ವಿಚಾರ ವೇದಿಕೆ
ಡಾ.ಸುಧಾಕರ ಹೊಸಳ್ಳಿ
ಸಂವಿಧಾನಕ್ಕೆ ಮರುವ್ಯಾಖ್ಯಾನ ನೀಡಲು ಅವಕಾಶವಿರುವ ಏಕೈಕ ಸಂಸ್ಥೆಯಾದ ಸರ್ವೋಚ್ಚ ನ್ಯಾಯಾಲಯವೇ ರದ್ದತಿಯ ಮಾನ್ಯತೆಯನ್ನು ಸಿಂಧು ಮಾಡಿರುವುದರಿಂದ, ೩೭೦ನೇ ವಿಧಿಯನ್ನು ಮತ್ತೆ ಸಂವಿಧಾನ ಮುಟ್ಟಿಸುವ ವಾಮಮಾರ್ಗದ ಪ್ರಯತ್ನಕ್ಕೆ ಅವಕಾಶವಿಲ್ಲದಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನೆಲೆಯಲ್ಲಿ ನಿಂತು ೩೭೦ನೇ ವಿಧಿಯ ಆಯಾಮಗಳ ಪರಾಮರ್ಶೆ ಮಾಡುವುದು ಸ್ವೀಕೃತವೇ ಹೌದು.
ಕೇಂದ್ರ ಸರಕಾರವು ೨೦೧೯ರಲ್ಲಿ ರದ್ದು ಮಾಡಿದ್ದ ೩೭೦ನೇ ವಿಧಿಯ ಸಾಂವಿಧಾನಿಕ ಮಾನ್ಯತೆ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ
ದಾವೆಗಳಿಗೆ ಸಂಬಂಧಿಸಿದಂತೆ ಇಂದು (ಡಿ.೧೧) ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದೆ.
೩೭೦ನೇ ವಿಧಿಯ ರದ್ದತಿಯು ಸಾಂವಿಧಾನಿಕವಾಗಿ ಸಿಂಧು ಆಗಿದ್ದು, ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದಿದೆ ನ್ಯಾಯಾಲಯ. ಈ ತೀರ್ಪು ಸಂಸತ್ತಿನ
ಘನತೆ ಮತ್ತು ಮಿತಿ ಎರಡನ್ನೂ ಸಾದರಪಡಿಸಿದೆ. ತೀರ್ಪಿನಲ್ಲಿ, ರಾಷ್ಟ್ರಪತಿಗಳ ಆದೇಶವು ನ್ಯಾಯಾಲಯದ ವಿಮರ್ಶೆಯ ವ್ಯಾಪ್ತಿಗೆ ಬರುತ್ತದೆ ಎನ್ನುವ ಮುಖಾಂತರ, ಬಹುಮತದ ಸರಕಾರ ಎನ್ನುವ ಕಾರಣಕ್ಕಾಗಿ ಸಂವಿಧಾನವನ್ನು ಮೀರಿ ಅಧಿಕಾರ ಚಲಾಯಿಸುವಂತಿಲ್ಲ ಎಂಬ ಮಿತಿಯನ್ನು ನೆನಪು ಮಾಡಿದೆ.
ಜತೆಗೆ, ರದ್ಧತಿಯು ಸಿಂಧು ಎನ್ನುವ ಮುಖೇನ, ಕೇಂದ್ರ ಸರಕಾರವು ಸಾಂವಿಧಾನಿಕ ಮಾದರಿಯಲ್ಲೇ ೩೭೦ನೇ ವಿಧಿಯನ್ನು ಅಂತ್ಯಗೊಳಿಸಿರುವುದನ್ನು ದೃಢಪಡಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು ಈ ಎರಡೂ ಪ್ರಕರಣಗಳಲ್ಲಿ ೩೭೦ನೇ ವಿಽಯ ಮೂರನೇ ಉಪವಿಧಿಯ ಉಲ್ಲೇಖ ಮಾಡಿದೆ:
Mohad maqbool v/s sate of
Jammu and Kashmir 5-1 1972,
State Bank of India v/s santhosh
gufta 16-12-2016
ಫೆಬ್ರವರಿ ೨೧, ೧೯೪೮ರಲ್ಲಿ ಸಂವಿಧಾನದ ಕರಡು ಪ್ರತಿಯ ರಚನಾ ಸಂದರ್ಭದಲ್ಲಿ ನೆಹರುರವರು ೩೭೦ನೇ ವಿಽಯನ್ನು ಸಂವಿಧಾನದ ಭಾಗವಾಗಿ
ಮಾಡಬೇಕೆಂದು ಒತ್ತಾಯಿಸಿದಾಗ, ಬಾಬು ರಾಜೇಂದ್ರ ಪ್ರಸಾದರ ಸಮ್ಮುಖದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಒಟ್ಟು ಆಶಯ ವನ್ನು, ಬಹಳ ಮುಖ್ಯವಾಗಿ ಸಮಾನತೆಯ ತತ್ವವನ್ನು ಮೀರಿ ನಿಲ್ಲುವ ಆ ವಿಧಿಯನ್ನು ಸಂವಿಧಾನದ ಭಾಗವನ್ನಾಗಿ ಮಾಡುವುದಿಲ್ಲ ಎಂದು
ತಿರಸ್ಕಾರ ಮಾಡುತ್ತಾರೆ.
