Saturday, 14th December 2024

ಗ್ರಾಹಕರಿಗೆ ತಡೆರಹಿತ ಹಣಕಾಸು ಪರಿಹಾರ ಒದಗಿಸಲು ಟಾಟಾ ಮೋಟರ್ಸ್ ಮತ್ತು ಎಚ್ ಡಿಎಫ್ ಸಿ ಒಪ್ಪಂದ

ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಆಕರ್ಷಕ ಡಿಜಿಟಲ್ ಹಣಕಾಸು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಖಾಸಗಿ ಕ್ಷೇತ್ರದ ಬ್ಯಾಂಕ್ ಆಗಿರುವ HDFC ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಟಾಟಾ ಮೋಟರ್ಸ್ ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಹಣಕಾಸು ಸೌಲಭ್ಯವನ್ನು ಹೆಚ್ಚಿಸಲು ಈ ಸಹಭಾಗಿತ್ವ ಇನ್ನಷ್ಟು ಪರಿಣಾಮಕಾರಿಯಾಗಲಿದೆ.

ಈ ಪಾಲುದಾರಿಕೆಯಡಿ ಟಾಟಾ ಮೋಟರ್ಸ್ ಗ್ರಾಹಕರು ಟಾಟಾ ಮೋಟರ್ಸ್ ನ ಆನ್ ಲೈನ್ ಸೇಲ್ಸ್ ಪ್ಲಾಟ್ ಫಾರ್ಮ್ ಮತ್ತು ಟಾಟಾ ಇ-ಗುರು ಮೊಬೈಲ್ ಅಪ್ಲಿಕೇಶನ್ ಪ್ಲಾಟ್ ಫಾರ್ಮ್ ಮೂಲಕ ತಡೆರಹಿತವಾಗಿ ಎಚ್ ಡಿಎಫ್ ಸಿ ಬ್ಯಾಂಕ್ ವಾಹನ ಹಣಕಾಸು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗ ಲಿದೆ. ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಹಣಕಾಸು ಸೇವೆಗಳ ಏಕೀಕರಣವು ಸುವ್ಯವಸ್ಥಿತವಾದ ಪ್ರಕ್ರಿಯೆಯನ್ನು ಖಾತರಿಪಡಿಸುತ್ತದೆ. ಗ್ರಾಹಕರು ತಮ್ಮ ಆದ್ಯತೆಯ ಹಣಕಾಸು ಪೂರೈಕೆದಾರರನ್ನು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಆಯ್ಕೆ ಮಾಡಲು ಇದು ಅನುವು ಮಾಡಿಕೊಡುತ್ತದೆ.

ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ನ ಉಪಾಧ್ಯಕ್ಷ ಮತ್ತು ಟ್ರಕ್ಸ್ ವಿಭಾಗದ ಬ್ಯುಸಿನೆಸ್ ಹೆಡ್ ರಾಜೇಶ್ ಕೌಲ್ ಅವರು, “ಗ್ರಾಹಕ ಕೇಂದ್ರಿತ ಕಂಪನಿಯಾಗಿರುವ ನಾವು ಎಚ್ ಡಿಎಫ್ ಸಿಯನ್ನು ಟಾಟಾ ಮೋಟರ್ಸ್ ಆನ್ ಲೈನ್ ಸೇಲ್ಸ್ ಪ್ಲಾಟ್ ಫಾರ್ಮ್ ಮತ್ತು ಇ-ಗುರು ನಲ್ಲಿ ತರುತ್ತಿರು ವುದಕ್ಕೆ ಸಂತಸವೆನಿಸುತ್ತಿದೆ. ಈ ಮೂಲಕ ನಮ್ಮ ಗ್ರಾಹಕರಿಗೆ ಸುಲಭ ಮತ್ತು ಸರಳವಾದ ಹಣಕಾಸು ಆಯ್ಕೆಗಳನ್ನು ಪೂರೈಸಲಿದ್ದೇವೆ. ಈ ಪಾಲು ದಾರಿಕೆಯು ನವೀನ ಮಾದರಿಯ ಡಿಜಿಟಲ್ ಪರಿಹಾರಗಳ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುವ ನಮ್ಮ ಬದ್ಧತೆಗೆ ಹೊಂದಿಕೆಯಾಗುತ್ತದೆ.

