ಕುಣಿಗಲ್: ತಾಲೂಕಿನ ಯಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ 38ನೇ ವರ್ಷದ ಲಕ್ಷದೀಪೋತ್ಸವ ವಿಜೃಂಭಣೆಯಿಂದ ಜರುಗಿತು.
ಸಿದ್ಧಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ , ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಭಕ್ತರು ದೇವಾಲಯದ ರಥಬೀದಿಯಲ್ಲಿ ಅಳವಡಿಸಲಾಗಿದ್ದ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ದೇವಾಲಯದ ಮುಂಭಾಗದಲ್ಲಿ ಸುಂದರವಾಗಿ ಬಿಡಿಸಿದ್ದ ರಂಗೋಲಿಯಲ್ಲಿ ಹೂವಿನಿಂದ ಅಲಂಕರಿಸಿದ್ದ ದೀಪ ಬೆಳಗಿಸಿದರು.
ದೀಪೋತ್ಸವ ಅಂಗವಾಗಿ ರಾಜ್ಯದ ಮೂಲೆಗಳಿಂದ ಭಕ್ತರು ಬಂದಿದ್ದರು. ತಹಶೀಲ್ದಾರ್ ವಿಶ್ವನಾಥ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಭಾಗವಹಿಸಿದ್ದರು.