ಆ ಸಮಯದಲ್ಲಿ ಬಹುಮತವಿರುವವರು, ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಂದ ೩೭೦ನೇ ವಿಧಿಯನ್ನು ಸಂವಿಧಾನದ ಭಾಗವನ್ನಾಗಿ ಮಾಡಿಸು ತ್ತಾರೆ. ಆದಾಗ್ಯೂ, ಕಟಿಬದ್ಧ ರಾಷ್ಟ್ರಪ್ರೇಮಿಯಾದ ಅಂಬೇಡ್ಕರರು ೩೭೦ನೇ ವಿಧಿಗೆ ಮೂರನೇ ಉಪವಿಧಿಯನ್ನು ಜೋಡಿಸಿ ಸಂವಿಧಾನದಲ್ಲಿ ಏನೇ ಇದ್ದಾಗಿಯೂ ರಾಷ್ಟ್ರಪತಿಗಳ ಆದೇಶದೊಂದಿಗೆ ೩೭೦ನೇ ವಿಧಿಯನ್ನು ರದ್ದು ಮಾಡಬಹುದೆಂಬ ನಿಯಮವನ್ನು ಸೇರ್ಪಡೆ ಮಾಡಿದ್ದರ ಕಾರಣಕ್ಕಾಗಿ, ಅತ್ಯಂತ ಸರಳವಾಗಿ ೩೭೦ನೇ ವಿಧಿಯನ್ನು ರದ್ದುಪಡಿಸಲಾಗಿದೆ.
ಸಂವಿಧಾನಕ್ಕೆ ಮರುವ್ಯಾಖ್ಯಾನ ನೀಡಲು ಅವಕಾಶವಿರುವ ಏಕೈಕ ಸಂಸ್ಥೆಯಾದ ಸರ್ವೋಚ್ಚ ನ್ಯಾಯಾಲಯವೇ ರದ್ದತಿಯ ಮಾನ್ಯತೆಯನ್ನು
ಸಿಂಧು ಮಾಡಿರುವುದರಿಂದ, ೩೭೦ನೇ ವಿಧಿಯನ್ನು ಮತ್ತೆ ಸಂವಿಧಾನ ಮುಟ್ಟಿಸುವ ವಾಮಮಾರ್ಗದ ಪ್ರಯತ್ನಕ್ಕೆ ಅವಕಾಶವಿಲ್ಲದಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನೆಲೆಯಲ್ಲಿ ನಿಂತು ೩೭೦ನೇ ವಿಧಿಯ ಆಯಾಮಗಳ ಪರಾಮರ್ಶೆ ಮಾಡುವುದು ಸ್ವೀಕೃತವೇ ಹೌದು.
ಪಾಕಿಸ್ತಾನದ ಡಾಂಭಿಕ ಹಿತಾಸಕ್ತಿಯಿಂದ ಜಮ್ಮು-ಕಾಶ್ಮೀರ ಸಮಸ್ಯೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿತ್ತು. ರಾಷ್ಟ್ರದ ಗಡಿ ದಾಟಿದ ಸೂಕ್ಷ್ಮ ಸಮಸ್ಯೆ ಯಾಗಿತ್ತು. ಅದರ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಹತ್ತಾರು ಬಾರಿ ಚರ್ಚೆಗೊಳಪಡಲೇಬೇಕು. ಸಮಯ, ಜನರ ಭಾವನೆ, ಪರಮಾಧಿ ಕಾರದ ಸ್ಥಿರತೆ, ಆಂತರಿಕ ಹಿಡಿತ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಏಕಾಏಕಿ ನಿರ್ಧಾರವು ದೇಶದ ಆಡಳಿತದ ಸದೃಢತೆ ಯನ್ನು ಶಿಥಿಲಗೊಳಿಸುವ ಅಪಾಯವಿತ್ತು.
