿಸುತ್ತಿದ್ದು, ಸಂವಿಧಾನದ ಆಶಯಗಳಿಗೆ ವಿಕೃತ ಮನಸ್ಸುಗಳಿಂದ ಆಗಾಗ್ಗೆ ಸಂವಿಧಾನವನ್ನು ಬದಲಾಯಿಸುವ, ಬಹಿರಂಗವಾಗಿ ಸುಡುವ, ಘಟನೆಗಳು ಕಂಡು ಬರುತ್ತಿವೆ. ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ದಂತಹ ತತ್ವಗಳಿಗೆ ಅಪಾಯವಾಗುತ್ತಿರುತ್ತದೆ. ಆದ್ದರಿಂದ ಇಂತಹವುಗಳಿಂದ ಸಂವಿಧಾನದ ರಕ್ಷಣೆ ಮಾಡಲು ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇ.ಓ ಪರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ , ಎ ಇ ಇ ವೆಂಕಟೇಶ್, ಎ ಇ ಇ ಚಂದ್ರ ಶೇಖರ್, ದಲಿತ ಮುಖಂಡರಾದ ಕಿಟ್ಟದಕುಪ್ಪೆ ನಾಗರಾಜ್, ನರೇಂದ್ರಬಾಬು, ಅಡವೀಶ್, ಎನ್ ಎ ನಾಗರಾಜು, ವಕೀಲ ರಾಜಣ್ಣ,  ಹೊಸಹಳ್ಳಿ ಮಹೇಶ್, ರವಿಕುಮಾರ್, ನರಸೀಯಪ್ಪ , ನಟರಾಜು, ಮಧು ಸೇರಿದಂತೆ ಇನ್ನಿತರರು ಹಾಜರಿದ್ದರು.