ನವದೆಹಲಿ: 2022-23ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್ಗಳನ್ನು ಅಳಿಸಿ ಹಾಕಲಾಗಿದೆ.
ಇದರಲ್ಲಿ 2.96 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ಉತ್ತರ ಪ್ರದೇಶದಲ್ಲಿ ರದ್ದುಗೊಳಿಸಲಾಗಿದೆ.
ನಕಲಿ ಜಾಬ್ ಕಾರ್ಡ್ಗಳ ದತ್ತಾಂಶವನ್ನು ಲಿಖಿತ ರೂಪದಲ್ಲಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, 2022-23ರಲ್ಲಿ 7,43,457 ಮತ್ತು 2021-22ರಲ್ಲಿ 3,06,944 ನಕಲಿ ಜಾಬ್ ಕಾರ್ಡ್ಗಳನ್ನು ಅಳಿಸಲಾಗಿದೆ. ಉತ್ತರ ಪ್ರದೇಶವು ಅತಿ ಹೆಚ್ಚು ನಕಲಿ ಕಾರ್ಡ್ ಗಳನ್ನು ರದ್ದುಗೊಳಿಸಿದೆ. ಉತ್ತರ ಪ್ರದೇಶದಲ್ಲಿ 2021-23ರಲ್ಲಿ 67,937 ನಕಲಿ ಜಾಬ್ ಕಾರ್ಡ್ಗಳನ್ನು ಅಳಿಸಲಾಗಿದ್ದು, 2022-23ರಲ್ಲಿ 2,96,464ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
2022-23ರಲ್ಲಿ 1,14,333 ಮತ್ತು 2021-22ರಲ್ಲಿ 50,817 ಜಾಬ್ ಕಾರ್ಡ್ಗಳನ್ನು ಅಳಿಸುವುದರೊಂದಿಗೆ ಒಡಿಶಾ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 27,859 ಮತ್ತು 2021-22ರಲ್ಲಿ 95,209 ನಕಲಿ ಜಾಬ್ ಕಾರ್ಡ್ಗಳನ್ನು ಅಳಿಸಲಾಗಿದೆ. ಬಿಹಾರದದಲ್ಲಿ 2021-22ರಲ್ಲಿ 80,203 ಮತ್ತು 2022-23ರಲ್ಲಿ 27,062 ಅನ್ನು ರದ್ದುಗೊಳಿಸಲಾಗಿದೆ. ಜಾರ್ಖಂಡ್ನಲ್ಲಿ 2022-23ರಲ್ಲಿ 70,673 ಮತ್ತು ಹಿಂದಿನ ವರ್ಷ 23,528 ಜಾಬ್ ಕಾರ್ಡ್ಗಳನ್ನು ಅಳಿಸಲಾಗಿದೆ.
ಆಂಧ್ರಪ್ರದೇಶದಲ್ಲಿ 2021-22ರಲ್ಲಿ ಅಳಿಸಲಾದ ನಕಲಿ ಜಾಬ್ ಕಾರ್ಡ್ಗಳ ಸಂಖ್ಯೆ 1,833 ಆಗಿದ್ದರೆ, ಕಳೆದ ಹಣಕಾಸು ವರ್ಷದಲ್ಲಿ ಇದರ ಸಂಖ್ಯೆ 46,662 ಅಂದರೆ ಬಹುಪಟ್ಟು ಹೆಚ್ಚಾಗಿದೆ. ರಾಜಸ್ಥಾನದಲ್ಲಿ 2022-23ರಲ್ಲಿ 45,646 ಮತ್ತು 2021-22ರಲ್ಲಿ 14,782 ನಕಲಿ ಜಾಬ್ ಕಾರ್ಡ್ಗಳನ್ನು ತೆಗೆದು ಹಾಕಲಾಗಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಕಳೆದ ಎರಡು ವರ್ಷಗಳಿಂದ ಎಂಜಿಎನ್ಆರ್ಇಜಿಎ (MGNREGA) ಪಾವತಿಗಳು ಬಾಕಿ ಉಳಿದಿರುವ ಪಶ್ಚಿಮ ಬಂಗಾಳದಲ್ಲಿ 2022-23ರಲ್ಲಿ 5,263 ಜಾಬ್ ಕಾರ್ಡ್ಗಳನ್ನು ನಕಲಿ ಎಂದು ಮತ್ತು 2021-22ರಲ್ಲಿ 388 ಜಾಬ್ ಕಾರ್ಡ್ಗಳನ್ನು ನಕಲಿ ಅಂತ ಅಳಿಸಲಾಗಿದೆ.