‘ತಾತ್ಕಾಲಿಕ ನಿಯಮಗಳು’ ಎಂಬ ಷರತ್ತಿನೊಂದಿಗೆ ನೀಡಿರುವ ವಿಶೇಷ ಸವಲತ್ತುಗಳಿಂದ ದುರುಳ ಕಾಶ್ಮೀರಿಗಳು ಅನಧಿಕೃತವಾಗಿ ಮೇಳೈಸುತ್ತಿದ್ದು ದರಿಂದ, ೩೭೦ನೇ ವಿಧಿಯ ರದ್ದತಿಗೆ ತೀವ್ರಹೋರಾಟ ಪ್ರಾರಂಭವಾಗಿತ್ತು. ಸಂವಿಧಾನದ ಪ್ರಸ್ತಾವನೆ, ೧೪ನೇ ವಿಧಿಯ ಅನ್ವಯ ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ಶ್ರೇಷ್ಠ ತತ್ವಗಳಿಗೆ ವಿರುದ್ಧವಾಗಿ ಸ್ಥಾಪಿತವಾಗಿರುವ ಸದರಿ ವಿಧಿಯ ರದ್ದತಿ ಬೇಡಿಕೆ ನ್ಯಾಯಸಮ್ಮತವಾಗಿದ್ದಾಗಿಯೂ, ಅದರ ರದ್ದತಿಗೆ ೭೦ ವರ್ಷ ಕಾದಿದ್ದು ಮಾತ್ರ ದುರದೃಷ್ಟಕರ.
ಭಾರತಕ್ಕಿರುವುದು ಒಂದೇ ಸಂವಿಧಾನ. ಮೂಲಸಂವಿಧಾನ ೩೯೫ ವಿಧಿಗಳ ಮತ್ತು ಪ್ರಸ್ತುತ ಉಪವಿಧಿಗಳ ಸೇರ್ಪಡೆಯಿಂದಾಗಿ ೪೫೦ಕ್ಕೂ ಹೆಚ್ಚಾಗಿರುವ ವಿಽಗಳಲ್ಲಿ ೩೭೦ ಕೂಡ ಒಂದು ವಿಧಿಯಷ್ಟೇ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತು ಅಥವಾ ವಿನಾಯಿತಿಗಳನ್ನು ನೀಡಲಾಗಿದೆ. ಭಾರತ ಸಂವಿಧಾನವು ೩೭೧, ೩೭೧ಎ, ೩೭೧ಬಿ, ೩೭೧ಸಿ, ೩೭೧ಡಿ, ೩೭೧ಇ, ೩೭೧ಎಫ್, ೩೭೧ಜಿ, ೩೭೧ಕೆ ಈ ವಿಽಗಳನ್ವಯ ಇನ್ನೂ ಹಲವು ರಾಜ್ಯಗಳಿಗೆ ವಿಶೇಷ ವಿನಾಯಿತಿಗಳನ್ನು ನೀಡಿದೆ. ಅವುಗಳಲ್ಲಿ ೩೭೦ ಮಾತ್ರ ಸ್ವಲ್ಪ ವಿಭಿನ್ನ ವಿನಾಯಿತಿಗಳನ್ನು ಪಡೆದಿದೆ. ಸಂವಿಧಾನದ ಯಾವುದೇ ಭಾಗದಲ್ಲೂ ೩೭೦ ಅನ್ನು ಪ್ರತ್ಯೇಕ ಎಂದು ನಮೂದಿಸಿರಲಿಲ್ಲ.
