Saturday, 14th December 2024

ಮೋದಿಯನ್ನು ಹೊಗಳಿದ ಜೆಡಿಯು ಸಂಸದ ಸುನೀಲ್ ಕುಮಾರ್ ಪಿಂಟು

ಪಾಟನಾ: ಬಿಜೆಪಿ ವಿರೋಧಿ ಹಾಗೂ ಕಾಂಗ್ರೆಸ್​ ನೇತೃತ್ವದ ‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ ಜನತಾ ದಳದ (ಯುನೈಟೆಡ್) ಲೋಕಸಭಾ ಸಂಸದ ಸುನೀಲ್ ಕುಮಾರ್ ಪಿಂಟು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳ ಗೆಲುವು ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್​ ಸಹ ಹೆಚ್ಚಾಗಿದೆ. ಮೋದಿಯವರಿಂದಲೇ ಮೂರು ರಾಜ್ಯ ಗೆಲ್ಲುವಂತಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ.

ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಸೀತಾಮರ್ಹಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸು ತ್ತಿರುವ ಸುನೀಲ್ ಕುಮಾರ್ ಪಿಂಟು ಅವರು ‘ಮೋದಿ ಹೈ ತೋ ಮುಮ್ಕಿನ್ ಹೈ’ ಮೋದಿ ಅವರ ವರ್ಚಸ್ಸು ಕೇಸರಿ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್‌ಗಢ ದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವಂತಾಯಿತು ಎಂದು ಹಾಡಿಹೊಗಳಿದ್ದರು.

‘ಮೋದಿ ಹೈ ತೋ ಮುಮ್ಕಿನ್ ಹೈ’ ಎಂದು ತೋರಿಸುತ್ತದೆ. ಇದನ್ನು ಪಿಂಟು, ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಇದು ನಿಜವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ತನ್ನದೇ ಪಕ್ಷದ ಸಂಸದರ ಹೇಳಿಕೆಗೆ ಜೆಡಿ(ಯು) ತೀವ್ರ ತಿರುಗೇಟು ನೀಡಿದೆ. ಪಿಂಟು ಅವರು ಪ್ರಧಾನಿ ಮೋದಿಯವರ ಪ್ರಭಾವಕ್ಕೆ ಒಳಗಾಗಿದ್ದರೆ, ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಅವರು ಪ್ರಭಾವಿತರಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು, ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಒತ್ತಾಯಿಸಿದ್ದಾರೆ.