ತುಮಕೂರು : ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾ ವೇದಿಕೆ ಹಾಗೂ ಶ್ರೀ ಸಿದ್ದಾರ್ಥ ಆಸ್ಪತ್ರೆ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಿ.16 ರ ಶನಿವಾರದಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ರಾಧಕೃಷ್ಣ ರಸ್ತೆ, ಡಿಡಿಪಿಐ ಕಚೇರಿ ಮುಂಭಾಗ (ಸರಕಾರಿ ಜೂನಿಯರ್ ಕಾಲೇಜು ಅವರಣದ ಪಕ್ಕ) ಸಿದ್ದಾರ್ಥ ಆಸ್ಪತ್ರೆ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ.
ಆರೋಗ್ಯ ಶಿಬಿರದಲ್ಲಿ ಹೃದ್ರೋಗ ಪರೀಕ್ಷೆ ,ಕೀಲು ಮತ್ತು ಮೂಳೆ ಪರೀಕ್ಷೆ , ಸ್ತ್ರೀ ಹಾಗೂ ಪ್ರಸೂತಿ ಪರೀಕ್ಷೆ, ಮಕ್ಕಳ ರೋಗ ಪರೀಕ್ಷೆ, ಕಣ್ಣಿನ ಪರೀಕ್ಷೆ, ಚರ್ಮ ಹಾಗೂ ಗುಹ್ಯರೋಗಗಳ ಪರೀಕ್ಷೆ,ಕಿವಿ ಮೂಗು ಹಾಗೂ ಗಂಟಲು ಪರೀಕ್ಷೆ, ಮನೋವೈದ್ಯಕೀಯ ಪರೀಕ್ಷೆ,ದಂತಚಿಕಿತ್ಸೆ ಹಾಗೂ ಸಾಮಾನ್ಯ ರೋಗ ಪರೀಕ್ಷೆಗಳನ್ನು ಪರೀಕ್ಷಿಸಲಾಗುವುದು.
ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸತೀಶ್ ಜಿ.ಡಿ ( ಮೀಸೆ) ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ: 7022944296,7975738667 ಸಂಪರ್ಕಿಸಬಹುದಾಗಿದೆ.