೩೭೦ ಮತ್ತು ೩೫ಎ ವಿಧಿಗಳಿಗಿದ್ದ ವಿನಾಯಿತಿಗಳು: ರಕ್ಷಣೆ, ವಿದೇಶಾಂಗ, ಆಂತರಿಕ ಭದ್ರತೆ ವಿಷಯಗಳನ್ನು ಹೊರತುಪಡಿಸಿ, ಉಳಿದ ವಿಷಯಗಳ ಮೇಲೆ ಕೇಂದ್ರವು ಜಮ್ಮು-ಕಾಶ್ಮೀರದ ಮೇಲೆ ನೇರವಾಗಿ ಕಾನೂನುಗಳನ್ನು ಹೇರಲಾಗುವುದಿಲ್ಲ. ೨೩೮ನೇ ವಿಧಿಯ ಕೇಂದ್ರ ಮತ್ತು ರಾಜ್ಯಗಳ ಆಡಳಿತಾತ್ಮಕ ಸಂಬಂಧಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ೧ನೇ ಅನುಸೂಚಿಯ ಕಾರ್ಯಾಂಗ ಮತ್ತು ಶಾಸಕಾಂಗ ನಿಯಮಗಳು, ಅ-ಆ ನಿಯಮ
ಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.
ಬಾಹ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಉಳಿದ ತುರ್ತು ಪರಿಸ್ಥಿತಿಗಳನ್ನು ಹೇರಲು ಅಲ್ಲಿನ ಮಂತ್ರಿಮಂಡಲದ ಸಹಮತ ಬೇಕು. ರಾಜ್ಯ ಮತ್ತು ಸಮವರ್ತಿ ಪಟ್ಟಿಗಳಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ರಚಿಸಲು ಅಲ್ಲಿನ ಮಂತ್ರಿಮಂಡಲದ ಸಹಮತ ಅಗತ್ಯ. ಅಲ್ಲಿನ ಆಸ್ತಿಯನ್ನು ಬೇರೆಯವರು ಖರೀದಿಸು ವಂತಿಲ್ಲ.
ರಾಷ್ಟ್ರದ ಕೆಲವು ಸಾಮಾನ್ಯ ಕಾನೂನುಗಳು ಅವರಿಗೆ ಅನ್ವಯಿಸುವುದಿಲ್ಲ. ೩೬೫ನೇ ವಿಧಿಯನುಸಾರದ ಕೇಂದ್ರದ ಶಕ್ತಿಯುತ ಅಧಿಕಾರ, ನಿರ್ದೇಶನ ಮತ್ತು ಅದನ್ನು ಉಲ್ಲಂಘಿಸಿದರೆ ರಾಜ್ಯಗಳ ಮೇಲೆ ತುರ್ತು ಪರಿಸ್ಥಿತಿ ಹೇರುವ ಅಧಿಕಾರ ಜಮ್ಮು-ಕಾಶ್ಮೀರಕ್ಕೆ ಹೊರತುಪಡಿಸಿದ್ದಾಗಿದೆ. ೩೭೦(೧) ವಿಧಿಯನ್ವಯ ಈ ರಾಜ್ಯಕ್ಕೆ ಸಂಬಂಧಿಸಿದ ಸರಕಾರಿ ಆದೇಶಗಳನ್ನು ಅಲ್ಲಿನ ಮಂತ್ರಿಮಂಡಲದ ಸಹಮತವಿಲ್ಲದೆ ಹೊರಡಿಸುವಂತಿಲ್ಲ.
ಕೇಂದ್ರ ಸರಕಾರವು ೩೭೦ನೇ ವಿಧಿಯನ್ನು ರದ್ದುಮಾಡಲು ಇದ್ದ ಸಾಂವಿಧಾನಿಕ ಸಾಧ್ಯತೆ: ೩೬೮(೧)ರ ತಿದ್ದುಪಡಿಯ ನಿಯಮದನುಸಾರ
ಸಂವಿಧಾನದಲ್ಲಿ ಏನೇ ಇದ್ದಾಗಿಯೂ, ಯಾವುದೇ ಉಪಬಂಧವನ್ನು ವಿಸ್ತರಿಸುವ ಹಾಗೂ ನಿರಸನಗೊಳಿಸುವ ಅಧಿಕಾರ ಸಂಸತ್ತಿಗಿದೆ. ಸಂವಿಧಾನದ ೧ನೇ ಅನುಸೂಚಿಯ ಅನ್ವಯ, ಜಮ್ಮು-ಕಾಶ್ಮೀರ ಭಾರತದ ೧೫ನೇ ರಾಜ್ಯವಾಗಿದ್ದು, ಸಾಂವಿಧಾನಿಕ ನಿಯಮಗಳ ಅಡಿಯಲ್ಲಿಯೇ ಬರುತ್ತದೆ.