ಎಚ್ ಡಿಎಫ್ ಸಿ ಬ್ಯಾಂಕ್ ನ ಪರಿಣತಿ ಮತ್ತು ವ್ಯಾಪ್ತಿಯನ್ನು ಸಂಯೋಜಿಸುವುದರೊಂದಿಗೆ ನಮ್ಮ ಗ್ರಾಹಕರಿಗೆ ಅನನ್ಯವಾದ ಅಗತ್ಯತೆಗಳಿಗೆ ಹೊಂದಾ ಣಿಕೆಯಾಗುವ ಹಣಕಾಸಿನ ಆಯ್ಕೆಗಳ ಶ್ರೇಣಿಯೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಅಲ್ಲದೇ, ಉತ್ಪನ್ನ ಕೊಡುಗೆಗಳು ಮತ್ತು ಗ್ರಾಹಕ ಸೇವೆ ಎರಡರಲ್ಲಿಯೂ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವ ನಮ್ಮ ಬದ್ಧತೆಯಲ್ಲಿ ಈ ಸಹಯೋಗವು ನಿರ್ಣಾಯಕ ಹಂತವಾಗಿದೆ’’ ಎಂದರು.

ಈ ಬಗ್ಗೆ ಮಾತನಾಡಿದ ಎಚ್ ಡಿಎಫ್ ಸಿ ಬ್ಯಾಂಕ್ ನ ವಾಣಿಜ್ಯ ವಾಹನ ಸಮೂಹ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಬಾಲಾಜಿ ವರ್ಮಾ ಅವರು, “ಟಾಟಾ ಮೋಟರ್ಸ್ ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಆಕರ್ಷಕ ಡಿಜಿಟಲ್ ಹಣಕಾಸು ಪರಿಹಾರಗಳನ್ನು ನೀಡಲು ನಾವು ಟಾಟಾ ಮೋಟರ್ಸ್ ನೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಗ್ರಾಹಕರ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸಲು ನಮ್ಮ ಪರಿಹಾರಗಳನ್ನು ನಿಖರವಾಗಿ ವೈಯಕ್ತೀಕರಣ ಮಾಡಲಾಗಿದೆ. ಸೂಕ್ತವಾದ ಮತ್ತು ತಡೆರಹಿತವಾದ ವಾಹನ ಖರೀದಿ ಅನುಭವವನ್ನು ಖಾತರಿ ಪಡಿಸುತ್ತದೆ. ವಾಹನ ಫೈನಾನ್ಸಿಂಗ್ ಗೆ ಸುಲಭವಾಗಿ ಪ್ರವೇಶ ಪಡೆಯಲು ಗ್ರಾಹಕರಿಗೆ ಅಪಾರವಾದ ಪ್ರಯೋಜನಕಾರಿಯಾಗಿದೆ ಎಂಬುದನ್ನು ನಾವು ಪ್ರಶಂಸಿಸುತ್ತೇವೆ ಮತ್ತು ವಾಹನ ಹಣಕಾಸು ಅನುಭವವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ’’ ಎಂದು ಹೇಳಿದರು.

ಈ ಕಾರ್ಯತಂತ್ರದ ಸಹಭಾಗಿತ್ವವು ಬಸ್ ಗಳು, ಟ್ರಕ್ ಗಳು ಮತ್ತು ಸಣ್ಣ ವಾಣಿಜ್ಯ ವಾಹನಗಳು ಹಾಗೂ ಪಿಕಪ್ ಗಳು ಸೇರಿದಂತೆ ಟಾಟಾ ಮೋಟರ್ಸ್ ನೀಡುವ ಎಲ್ಲಾ ಬಗೆಯ ವಾಣಿಜ್ಯ ವಾಹನಗಳಿಗೆ ಹಣಕಾಸು ಪರಿಹಾರಗಳನ್ನು ನೀಡುತ್ತದೆ. ಟಾಟಾ ಮೋಟರ್ಸ್ ತನ್ನ ಗ್ರಾಹಕರ ವಿಕಾಸದ ಅಗತ್ಯತೆ ಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಪೂರೈಸಲು ಸಮರ್ಪಿತವಾಗಿದೆ. ಉತ್ಪನ್ನಗಳು ಮತ್ತು ಸೇವೆಗಳ ವಿಷಯದಲ್ಲಿ ಮಾತ್ರವಲ್ಲದೇ ಹಣಕಾಸಿನ ನೆರವಿನ ದೃಷ್ಟಿಕೋನದಿಂದ ಅವರ ಅಗತ್ಯತೆಗಳನ್ನು ನಿರ್ಣಯ ಮಾಡುವ ವಿಚಾರದಲ್ಲಿಯೂ ಕಂಪನಿಯು ಗ್ರಾಹಕರಿಗೆ ನೆರವಾಗಲಿದೆ.