ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಉಜ್ಜೀವನ್ ಎಸ್‌ಎಫ್‌ಬಿ), ಜಾಗತಿಕ ನಿರ್ಲಾಭ ಸಂಸ್ಥೆಯಾದ Water.org ಜೊತೆ ಪಾಲುದಾರಿಕೆ ಯನ್ನು ಪ್ರಕಟಿಸಿದೆ.
ಈ ಪಾಲುದಾರಿಕೆ, ಸುರಕ್ಷಿತ ನೀರು ಮತ್ತು ನೈರ್ಮಲ್ಯಗಳನ್ನು ಹೊಂದಲು ಜನರಿಗೆ ಅಗತ್ಯವಾದ ಸಣ್ಣ ಸಾಲಗಳು ಸುಲಭಲಭ್ಯವಾಗುವಂತೆ ಮಾಡುತ್ತದೆ. ಭಾರತ, ಜಗತ್ತಿನಲ್ಲೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಪಾಲುದಾರಿಕೆ, ಜನಸಾಮಾನ್ಯರಿಗೆ ಸುರಕ್ಷಿತ ನೀರು ಮತ್ತು ನೈರ್ಮಲ್ಯಗಳನ್ನು ಹೊಂದಲು ಹಣಕಾಸು ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಈ ಪಾಲುದಾರಿಕೆಯ ಅಡಿಯಲ್ಲಿ Water.org, ಶುದ್ಧ ನೀರು ಮತ್ತು ನೈರ್ಮಲ್ಯಕ್ಕಾಗಿ ಹಣಕಾಸು ಅಗತ್ಯವಿರುವ ಪ್ರದೇಶಗಳನ್ನು ಗುರುತಿಸುವಲ್ಲಿ ಉಜ್ಜೀವನ್ ಎಸ್‌ಎಫ್‌ಬಿ ಗೆ ಸಹಾಯ ಮಾಡುತ್ತದೆ. Water.org ತಾಂತ್ರಿಕ ನೆರವು, ಮಾರುಕಟ್ಟೆ ಮೌಲ್ಯಮಾಪನ, ಮಾಹಿತಿ ಅಭಿವೃದ್ಧಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಾಮಗ್ರಿ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಬೆಂಬಲವನ್ನು ಒದಗಿಸುತ್ತದೆ. ಈ ಉದ್ದೇಶ ಸಾಧನೆಗಾಗಿ, ಉಜ್ಜೀವನ್ ಎಸ್‌ಎಫ್ ಬಿ, ಈಗಿರುವ ಮತ್ತು ಹೊಸ ಗ್ರಾಹಕರಿಗೆ 6,000 ರಿಂದ 1,00,000 ರೂಗಳವರೆಗೆ ಸಾಲವನ್ನು ನೀಡುತ್ತದೆ ಮತ್ತು ನೀರು ಮತ್ತು ನೈರ್ಮಲ್ಯ ಸೌಲಭ್ಯ ಗಳನ್ನು ನಿರ್ಮಿಸಲು ಮತ್ತು/ಅಥವಾ ನವೀಕರಿಸಲು ನೆರವಾಗುತ್ತದೆ.
ಉಜ್ಜೀವನ್ ಎಸ್‌ಎಫ್‌ಬಿ, ಕಳೆದ ವರ್ಷ 30 ಕೋಟಿ ರೂಗಳ ಮೌಲ್ಯದ 5,000 ನೀರು ಮತ್ತು ನೈರ್ಮಲ್ಯ (WATSAN) ಸಾಲಗಳನ್ನು ವಿತರಿಸಿದೆ. ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆ ಅನುಗುಣವಾಗಿರುವ ನೈರ್ಮಲ್ಯ ಸೌಲಭ್ಯಗಳನ್ನು ನಿರ್ಮಿಸಲು ಗ್ರಾಹಕರಿಗೆ ನೆರವಾಗಿದೆ. ಈ ಪಾಲುದಾರಿಕೆಯ ಮೂಲಕ ಉಜ್ಜೀವನ್ ಎಸ್‌ಎಫ್‌ಬಿ, ಮುಂದಿನ 3 ವರ್ಷಗಳಲ್ಲಿ ಸಣ್ಣ ಮತ್ತು ಸುಲಭ ಸಾಲಗಳನ್ನು ನೀಡುವ ಮೂಲಕ 65,000 ಕುಟುಂಬಗಳಿಗೆ ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.