೧೯೭೬ರ ೪೨ನೇ ಸಂವಿಧಾನ ತಿದ್ದುಪಡಿಯ ನಂತರ ೩೬೮(೪)ನೇ ವಿಧಿಯನ್ವಯ ಮಾಡಿದ ಯಾವುದೇ ತಿದ್ದುಪಡಿಯ ವಿರುದ್ಧ (ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ) ನ್ಯಾಯಾಲಯದ ಮೊರೆಹೋಗುವಂತಿಲ್ಲ. ೩೬೮(೫) ಇದರ ಅನ್ವಯ ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಯಾವುದೇ ಪರಿಮಿತಿಗೆ ಒಳಪಡುವುದಿಲ್ಲ ಎಂಬ ನಿಯಮವಿದೆ.
ಸಂವಿಧಾನದ ೧ನೇ ವಿಧಿಯನ್ವಯ ಭಾರತವು ರಾಜ್ಯಗಳ ಒಂದು ಒಕ್ಕೂಟ. ಸಂಸತ್ತಿಗೆ ಯಾವುದೇ ರಾಜ್ಯದ ಪ್ರದೇಶಗಳನ್ನು ಹೆಚ್ಚಿಸುವುದಕ್ಕೆ ಅಥವಾ ಕಡಿತಗೊಳಿಸುವುದಕ್ಕೆ ಅಧಿಕಾರವಿದೆ. ಅದರಂತೆ ೩೭೦ (ಅ) ವಿಧಿಯ ಪ್ರಕಾರ ೧ನೇ ವಿಧಿಯು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುತ್ತದೆ ಎಂದು ನಿಯಮ ತಿಳಿಸುತ್ತದೆ. ಬಹಳ ಮುಖ್ಯವಾಗಿ ೩೭೦(೩)ರಂತೆ ಈ ಅನುಬಂಧದಲ್ಲಿ ಹಿಂದೆ ಹೇಳಿದ ಉಪಬಂಧಗಳಲ್ಲಿ ಏನೇ ಇದ್ದಾಗಿಯೂ, ರಾಷ್ಟ್ರಪತಿಯವರು ಸಾರ್ವಜನಿಕ ಅಧಿಸೂಚನೆಯ ಮೂಲಕ ತಾವು ನಿರ್ದಿಷ್ಟಪಡಿಸಬಹುದಾದ ದಿನಾಂಕದಿಂದ ಈ ಅನುಬಂಧವು ಜಾರಿಯಲ್ಲಿರುವುದು ನಿಂತುಹೋ
ಗತಕ್ಕದ್ದೆಂದು ಘೋಷಿಸಬಹುದು.
ರಾಷ್ಟ್ರಪತಿಗಳು ೭೪(೨) ವಿಧಿಯನ್ವಯ ಕೇಂದ್ರ ಮಂತ್ರಿಮಂಡಲದ ಶಿ-ರಸಿನ ಮೇರೆಗೆ, ಸಂಸತ್ತಿನ ಸಹಮತದೊಂದಿಗೆ ಮೇಲಿನ ಘೋಷಣೆಯನ್ನು ಹೊರಡಿಸಬಹುದು. ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗೂ ಸಮವರ್ತಿ ಪಟ್ಟಿಗಳಲ್ಲಿ ಅಧಿಕಾರ ವಿಭಜನೆ
ಮಾಡಿದ್ದರೂ, ಇವುಗಳನ್ನು ಹೊರತುಪಡಿಸಿದ ಉಳಿಕೆ ಅಧಿಕಾರ ಅಥವಾ ರೆಸಿಡರಿ ಪವರ್ ಅನ್ನು ಕೇಂದ್ರಕ್ಕೆ ನೀಡಿರುವುದರಿಂದ ಸಂಸತ್ತು ಶ್ರೇಷ್ಠ ಅಧಿಕಾರವನ್ನು ಹೊಂದಿದ್ದು, ಅದಕ್ಕೆ ಯಾವುದೇ ವಿಧಿಯನ್ನು ತಿದ್ದುಪಡಿ ಮಾಡುವ ಅಧಿಕಾರವಿರುತ್ತದೆ.
