ಮುಂಬೈ: ಇದೀಗ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಡೀಪ್ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಐಶ್ವರ್ಯಾ ರೈ ಅವರು ಈಜುಡುಗೆಯನ್ನು ಧರಿಸಿ ಈಜುಕೊಳದಲ್ಲಿ ಕುಳಿತಿರುವ ವಿಡಿಯೋ ಇದಾಗಿದೆ. ಇನ್ನೊಬ್ಬ ಮಹಿಳೆಯ ದೇಹಕ್ಕೆ ನಟಿಯ ಮುಖವನ್ನು ಮಾರ್ಫ್ ಮಾಡಿರುವ ವಿಡಿಯೋದಲ್ಲಿ ‘ಐಶ್ವರ್ಯಾ ಸ್ನಾನ ಮಾಡುತ್ತಿದ್ದಾರೆ’ ಎಂಬ ಪಠ್ಯವನ್ನು ಸೇರಿಸಲಾಗಿದೆ. ವಿಡಿಯೋದಲ್ಲಿ ಕ್ಯಾಮೆರಾ ಕಡೆಗೆ ತಿರುಗಿರುವ ಅವರು ನಗುತ್ತಾ ಇರುವುದು ಕಂಡುಬರುತ್ತದೆ.
ಇರುವುದು ಐಶ್ವರ್ಯಾ ರೈ ಅವರೆ ಎಂದು ಕೆಲವರು ನಂಬಿದರೆ, ಕೆಲವರು ಈ ವಿಡಿಯೋ AI- ರಚಿತವಾಗಿದೆ ಎಂದು ಸೂಚಿಸಿದ್ದಾರೆ.