ಈ ಸಂದರ್ಭದಲ್ಲಿ, ಉಜ್ಜೀವನ್ ಎಸ್‌ಎಫ್‌ಬಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಇಟ್ಟೀರ ಡೇವಿಸ್ ಹೀಗೆ ನುಡಿದಿದ್ದಾರೆ: “ಭಾರತದ ನಾಗರಿಕರು ಗೌರವಾನ್ವಿತ ಜೀವನವನ್ನು ನಡೆಸಲು ಅನುವು ಮಾಡಿಕೊಡಲು ಮುಂದಾಗಿರುವ Water.org ಜೊತೆಗೆ ಕೈಜೋಡಿ ಸುತ್ತಿದ್ದೇವೆ ಎಂದು ಪ್ರಕಟಿಸಲು ನಮಗೆ ಸಂತೋಷವಾಗುತ್ತಿದೆ. ಸಾಮಾನ್ಯ ಜನರ ಜೀವನ ಮಟ್ಟವನ್ನು ಸುಧಾರಿಸಲು ಕೀಲಿಕೈ ಎಂದರೆ ನೈರ್ಮಲ್ಯ ಮತ್ತು ಸುರಕ್ಷಿತ ನೀರು. ಈ ನಮ್ಮ ಹೊಸ ಪಾಲುದಾರಿಕೆಯ ಮೂಲಕ ಇವುಗಳನ್ನು ಸುಲಭಲಭ್ಯವಾಗಿಸಿ ಜನರ ಜೀವನಶೈಲಿಯನ್ನು ಉತ್ತಮಗೊಳಿಸುವ ಗುರಿ ನಮ್ಮದು. ಪ್ರತಿಯಾಗಿ ಜನರು ತಮ್ಮ ಸಮಯವನ್ನು ಹೆಚ್ಚು ಉತ್ಪಾದಕ ಉಪಕ್ರಮಗಳಲ್ಲಿ ಹೂಡಲು ಮತ್ತು ನಮ್ಮ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
“ಪ್ರಸ್ತಾವಿತ Water.org ಮತ್ತು ಉಜ್ಜೀವನ್ SFB ಪಾಲುದಾರಿಕೆಯಲ್ಲಿ ಸಾಕಷ್ಟು ಸಾಮರ್ಥ್ಯವನ್ನು Water.org ನೋಡುತ್ತದೆ. ಉಜ್ಜೀವನ್ SFB ಯ ಬಲವಾದ ಶಾಖೆಯ ಉಪಸ್ಥಿತಿ ಮತ್ತು ಮೈಕ್ರೋಬ್ಯಾಂಕಿಂಗ್ ಜಾಗದಲ್ಲಿ ಪರಿಣತಿಯು ಮತ್ತಷ್ಟು ಮುಖ್ಯವಾಹಿನಿಯ ನೀರು ಮತ್ತು ನೈರ್ಮಲ್ಯ (WASH) ಸಾಲ ನೀಡಿಕೆಯಲ್ಲಿ ದೊಡ್ಡ ಪ್ರಭಾವ ಉಂಟು ಮಾಡುತ್ತದೆ. ಕಲಿಕೆ ಮತ್ತು ನಾವೀನ್ಯತೆಯಿಂದ ತುಂಬಿದ ಪ್ರಯಾಣವನ್ನು ನಾವು ಎದುರು ನೋಡು ತ್ತಿದ್ದೇವೆ” ಎಂದು Water.org ನ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಶ್ರೀ ಮನೋಜ್ ಗುಲಾಟಿ ಹೇಳಿದರು.
ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ, ನಿರ್ಮಲ ಪರಿಸರದ ಸವಾಲುಗಳನ್ನು ಎದುರಿಸಲು ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಸೃಷ್ಟಿಸುವುದಕ್ಕಾಗಿ ವಾಟ್ ಸ್ಯಾನ್ ಸಾಲವನ್ನು ಪರಿಚಯಿಸಲಾಗಿದೆ. ಈ ಸಾಲ, ಗ್ರೂಪ್ ಲೋನ್ ರೂಪದಲ್ಲಿರುತ್ತದೆ.