ಒಟ್ಟಿನಲ್ಲಿ ಸಂವಿಧಾನವನ್ನು ಧಿಕ್ಕರಿಸಿ ಜಮ್ಮು-ಕಾಶ್ಮೀರ ವರ್ತಿಸಲು ಸಾಧ್ಯವೇ ಇಲ್ಲ ಎಂಬ ವಾಸ್ತವಿಕ ಮೂಲಾಂಶಗಳು, ಆಗಸ್ಟ್ ೫ರಂದು ನರೇಂದ್ರ ಮೋದಿ ನೇತೃತ್ವದ ಸರಕಾರದ ನಡೆಯಿಂದ ಸಾದೃಶವಾಗಿದೆ. ೩೭೦ನೇ ವಿಧಿಯನ್ನುತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂಬ ವಾದ ಮಂಡಿಸುತ್ತಿದ್ದ ಪ್ರಾಯೋಜಿತ ಬುದ್ಧಿಜೀವಿಗಳಿಗೆ ೩೭೦ನೇ ವಿಽಯ ತಿದ್ದುಪಡಿಯು ಸಾಮಾನ್ಯ ತಿದ್ದುಪಡಿ ನಿಯಮದಡಿ ಬರುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲ.
ಸಾಮಾನ್ಯ ತಿದ್ದುಪಡಿ ಎಂದರೆ ಸಂಸತ್ತಿನ ಉಭಯ ಸದನಗಳ ಮೂರನೇ ಎರಡರಷ್ಟು ಬಹುಮತವಿದ್ದರೆ ಅಂಥ ವಿಷಯಗಳನ್ನು ತಿದ್ದುಪಡಿ ಮಾಡಬಹುದು. ಅದೇ ವಿಶೇಷ ತಿದ್ದುಪಡಿ ಎಂದರೆ, ಉಭಯ ಸದನಗಳ ಮೂರನೇ ಎರಡ ರಷ್ಟು ಬಹುಮತದ ಜತೆಗೆ ಎರಡನೇ ಒಂದರಷ್ಟು ರಾಜ್ಯಗಳ ಅನುಮತಿಯೂ ಅಗತ್ಯವಾಗಿರುತ್ತದೆ. ಕೇಂದ್ರ ಸರಕಾರವು ೩೭೦ನೇ ವಿಧಿಯ ೩ನೇ ಉಪವಿಧಿಯಲ್ಲಿ ಅಡಕವಾಗಿದ್ದ ರಾಷ್ಟ್ರಪತಿಯವರ ಆದೇಶದ ಅನ್ವಯವೇ ಈ ವಿಧಿಗಳನ್ನು ರದ್ದುಪಡಿ ಸಬಹುದೆಂಬ ಜಾಣ್ಮೆ ಮೆರೆದದ್ದು ಸ್ವಾಗತಾರ್ಹ.
ಇವುಗಳ ರದ್ದತಿಯ ಬಗ್ಗೆ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡೋಲು ಬಾರಿಸಿದರೂ, ವಿಶ್ವಸಂಸ್ಥೆಯು ಜಮ್ಮು-ಕಾಶ್ಮೀರ ವಿಷಯ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧದ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ನಿರ್ಣಯಿಸಿದ್ದು ರಾಯಭಾರದ ಸಾಂಗತ್ಯಕ್ಕೆ ಸಂದ ಗೌರವ. ಮುಂದುವರಿದು, ಸದರಿ ವಿಧಿಗಳ ರದ್ದತಿಯ ಕುರಿತು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಏರಿದ್ದರೂ, ಈ ಸಂವಿಧಾನದ ಮೂಲಸತ್ವವನ್ನು ಬುಡಮೇಲು ಮಾಡಿದ್ದ ೩೭೦ನೇ ವಿಽಯ ರದ್ದತಿಯನ್ನು ಈ ಮೇಲ್ಕಾಣಿಸಿದ ಸಾಂವಿಧಾನಿಕ ಅವಕಾಶಗಳ ಕಾರಣಕ್ಕಾಗಿಯೇ ಸರ್ವೋಚ್ವ ನ್ಯಾಯಾ ಲಯವು ಮಾನ್ಯ ಮಾಡಿದೆ.
(ಲೇಖಕರು ಸಂವಿಧಾನತಜ್ಞರು)